“ದೇವರ ಜೀವನ ಮಾರ್ಗ” 1998-1999ರ ಅಧಿವೇಶನವು ಅತಿ ಸಮೀಪವಿದೆ!
ಭಾರತ, ನೇಪಾಳ, ಹಾಗೂ ಬಾಂಗ್ಲಾದೇಶದಲ್ಲಿ, ಅಕ್ಟೋಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳಿನ ವರೆಗೆ, 17 ಅಧಿವೇಶನಗಳು ಯೋಜಿಸಲ್ಪಟ್ಟಿವೆ. ಸಂಭವನೀಯವಾಗಿ, ಈ ಮೂರು ದಿನದ ಒಟ್ಟುಗೂಡುವಿಕೆಗಳಲ್ಲಿ ಒಂದು, ನಿಮ್ಮ ಮನೆಯಿಂದ ಹೆಚ್ಚೇನೂ ದೂರದಲ್ಲಿರದ ಒಂದು ನಗರದಲ್ಲಿ ನಡೆಯುವುದು. ಹೆಚ್ಚಿನ ಸ್ಥಳಗಳಲ್ಲಿ, ಪ್ರತಿ ದಿನ—ಶುಕ್ರವಾರದಿಂದ ಆದಿತ್ಯವಾರದ ವರೆಗೆ—ಕಾರ್ಯಕ್ರಮವು ಬೆಳಗ್ಗೆ 9:30ಕ್ಕೆ ಸಂಗೀತದೊಂದಿಗೆ ಆರಂಭವಾಗುವುದು.
ಶುಕ್ರವಾರ ಬೆಳಗ್ಗಿನ ಕಾರ್ಯಕ್ರಮವು, ಲೋಕದ ವಿವಿಧ ಭಾಗಗಳಲ್ಲಿ ರಾಜ್ಯ ಸಾರುವಿಕೆಯ ಪ್ರಗತಿಯ ಕುರಿತಾದ ವರದಿಗಳನ್ನು ಎತ್ತಿಹೇಳುವುದು. ಮತ್ತು ಅಧಿವೇಶನಕ್ಕಾಗಿರುವ ಮುಖ್ಯ ವಿಷಯವು, “ಕ್ರಿಸ್ತನ ಪ್ರಾಯಶ್ಚಿತ್ತ—ದೇವರ ರಕ್ಷಣಾಮಾರ್ಗ” ಎಂಬ ಮುಖ್ಯ ಭಾಷಣದಿಂದ ಒತ್ತಿಹೇಳಲ್ಪಡುವುದು.
ಮಧ್ಯಾಹ್ನದಲ್ಲಿ “ಹೆತ್ತವರೇ—ನಿಮ್ಮ ಮಕ್ಕಳಲ್ಲಿ ದೇವರ ಮಾರ್ಗವನ್ನು ನಾಟಿಸಿರಿ” ಎಂಬ ಭಾಷಣಮಾಲೆಯು, ಯೆಹೋವನನ್ನು ಪ್ರೀತಿಸಲು ಹಾಗೂ ಸೇವಿಸಲು ಎಳೆಯರಿಗೆ ಹೇಗೆ ಪ್ರಚೋದನೆ ನೀಡುವುದು ಎಂಬ ವಿಷಯದಲ್ಲಿ ಸಲಹೆಗಳನ್ನು ಕೊಡುವುದು. ಮಧ್ಯಾಹ್ನದ ಕಾರ್ಯಕ್ರಮವು, “ಮರಣಾನಂತರ ಜೀವನವಿದೆಯೆ?” ಎಂಬ ಭಾಷಣದೊಂದಿಗೆ ಮುಕ್ತಾಯಗೊಳ್ಳುವುದು.
ಶನಿವಾರ ಬೆಳಗ್ಗಿನ ಕಾರ್ಯಕ್ರಮವು, ಯೆಹೋವನ ಸಾಕ್ಷಿಗಳ ಶಿಷ್ಯರನ್ನಾಗಿ ಮಾಡುವ ಕಾರ್ಯವನ್ನು, ಮೂರು ಅನುಕ್ರಮವಾದ ಭಾಗಗಳಲ್ಲಿ ಸಾದರಪಡಿಸುವುದು: “ಜೀವಿತಕ್ಕೆ ನಡಿಸುವ ಮಾರ್ಗದಲ್ಲಿ ಸೇರುವಂತೆ ಜನರಿಗೆ ಸಹಾಯ ಮಾಡುವುದು,” “ಜನರನ್ನು ತಲಪುವ ಪಂಥಾಹ್ವಾನ,” ಮತ್ತು “ಕ್ರಿಸ್ತನು ಆಜ್ಞಾಪಿಸಿದ್ದನ್ನೆಲ್ಲಾ ಶಿಷ್ಯರಿಗೆ ಕಲಿಸುವುದು.” ಬೆಳಗ್ಗಿನ ಕಾರ್ಯಕ್ರಮದ ಮುಕ್ತಾಯದ ಸಮಯದಲ್ಲಿ, ಹೊಸ ಶಿಷ್ಯರಿಗಾಗಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಏರ್ಪಾಡು ಇರುವುದು.
ಶನಿವಾರ ಮಧ್ಯಾಹ್ನದ ಆರಂಭದ ಭಾಷಣವು, “ಅನಂತ ಜೀವನದ ನೋಟದಲ್ಲಿ ಸೇವೆಮಾಡುವುದು” ಎಂಬುದಾಗಿದ್ದು, ದೇವರ ಸೇವೆಯನ್ನು ಮಾಡುತ್ತಿರುವುದಕ್ಕಾಗಿರುವ ನಮ್ಮ ವೈಯಕ್ತಿಕ ಕಾರಣಗಳಿಗೆ ಪ್ರಾರ್ಥನಾಪೂರ್ವಕ ಆಲೋಚನೆಯನ್ನು ಕೊಡುವಂತೆ ನಮ್ಮನ್ನು ಉತ್ತೇಜಿಸುತ್ತದೆ. “ದೇವರ ಮಾರ್ಗವನ್ನು ಕಲಿಸುವವರಾದ ‘ಮನುಷ್ಯರಲ್ಲಿ ದಾನಗಳನ್ನು’ ಗಣ್ಯಮಾಡುವುದು” ಮತ್ತು “ವ್ಯಕ್ತಿತ್ವ—ಹಳೆಯದನ್ನು ತೆಗೆದುಹಾಕಿರಿ ಹೊಸದನ್ನು ಧರಿಸಿಕೊಳ್ಳಿರಿ” ಎಂಬ ಭಾಷಣಗಳು, ಎಫೆಸ 4ನೆಯ ಅಧ್ಯಾಯದ ಒಂದೊಂದು ವಚನದ ಜ್ಞಾನೋದಯವನ್ನು ಉಂಟುಮಾಡುವ ಪರೀಕ್ಷೆಯನ್ನು ಸಾದರಪಡಿಸುತ್ತವೆ. ತದನಂತರ, “ಲೋಕದಿಂದ ನಿಮ್ಮನ್ನು ನಿಷ್ಕಳಂಕವಾಗಿ ಇರಿಸಿಕೊಳ್ಳಿರಿ” ಎಂಬ ಭಾಷಣದಲ್ಲಿ ಮತ್ತು “ಯುವ ಜನರೇ—ದೇವರ ಮಾರ್ಗವನ್ನು ಅನುಸರಿಸಿರಿ” ಎಂಬ ಮೂರು ಭಾಗದ ಭಾಷಣಮಾಲೆಯಲ್ಲಿ, ಅತ್ಯುತ್ತಮ ಶಾಸ್ತ್ರೀಯ ಎಚ್ಚರಿಕೆಯು ಒದಗಿಸಲ್ಪಡುವುದು. ಮಧ್ಯಾಹ್ನದ ಕಾರ್ಯಕ್ರಮವು, “ಸೃಷ್ಟಿಕರ್ತನು—ಆತನ ವ್ಯಕ್ತಿತ್ವ ಹಾಗೂ ಆತನ ಮಾರ್ಗಗಳು” ಎಂಬ ಭಾಷಣದೊಂದಿಗೆ ಮುಕ್ತಾಯಗೊಳ್ಳುವುದು.
ಆದಿತ್ಯವಾರದ ಬೆಳಗ್ಗಿನ ಕಾರ್ಯಕ್ರಮವು, ಬೈಬಲಿನ ಯೆಹೆಜ್ಕೇಲ ಪುಸ್ತಕದ ಕೊನೆಯ ಅಧ್ಯಾಯಗಳನ್ನು ಹಾಗೂ ಅವುಗಳ ಪ್ರವಾದನಾ ಅನ್ವಯವನ್ನು ಚರ್ಚಿಸುವ ಮೂರು ಭಾಗಗಳ ಒಂದು ಭಾಷಣಮಾಲೆಯನ್ನು ಸಾದರಪಡಿಸುವುದು. ಮೂವರು ಹೀಬ್ರು ಯೌವನಸ್ಥರ ನಂಬಿಗಸ್ತಿಕೆಯ ಮೇಲಾಧಾರಿತವಾದ, ಪೂರ್ಣ ಉಡುಪು ಸಜ್ಜಿತ ಡ್ರಾಮವು, ಬೆಳಗ್ಗಿನ ಕಾರ್ಯಕ್ರಮದ ಪರಮಾವಧಿಯಾಗಿರುವುದು. ಮಧ್ಯಾಹ್ನದಲ್ಲಿ ಅಧಿವೇಶನದ ಮುಖ್ಯ ಭಾಗವು, “ನಿತ್ಯಜೀವಕ್ಕೆ ನಡಿಸುವ ಏಕಮಾತ್ರ ಮಾರ್ಗ” ಎಂಬ ಬಹಿರಂಗ ಭಾಷಣವಾಗಿರುವುದು.
ಎಲ್ಲ ಮೂರು ದಿನಗಳಲ್ಲಿ ಉಪಸ್ಥಿತರಿರುವ ಮೂಲಕ, ಖಂಡಿತವಾಗಿಯೂ ನೀವು ಆತ್ಮಿಕವಾಗಿ ಪುಷ್ಟಿಗೊಳಿಸಲ್ಪಡುವಿರಿ. ಪ್ರತಿಯೊಂದು ಸೆಶನ್ಗೆ ಹಾಜರಾಗಲು ನಿಮಗೆ ಹೃತ್ಪೂರ್ವಕವಾದ ಸ್ವಾಗತವಿದೆ. ನಿಶ್ಚಯವಾಗಿಯೂ ಇದೆಲ್ಲವೂ ನಿಮಗೆ ಯಾವುದೇ ಹಣದ ಖರ್ಚಿಲ್ಲದೇ ನಡೆಸಲ್ಪಡುವುದು. ನಿಮ್ಮ ಮನೆಗೆ ಅತ್ಯಂತ ಸಮೀಪದಲ್ಲಿರುವ ಸ್ಥಳದ ಬಗ್ಗೆ ತಿಳಿದುಕೊಳ್ಳಲಿಕ್ಕಾಗಿ, ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹವನ್ನು ಸಂಪರ್ಕಿಸಿರಿ ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಪತ್ರ ಬರೆಯಿರಿ.