ದೇವರು ಪ್ರತಿಯೊಂದು ವಿಧದ ಆರಾಧನೆಯನ್ನೂ ಅಂಗೀಕರಿಸುತ್ತಾನೆಯೆ?
ದೇವರು ಮನುಷ್ಯನನ್ನು ಒಂದು ಆತ್ಮಿಕ ಅಗತ್ಯವುಳ್ಳವನಾಗಿ, ಆರಾಧಿಸುವ ಅಗತ್ಯವುಳ್ಳವನಾಗಿ ಸೃಷ್ಟಿಸಿದನು. ಅದು ವಿಕಾಸಗೊಂಡ ಯಾವುದೊ ವಿಚಾರವಾಗಿರಲಿಲ್ಲ. ಅದು ಆದಿಯಿಂದಲೂ ಮನುಷ್ಯನ ಒಂದು ಭಾಗವಾಗಿತ್ತು.
ಆದರೆ ವಿಷಾದಕರವಾಗಿ, ಮಾನವಕುಲವು ವಿವಿಧ ಆರಾಧನಾ ವಿಧಗಳನ್ನು ವಿಕಸಿಸಿಕೊಂಡಿದೆ, ಮತ್ತು ಅತ್ಯಧಿಕವಾಗಿ, ಇವು ಒಂದು ಸಂತುಷ್ಟವಾದ, ಐಕ್ಯ ಮಾನವ ಕುಟುಂಬವನ್ನು ಉತ್ಪಾದಿಸಿಲ್ಲ. ಬದಲಿಗೆ, ಧರ್ಮದ ಹೆಸರಿನಲ್ಲಿ ರಕ್ತಮಯ ಯುದ್ಧಗಳು ಇನ್ನೂ ಹೋರಾಡಲ್ಪಡುತ್ತಿವೆ. ಇದು ಮಹತ್ವವಾದ ಈ ಪ್ರಶ್ನೆಯನ್ನು ಎಬ್ಬಿಸುತ್ತದೆ: ಒಬ್ಬ ವ್ಯಕ್ತಿಯು ದೇವರನ್ನು ಆರಾಧಿಸುವ ವಿಧವು ಮುಖ್ಯವೊ?
ಪುರಾತನ ಕಾಲಗಳಲ್ಲಿ ಸಂದೇಹಾಸ್ಪದವಾದ ಆರಾಧನೆ
ಮಧ್ಯಪೂರ್ವದಲ್ಲಿ ವಾಸಿಸುತ್ತಿದ್ದ ಪುರಾತನ ಜನಾಂಗಗಳು ಆ ಪ್ರಶ್ನೆಗೆ ಉತ್ತರಕೊಡಲು ನಮಗೆ ಸಹಾಯಮಾಡುವ ಒಂದು ಐತಿಹಾಸಿಕ ಮಾದರಿಯನ್ನು ಒದಗಿಸುತ್ತವೆ. ಅನೇಕರು ಬಾಳ ಎಂಬ ದೇವನನ್ನು ಆರಾಧಿಸಿದರು. ಅವರು ಬಾಳನ, ಅಶೇರಳಂತಹ ಸ್ತ್ರೀಸಂಗಾತಿಗಳನ್ನೂ ಆರಾಧಿಸಿದರು. ಅಶೇರಳ ಆರಾಧನೆಯಲ್ಲಿ, ಒಂದು ಲೈಂಗಿಕ ಸಂಕೇತವೆಂದು ನಂಬಲಾಗಿದ್ದ ಒಂದು ಪವಿತ್ರ ಸ್ತಂಭದ ಉಪಯೋಗವು ಒಳಗೂಡಿತ್ತು. ಆ ಪ್ರದೇಶದಲ್ಲಿ ಕೆಲಸಮಾಡುತ್ತಿರುವ ಭೂಸಂಶೋಧನ ಶಾಸ್ತ್ರಜ್ಞರು ನಗ್ನ ಸ್ತ್ರೀಯರ ಅನೇಕಾನೇಕ ಪ್ರತಿಮೆಗಳನ್ನು ಅಗೆದು ತೆಗೆದಿದ್ದಾರೆ. ಈ ಪ್ರತಿಮೆಗಳು, “ತನ್ನ ಸ್ತನಗಳನ್ನು ಎತ್ತಿಹಿಡಿದಿರುವ, ಜನನೇಂದ್ರಿಯಗಳಿಗೆ ಪ್ರಾಶಸ್ತ್ಯಕೊಡುವ ಒಬ್ಬ ದೇವತೆಯನ್ನು ಸೂಚಿಸುತ್ತವೆ,” ಮತ್ತು “ಪ್ರಾಯಶಃ . . . ಅಶೇರಳನ್ನು ಪ್ರತಿನಿಧೀಕರಿಸುತ್ತವೆ,” ಎಂದು ದಿ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಹೇಳುತ್ತದೆ. ಒಂದು ವಿಷಯವು ನಿಶ್ಚಯ, ಬಾಳನ ಆರಾಧನೆಯು ಅನೇಕ ವೇಳೆ ಬಹಳ ಅನೈತಿಕವಾಗಿತ್ತು.
ಆದಕಾರಣ, ಬಾಳನ ಆರಾಧನೆಯಲ್ಲಿ ಕಾಮಕೇಳಿಗಳು ಸೇರಿದ್ದದ್ದು ಆಶ್ಚರ್ಯಕರವಲ್ಲ. (ಅರಣ್ಯಕಾಂಡ 25:1-3) ಒಬ್ಬ ಕಾನಾನ್ಯನಾಗಿದ್ದ ಶೆಕೆಮನು, ಯುವಕನ್ಯೆಯಾದ ದೀನಳ ಮೇಲೆ ಬಲಾತ್ಕಾರ ಸಂಭೋಗ ಮಾಡಿದನು. ಇದರ ಹೊರತಾಗಿಯೂ, ಅವನ ಕುಟುಂಬದಲ್ಲಿ ಅವನನ್ನು ಅತಿ ಘನವಂತ ಪುರುಷನೆಂಬಂತೆ ವೀಕ್ಷಿಸಲಾಗುತ್ತಿತ್ತು. (ಆದಿಕಾಂಡ 34:1, 2, 19) ಅಗಮ್ಯಗಮನ, ಸಲಿಂಗಿ ಕಾಮ ಮತ್ತು ಪಶು ಸಂಭೋಗವು ಸಾಮಾನ್ಯವಾಗಿತ್ತು. (ಯಾಜಕಕಾಂಡ 18:6, 22-24, 27) ಸಲಿಂಗಿ ಕಾಮಿಗಳ ಅಭ್ಯಾಸವಾದ “ಸಾಡಮಿ” (ಪುರುಷ ಮೈಥುನ) ಎಂಬ ಪದವೇ, ಜಗತ್ತಿನ ಆ ಭಾಗದಲ್ಲಿ ಒಮ್ಮೆ ಅಸ್ತಿತ್ವದಲ್ಲಿದ್ದ ಒಂದು ನಗರದ ಹೆಸರಿನಿಂದ ಬರುತ್ತದೆ. (ಆದಿಕಾಂಡ 19:4, 5, 28) ಬಾಳನ ಆರಾಧನೆಯಲ್ಲಿ ರಕ್ತಪಾತವೂ ಒಳಗೂಡಿತ್ತು. ಬಾಳನ ಆರಾಧಕರು ತಮ್ಮ ಮಕ್ಕಳನ್ನು ಜೀವಸಹಿತವಾಗಿ ತಮ್ಮ ದೇವತೆಗಳಿಗೆ ಯಜ್ಞವಾಗಿ ಉರಿಯುವ ಬೆಂಕಿಗೆ ಎಸೆಯುತ್ತಿದ್ದರು! (ಯೆರೆಮೀಯ 19:5) ಈ ಸಕಲ ಆಚಾರಗಳು ಧಾರ್ಮಿಕ ಬೋಧನೆಗಳಿಗೆ ಸಂಬಂಧಪಟ್ಟಿದ್ದವು. ಅದು ಹೇಗೆ?
ಡಾ. ಮೆರಿಲ್ ಅಂಗರ್, ತನ್ನ ಭೂಸಂಶೋಧನ ಶಾಸ್ತ್ರ ಮತ್ತು ಹಳೆಯ ಒಡಂಬಡಿಕೆ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ವಿವರಿಸುವುದು: “ಕಾನಾನ್ಯ ಪುರಾಣಗಳ ಕ್ರೌರ್ಯ, ಕಾಮಾಸಕ್ತಿ ಮತ್ತು ದುರ್ವ್ಯಸನವು, ಆ ಸಮಯದಲ್ಲಿ ಸಮೀಪ ಪೂರ್ವದಲ್ಲಿ ಇನ್ನೆಲ್ಲಿಯೂ ಇದ್ದುದಕ್ಕಿಂತಲೂ ತೀರ ಕೆಟ್ಟದ್ದಾಗಿದೆ. ಮತ್ತು ಕಾನಾನ್ಯ ದೇವತೆಗಳ, ಯಾವ ನೈತಿಕ ಶೀಲವೂ ಇಲ್ಲದಿದ್ದ ದಿಗ್ಭ್ರಮೆ ಹಿಡಿಸುವ ಗುಣಲಕ್ಷಣವು, ಅವುಗಳ ಭಕ್ತರಲ್ಲಿ ಅತಿ ಕೆಟ್ಟಗುಣಗಳನ್ನು ಹೊರತಂದಿರಬೇಕು ಮತ್ತು ಅವುಗಳಲ್ಲಿ ಪವಿತ್ರ ವೇಶ್ಯಾವಾಟಿಕೆ, [ಮತ್ತು] ಶಿಶುಯಜ್ಞಗಳಂತಹ ಆ ಕಾಲದ ಅತಿ ನೀತಿಗೆಟ್ಟ ಆಚಾರಗಳಲ್ಲಿ ಅನೇಕ ಆಚಾರಗಳು ಒಳಗೂಡಿದ್ದವು.”
ದೇವರು ಕಾನಾನ್ಯರ ಆರಾಧನೆಯನ್ನು ಅಂಗೀಕರಿಸಿದನೊ? ನಿಶ್ಚಯವಾಗಿಯೂ ಇಲ್ಲ. ತನ್ನನ್ನು ಹೇಗೆ ಶುದ್ಧವಾದೊಂದು ರೀತಿಯಲ್ಲಿ ಆರಾಧಿಸಬೇಕೆಂದು ಆತನು ಇಸ್ರಾಯೇಲ್ಯರಿಗೆ ಕಲಿಸಿದನು. ಮೇಲೆ ಹೇಳಲಾಗಿರುವ ಆಚಾರಗಳ ಕುರಿತಾಗಿ ಆತನು ಎಚ್ಚರಿಸಿದ್ದು: “ಈ ದುರಾಚಾರಗಳಲ್ಲಿ ಯಾವದರಿಂದಲೂ ನೀವು ಅಶುದ್ಧರಾಗಬಾರದು. ನಾನು ನಿಮ್ಮ ಎದುರಿನಿಂದ ಹೊರಡಿಸುವ ಜನಾಂಗಗಳವರು ಇಂಥ ದುರಾಚಾರಗಳಿಂದ ಅಶುದ್ಧರಾದರು. ಅವರ ದೇಶವು ಅಶುದ್ಧವಾಗಿ ಹೋದದರಿಂದ ಅವರ ಪಾಪಕೃತ್ಯಗಳಿಗಾಗಿ ಅವರನ್ನು ಶಿಕ್ಷಿಸಿದ್ದೇನೆ; ಆ ದೇಶವು ತನ್ನಲ್ಲಿ ವಾಸಿಸಿದವರನ್ನು ಕಾರಿಬಿಟ್ಟಿತು.”—ಯಾಜಕಕಾಂಡ 18:24, 25.
ಶುದ್ಧಾರಾಧನೆಯು ಮಲಿನವಾಗಿ ಪರಿಣಮಿಸುತ್ತದೆ
ಅನೇಕ ಇಸ್ರಾಯೇಲ್ಯರು ಶುದ್ಧಾರಾಧನೆಯ ವಿಷಯದಲ್ಲಿ ದೇವರ ವೀಕ್ಷಣವನ್ನು ಅಂಗೀಕರಿಸಲಿಲ್ಲ. ಬದಲಾಗಿ, ತಮ್ಮ ದೇಶದಲ್ಲಿ ಬಾಳನ ಆರಾಧನೆಯು ಮುಂದುವರಿಯುವಂತೆ ಅವರು ಅನುಮತಿಸಿದರು. ಅತಿಬೇಗನೆ ಯೆಹೋವನ ಆರಾಧನೆಯನ್ನು ಬಾಳನದ್ದರೊಂದಿಗೆ ಬೆರೆಸಲು ಪ್ರಯತ್ನಿಸುವಂತೆ ಇಸ್ರಾಯೇಲ್ಯರು ಪ್ರೇರಿಸಲ್ಪಟ್ಟರು. ದೇವರು ಈ ರೀತಿಯ ಮಿಶ್ರಾರಾಧನೆಯನ್ನು ಅಂಗೀಕರಿಸಿದನೊ? ಅರಸನಾದ ಮನಸ್ಸೆಯ ಆಳಿಕೆಯಲ್ಲಿ ನಡೆದ ಸಂಗತಿಯನ್ನು ಪರಿಗಣಿಸಿರಿ. ಅವನು ಬಾಳನಿಗೆ ಯಜ್ಞವೇದಿಗಳನ್ನು ಸ್ಥಾಪಿಸಿದನು, ತನ್ನ ಸ್ವಂತ ಪುತ್ರನನ್ನು ಯಜ್ಞವಾಗಿ ಸುಟ್ಟನು ಮತ್ತು ಮಾಯಾವಿದ್ಯೆಯನ್ನು ಆಚರಿಸಿದನು. “ಅಶೇರವಿಗ್ರಹಸ್ತಂಭವನ್ನು ನಿಲ್ಲಿಸಿ . . . ಯೆಹೋವನು ತನ್ನ ಹೆಸರನ್ನು ಸ್ಥಾಪಿಸುವದಕ್ಕಾಗಿ ಆರಿಸಿಕೊಂಡ . . . ದೇವಾಲಯದ . . . ಪ್ರಾಕಾರಗಳಲ್ಲಿ . . . ಯಜ್ಞವೇದಿಗಳನ್ನು ಕಟ್ಟಿಸಿದನು.”—2 ಅರಸುಗಳು 21:3-7.
ಮನಸ್ಸೆಯ ಪ್ರಜೆಗಳು ತಮ್ಮ ಅರಸನ ಮಾದರಿಯನ್ನು ಅನುಸರಿಸಿದರು. ವಾಸ್ತವವೇನಂದರೆ, “ಇಸ್ರಾಯೇಲ್ಯರು . . . ಮನಸ್ಸೆಯಿಂದ ಪ್ರೇರಿತರಾಗಿ ತಮ್ಮ ಮುಂದೆಯೇ ಯೆಹೋವನಿಂದ ಸಂಹೃತರಾದ ಅನ್ಯಜನಾಂಗಗಳಿಗಿಂತಲೂ ದುಷ್ಟರಾದರು.” (2 ಅರಸುಗಳು 21:9) ದೇವರ ಪ್ರವಾದಿಗಳಿಂದ ಪದೇ ಪದೇ ಬಂದ ಎಚ್ಚರಿಕೆಗಳನ್ನು ಆಲಿಸುವ ಬದಲಾಗಿ, ಮನಸ್ಸೆಯು ನಿರ್ದೋಷಿಗಳ ರಕ್ತದಿಂದ ಯೆರೂಸಲೇಮನ್ನು ತುಂಬಿಸುವಷ್ಟರ ಮಟ್ಟಿಗೆ ಕೊಲೆಗೈದನು. ಕಟ್ಟಕಡೆಗೆ ಮನಸ್ಸೆಯು ಸುಧಾರಣೆಹೊಂದಿದನಾದರೂ, ಅವನ ಪುತ್ರನೂ ಉತ್ತರಾಧಿಕಾರಿಯೂ ಆದ ಆಮೋನನು ಬಾಳಾರಾಧನೆಯನ್ನು ಪುನಶ್ಚೈತನ್ಯಗೊಳಿಸಿದನು.—2 ಅರಸುಗಳು 21:16, 19, 20.
ಸಕಾಲದಲ್ಲಿ, ವೇಶ್ಯಾಪುರುಷರು ದೇವಾಲಯದಲ್ಲಿ ಕಾರ್ಯನಡೆಸಲಾರಂಭಿಸಿದರು. ಬಾಳಾರಾಧನೆಯ ಈ ಅಭಿವ್ಯಕ್ತಿಯನ್ನು ದೇವರು ಹೇಗೆ ವೀಕ್ಷಿಸಿದನು? ಮೋಶೆಯ ಮೂಲಕ ಆತನು ಹೀಗೆ ಎಚ್ಚರಿಸಿದ್ದನು: “ಸೂಳೆತನದಿಂದಾಗಲಿ ಗುದಮೈಥುನದಿಂದಾಗಲಿ ಸಂಪಾದಿಸಿದ ಹಣವನ್ನು ಹರಕೆಯಾಗಿ ನಿಮ್ಮ ದೇವರಾದ ಯೆಹೋವನ ಮಂದಿರದೊಳಗೆ ತರಲೇ ಬಾರದು. ಈ ಎರಡೂ ಆತನಿಗೆ ಅಸಹ್ಯ.”—ಧರ್ಮೋಪದೇಶಕಾಂಡ 23:17, 18.
ಮನಸ್ಸೆಯ ಮೊಮ್ಮಗನಾದ ಅರಸನಾದ ಯೋಷೀಯನು ದೇವಾಲಯದಿಂದ ಅನೈತಿಕವಾದ ಬಾಳಾರಾಧನೆಯನ್ನು ತೆಗೆದು ಸ್ವಚ್ಛಗೊಳಿಸಿದನು. (2 ಅರಸುಗಳು 23:6, 7) ಆದರೆ ವಿಷಯಗಳು ವಿಪರೀತವಾಗಿ ಹದಗೆಟ್ಟಿದ್ದವು. ಅರಸನಾದ ಯೋಷೀಯನ ಮರಣಾನಂತರ, ಅತಿಬೇಗನೆ ವಿಗ್ರಹಾರಾಧನೆಯು ಯೆಹೋವನ ಆಲಯದಲ್ಲಿ ಪುನಃ ನಡೆಯುತ್ತಿತ್ತು. (ಯೆಹೆಜ್ಕೇಲ 8:3, 5-17) ಆದಕಾರಣ, ಬಾಬೆಲಿನ ಅರಸನು ಯೆರೂಸಲೇಮನ್ನೂ ಅದರ ದೇವಾಲಯವನ್ನೂ ನಾಶಮಾಡುವಂತೆ ಯೆಹೋವನು ಮಾಡಿದನು. ಇತಿಹಾಸದ ಈ ದುಃಖಕರ ನಿಜತ್ವವು, ಆರಾಧನೆಯ ಕೆಲವು ವಿಧಗಳು ದೇವರಿಗೆ ಅಂಗೀಕಾರಾರ್ಹವಾಗಿರುವುದಿಲ್ಲ ಎಂಬುದಕ್ಕೆ ಪುರಾವೆಯಾಗಿದೆ. ನಮ್ಮ ದಿನಗಳ ಕುರಿತೇನು?