ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/90 ಪು. 3
  • ಪ್ರಶ್ನಾ ಪೆಟ್ಟಿಗೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಪೆಟ್ಟಿಗೆ
  • 1990 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಆಡಿಯೋ ರೆಕಾರ್ಡಿಂಗ್‌ಗಳನ್ನು ಸದುಪಯೋಗಿಸಿಕೊಳ್ಳಿ
    2015 ನಮ್ಮ ರಾಜ್ಯದ ಸೇವೆ
  • ಪ್ರಶ್ನಾ ಚೌಕ
    2010 ನಮ್ಮ ರಾಜ್ಯದ ಸೇವೆ
1990 ನಮ್ಮ ರಾಜ್ಯದ ಸೇವೆ
km 4/90 ಪು. 3

ಪ್ರಶ್ನಾ ಪೆಟ್ಟಿಗೆ

● ಸೊಸೈಟಿಯ ಮೂಲಗಳಿಂದಲ್ಲದ ಬೇರೆ ಟೇಪ್‌ ರೆಕಾರ್ಡಿಂಗ್‌ಗಳನ್ನು ಯೆಹೋವನ ಸಾಕ್ಷಿಗಳು ಹೇಗೆ ವೀಕ್ಷಿಸಬೇಕು?

ಸೊಸೈಟಿಯು ಹಲವಾರು ವಿಧಗಳಲ್ಲಿ ಆತ್ಮಿಕ ಆಹಾರವನ್ನು ಹೇರಳವಾಗಿ ಒದಗಿಸುತ್ತದೆ, ಕ್ಯಾಸೆಟ್‌ ಟೇಪ್‌ ರೆಕಾರ್ಡಿಂಗ್‌ಗಳೂ ಇದರಲ್ಲಿ ಸೇರಿರುತ್ತವೆ. ಈ ಕ್ಯಾಸೆಟ್‌ ರೆಕಾರ್ಡಿಂಗ್‌ಗಳಲ್ಲಿ ಬೈಬಲ್‌ ಮತ್ತು ಸೊಸೈಟಿಯ ಇತರ ಪ್ರಕಾಶನಗಳಾದ, ದಿ ವಾಚ್‌ಟವರ್‌, ಎವೇಕ್‌!, ಮೈ ಬುಕ್‌ ಆಫ್‌ ಬೈಬಲ್‌ ಸ್ಟೋರೀಸ್‌, ಮತ್ತು ಲಿಸನಿಂಗ್‌ ಟು ದ ಗ್ರೇಟ್‌ ಟೀಚರ್‌, ಕಿಂಗ್‌ಡಂ ಮೆಲಡೀಸ್‌ ಮತ್ತು ಹಲವಾರು ಡ್ರಾಮಾಗಳು ಉತ್ಪಾದಿಸಲ್ಪಟ್ಟಿವೆ. ಆದರೂ ಚಲಾವಣೆಯಲ್ಲಿರುವ ಹಾಗೂ ಅದೇ ರೀತಿ ತೋರುವ ಖಾಸಗೀ ಟೇಪ್‌ ರೆಕಾರ್ಡಿಂಗ್‌ಗಳ ವಿಷಯವಾಗಿ ನಾವು ಎಚ್ಚರವಿರಬೇಕಾದ ಅಗತ್ಯವಿದೆ. ನಮ್ಮದು ನಂಬಿಗೆಯ ಬಾಂಧವ್ಯವಾಗಿರಲಾಗಿ, ಕೆಲವರು ಕೆಲವುಸಲ ಅವುಗಳ ಮೂಲವನ್ನು ಪರೀಕ್ಷಿಸದೇ ಬೇರೆಯವರಿಂದ ಟೇಪ್‌ಗಳ ಕಾಪಿಯನ್ನು ಪಡೆದುಕೊಂಡು ಅವಕ್ಕೆ ಕಿವಿಗೊಡುತ್ತಾರೆ.

ಕೆಲವು ಸಾರಿ ಚಲಾವಣೆಯಲ್ಲಿರುವ ರೆಕಾರ್ಡೆಡ್‌ ಭಾಷಣಗಳು ಊಹನೆ ಯಾ ಭಾವೋತ್ಪಾದಕ ಸಮಾಚಾರಗಳಿಂದ ಕೂಡಿರುತ್ತವೆ. ಆದ್ದರಿಂದ, 2 ತಿಮೋಥಿ 3:14 ರ ಪೌಲನ ಸೂಚನೆಯನ್ನು ಪಾಲಿಸುವುದು ಸುಜ್ನತೆಯಲ್ಲವೇ? ಅಲ್ಲಿ ಪೌಲನು ಮೋಸಗಾರರ ಕುರಿತು ಎಚ್ಚರಿಸಿದ ನಂತರ, ನಾವು ಯಾರಿಗೆ ಕಿವಿಗೊಡುತ್ತೇವೂ ಆ ವ್ಯಕ್ತಿಗಳನ್ನು ತಿಳಿದಿರುವ ಮಹತ್ವವನ್ನು ಒತ್ತಿಹೇಳುತ್ತಾನೆ. ಪವಿತ್ರ ಶಾಸ್ತ್ರದಲ್ಲಿ “ಬರೆದಿರುವದನ್ನು ಮೀರಿಹೋಗುವ” ಮತ್ತು “ನಂಬಿಗಸ್ತನೂ ವಿವೇಕಿಯೂ ಆದ ಆಳಿ” ನಿಂದ ಒದಗಿಸಲ್ಪಡುವ ಆತ್ಮಿಕ ಆಹಾರಕ್ಕಿಂತ ಬೇರೆಯಾದ ಯಾವುದೇ ವಿಷಯಕ್ಕೆ ಕಿವಿಗೊಡದಂತೆ ನಾವು ಜಾಗ್ರತೆ ವಹಿಸಬೇಕು.—1ಕೊರಿ. 4:6; ಮತ್ತಾ. 24:45-47.

ಕೆಲವು ಕ್ಷೇತ್ರಗಳಲ್ಲಿ ಮಕ್ಕಳಿಗೆ ಬೈಬಲನ್ನು ಕಲಿಸುವ ಟೇಪ್‌ಗಳು ಜಾಹೀರಾತಾಗಿ, ಮಾರಲ್ಪಡುತ್ತವೆ. ಈ ಟೇಪುಗಳು ಸಹೋದರರ ಮೂಲದಿಂದ ಸುರುವಾಗಿ, ಕೆಲವು ಸಭೆಗಳಲ್ಲಿ ಚಲಾವಣೆಯಾಗಿವೆ. ಹೇತುವು ಒಳ್ಳೇದೆಂತ ಕಂಡರೂ, ಅದು ದೇವಪ್ರಭುತ್ವ ಸಂಬಂಧಗಳನ್ನು ವೈಯಕ್ತಿಕ ಲಾಭಕ್ಕಾಗಿ ಉಪಯೋಗಿಸುವದಕ್ಕೆ ಸಮಾನವಾಗದೇ? (ನಮ್ಮ ರಾಜ್ಯದ ಸೇವೆ, ಜುಲೈ 1977, ಪುಟ 4, ಜನವರಿ 1980, ಪುಟ 4, ಮತ್ತು ಒಕ್ಟೋಬರ 1987 ಪುಟ, 3 ನೋಡಿ) ನಮ್ಮ ಮಕ್ಕಳನ್ನು ತರಬೇತು ಮಾಡಲು ಯೆಹೋವನ ಸಂಸ್ಥೆಯು ನಮಗೆ ಬೇಕಾದದಕ್ಕಿಂತ ಅಧಿಕ ಬೈಬಲಾಧರಿತ ಉಪದೇಶವನ್ನು ಒದಗಿಸುತ್ತಾ ಇದೆ. ಆದ್ದರಿಂದ ನಾವು ಅಂತಹ ಟೇಪುಗಳ ಚಲಾವಣೆಯನ್ನು ನಿರುತ್ತೇಜಿಸುತ್ತೇವೆ.

ಕೆಲವರು ತಮ್ಮ ಸ್ವಂತ ಉಪಯೋಗಕ್ಕಾಗಿ ಸಭಾಕೂಟಗಳ ಅಥವಾ ಅಧಿವೇಶನಗಳ ಕಾರ್ಯಕ್ರಮಗಳ ಟೇಪ್‌ ರೆಕಾರ್ಡಿಂಗ್‌ ಮಾಡುತ್ತಾರೆ. ಅಂತಹ ಟೇಪುಗಳು ಯಾರು ಸಕಾರಣದಿಂದಾಗಿ ಕೂಟಗಳಿಗೆ ಹಾಜರಾಗಲು ಅಶಕ್ತರೋ ಅಂತಹ ಕೆಲವು ಸಭಾ ಸದಸ್ಯರಿಂದಲೂ ಗಣ್ಯಮಾಡಲ್ಪಡಬಹುದು. ಆದರೂ, ಸಹೋದರರೊಳಗೆ ಸಾಧಾರಣ ಹಂಚುವಿಕೆಗಾಗಿ ಅಥವಾ ಇತರರಿಗೆ ಮಾರಾಟಕ್ಕಾಗಿ ಇವನ್ನು ಮಾಡಬಾರದು. ಯೆಹೋವನು ತನ್ನ ಸಂಸ್ಥೆಯ ಮೂಲಕ ನಮ್ಮ ಆತ್ಮಿಕ ಉತ್ತೇಜನ ಮತ್ತು ಭಕ್ತಿ ವೃದ್ಧಿಗಾಗಿ ಏನನ್ನು ಒದಗಿಸಿದ್ದಾನೋ ಅವೆಲ್ಲವುಗಳ ಪೂರ್ಣ ಉಪಯೋಗವನ್ನು ನಾವು ಮಾಡುವವರಾಗೋಣ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ