ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w17 ಮಾರ್ಚ್‌ ಪು. 32
  • ಬೈಬಲಿನಲ್ಲಿರುವ ಹೆಸರು ಪುರಾತನ ಜಾಡಿಯ ಮೇಲೆ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲಿನಲ್ಲಿರುವ ಹೆಸರು ಪುರಾತನ ಜಾಡಿಯ ಮೇಲೆ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಅನುರೂಪ ಮಾಹಿತಿ
  • ದೇವರ ಹೆಸರು
    ಎಚ್ಚರ!—2017
  • ದೇವರ ಹೆಸರು—ಅದರ ಉಪಯೋಗ ಮತ್ತು ಅದರ ಅರ್ಥ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ದೇವರ ಹೆಸರೇನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2019
  • ವಿಶ್ವ ವೀಕ್ಷಣೆ —ಮಧ್ಯ-ಪೂರ್ವ ದೇಶಗಳು
    ಎಚ್ಚರ!—2015
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
w17 ಮಾರ್ಚ್‌ ಪು. 32
ಸುಮಾರು 3,000 ವರ್ಷ ಹಿಂದಿನ ಕಾಲದ ಪಿಂಗಾಣಿ ಜಾಡಿಯ ಮೇಲೆ ಕಾನಾನ್ಯ ಭಾಷೆಯಲ್ಲಿ ಬೈಬಲಿನಲ್ಲಿರುವ ಒಂದು ಹೆಸರು

ಬೈಬಲಿನಲ್ಲಿರುವ ಹೆಸರು ಪುರಾತನ ಜಾಡಿಯ ಮೇಲೆ!

3,000 ವರ್ಷಗಳ ಹಿಂದಿನ ಪಿಂಗಾಣಿ ಜಾಡಿ

2012ರಲ್ಲಿ ಪುರಾತತ್ವ ತಜ್ಞರಿಗೆ ಒಡೆದುಹೋಗಿದ್ದ ಒಂದು ಪಿಂಗಾಣಿ ಜಾಡಿಯ ತುಂಡುಗಳು ಸಿಕ್ಕಿದವು. ಅದು ಸುಮಾರು 3,000 ವರ್ಷ ಹಿಂದಿನ ಕಾಲದ್ದು. ಆ ಸಂಶೋಧಕರಿಗೆ ತುಂಬ ಸಂತೋಷವಾಯಿತು. ಯಾಕೆ? ಜಾಡಿ ಸಿಕ್ಕಿದ್ದಕ್ಕಲ್ಲ, ಅದರ ಮೇಲಿದ್ದ ಬರಹ ನೋಡಿ.

ಪುರಾತತ್ವ ತಜ್ಞರು ಆ ಜಾಡಿಯ ಎಲ್ಲ ತುಂಡುಗಳನ್ನು ಜೋಡಿಸಿದಾಗ ಅದರ ಮೇಲೆ ಕಾನಾನ್ಯ ಭಾಷೆಯಲ್ಲಿ ಏನೋ ಬರೆದಿರುವುದು ಕಂಡುಬಂತು. “ಎಷ್ಬಾಳ್‌ ಬೆನ್‌ ಬೆಡಾ” ಅಂದರೆ “ಬೆಡಾನ ಪುತ್ರ ಎಷ್ಬಾಳ” ಎಂದು ಬರೆದಿತ್ತು. ಪ್ರಾಚೀನ ಕಾಲದ ಒಂದು ವಸ್ತುವಿನ ಮೇಲೆ ಈ ಹೆಸರು ಸಿಕ್ಕಿರುವುದು ಇದೇ ಮೊದಲನೇ ಸಾರಿ.

ಎಷ್ಬಾಳ ಎಂಬ ಹೆಸರಿದ್ದ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಬೈಬಲಿನಲ್ಲಿ ತಿಳಿಸಲಾಗಿದೆ. ಅವನು ರಾಜ ಸೌಲನ ಮಗ. (1 ಪೂರ್ವ. 8:33; 9:39) ಆ ಜಾಡಿ ಕಂಡುಹಿಡಿದವರಲ್ಲಿ ಒಬ್ಬರಾದ ಪ್ರೊಫೆಸರ್‌ ಯೋಸೆಫ್‌ ಗಾರ್ಫಿಂಗಲ್‌ ಹೇಳಿದ್ದು: “ಆಸಕ್ತಿಕರ ವಿಷಯವೇನೆಂದರೆ ಎಷ್ಬಾಳ್‌ ಎಂಬ ಹೆಸರು ಬೈಬಲಿನಲ್ಲಿದೆ. ಈ ಹೆಸರನ್ನು ರಾಜ ದಾವೀದನ ಆಳ್ವಿಕೆಯ ಸಮಯದಲ್ಲಿ ಬಳಸಲಾಗಿತ್ತು. ಈಗ ಈ ಹೆಸರು ಪುರಾತತ್ವದ ದಾಖಲೆಯಲ್ಲೂ ಲಭ್ಯವಾಗಿದೆ.” ಪುರಾತತ್ವ ಶಾಸ್ತ್ರ ಬೈಬಲನ್ನು ಬೆಂಬಲಿಸುತ್ತದೆಂದು ತೋರಿಸಲು ಇದು ಇನ್ನೊಂದು ಉದಾಹರಣೆ!

ಸೌಲನ ಮಗನಾದ ಎಷ್ಬಾಳನನ್ನು [ಎಷ್‌+ಬಾಳ] ಬೈಬಲಿನಲ್ಲಿ ಈಷ್ಬೋಶೆತ [ಈಷ್‌+ಬೋಶೆತ] ಎಂದೂ ಕರೆಯಲಾಗಿದೆ. (2 ಸಮು. 2:10) ಈ ಹೆಸರಿನಲ್ಲಿ ‘ಬಾಳ’ ಅಂತ ಹಾಕದೆ ‘ಬೋಶೆತ’ ಅಂತ ಯಾಕೆ ಹಾಕಲಾಗಿದೆ? ಸಂಶೋಧಕರು ಈ ವಿವರಣೆ ಕೊಡುತ್ತಾರೆ: ಎರಡನೇ ಸಮುವೇಲ ಪುಸ್ತಕವನ್ನು ಬರೆದ ವ್ಯಕ್ತಿ ‘ಎಷ್ಬಾಳ’ ಎಂಬ ಹೆಸರನ್ನು ಬೇಕುಬೇಕೆಂದೇ ಹಾಕಿರಲಿಕ್ಕಿಲ್ಲ, ಯಾಕೆಂದರೆ ಅದು ಇಸ್ರಾಯೇಲ್ಯರಿಗೆ ಬಾಳನನ್ನು ನೆನಪಿಗೆ ತರುತ್ತಿತ್ತು. ಬಾಳನು ಕಾನಾನ್ಯ ಜನರು ಆರಾಧಿಸುತ್ತಿದ್ದ ಚಂಡಮಾರುತದ ದೇವತೆಯಾಗಿದ್ದನು. ಹೀಗಿದ್ದರೂ, ಎಷ್ಬಾಳ ಎಂಬ ಹೆಸರನ್ನು ಒಂದನೇ ಪೂರ್ವಕಾಲವೃತ್ತಾಂತದಲ್ಲಿ ಬಳಸಲಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ