ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp16 ನಂ. 2 ಪು. 3-4
  • ಇದು ನಿಜವಾಗಲೂ ನಡೆದಿತ್ತಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಇದು ನಿಜವಾಗಲೂ ನಡೆದಿತ್ತಾ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಆಧಾರಗಳು ಏನು ಹೇಳುತ್ತವೆ?
  • ಯೇಸು ನಿಜವಾಗಲೂ ಪುನರುತ್ಥಾನವಾದನಾ?
  • ಯೇಸುವಿನ ಪುನರುತ್ಥಾನ ನಮ್ಮ ಮೇಲೆ ಬೀರುವ ಪರಿಣಾಮ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಸುವಾರ್ತೆಗಳು—ಐತಿಹಾಸಿಕವೋ ಪೌರಾಣಿಕವೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಸತ್ತವರಿಗೆ ಖಂಡಿತ ಮರುಜೀವ ಸಿಗುತ್ತೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ‘ಸ್ವಾಮಿ ಎದ್ದದ್ದು ನಿಜ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
wp16 ನಂ. 2 ಪು. 3-4
ಯೇಸುವಿನ ದೇಹವನ್ನು ಯಾತನಾಕಂಬದಿಂದ ಕೆಳಗಿಳಿಸುತ್ತಿರುವುದನ್ನು ಯೇಸುವಿನ ಶಿಷ್ಯರು ಸ್ವಲ್ಪ ದೂರದಿಂದ ನೋಡುತ್ತಿದ್ದಾರೆ

ಮುಖಪುಟ ಲೇಖನ | ಯೇಸು ಏಕೆ ಕಷ್ಟಗಳನ್ನು ಅನುಭವಿಸಿ ಸತ್ತನು?

ಇದು ನಿಜವಾಗಲೂ ನಡೆದಿತ್ತಾ?

ಕ್ರಿಸ್ತ ಶಕ 33⁠ರ ವಸಂತಕಾಲವದು. ನಜರೇತಿನ ಯೇಸುವನ್ನು ಕೊಲ್ಲಲಾಯಿತು. ಆತನ ಮೇಲೆ ದಂಗೆಕೋರನೆಂಬ ಸುಳ್ಳಾರೋಪವನ್ನು ಹಾಕಿ, ಕ್ರೂರವಾಗಿ ಹಿಂಸಿಸಿ, ಕಂಬಕ್ಕೆ ಜಡಿಯಲಾಯಿತು. ತುಂಬಾ ನೋವು ಅನುಭವಿಸಿ ಯೇಸು ಪ್ರಾಣಬಿಟ್ಟನು. ಆದರೆ ದೇವರು ಅವನಿಗೆ ಪುನಃ ಜೀವ ಕೊಟ್ಟನು. ಇದಾಗಿ 40 ದಿನಗಳ ನಂತರ ಯೇಸು ಸ್ವರ್ಗಕ್ಕೆ ಹೋದನು.

ಈ ಮನಕಲಕುವಂಥ ಘಟನೆಯ ಬಗ್ಗೆ ಹೊಸ ಒಡಂಬಡಿಕೆಯ ಅಥವಾ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿ ತಿಳಿಸಲಾಗಿದೆ. ಆದರೆ ಪ್ರಶ್ನೆ ಏನೆಂದರೆ ಈ ಘಟನೆ ನಿಜವಾಗಲೂ ನಡೆದಿತ್ತಾ? ಇದು ತುಂಬಾ ಪ್ರಾಮುಖ್ಯವಾದ ಪ್ರಶ್ನೆಯಾಗಿದೆ. ಒಂದುವೇಳೆ, ಅದು ನಿಜವಾಗಿ ನಡೆದಿಲ್ಲವಾದರೆ ಕ್ರೈಸ್ತ ನಂಬಿಕೆ ಅನ್ನೋದೇ ವ್ಯರ್ಥ ಮತ್ತು ಪರದೈಸಿನಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆ ಕೇವಲ ಕನಸಾಗಿಯೇ ಉಳಿಯುತ್ತದೆ. (1 ಕೊರಿಂಥ 15:14) ಒಂದುವೇಳೆ, ಅದು ನಿಜವಾಗಲೂ ನಡೆದಿದ್ದೇ ಆದರೆ ನಮ್ಮೆಲ್ಲರಿಗೂ ಉಜ್ವಲ ಭವಿಷ್ಯತ್ತಿದೆ. ಹಾಗಾದರೆ ಸುವಾರ್ತಾ ಪುಸ್ತಕಗಳಲ್ಲಿರುವ ಮಾಹಿತಿ ನಿಜಾನಾ, ಸುಳ್ಳಾ? ತಿಳಿಯೋಣ ಬನ್ನಿ.

ಆಧಾರಗಳು ಏನು ಹೇಳುತ್ತವೆ?

ಸುವಾರ್ತಾ ಪುಸ್ತಕಗಳು ದಂತಕಥೆಯಂತಲ್ಲ. ಅದರಲ್ಲಿರುವ ಪ್ರತಿಯೊಂದು ಮಾಹಿತಿಯೂ ನಿಷ್ಕೃಷ್ಟ ಮತ್ತು ನಿಖರ. ಉದಾಹರಣೆಗೆ, ಅದರಲ್ಲಿ ತಿಳಿಸಿರುವ ಸ್ಥಳಗಳು ನಿಜವಾಗಿಯೂ ಇದ್ದವು. ಅವುಗಳಲ್ಲಿ ಕೆಲವನ್ನು ಇವತ್ತಿಗೂ ಭೇಟಿ ಮಾಡಬಹುದು. ಅಲ್ಲದೆ, ಈ ವೃತ್ತಾಂತಗಳಲ್ಲಿ ತಿಳಿಸಿರುವ ವ್ಯಕ್ತಿಗಳು ನಿಜವಾಗಿಯೂ ಇದ್ದರು. ಈ ಮಾಹಿತಿಯನ್ನು ಇತಿಹಾಸಗಾರರು ಕೂಡ ಒಪ್ಪಿದ್ದಾರೆ.—ಲೂಕ 3:1, 2, 23.

ಮೊದಲನೇ ಮತ್ತು ಎರಡನೇ ಶತಮಾನದ ಇತಿಹಾಸಗಾರರು ಸಹ ಯೇಸುವಿನ ಬಗ್ಗೆ ತಿಳಿಸಿದ್ದಾರೆ.a ಯೇಸುವನ್ನು ಹೇಗೆ ಸಾಯಿಸಲಾಯಿತೆಂದು ಸುವಾರ್ತಾ ಪುಸ್ತಕಗಳಲ್ಲಿ ತಿಳಿಸಲಾಗಿದೆಯೋ ಅದೇ ರೀತಿಯ ಮರಣದಂಡನೆ ವಿಧಿಸುವ ಪದ್ಧತಿ ರೋಮನ್‌ ಕಾಲದಲ್ಲಿತ್ತು. ಅಷ್ಟೇ ಅಲ್ಲದೆ, ಘಟನೆಗಳು ನಡೆದದ್ದರ ಬಗ್ಗೆ ಇದ್ದದ್ದನ್ನು ಇದ್ದ ಹಾಗೆ ಸುವಾರ್ತಾ ಪುಸ್ತಕಗಳಲ್ಲಿ ತಿಳಿಸಲಾಗಿದೆ. ಯೇಸುವಿನ ಶಿಷ್ಯರು ಮಾಡಿದ ತಪ್ಪುಗಳು ಸಹ ಅದರಲ್ಲಿ ದಾಖಲಾಗಿವೆ. (ಮತ್ತಾಯ 26:56; ಲೂಕ 22:24-26; ಯೋಹಾನ 18:10, 11) ಸುವಾರ್ತಾ ಪುಸ್ತಕಗಳನ್ನು ಬರೆದವರು ಪ್ರಾಮಾಣಿಕರಾಗಿದ್ದರು ಮತ್ತು ಯೇಸುವಿನ ಬಗ್ಗೆ ಸತ್ಯವನ್ನೇ ಬರೆದರು ಎನ್ನುವುದಕ್ಕೆ ಈ ಎಲ್ಲಾ ವಿಷಯಗಳು ಬಲವಾದ ಆಧಾರವನ್ನು ಕೊಡುತ್ತವೆ.

ಯೇಸು ನಿಜವಾಗಲೂ ಪುನರುತ್ಥಾನವಾದನಾ?

ಯೇಸು ನಿಜವಾಗಿ ಬದುಕಿದ್ದನು ಮತ್ತು ಸತ್ತನು ಎಂದು ನಂಬುವ ಕೆಲವರು ಆತನ ಪುನರುತ್ಥಾನದ ಬಗ್ಗೆ ಸಂಶಯವನ್ನು ವ್ಯಕ್ತಪಡಿಸುತ್ತಾರೆ. ಆರಂಭದಲ್ಲಿ ಯೇಸುವಿನ ಶಿಷ್ಯರು ಕೂಡ ಆತನು ಪುನರುತ್ಥಾನವಾದನು ಎನ್ನುವುದನ್ನು ನಂಬಲಿಲ್ಲ. (ಲೂಕ 24:11) ಆದರೆ ಪುನರುತ್ಥಾನವಾದ ಯೇಸುವನ್ನು ಬೇರೆ ಬೇರೆ ಸಮಯದಲ್ಲಿ ನೋಡಿದ ನಂತರ ಶಿಷ್ಯರಲ್ಲಿದ್ದ ಸಂಶಯ ದೂರವಾಯಿತು. ಒಂದು ಸಂದರ್ಭದಲ್ಲಿ, ಸುಮಾರು 500 ಮಂದಿ ಯೇಸುವನ್ನು ನೋಡಿದರು.—1 ಕೊರಿಂಥ 15:6.

ಯೇಸುವಿನ ಬಗ್ಗೆ ತಿಳಿಸಿದರೆ ತಮ್ಮನ್ನು ಬಂಧಿಸಲಾಗುವುದು ಮತ್ತು ಕೊಲ್ಲಲಾಗುವುದು ಎಂದು ಗೊತ್ತಿದ್ದರೂ ಶಿಷ್ಯರು ಧೈರ್ಯದಿಂದ ಯೇಸುವಿನ ಪುನರುತ್ಥಾನದ ಬಗ್ಗೆ ಎಲ್ಲರಿಗೆ, ಅದರಲ್ಲೂ ಯೇಸುವಿನ ಹತ್ಯೆಗೆ ಕಾರಣರಾದವರಿಗೂ ತಿಳಿಸಿದರು. (ಅಪೊಸ್ತಲರ ಕಾರ್ಯಗಳು 4:1-3, 10, 19, 20; 5:27-32) ಯೇಸುವಿನ ಪುನರುತ್ಥಾನದ ಬಗ್ಗೆ ಸ್ವಲ್ಪ ಸಂಶಯ ಇದ್ದಿದ್ದರೂ ಅವರು ಹೀಗೆ ಧೈರ್ಯದಿಂದ ಹೇಳಲು ಸಾಧ್ಯವಿತ್ತಾ? ಖಂಡಿತ ಇಲ್ಲ. ಯೇಸು ನಿಜವಾಗಿಯೂ ಪುನರುತ್ಥಾನ ಆಗಿದ್ದರಿಂದಲೇ ಕ್ರೈಸ್ತತ್ವ ಅಂದೂ ಇಂದೂ ಲೋಕದ ಮೇಲೆ ಇಷ್ಟೊಂದು ಪ್ರಭಾವ ಬೀರಲು ಸಾಧ್ಯವಾಗಿದೆ.

ಸುವಾರ್ತಾ ಪುಸ್ತಕಗಳು ಯೇಸುವಿನ ಮರಣ ಮತ್ತು ಪುನರುತ್ಥಾನದ ಕುರಿತು ಬಲವಾದ ಆಧಾರಗಳನ್ನು ಒದಗಿಸುತ್ತವೆ. ಇವುಗಳನ್ನು ಸೂಕ್ಷ್ಮವಾಗಿ ಓದುವಾಗ ಈ ಎಲ್ಲಾ ಘಟನೆಗಳು ನಿಜವಾಗಿ ನಡೆದವು ಎಂದು ತಿಳಿಯಬಹುದು. ಇವು ಏಕೆ ನಡೆದವು ಎನ್ನುವುದರ ಬಗ್ಗೆ ತಿಳಿಯುವಾಗ ನಿಮ್ಮ ನಂಬಿಕೆ ಇನ್ನೂ ಬಲಗೊಳ್ಳುತ್ತದೆ. ಇದನ್ನು ಮುಂದಿನ ಲೇಖನದಲ್ಲಿ ತಿಳಿಯೋಣ. (w16-E No.2)

a ಕ್ರಿಸ್ತ ಶಕ 55⁠ರಲ್ಲಿ ಹುಟ್ಟಿದ ಟ್ಯಾಸಿಟಸ್‌ ಹೇಳಿದ್ದು, “ಕ್ರೈಸ್ತರು ಎಂಬ ಹೆಸರು ಯಾರಿಂದ ಬಂತೋ ಆ ಕ್ರಿಸ್ಟಸ್‌ [ಕ್ರಿಸ್ತನು] ತಿಬೇರಿಯಸ್‌ನ ಆಳಿಕೆಯ ಕಾಲದಲ್ಲಿ ನಮ್ಮ ಆಡಳಿತಗಾರರಲ್ಲಿ ಒಬ್ಬನಾದ ಪೊಂತ್ಯ ಪಿಲಾತನಿಂದ ಉಗ್ರ ದಂಡನೆಯನ್ನು ಅನುಭವಿಸಿದನು.” ಸ್ಯೂಟೋನಿಯಸ್‌ (ಮೊದಲನೇ ಶತಮಾನ), ಯೆಹೂದಿ ಇತಿಹಾಸಗಾರನಾದ ಜೋಸೀಫಸ್‌ (ಮೊದಲನೇ ಶತಮಾನ) ಮತ್ತು ಬಿಥೂನ್ಯದ ರಾಜ್ಯಪಾಲ ಪ್ಲಿನಿ ದ ಯಂಗರ್‌ (ಎರಡನೇ ಶತಮಾನದ ಆರಂಭ) ಕೂಡ ಯೇಸುವಿನ ಬಗ್ಗೆ ತಿಳಿಸಿದ್ದಾರೆ.

ಬೇರೆ ಆಧಾರಗಳಿಲ್ಲವೇಕೆ?

ಯೇಸು ಕ್ರಿಸ್ತನು ಇದ್ದನು ಮತ್ತು ಪುನರುತ್ಥಾನವಾದನು ಎನ್ನಲು ಬೈಬಲನ್ನು ಬಿಟ್ಟು ಆಗಿನ ಬೇರೆ ಯಾವುದಾದರೂ ಬರಹದಲ್ಲಿ ಆಧಾರ ಇರಬಹುದಾ? ಇರಲಿಕ್ಕಿಲ್ಲ. ನಾವು ಗಮನಿಸಬೇಕಾದ ವಿಷಯ ಏನೆಂದರೆ ಸುವಾರ್ತಾ ಪುಸ್ತಕಗಳು ಸುಮಾರು 2,000 ವರ್ಷಗಳ ಹಿಂದೆ ಬರೆಯಲ್ಪಟ್ಟವು. ಆ ಕಾಲದಲ್ಲಿ ಬರೆದ ದಾಖಲೆಗಳಲ್ಲಿ ಇಂದು ಕೆಲವು ಮಾತ್ರ ಲಭ್ಯ. (1 ಪೇತ್ರ 1:24, 25) ಅಷ್ಟೇ ಅಲ್ಲದೆ, ಆ ಸಮಯದಲ್ಲಿ ಯೇಸುವನ್ನು ಅನೇಕರು ವಿರೋಧಿಸುತ್ತಿದ್ದರು. ಹಾಗಿರುವಾಗ ಅವರು ಜನರಿಗೆ ಆತನ ಮೇಲೆ ನಂಬಿಕೆ ಬರುವಂತೆ ಮಾಡುವ ಯಾವುದೇ ವಿಷಯವನ್ನು ದಾಖಲಿಸುವುದು ದೂರದ ಮಾತಾಗಿತ್ತು.

ಯೇಸುವಿನ ಪುನರುತ್ಥಾನದ ಬಗ್ಗೆ ಆತನ ಶಿಷ್ಯನಾದ ಪೇತ್ರನು ವಿವರಿಸಿದ್ದು: “ದೇವರು ಅವನನ್ನು ಮೂರನೆಯ ದಿನದಲ್ಲಿ ಎಬ್ಬಿಸಿ ಕಾಣಿಸಿಕೊಳ್ಳುವಂತೆ ಮಾಡಿದನು; ಅವನು ಎಲ್ಲ ಜನರಿಗೆ ಕಾಣಿಸಿಕೊಳ್ಳದೆ ದೇವರಿಂದ ಮುಂಚಿತವಾಗಿಯೇ ನೇಮಿಸಲ್ಪಟ್ಟ ಸಾಕ್ಷಿಗಳಾದ ನಮಗೆ ಕಾಣಿಸಿಕೊಂಡನು. ಅವನು ಸತ್ತವರೊಳಗಿಂದ ಜೀವಿತನಾಗಿ ಎದ್ದ ಬಳಿಕ ನಾವು ಅವನೊಂದಿಗೆ ಅನ್ನಪಾನಗಳನ್ನು ತೆಗೆದುಕೊಂಡೆವು.” (ಅಪೊಸ್ತಲರ ಕಾರ್ಯಗಳು 10:40, 41) ಯೇಸು ಪುನರುತ್ಥಾನವಾದ ಮೇಲೆ ಎಲ್ಲ ಜನರಿಗೆ ಕಾಣಿಸಿಕೊಳ್ಳಲಿಲ್ಲ ಏಕೆ? ಇದಕ್ಕೆ ಉತ್ತರವನ್ನು ಮತ್ತಾಯನು ತನ್ನ ಸುವಾರ್ತಾ ಪುಸ್ತಕದಲ್ಲಿ ತಿಳಿಸಿದ್ದಾನೆ. ಅದೇನೆಂದರೆ ಯೇಸುವಿನ ಪುನರುತ್ಥಾನದ ಬಗ್ಗೆ ಕೇಳಿಸಿಕೊಂಡಾಗ ಧಾರ್ಮಿಕ ವಿರೋಧಿಗಳು ಆ ಸುದ್ದಿ ಹಬ್ಬದಂತೆ ತಡೆಯಲು ಪ್ರಯತ್ನಿಸಿದರು.—ಮತ್ತಾಯ 28:11-15.

ಹಾಗಾದರೆ ತನ್ನ ಪುನರುತ್ಥಾನದ ವಿಷಯವನ್ನು ಬಚ್ಚಿಡಬೇಕೆಂದು ಯೇಸು ಬಯಸಿದ್ದನಾ? ಇಲ್ಲ. ಪೇತ್ರನು ಮುಂದುವರಿಸುತ್ತಾ ಹೇಳುವುದು: “ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಿಸಲ್ಪಟ್ಟಿರುವವನು ಇವನೇ ಎಂದು ಜನರಿಗೆ ಸಾರಿಹೇಳುವಂತೆ ಮತ್ತು ಕೂಲಂಕಷವಾದ ಸಾಕ್ಷಿಯನ್ನು ನೀಡುವಂತೆ ಅವನು ನಮಗೆ ಆಜ್ಞಾಪಿಸಿದನು.” ನಿಜ ಕ್ರೈಸ್ತರು ಇದನ್ನು ಅಂದೂ ಮಾಡಿದರು, ಇಂದೂ ಮಾಡುತ್ತಿದ್ದಾರೆ.—ಅಪೊಸ್ತಲರ ಕಾರ್ಯಗಳು 10:42.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ