ಪರಿವಿಡಿ
ಏಪ್ರಿಲ್ 15, 2014
© 2014 Watch Tower Bible and Tract Society of Pennsylvania.
ಅಧ್ಯಯನ ಆವೃತ್ತಿ
ಜೂನ್ 2-8, 2014
ಮೋಶೆಯಲ್ಲಿದ್ದಂಥ ನಂಬಿಕೆ ನಿಮ್ಮಲ್ಲೂ ಇರಲಿ
ಪುಟ 3 • ಗೀತೆಗಳು: 33, 133
ಜೂನ್ 9-15, 2014
“ಅದೃಶ್ಯನಾಗಿರುವಾತನನ್ನು” ನೀವು ನೋಡುತ್ತಿದ್ದೀರೋ?
ಪುಟ 8 • ಗೀತೆಗಳು: 81, 132
ಜೂನ್ 16-22, 2014
ಯಾರೂ ಇಬ್ಬರು ಯಜಮಾನರ ಸೇವೆಮಾಡಲಾರರು
ಪುಟ 17 • ಗೀತೆಗಳು: 62, 106
ಜೂನ್ 23-29, 2014
ಧೈರ್ಯವಾಗಿರಿ—ಯೆಹೋವನು ನಿಮ್ಮ ಸಹಾಯಕನು!
ಪುಟ 22 • ಗೀತೆಗಳು: 22, 95
ಜೂನ್ 30, 2014–ಜುಲೈ 6, 2014
ಯೆಹೋವನು ಕಾಳಜಿಯಿಂದ ನಿಮ್ಮನ್ನು ಗಮನಿಸುತ್ತಿರುವುದನ್ನು ಗಣ್ಯಮಾಡಿ
ಪುಟ 27 • ಗೀತೆಗಳು: 69, 120
ಅಧ್ಯಯನ ಲೇಖನಗಳು
▪ ಮೋಶೆಯಲ್ಲಿದ್ದಂಥ ನಂಬಿಕೆ ನಿಮ್ಮಲ್ಲೂ ಇರಲಿ
▪ “ಅದೃಶ್ಯನಾಗಿರುವಾತನನ್ನು” ನೀವು ನೋಡುತ್ತಿದ್ದೀರೋ?
ಮೋಶೆಗೆ ಎಷ್ಟು ಬಲವಾದ ನಂಬಿಕೆ ಇತ್ತೆಂದರೆ ಅವನಿಗೆ ಯೆಹೋವನು ಕಣ್ಣೆದುರಿಗೇ ಇರುವ ವ್ಯಕ್ತಿಯಂತಿದ್ದನು. ಅವನಲ್ಲಿದ್ದ ಅದೇ ನಂಬಿಕೆ ನಮ್ಮಲ್ಲಿರಬೇಕಾದರೆ ಏನು ಮಾಡಬೇಕು? ನಾವು ‘ಅದೃಶ್ಯನಾಗಿರುವಾತನನ್ನು ನೋಡುತ್ತಿದ್ದೇವೋ ಎಂಬಂತೆ ಸ್ಥಿರಚಿತ್ತರಾಗಿ ಮುಂದುವರಿಯುವುದು’ ಹೇಗೆ? ಎನ್ನುವುದನ್ನು ಈ ಲೇಖನಗಳು ಚರ್ಚಿಸುತ್ತವೆ.—ಇಬ್ರಿ. 11:27.
▪ ಯಾರೂ ಇಬ್ಬರು ಯಜಮಾನರ ಸೇವೆಮಾಡಲಾರರು
▪ ಧೈರ್ಯವಾಗಿರಿ—ಯೆಹೋವನು ನಿಮ್ಮ ಸಹಾಯಕನು!
ಪ್ರಪಂಚದಾದ್ಯಂತ ಲಕ್ಷಾಂತರ ಜನರು ಕೆಲಸವನ್ನು ಅರಸುತ್ತಾ ತಮ್ಮ ಮನೆ, ಬಾಳಸಂಗಾತಿ ಮತ್ತು ಮಕ್ಕಳನ್ನು ಬಿಟ್ಟು ದೂರ ಹೋಗುತ್ತಾರೆ. ಕುಟುಂಬದ ಶಿರಸ್ಸುಗಳು ತಮ್ಮ ಕುಟುಂಬವನ್ನು ಹೇಗೆ ನೋಡಿಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ ಮತ್ತು ಆ ಜವಾಬ್ದಾರಿಯನ್ನು ಪೂರೈಸಲು ಆತನು ಹೇಗೆ ಸಹಾಯ ಮಾಡುತ್ತಾನೆಂದು ಈ ಲೇಖನಗಳು ವಿವರಿಸುತ್ತವೆ.
▪ ಯೆಹೋವನು ಕಾಳಜಿಯಿಂದ ನಿಮ್ಮನ್ನು ಗಮನಿಸುತ್ತಿರುವುದನ್ನು ಗಣ್ಯಮಾಡಿ
“ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವದು” ಎಂದು ಬೈಬಲ್ ಹೇಳುತ್ತದೆ. ಅಂದರೆ ನಾವು ಆತನ ನಿಯಮಗಳನ್ನು ಮೀರಿ ನಡೆಯುತ್ತೇವಾ ಎಂದು ಕಂಡುಹಿಡಿಯಲಿಕ್ಕಾಗಿ ಆತನು ನಮ್ಮ ಮೇಲೆ ಕಣ್ಣಿಟ್ಟಿದ್ದಾನೆಯೇ? ಹಾಗೆ ನೆನಸಿ ನಾವು ಹೆದರಬೇಕೇ? (ಜ್ಞಾನೋ. 15:3) ಆತನು ಕಾಳಜಿಯಿಂದ ನಮ್ಮನ್ನು ಗಮನಿಸುತ್ತಿರುವುದರಿಂದ ನಾವು ಯಾವ ಐದು ವಿಧಗಳಲ್ಲಿ ಪ್ರಯೋಜನ ಪಡೆಯುತ್ತೇವೆಂದು ಈ ಲೇಖನದಲ್ಲಿ ನೋಡೋಣ.
ಮುಖಪುಟ: ಇಸ್ತಾಂಬುಲ್‌ನಲ್ಲಿ ಸಹೋದರನೊಬ್ಬನು ಕ್ಷೌರಿಕನಿಗೆ ಸಾಕ್ಷಿ ನೀಡಿ ಸಿಹಿಸುದ್ದಿ ಕಿರುಹೊತ್ತಗೆ ನೀಡುತ್ತಿದ್ದಾನೆ
ಟರ್ಕಿ
ಜನಸಂಖ್ಯೆ
7,56,27,384
ಪ್ರಚಾರಕರು
2,312
ಬೈಬಲ್ ಅಧ್ಯಯನಗಳು
1,632
ಅನುಪಾತ
32,711 ಜನರಿಗೆ ಒಬ್ಬ ಸಾಕ್ಷಿ
2004ರಲ್ಲಿ ಟರ್ಕಿಯಲ್ಲಿದ್ದ ಪಯನೀಯರ್ ಸಂಖ್ಯೆಗೆ ಈಗಿನ ಸಂಖ್ಯೆಯನ್ನು ಹೋಲಿಸುವುದಾದರೆ ಆಗಿರುವ ಪ್ರಗತಿ 165%