ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w12 7/15 ಪು. 32
  • “ನನ್ನ ಕನಸು ನನಸಾಯಿತು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನನ್ನ ಕನಸು ನನಸಾಯಿತು”
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಅನುರೂಪ ಮಾಹಿತಿ
  • ನಿಮ್ಮ ಪ್ರೀತಿನ ಅವ್ರಿಗೆ ತಿಳಿಸಿ
    ಅನುಭವಗಳು
  • “ನಿನ್ನ ಪ್ರೀತಿಪೂರ್ವಕದಯೆಯು ಜೀವಕ್ಕಿಂತಲೂ ಶ್ರೇಷ್ಠವಾಗಿದೆ”
    ಕಾವಲಿನಬುರುಜು—1998
  • “ವಿವೇಕವನ್ನು ಪಡೆಯುವವನು ಸಂತೋಷಿತನು”
    ಕಾವಲಿನಬುರುಜು—1993
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
w12 7/15 ಪು. 32

“ನನ್ನ ಕನಸು ನನಸಾಯಿತು”

ಹದಿನೈದು ವರ್ಷಗಳ ಹಿಂದೆ ಎಮೀಲ್ಯಾ ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡುತ್ತಿದ್ದಳು. ಅವಳ ಜೀವನದ ಅತಿ ಸಂತೋಷದ ದಿನಗಳವು! ಕಾರಣಾಂತರದಿಂದ ಆ ಸೇವೆಯನ್ನು ನಿಲ್ಲಿಸಿದ್ದ ಅವಳು ಆ ದಿನಗಳನ್ನು ತುಂಬ ನೆನಸಿಕೊಳ್ಳುತ್ತಿದ್ದಳು. ಈಗ ಆಕೆಗೆ ಪುನಃ ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡುವ ಹಂಬಲ.

ಆದರೆ ಅವಳ ನೌಕರಿ ಅಡ್ಡಿಯಾಗಿತ್ತು. ಸಮಯವೆಲ್ಲ ಅಲ್ಲೇ ಹೋಗಿಬಿಡುತ್ತಿತ್ತು. ಹಾಗಾಗಿ ಪಯನೀಯರ್‌ ಸೇವೆಯನ್ನು ತನ್ನಿಂದ ಮಾಡಲಾಗುತ್ತಿಲ್ಲವಲ್ಲಾ ಎಂಬ ದುಃಖ ಅವಳಿಗೆ. ಒಮ್ಮೆ ಸಹೋದ್ಯೋಗಿಗಳ ಮುಂದೆ “ನಾನು ವಾರದಲ್ಲಿ ಕೆಲವೇ ದಿನ ಕೆಲಸ ಮಾಡುವಂತಾದರೆ ಚೆನ್ನಾಗಿತ್ತು” ಎಂದು ಮನದ ಅಳಲನ್ನು ಹೊರಹಾಕಿದಳು. ವಿಷಯ ಬಾಸ್‌ ಕಿವಿಗೆ ಬಿತ್ತು. ಕೇಳಿಸಿಕೊಂಡದ್ದು ನಿಜವೇ ಎಂದು ವಿಚಾರಿಸಿದಾಗ ಎಮೀಲ್ಯಾ ಹೌದೆಂದು ಒಪ್ಪಿಕೊಂಡು ವಿಷಯವನ್ನು ತಿಳಿಸಿದಳು. ಆ ಕಂಪನಿಯಲ್ಲಿ ವಾರದ ಕೆಲವು ದಿನ ಮಾತ್ರ ಕೆಲಸ ಮಾಡಲು ಯಾರಿಗೂ ಅನುಮತಿಯಿರಲಿಲ್ಲ. ಹಾಗಾಗಿ ಕಂಪನಿಯ ಡೈರೆಕ್ಟರ್‌ ಬಳಿ ಮಾತಾಡುವಂತೆ ಬಾಸ್‌ ಸಲಹೆ ಕೊಟ್ಟಳು. ನಮ್ಮ ಸಹೋದರಿ ಆ ವಿಷಯದ ಬಗ್ಗೆ ಹೇಗೆ ಮಾತಾಡುವುದೆಂದು ಚೆನ್ನಾಗಿ ಯೋಚಿಸಿ, ಶಾಂತಮನಸ್ಸು ಹಾಗೂ ಧೈರ್ಯಕ್ಕಾಗಿ ಯೆಹೋವನಲ್ಲಿ ಪ್ರಾರ್ಥಿಸಿದಳು.

ಬಳಿಕ ಡೈರೆಕ್ಟರ್‌ ಬಳಿ ಹೋಗಿ ಜಾಣ್ಮೆಯಿಂದಲೂ ಧೈರ್ಯದಿಂದಲೂ ಮಾತಾಡಿ ತನ್ನ ಕೆಲಸದ ಅವಧಿಯನ್ನು ಕಡಿಮೆಗೊಳಿಸುವಂತೆ ವಿನಂತಿಸಿದಳು. ಜನರಿಗೆ ಸಹಾಯ ಮಾಡಬೇಕೆಂಬುದು ತನ್ನಾಸೆಯೆಂದು ವಿವರಿಸುತ್ತಾ ಹೀಗಂದಳು: “ನಾನು ಯೆಹೋವನ ಸಾಕ್ಷಿ. ಜನರಿಗೆ ಆಧ್ಯಾತ್ಮಿಕವಾಗಿ ಸಹಾಯ ಮಾಡುತ್ತೇನೆ. ಇಂದು ಜನರ ನೈತಿಕ ಮಟ್ಟ ಕುಸಿಯುತ್ತಿದೆ. ಸ್ಪಷ್ಟ ಮೌಲ್ಯಗಳು, ಮಟ್ಟಗಳು ಅವರಿಗೆ ಅಗತ್ಯ. ಬೈಬಲಿನಲ್ಲಿರುವ ವಿವೇಕದ ನುಡಿಗಳನ್ನು ತಿಳಿಸುವುದರಿಂದ ಅವರಿಗೆ ತುಂಬ ಪ್ರಯೋಜನವಾಗುತ್ತದೆ. ಈ ಸೇವೆಯಿಂದ ಆಫೀಸಿನಲ್ಲಿ ನನ್ನ ಕೆಲಸಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ನೀವು ನನ್ನ ಕೆಲಸದ ಅವಧಿ ಕಡಿಮೆ ಮಾಡುವುದಾದರೆ ಜನರಿಗೆ ಸಹಾಯ ಮಾಡಲು ನನ್ನಿಂದಾಗುವುದು.”

ಅವಳ ಮಾತುಗಳನ್ನು ಜಾಗ್ರತೆಯಿಂದ ಕೇಳಿದ ಆ ಡೈರೆಕ್ಟರ್‌ ತನಗೂ ಜನಸೇವೆ ಮಾಡುವ ಆಸೆಯಿತ್ತೆಂದು ಹೇಳುತ್ತಾ “ನೀವು ಕೊಡುವ ಕಾರಣಗಳನ್ನು ಕೇಳಿದ ಮೇಲೆ ನಿಮ್ಮ ವಿನಂತಿಗೆ ಒಪ್ಪಲೇ ಬೇಕೆಂದು ಅನಿಸುತ್ತದೆ. ಆದರೆ ನಿಮ್ಮ ಸಂಬಳ ಕಡಿಮೆ ಆಗುತ್ತದೆಂದು ಗೊತ್ತಿದೆಯಲ್ಲಾ?” ಎಂದು ಕೇಳಿದರು. ಅದಕ್ಕವಳು ಹೌದೆನ್ನುತ್ತ, ಅಗತ್ಯವಿದ್ದರೆ ಸರಳ ಜೀವನ ನಡೆಸುತ್ತೇನೆ, “ಜನರಿಗೆ ಹೆಚ್ಚು ಒಳಿತನ್ನು ತರುವ ಕೆಲಸ ಮಾಡುವುದೇ ನನ್ನ ಮುಖ್ಯ ಗುರಿ, ಅದರಿಂದ ನನಗೆ ಸಂತೃಪ್ತಿ ಸಿಗುತ್ತದೆ” ಎಂದು ಹೇಳಿದಳು. ಅದಕ್ಕೆ ಆ ಡೈರೆಕ್ಟರ್‌ “ಪರರಿಗಾಗಿ ತಮ್ಮ ಸಮಯವನ್ನು ನಿಸ್ವಾರ್ಥವಾಗಿ ಕೊಡುವವರನ್ನು ತುಂಬ ಮೆಚ್ಚುತ್ತೇನೆ” ಎಂದರು.

ಆ ಕಂಪನಿಯಲ್ಲಿ ಅದು ವರೆಗೆ ಯಾರಿಗೂ ಅರೆಕಾಲಿಕ ಕೆಲಸ ಸಿಕ್ಕಿರಲಿಲ್ಲ. ಆದರೆ ಎಮೀಲ್ಯಾಳಿಗೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಲು ಅನುಮತಿ ಸಿಕ್ಕಿತು. ಇನ್ನೊಂದು ಆಶ್ಚರ್ಯ ಏನೆಂದರೆ ಅವಳ ಸಂಬಳವನ್ನೂ ಜಾಸ್ತಿ ಮಾಡಲಾಯಿತು. ಈಗ ಅವಳಿಗೆ ಹಿಂದೆ ಎಷ್ಟು ಸಿಗುತ್ತಿತ್ತೋ ಅಷ್ಟೇ ಸಂಬಳ ಸಿಗುತ್ತದೆ. “ನನ್ನ ಕನಸು ನನಸಾಯಿತು. ನಾನು ಪುನಃ ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡಬಲ್ಲೆ!” ಎನ್ನುತ್ತಾಳೆ ಆಕೆ.

ನಿಮ್ಮ ಕುರಿತೇನು? ನೀವು ನಿಮ್ಮ ಪರಿಸ್ಥಿತಿಯನ್ನು ಹೊಂದಿಸಿಕೊಂಡು ಪಯನೀಯರ್‌ ಸೇವೆ ಆರಂಭಿಸಬಹುದಾ? ಆ ಸೇವೆಯನ್ನು ಕಾರಣಾಂತರದಿಂದ ನಿಲ್ಲಿಸಿದ್ದಲ್ಲಿ ಪುನಃ ಆರಂಭಿಸಬಲ್ಲಿರಾ?

[ಪುಟ 32ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಪರರಿಗಾಗಿ ತಮ್ಮ ಸಮಯವನ್ನು ನಿಸ್ವಾರ್ಥವಾಗಿ ಕೊಡುವವರನ್ನು ತುಂಬ ಮೆಚ್ಚುತ್ತೇನೆ” ಎಂದರು ಡೈರೆಕ್ಟರ್‌

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ