ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಯೆಹೋವನ ಮಾರ್ಗಕ್ಕೆ ನಮ್ರಭಾವದಿಂದ ಸರಿಹೊಂದಿಸಿಕೊಳ್ಳುವುದು
“ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ.” 26 ಶತಮಾನಗಳ ಹಿಂದೆ ಇಬ್ರಿಯ ಪ್ರವಾದಿಯಾದ ಚೆಫನ್ಯನಿಂದ ಘೋಷಿಸಲ್ಪಟ್ಟ ಈ ಆಮಂತ್ರಣವು ಈಗಲೂ ಇಂದು ಭೂಮ್ಯಾದ್ಯಂತವಿರುವ ಜನರಿಗೆ ನೀಡಲ್ಪಡುತ್ತಿದೆ. (ಚೆಫನ್ಯ 2:3) ಯೆಹೋವನನ್ನು ಆಶ್ರಯಿಸುವುದು ಏನನ್ನು ಅರ್ಥೈಸುತ್ತದೆ? ಇದನ್ನು ಮಾಡುವುದು ಒಬ್ಬನೇ ಸತ್ಯ, ಸಜೀವ ದೇವರಾದ ಯೆಹೋವನ ಜ್ಞಾನವನ್ನು ಪಡೆದುಕೊಳ್ಳುವುದರಲ್ಲಿ ಪ್ರಾರಂಭವಾಗುತ್ತದೆ.—ಯೆರೆಮೀಯ 10:10; ಯೋಹಾನ 17:3.
ಜ್ಞಾನವನ್ನು ಪಡೆದುಕೊಳ್ಳುವುದು ತಾನೇ ದೇವರ ಮುಂದೆ ಒಂದು ಮೆಚ್ಚುಗೆಯ ಸ್ಥಾನವನ್ನು ಪಡೆದುಕೊಳ್ಳುವುದಕ್ಕೆ ನಡೆಸುವುದಿಲ್ಲ. ದೇವರ ಅನುಗ್ರಹವನ್ನು ಪಡೆದುಕೊಳ್ಳಲಿಕ್ಕಾಗಿ, ವ್ಯಕ್ತಿಯೊಬ್ಬನು ಈ ಜ್ಞಾನವನ್ನು ಅನ್ವಯಿಸಿಕೊಳ್ಳಲೂಬೇಕು. ಹೇಗೆ? ಸೂರಿನಾಮ್ನಿಂದ ಬಂದ ಈ ಮುಂದಿನ ಅನುಭವದಿಂದ ಚಿತ್ರಿಸಲ್ಪಟ್ಟಂತೆ, ತನ್ನ ಆಲೋಚನೆ ಮತ್ತು ನಡತೆಯನ್ನು ದೇವರ ಮಟ್ಟಗಳಿಗೆ ನಮ್ರತೆಯಿಂದ ಸರಿಹೊಂದಿಸಿಕೊಳ್ಳುವ ಮೂಲಕವೇ.—ಎಫೆಸ 4:22-24.
30ರ ನಡುವಯಸ್ಸಿನ ಒಬ್ಬ ಶಾಲಾಶಿಕ್ಷಕನಾದ ಎಡೀ, ‘ಇಂದಿನ ಸಮಾಜದಲ್ಲಿ ಧರ್ಮವು ಯಾವ ಪಾತ್ರವನ್ನು ವಹಿಸುತ್ತದೆ?’ ಮತ್ತು ‘ಪುರಾತನ ಪುಸ್ತಕವಾದ ಬೈಬಲು ಆಧುನಿಕ ವಿಜ್ಞಾನದೊಂದಿಗೆ ಸಮ್ಮತಿಸುತ್ತದೋ?’ ಎಂಬಂಥ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳಿಗಾಗಿ ಹಂಬಲಿಸಿದನು. ಯೆಹೋವನ ಸಾಕ್ಷಿಗಳು ಅವನನ್ನು ಭೇಟಿಮಾಡಿ, ಈ ಪ್ರಶ್ನೆಗಳಿಗೆ ಬೈಬಲಾಧಾರಿತ ಉತ್ತರಗಳನ್ನು ನೀಡಲು ಮುಂದೆಬಂದಾಗ, ಎಡೀ ಜಾಗರೂಕತೆಯಿಂದ ಕೇಳಿಸಿಕೊಂಡನು. ಆ ಸಾಕ್ಷಿಗಳ ವಿವರಣೆಗಳನ್ನು ತಾಳೆಮಾಡಿ ನೋಡಲು ಅವನು ಟಿಪ್ಪಣಿಯನ್ನು ಸಹ ಬರೆದುಕೊಂಡನು.
ಮಾನವರು ಚಿಂಪಾಂಜಿಗಳಿಂದ ಬಂದವರೆಂದು ಕಲಿಸಿದ ಒಂದು ಧರ್ಮದೊಂದಿಗೆ ಈ ಹಿಂದೆ ಎಡೀ ಜೊತೆಗೂಡಿದ್ದನು. ಆದುದರಿಂದ ಜೀವ—ಇದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೊ ಸೃಷ್ಟಿಯಿಂದಲೊ? (ಇಂಗ್ಲಿಷ್) ಎಂಬ ಪ್ರಕಾಶನವನ್ನು ಸಾಕ್ಷಿಗಳು ನೀಡಿದಾಗ, ಅವನು ತಕ್ಷಣವೇ ಅದನ್ನು ತೆಗೆದುಕೊಂಡನು. ಬೈಬಲಿನ ಸೃಷ್ಟಿಯ ವೃತ್ತಾಂತದ ಈ ಪುಸ್ತಕದ ಸ್ಪಷ್ಟ ವಿವರಣೆಯು ಅವನನ್ನು ಪ್ರಭಾವಿಸಿತು. ಅವನು ತನ್ನ ಬೈಬಲಿನ ಅಭ್ಯಾಸದ ಮೂಲಕ ತಾನು ಸತ್ಯವನ್ನು ಕಂಡುಕೊಂಡಿದ್ದೆನೆಂದು ಮನಗಾಣಿಸಲ್ಪಟ್ಟನು!
ಆದರೆ ಈಗ ಅವನು ಒಂದು ಪರೀಕ್ಷೆಯನ್ನು ಎದುರಿಸಿದನು. ಕಳ್ಳತನ ಹಾಗೂ ವಂಚನೆಯೇ ಜೀವನದ ಮಾರ್ಗವಾಗಿದ್ದ ಒಂದು ಮನೆಯಲ್ಲಿ ಎಡೀ ವಾಸಿಸುತ್ತಿದ್ದನು. ಆದುದರಿಂದ ಅವನ ಮುಂದೆ ಆಯ್ಕೆಯೊಂದಿತ್ತು: ತನ್ನ ಕೋಣೆಯಲ್ಲಿ ವಾಸಿಸುವವರ ಭ್ರಷ್ಟ ಜೀವನರೀತಿಯನ್ನು ಅನುಸರಿಸುವುದು ಅಥವಾ ದೇವರನ್ನು ಮಹಿಮೆಪಡಿಸುವ ಜೀವನಶೈಲಿಯ ಪರವಾಗಿರಲು ಅಂಥ ನಡತೆಯನ್ನು ತಿರಸ್ಕರಿಸುವುದೇ. ವಿವೇಕಯುತವಾಗಿ, ಎಡೀ ಎರಡನೆಯದನ್ನು ಆರಿಸಿಕೊಂಡನು. ಎಲ್ಲ ಕೆಟ್ಟ ಸಹವಾಸವನ್ನು ಬಿಟ್ಟುಬಿಟ್ಟು, ಆ ಮನೆಯಿಂದ ಹೊರಬಂದನು.—1 ಕೊರಿಂಥ 15:33, 34.
ರಾಜ್ಯ ಸಭಾಗೃಹದಲ್ಲಿ ಕೂಟಗಳನ್ನು ಹಾಜರಾಗಲು ಪ್ರಾರಂಭಿಸಿದ ಅನಂತರ ಎಡೀ ತೀವ್ರ ಪ್ರಗತಿಯನ್ನು ಮಾಡಿದನು. ಅವನು ಬಟ್ಟೆಧರಿಸುವುದರಲ್ಲಿ ಮತ್ತು ತಲೆಬಾಚುವುದರಲ್ಲಿ ಸಹ ಸುಧಾರಣೆಗಳನ್ನು ಮಾಡಿದನು. ಅವನು ಏನನ್ನು ಕಲಿಯುತ್ತಿದ್ದನೋ ಅದನ್ನು ಅವನು ತನ್ನ ಮಿತ್ರರು ಹಾಗೂ ಸಂಬಂಧಿಕರೊಂದಿಗೆ ಮಾತಾಡಲು ಪ್ರಾರಂಭಿಸಿದನು. ಅನಂತರ, “ಸುವಾರ್ತೆ”ಯ ಬಹಿರಂಗ ಸಾರುವಿಕೆಯಲ್ಲಿ ಪಾಲ್ಗೊಳ್ಳಲು ಅವನಿಗೆ ಮನ್ನಣೆ ಸಿಕ್ಕಿದ ಕೂಡಲೇ ಅವನ ಆನಂದವು ಹೆಚ್ಚಾಯಿತು. (ಮತ್ತಾಯ 24:14; ಅ. ಕೃತ್ಯಗಳು 20:20) 1996ರ ಡಿಸೆಂಬರ್ ತಿಂಗಳಲ್ಲಿ, ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವನಿಗೆ ತನ್ನ ಸಮರ್ಪಣೆಯನ್ನು ಅವನು ಸಂಕೇತಿಸಿದಾಗ ಆ ದೀರ್ಘಸಮಯದಿಂದ ಎದುರುನೋಡಿದ ದಿನವು ಬಂತು.
ಪ್ರತಿ ವರ್ಷ, “ಯೆಹೋವನನ್ನು ಆಶ್ರಯಿಸಿರಿ” ಎಂಬ ಆಮಂತ್ರಣಕ್ಕೆ ಲಕ್ಷಾಂತರ ಪ್ರಾಮಾಣಿಕ ಹೃದಯದ ಜನರು ಪ್ರತಿಕ್ರಿಯೆಯನ್ನು ತೋರಿಸುತ್ತಾರೆ. ಹಾಗೆ ಮಾಡುವುದರಲ್ಲಿ, ಅವರು ಜ್ಞಾನೋಕ್ತಿ 22:4ರ ಸತ್ಯತೆಯನ್ನು ಅನುಭವಿಸುತ್ತಾರೆ: “ಧನ ಮಾನ ಜೀವಗಳು ದೀನಭಾವಕ್ಕೂ [“ನಮ್ರಭಾವಕ್ಕೂ,” NW] ಯೆಹೋವನ ಭಯಕ್ಕೂ ಫಲ.” ಹೌದು, ಯೆಹೋವನ ವಿಧಕ್ಕೆ ನಮ್ರಭಾವದಿಂದ ಸರಿಹೊಂದಿಸಿಕೊಳ್ಳುವುದರ ಮೂಲಕ, ಸತ್ಯಪ್ರಿಯರು ಅಂಥ ಆಶೀರ್ವಾದಗಳನ್ನೂ ಈಗಲೂ ಅನುಭವಿಸುತ್ತಾರೆ ಮತ್ತು ಇದೇ ಭೂಮಿಯ ಮೇಲೆ ಅನಂತ ಆಶೀರ್ವಾದಗಳಿಗಾಗಿ ಖಾತ್ರಿಯಿಂದ ಎದುರುನೋಡುತ್ತಾರೆ.—ಕೀರ್ತನೆ 37:29.
[ಪುಟ 18ರಲ್ಲಿರುವಚಿತ್ರ]
(For fully formatted text, see publication.)
ಕರಿಬೀಯನ್ ಸಮುದ್ರ
ಗಯಾನ
ಸೂರಿನಾಮ್
ಫ್ರೆಂಚ್ ಗಯಾನ
ಬ್ರೆಸಿಲ್
[ಕೃಪೆ]
Globe: Mountain High Maps® Copyright © 1997 Digital Wisdom, Inc.