ಶಿಷ್ಯರನ್ನಾಗಿ ಮಾಡಲು ನಮ್ಮ ಸಹಾಯಕ್ಕಾಗಿ ಕೂಟಗಳು
ಎಪ್ರಿಲ್ 2 ರ ವಾರ
ಸಂಗೀತ 108 (95)
7 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ತಕ್ಕದಾದ ಪ್ರಕಟಣೆಗಳು. ಈ ತಿಂಗಳಲ್ಲಿ ಈವಾಗಲೇ ಕ್ಷೇತ್ರಸೇವೆಯಲ್ಲಿ ಪಾಲಿಗರಾದ ಪ್ರಚಾರಕರನ್ನು ಬೆಚ್ಚಗಾಗಿ ಪ್ರಶಂಸಿಸಿರಿ ಮತ್ತು ಎಪ್ರಿಲಿನಲ್ಲಿ ಎಲ್ಲರೂ ಉತ್ಸಾಹದಿಂದ ಸೇವೆಯನ್ನು ಮಾಡುವಂತೆ ಉತ್ತೇಜನ ಕೊಡಿ. ಕ್ಷೇತ್ರಸೇವೆಗಾಗಿ ಸಭಾ ಏರ್ಪಾಡುಗಳನ್ನು ಪ್ರಚಾರಕರಿಗೆ ನೆನಪಿಸಿರಿ.
18 ನಿ: “ಹೆಚ್ಚು ಚಟುವಟಿಕೆಗಾಗಿ ಸಮಯವು.” ಲೇಖನದ ಪ್ರಶ್ನೋತ್ತರ ಚರ್ಚೆ. ಎಪ್ರಿಲ್ ಮತ್ತು ಮೇ ಯಲ್ಲಿ ಈವಾಗಲೇ ಸಹಾಯಕ ಪಯನೀಯರಾಗಿರುವವರ ಸಂಖ್ಯೆಯನ್ನು ತಿಳಿಸಿರಿ. ಪಾರಾ 5ನ್ನು ಚರ್ಚಿಸುವಾಗ, “ಮಹತ್ತಾದ ವಿಷಯಗಳುಳ್ಳ ಪತ್ರಿಕೆಗಳು” ಎಂಬ ಮಾರ್ಚ್ 1990 ನಮ್ಮ ರಾಜ್ಯದ ಸೇವೆ ಲೇಖನಕ್ಕೆ ನಿರ್ದೇಶಿಸಿರಿ. ಎಪ್ರಿಲ್ 1 ರ ವಾಚ್ಟವರ್ ಪತ್ರಿಕೆಯು ಸಿಕ್ಕಿದ್ದರೆ ಮಾತಾಡುವ ವಿಷಯಗಳನ್ನು ಸಂಕ್ಷೇಪವಾಗಿ ಪರಾಮರ್ಶಿಸಿರಿ. ಜ್ಞಾಪಕಾಚರಣೆಯ ಸಂಬಂಧದಲ್ಲಿ ಹಾಗೂ ಇಡೀ ಎರಡು ತಿಂಗಳಾವಧಿಯಲ್ಲಿ ಕ್ಷೇತ್ರ ಸೇವೆಯನ್ನು ಹೆಚ್ಚಿಸಲು ಇರುವ ಸಂಭಾವ್ಯತೆಯನ್ನು ಲಕ್ಷಿಸುವಂತೆ ಎಲ್ಲರನ್ನು ಬೆಚ್ಚಗಾಗಿ ಉತ್ತೇಜಿಸಿರಿ.
20 ನಿ: “ಎಪ್ರಿಲ್ನಲ್ಲಿ ಸರ್ವೈವಲ್ ಪುಸ್ತಕ ತೋರಿಸಿರಿ.” ಸೇವಾ ಮೇಲ್ವಿಚಾರಕನಿಂದ ಭಾಷಣ. ಮಾತಾಡುವ ವಿಷಯಗಳನ್ನು ಎತ್ತಿ ಹೇಳುವ ಮೂಲಕ ಪ್ರಚಾರಕರಿಗೆ ಸರ್ವೈವಲ್ ಪುಸ್ತಕವನ್ನು ಪರಿಣಾಮಕಾರಿಯಾಗಿ ನೀಡುವಂತೆ ಸಹಾಯಮಾಡಿರಿ. 1 ರಿಂದ 7ನೇ ಅಧ್ಯಾಯಗಳು ವಿಶೇಷವಾಗಿ ಸಾರ್ವಜನಿಕರಿಗಾಗಿ ರಚಿಸಲಾದವುಗಳು. ಈ ಅಧ್ಯಾಯಗಳಲ್ಲಿನ ಆರಂಭದ ಪಾರಾಗಳಿಂದ ಸಂಭಾಷಣೆಗಾಗಿ ವಿಷಯಕ್ಕೆ ಹೊಂದಿಸುವ ಯಾವುದೇ ಎತ್ತಿತೆಗೆದ ಭಾಗವನ್ನು ಮನೆಯವನಿಗೆ ಓದಿಹೇಳಬಹುದು.
ಸಂಗೀತ 23 (40) ಮತ್ತು ಸಮಾಪ್ತಿ ಪ್ರಾರ್ಥನೆ.
ಎಪ್ರಿಲ್ 9 ರ ವಾರ
ಸಂಗೀತ 192 (10)
7 ನಿ: ಸ್ಥಳೀಕ ತಿಳಿಸುವಿಕೆಗಳು. ಎಕೌಂಟ್ಸ್ ರಿಪೋರ್ಟ್ ಮತ್ತು ಮಾರ್ಚ್ ತಿಂಗಳಲ್ಲಿ ಕಳುಹಿಸಿದ ಯಾವುದೇ ಕಾಣಿಕೆಯನ್ನು ಸೊಸೈಟಿಯು ಅಂಗೀಕರಿಸಿದ್ದನ್ನು ಸೇರಿಸಿರಿ. ತಮ್ಮ ಆರ್ಥಿಕ ದಾನಗಳ ಮೂಲಕ ರಾಜ್ಯ ಕಾರ್ಯವನ್ನು ಉದಾರವಾಗಿ ಬೆಂಬಲಿಸಿದಕ್ಕಾಗಿ ಸಭೆಯನ್ನು ಬೆಚ್ಚಗಾಗಿ ಪ್ರಶಂಸಿಸಿರಿ. ಸಭಾ ಸೇವಾ ಏರ್ಪಾಡನ್ನು ಪರಾಮರ್ಶಿಸಿರಿ ಮತ್ತು ಪ್ರಚಾರಕರು ವಾರಾಂತ್ಯದಲ್ಲಿ ತಮ್ಮ ತಮ್ಮ ಸೇವಾ ಗುಂಪುಗಳೊಂದಿಗೆ ಸೇವೆ ಮಾಡುಂತೆ ಉತ್ತೇಜಿಸಿರಿ.
10 ನಿ: ಪ್ರಶ್ನಾ ಪೆಟ್ಟಿಗೆ. ಲೇಖನದ ಸಮಾಚಾರವನ್ನು ಆವರಿಸಿ ಹಿರಿಯನಿಂದ ಭಾಷಣ. ಹಾಗೂ ಸೊಸೈಟಿಯಿಂದ ಒದಗಿಸಲ್ಪಟ್ಟಿರುವ ಅತ್ಯುತ್ತಮ ಟೇಪ್ ರೆಕಾರ್ಡಿಂಗ್ಗಳಿಗೆ ವಿಶಿಷ್ಟ ನಿರ್ದೇಶನೆ ಮಾಡಿರಿ. ವೈಯಕ್ತಿಕವಾಗಿ ಹಾಗೂ ಕ್ರೈಸ್ತ ಕುಟುಂಬಗಳಲ್ಲಿ ಇವುಗಳನ್ನು ಹೇಗೆ ಉಪಯೋಗಿಸಬಹುದೆಂಬದನ್ನು ಕಾಣುವಂತೆ ಸಹೋದರರಿಗೆ ಸಹಾಯ ಮಾಡಿರಿ.
18 ನಿ: “ಸುವಾರ್ತೆಯನ್ನು ನೀಡುವುದು—ವಿವೇಚನೆಯೊಂದಿಗೆ.” ಪ್ರಶ್ನೋತ್ತರಗಳು. ಪಾರಾ 3ನ್ನು ಚರ್ಚಿಸಿಯಾದ ಮೇಲೆ, ಮನೆಯವನ ಸ್ಥಿತಿಗತಿಗನುಸಾರ ಪ್ರಸಂಗವನ್ನು ಹೇಗೆ ಅಳವಡಿಸಬಹುದೆಂದು ತೋರಿಸುವ ಎರಡು ಚಿಕ್ಕ ದೃಶ್ಯಗಳನ್ನು ಮಾಡಿರಿ. ಇದನ್ನು ಪೂರೈಸಿದಾಗ ದೃಶ್ಯವನ್ನು ಕೊನೆಗಾಣಿಸಬಹುದು, ಸಾಮಾನ್ಯವಾಗಿ ಪೀಠಿಕೆಯ ಸಮಯದಲ್ಲಿ ಯಾ ಅದನ್ನು ಹಿಂಬಾಲಿಸಿ ಕೂಡಲೇ.
10 ನಿ: “ನಿಮ್ಮ ಪ್ರೀತಿಯ ಅಪ್ಪಟತನದ ಪರೀಕ್ಷೆ.” ದಶಂಬರ 1, 1989 ವಾಚ್ಟವರ್ ಪುಟ 24 ರಲ್ಲಿ ಆರಂಭಿಸುವ ಲೇಖನದ ಮೇಲೆ ಹಿರಿಯನಿಂದ ಭಾಷಣ. (ದೇಶಭಾಷೆ: ಒಕ್ಟೋಬರ 1, 1989 ಕಾ.ಬು. “ನಿಮ್ಮನ್ನು ಕೃತಜ್ಞರಾಗಿ ತೋರಿಸಿಕೊಳ್ಳಿರಿ.”) ಸ್ಥಳೀಕವಾಗಿ ಹಾಗೂ ಲೋಕವ್ಯಾಪಕವಾಗಿ ರಾಜ್ಯ ಕಾರ್ಯವನ್ನು ಬೆಂಬಲಿಸುವುದರಲ್ಲಿ ಸಭೆಯ ಔದಾರ್ಯಕ್ಕಾಗಿ ಗಣ್ಯತೆ ಹೇಳಿರಿ.
ಸಂಗೀತ 225 (117) ಮತ್ತು ಸಮಾಪ್ತಿ ಪ್ರಾರ್ಥನೆ.
ಎಪ್ರಿಲ್ 16 ರ ವಾರ
ಸಂಗೀತ 208 (6)
10 ನಿ: ಸ್ಥಳೀಕ ತಿಳಿಸುವಿಕೆಗಳು. ವಾರಾಂತ್ಯದ ಸೇವೆಗಾಗಿ ಏರ್ಪಾಡುಗಳನ್ನು ಸೇರಿಸಿರಿ. ಸ್ಥಳೀಕ ಕ್ಷೇತ್ರದ ಜನರಿಗೆ ಹೊಸ ಪತ್ರಿಕೆಗಳ ಯಾವ ಲೇಖನ ಅಪ್ಪೀಲಾಗಬಹುದೆಂದು ಸೂಚಿಸಿರಿ.
20 ನಿ: ಅಧಿಕ ಆಸಕ್ತಿಯನ್ನು ಹುಟ್ಟಿಸಲು ಪುನ:ಸಂದರ್ಶಿಸಿರಿ. ಸರ್ವೈವಲ್ ಪುಸ್ತಕದಲ್ಲಿ ಆಸಕ್ತಿ ತೋರಿಸಿದವರೆಲ್ಲರನ್ನು ಬೇಗನೇ ಪುನ:ಸಂದರ್ಶಿಸುವಂತೆ ಪ್ರಚಾರಕರನ್ನು ಉತ್ತೇಜಿಸಿರಿ. ಅವರೊಂದಿಗೆ ಬೈಬಲಧ್ಯಯನ ಮಾಡುವಂತೆ ಪುನರ್ಭೇಟಿಯು ಅಗತ್ಯ. ಈ ಅಗತ್ಯದ ಸಂಕ್ಷಿಪ್ತ ಚರ್ಚೆ ಹಾಗೂ ಆಸಕ್ತಿ ತೋರಿಸಿದವರನ್ನು ಪುನ:ಸಂದರ್ಶಿಸುವಂತೆ ಎಲ್ಲರನ್ನು ಬೆಚ್ಚಗಾಗಿ ಉತ್ತೇಜಿಸಿದ ಬಳಿಕ, ಪುಸ್ತಕ ನೀಡಿದಲ್ಲಿ ಪುನರ್ಭೇಟಿ ಮಾಡುವುದು ಹೇಗೆಂಬದನ್ನು ತೋರಿಸುವ ಒಂದೆರಡು ಚಿಕ್ಕ ದೃಶ್ಯಗಳನ್ನು ಮಾಡಿರಿ.
15 ನಿ: ಸ್ಥಳೀಕ ಅಗತ್ಯತೆಗಳು ಅಥವಾ ದೈನಿಕ ವಚನ ಮತ್ತು ಹೇಳಿಕೆಗಳ ಕ್ರಮದ ಚರ್ಚೆಯ ಮಹತ್ವವನ್ನು ಎತ್ತಿತೋರಿಸುವ ಭಾಷಣ ಮತ್ತು ದೃಶ್ಯ. ಶಾಸ್ತ್ರವನ್ನು ಪ್ರತಿದಿನವೂ ಪರೀಕ್ಷಿಸುವುದು—1990 ಮುನ್ನುಡಿಯ ಸಮಾಚಾರದಲ್ಲಿ ಭಾಷಣವನ್ನು ಆಧರಿಸಿರಿ.
ಸಂಗೀತ 46 (20) ಮತ್ತು ಸಮಾಪ್ತಿ ಪ್ರಾರ್ಥನೆ.
ಎಪ್ರಿಲ್ 23 ರ ವಾರ
ಸಂಗೀತ 126 (25)
10 ನಿ: ಸ್ಥಳೀಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆ. ಶಕ್ತರಾದ ಎಲ್ಲರೂ ಈ ವಾರಾಂತ್ಯದ ಸೇವೆಯಲ್ಲಿ ಪಾಲಿಗರಾಗುವಂತೆ ಉತ್ತೇಜಿಸಿರಿ. ಮೇ ಯಲ್ಲಿ ಸಹಾಯಕ ಪಯನೀಯರಾಗುವವರೆಲ್ಲರೂ ಇಷ್ಟರೊಳಗೆ ಅಧ್ಯಕ್ಷ ಮೇಲ್ವಿಚಾರನಿಂದ ಅರ್ಜಿಗಳನ್ನು ಪಡೆದು ಹಾಕಿರಬೇಕು. ಸಮಯವಿದ್ದ ಹಾಗೆ, ಹೊಸ ಪತ್ರಿಕೆಗಳಿಗಾಗಿ ತಕ್ಕದಾದ ಪ್ರಸಂಗಗಳನ್ನು ಸೂಚಿಸಿರಿ.
20 ನಿ: “ನಮ್ಮ ಶುಶ್ರೂಷೆಯನ್ನು ಎಡೆಬಿಡದೆ ಮುಂದರಿಸುವುದು.” ಪ್ರಶ್ನೋತ್ತರಗಳು. ನುರಿತ ಪ್ರಚಾರಕನು ಪಾರಾಗಳನ್ನು ಓದಲಿ. ಇತರ ಸಭಿಕರು ಕೊಡಲ್ಪಟ್ಟ ವಚನಗಳನ್ನು ಓದಿ ಹೇಳಿಕೆ ಕೊಡಬಹುದು. ಸಮಾಚಾರದ ಸ್ಥಳೀಕ ಅನ್ವಯವನ್ನು ಮಾಡಿ, ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಯೋಗ್ಯ ಮನೋಭಾವವನ್ನಿಡಲು ಪ್ರಚಾರಕರಿಗೆ ಸಹಾಯಮಾಡಿರಿ. ಕೊನೆಯ ತನಕ ಯೆಹೋವನನ್ನು ಶ್ರದ್ಧೆಯಿಂದ ಸೇವಿಸಲು ಎಲ್ಲರೂ ನಿರ್ಧಾರಮಾಡಿರಬೇಕು.
15 ನಿ: ವಾಚ್ಟವರ್ ಚಂದಾಗಳನ್ನು ನೀಡಿರಿ. ಯೆಹೋವನ ನೂತನ ಲೋಕದಲ್ಲಿ ಜೀವವನ್ನು ಹುಡುಕುವವರೆಲ್ಲರಿಗಾಗಿ ವಾಚ್ಟವರ್ ಚಂದಾಗಳ ಮಹತ್ವವನ್ನು ಚರ್ಚಿಸಿರಿ. ಚಂದಾ ನೀಡುವಿಕೆಯ ದೃಶ್ಯ ಮಾಡಿರಿ. ವಾಚ್ಟವರ್ ನ ಎಪ್ರಿಲ್ ಸಂಚಿಕೆಯನ್ನುಪಯೋಗಿಸುವಾಗ, ದೇವರು ಬೇಗನೇ ಶಾಂತಿಯನ್ನು ತರಲಿದ್ದಾನೆಂದು ಎತ್ತಿಹೇಳುವ ಮೂಲಕ ಪ್ರಚಾರಕನು ಆಸಕ್ತಿಯನ್ನು ಚೇತರಿಸಬಹುದು. ದೇವರ ವಾಕ್ಯವು ಶಾಂತಿಯ ವಚನವನ್ನಿತ್ತಿದೆ ಎಂದು ತೋರಿಸಲು ಕೀರ್ತನೆ 72:7ನ್ನು ಉಪಯೋಗಿಸಬಹುದು. ಕೀರ್ತನೆ 37:10, 11 ರಲ್ಲಿ ಶಾಂತಿಯು ಬೇಗನೇ ಬರಲಿದೆಂಬ ವಾಗ್ದಾನವನ್ನು ಕಾಣುವ ಮೂಲಕ ಶಾಂತಿ ಪ್ರಿಯರು ಉತ್ತೇಜಿಸಲ್ಪಡುವರು. ಸಮಯವಿದ್ದರೆ, ನೇರವಾಗಿ ಚಂದಾ ನೀಡುವ ಒಂದು ಚಿಕ್ಕ ದೃಶ್ಯ ಮಾಡಿರಿ.
ಸಂಗೀತ 71 (92) ಮತ್ತು ಸಮಾಪ್ತಿ ಪ್ರಾರ್ಥನೆ.