ಸತ್ಯವಾಕ್ಯವನ್ನು ಸರಿಯಾಗಿ ಉಪಯೋಗಿಸುವ ಕುಶಲ ಕೆಲಸಗಾರರು
1 ಕ್ರೈಸ್ತ ಕೆಲಸಗಾರರು “ದೇವರ ಜೊತೆ ಸೇವಕ” ರಾಗಿ ನಿರ್ದೇಶಿಸಲ್ಪಟ್ಟಿರುವುದು ಯೋಗ್ಯವೇ. (1 ಕೊರಿ. 3:9) “ಸತ್ಯವಾಕ್ಯವನ್ನು ಸರಿಯಾಗಿ” ಉಪದೇಶಿಸುವ ಕೆಲಸಗಾರರೋಪಾದಿ ಕುಶಲತೆಯನ್ನು ವಿಕಾಸಿಸುವುದು ನಮ್ಮ ಗುರಿಯಾಗಿರಬೇಕು.—2 ತಿಮೋ. 2:15.
2 ಕ್ರೈಸ್ತ ಶುಶ್ರೂಷೆಯಲ್ಲಿ ನುರಿತವರಾಗಲು ನಮ್ಮ ಸಹಾಯಕ್ಕಾಗಿ ಸೊಸೈಟಿಯು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲಿನಲ್ಲಿ ನಮಗೆ ಹಲವಾರು ಅಸದೃಶ ವೈಶಿಷ್ಟ್ಯಗಳನ್ನು ಸೇರಿಸಿದೆ. ನಿಮಗದರ ಪರಿಚಯವಿದೆಯೇ? ನಿಮ್ಮ ಕ್ಷೇತ್ರ ಸೇವೆಯಲ್ಲಿ ಮತ್ತು ವೈಯಕ್ತಿಕ ಬೈಬಲಧ್ಯಯನದಲ್ಲಿ ನೀವದನ್ನು ಉಪಯೋಗಿಸುತ್ತೀರೋ?
ವಿವಿಧೋಪಯೋಗಿ ಒದಗಿಸುವಿಕೆ
3 ನ್ಯೂವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದಿ ಕ್ರಿಶ್ಚನ್ ಗ್ರೀಕ್ ಸ್ಕ್ರಿಪ್ಚರ್ಸ್ 1950 ರಲ್ಲಿ ಪ್ರಕಟವಾದಾಗ ಕ್ರಾಸ್ ರೆಫರೆನ್ಸ್, ಪಾದಟಿಪ್ಪಣಿ, ಪರಿಶಿಷ್ಟ, ಚೈನ್ ರೆಫರೆನ್ಸ್ ಮುಂತಾದವುಗಳು ನಮ್ಮ ಶುಶ್ರೂಷೆಯಲ್ಲಿ, ಸಭಾಕೂಟಗಳ ತಯಾರಿಯಲ್ಲಿ ಮತ್ತು ಸಾಮಾನ್ಯ ವೈಯಕ್ತಿಕ ಅಭ್ಯಾಸದಲ್ಲಿ ಅತಿ ಸಹಾಯಕಾರಿಯಾಗಿ ಕಂಡವು. ಅನಂತರ 1984 ರಲ್ಲಿ ನ್ಯೂವರ್ಲ್ಡ್ ಟ್ರಾನ್ಸ್ಲೇಶನ್ ರೆಫರೆನ್ಸ್ ಬೈಬಲನ್ನು ಪಡೆಯಲು ನಾವೆಷ್ಟು ಪುಳಕಿತಗೊಂಡೆವು! ದೇವರ ವಾಕ್ಯವನ್ನು ಸರಿಯಾಗಿ ಉಪಯೋಗಿಸುವ ಕುಶಲ ಕೆಲಸಗಾರರಾಗುವಂತೆ ನಮ್ಮ ಸಹಾಯಕ್ಕಾಗಿ ಎಂತಹ ಭರ್ಜರಿ ಒದಗಿಸುವಿಕೆಯದು! ಈ ವಿವಿಧೋಪಯೋಗಿ ಸಾಧನವನ್ನು ಶ್ರದ್ಧೆಯಿಂದ ಉಪಯೋಗಿಸುವ ಮೂಲಕ ನಾವೀಗ ಹಿಂದೆಂದಿಗಿಂತಲೂ ಹೆಚ್ಚಾಗಿ ನಮ್ಮಲ್ಲೂ ಇತರರಲ್ಲೂ ದೃಢವಾದ ಆತ್ಮಿಕ ಗುಣಗಳನ್ನು ಕಟ್ಟಲು ಅಧಿಕ ಸನ್ನದ್ಧರಾಗಿರುವೆವು.—ಮತ್ತಾ. 7:24; 1 ತಿಮೋ. 4;16; ಇಬ್ರಿ. 5:14.
4 ಕಥೋಲಿಕ ಚರ್ಚು ಯಾವ ಬಂಡೆಯ ಮೇಲೆ ಕಟ್ಟಲ್ಪಟ್ಟಿದೆಯೋ ಅದು ಪೇತ್ರನೆಂಬದಕ್ಕೆ ರುಜುವಾತಾಗಿ ಮತ್ತಾಯ 16:18ನ್ನು ಉಲ್ಲೇಕಿಸುವ ಪ್ರಾಮಾಣಿಕ ಕಥೋಲಿಕನೊಬ್ಬನು ನಿಮಗೆ ಕ್ಷೇತ್ರಸೇವೆಯಲ್ಲಿ ಸಿಗಬಹುದು. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ನ್ಯೂವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲಿನ ಕ್ರಾಸ್ ರೆಫರೆನ್ಸ್ ತೆರೆದು “ಬಂಡೆ”ಯಾಗಿ ನಿರ್ದೇಶಿಸಲ್ಪಟ್ಟ ಐದು ವಚನಗಳನ್ನು ತೋರಿಸಬಹುದು. ಈ ವಚನಗಳು ಯೇಸುವನ್ನು ಸಭೆಯ ಮೂಲೆಗಲ್ಲಿಂದು ತೋರಿಸುತ್ತವೆಯೇ ಹೊರತು ಪೇತ್ರನನ್ನಲ್ಲ. ಅದೇ ವಚನವನ್ನು ನ್ಯೂವರ್ಲ್ಡ್ ಟ್ರಾನ್ಸ್ಲೇಶನ್ ರೆಫರೆನ್ಸ್ ಬೈಬಲಲ್ಲಿ ನೋಡುವುದಾದರೆ, “ರಾಕ್ಮಾಸ್” ಪದದ ಪಾದಟಿಪ್ಪಣಿಯಲ್ಲಿ, ಮೂಲ ಗ್ರೀಕಿನಲ್ಲಿ ಅದರರ್ಥವನ್ನು ವಿವರಿಸುವ ಅಧಿಕ ಸಮಾಚಾರವನ್ನು ನೀವು ಕಾಣುವಿರಿ.
5 ಕ್ಷೇತ್ರ ಸೇವೆಯಲ್ಲಿ ಸಹಾಯಕಾರಿಯಾಗಿ ರುಜುವಾದ ಇನ್ನೊಂದು ವೈಶಿಷ್ಟ್ಯವು “ಬೈಬಲ್ ಟಾಪಿಕ್ ಫಾರ್ ಡಿಸ್ಕಶನ್” ಎಂಬ ಶೀರ್ಪಿಕೆಯುಳ್ಳ ವಿಭಾಗವೇ. ಆಗಿಂದಾಗ್ಯೆ ಆವರಿಸಲ್ಪಡುವ ಕ್ಷೇತ್ರಗಳಲ್ಲಿ, ನಮ್ಮ ರಾಜ್ಯದ ಸೇವೆ ಯಲ್ಲಿರುವ ಸಂಭಾಷಣೆಗಾಗಿ ವಿಷಯಕ್ಕಿಂತ ಬೇರೆಯಾದ ವಿಷಯವನ್ನು ಆರಿಸಿಕೊಳ್ಳಲು ನಮಗೆ ಇದು ಸಹಾಯಕಾರಿ. “ಭೂಮಿ”, “ರಾಜ್ಯ” ಮತ್ತು “ಕಡೇದಿನಗಳು” ಮುಂತಾದ ವಿಷಯಗಳ ಕೆಳಗೆ ಮನೆಮನೆಯ ಸೇವೆಯಲ್ಲಿ ಪ್ರಸಂಗವಾಗಿ ಅಥವಾ ಪುನರ್ಭೇಟಿಯಲ್ಲಿ ಶಾಸ್ತ್ರೀಯ ಚರ್ಚೆಯಾಗಿ ಬಳಸಬಹುದಾದ ವಚನಗಳನ್ನು ನೀವಲ್ಲಿ ಕಾಣುವಿರಿ.
ಸ್ಮರಣೆಗೆ ಸಹಾಯಕಗಳು
6 ಬೈಬಲ್ ಚರ್ಚೆಯೊಂದರಲ್ಲಿ ಒಂದು ನಿರ್ದಿಷ್ಟ ವಚನವೆಲ್ಲಿದೆಯೆಂದು ನೆನಪಾಗದಿದ್ದರೆ ನಿಮ್ಮ ಬೈಬಲ್ನ ಹಿಂಭಾಗದಲ್ಲಿರುವ “ಬೈಬಲ್ ವರ್ಡ್ಸ್ ಇಂಡೆಕ್ಸ್” ನಿಂದ ಬೇಕಾದ ಸಹಾಯವನ್ನು ಪಡೆಯಬಹುದು. ಈ ಮೂಲ್ಯ ವೈಶಿಷ್ಟ್ಯವನ್ನು ನೀವು ಉಪಯೋಗಿಸುತ್ತೀರೋ?
7 ಐದನೇ ಪುಟದ ಮುನ್ನುಡಿಯು ನ್ಯೂವರ್ಲ್ಡ್ ಟಾನ್ಸ್ಲೇಶನ್ ನನ್ನು ಒಂದು ಪಾಂಡಿತ್ಯ ಕೃತಿಯಾಗಿ ತೋರಿಸುವ ಖಾತ್ರಿದಾಯಕ ರುಜುವಾತನ್ನೀಯುತ್ತದೆ. ದೈವಿಕ ನಾಮದ ಉಪಯೋಗವು ಯೋಗ್ಯವೇಕೆಂದು ತೋರಿಸಲು ‘ಅಪೆಂಡಿಕ್ಸ್’ ಸ್ಪಷ್ಟ ವಿವರಣೆ ಕೊಡುತ್ತದೆ. “ಗೆಹೆನ್ನ”, “ಹೇಡೀಸ್”, “ಶಿಯೋಲ್” ಮತ್ತು “ಆತ್ಮ”ದ ಅರ್ಥವನ್ನೂ ಅದು ಶಾಸ್ತ್ರೀಯವಾಗಿ ರುಜುಪಡಿಸುತ್ತದೆ. ಅದಲ್ಲದೆ, 1546-7 ಪುಟದಲ್ಲಿರುವ “ಟೇಬಲ್ ಆಫ್ ದ ಬುಕ್ಸ್ ಆಫ್ ದಿ ಬೈಬಲ್” ಗೆ ನಿರ್ದೇಶಿಸುವ ಮೂಲಕ ಪ್ರತಿ ಪುಸ್ತಕವನ್ನು ಬರೆದವರು ಯಾರು, ಎಲ್ಲಿ, ಮತ್ತು ಅದಕ್ಕೆ ತಗಲಿದ ಸಮಯ ಮುಂತಾದವನ್ನು ನಾವು ಕಂಡುಹಿಡಿಯಬಹುದು.
8 ನಿಜವಾಗಿಯೂ ಯೆಹೋವನು ನಮಗೆ “ಸಕಲ ಸತ್ಕಾರ್ಯಕ್ಕೆ ಪೂರ್ಣರಾಗಿ ಸನ್ನದ್ಧರಾಗಲು” ಬೇಕಾದದ್ದೆಲ್ಲವನ್ನು ಒದಗಿಸಿದ್ದಾನೆ. (2 ತಿಮೋ. 3.17) ನಾವು ನೀಡಲಿರುವ ಬೈಬಲ್ ಸಾಹಿತ್ಯಗಳೊಂದಿಗೆ ನ್ಯೂವರ್ಲ್ಡ್ ಟ್ರಾನ್ಸ್ಲೇಶನ್ ಉಪಯೋಗಿಸುವ ಮೂಲಕ, ನಮಗೆ ನೇಮಿತವಾದ ಕೆಲಸವನ್ನು ನಾವು ಪರಿಣಾಮಕಾರಿಯಾಗಿ ಮಾಡಬಲ್ಲೆವು. (ಲೂಕ 6:47, 48) ಹೀಗೆ ದೇವರ ವಾಕ್ಯವನ್ನು ಸರಿಯಾಗಿ ಉಪಯೋಗಿಸುವ ಮೂಲಕ ಕುಶಲ ಕೆಲಸಗಾರರಾಗಿ ನಾವು ರುಜುವಾದರೆ, ಧಣಿಯಿಂದ “ಭಲಾ” ಎಂಬ ಹೊಗಳಿಕೆಯನ್ನು ಭರವಸದಿಂದ ನಿರೀಕ್ಷಿಸ ಸಾಧ್ಯವಿದೆ.—ಮತ್ತಾ. 25:21.