ಸುವಾರ್ತೆಯನ್ನು ನೀಡುವುದು ವಿವೇಚನೆಯೊಂದಿಗೆ
1 ವಿವಿಧ ನಂಬಿಕೆಗಳು ಮತ್ತು ಹಿನ್ನೆಲೆಗಳಿರುವ ಜನರಿಗೆ ಸುವಾರ್ತೆಯನ್ನು ನೀಡುವಾಗ ವಿವೇಚನೆಯನ್ನುಪಯೋಗಿಸುವ ಅಗತ್ಯವನ್ನು ಅಪೋಸ್ತಲನಾದ ಪೌಲನು ಒತ್ತಿಹೇಳಿದ್ದಾನೆ. ನಮ್ಮ ದಿನಗಳಲ್ಲಿ ಕೆಲವರು ತಾವು ಧರ್ಮಭಾವದವರೆಂದು ಹೇಳುತ್ತಾರೆ, ಮತ್ತು ಇನ್ನು ಕೆಲವರು ಆತ್ಮಿಕ ಭಾವದವರಲ್ಲವಾದ್ದರಿಂದ ಆತ್ಮಿಕ ಮೂಲ್ಯತೆಗಳನ್ನು ಗಣ್ಯಮಾಡುವುದಿಲ್ಲ. ಸುವಾರ್ತೆಯ ಪ್ರಚಾರಕರೋಪಾದಿ ನಾವು ವಿವೇಚನೆಯನ್ನುಪಯೋಗಿಸುವ ಮೂಲಕ ರಾಜ್ಯ ಸಂದೇಶವನ್ನು “ಎಲ್ಲಾ ರೀತಿಯ ಜನರಿಗೆ” ಅಪ್ಪೀಲಾಗುವಂತೆ ಮಾಡಬೇಕು.—1 ಕೊರಿ. 9:19-23.
ಮನೆಯವನನ್ನು ತಿಳುಕೊಳ್ಳುವುದು
2 ಕ್ಷೇತ್ರ ಸೇವೆಯಲ್ಲಿ ವಿವೇಚನೆಯ ವ್ಯಾವಹಾರ್ಯ ಅನ್ವಯವು ಮನೆಯವನ ಆಸಕ್ತಿಗನುಸಾರ ನಮ್ಮ ಪ್ರಸಂಗವನ್ನು ಅಳವಡಿಸುವ ಸಾಮರ್ಥ್ಯದಲ್ಲಿ ಒಳಗೂಡಿದೆ. ಇದಕ್ಕೆ ಒಳ್ಳೇ ತಯಾರಿಯು ಅಗತ್ಯ. ದೊರೆಯುವ ಪುಸ್ತಕ ಮತ್ತು ಪತ್ರಿಕೆಗಳಲ್ಲಿರುವ ಬಗೆಬಗೆಯ ವಿವಿಧ ವಿಷಯಗಳ ಪೂರ್ಣ ಪರಿಚಯವನ್ನು ಮಾಡಿಕೊಳ್ಳುವ ಮೂಲಕ ಪ್ರಚಾರಕನು ಸುವಾರ್ತೆಯನ್ನು ವಿವಿಧ ಮಾತಾಡುವ ವಿಷಯಗಳೊಂದಿಗೆ ಜೋಡಿಸಿ ನೀಡಲು ಸಿದ್ಧನಾಗುತ್ತಾನೆ. ವೃದ್ಧರೊಂದಿಗೆ, ಯುವಕರೊಂದಿಗೆ, ಕುಟುಂಬಮುಖ್ಯರೊಂದಿಗೆ, ಗ್ರಹಿಣಿಯರೊಂದಿಗೆ, ಕೆಲಸದಲ್ಲಿರುವ ಮಹಿಳೆಯರೊಂದಿಗೆ ಮತ್ತು ಇತರರೊಂದಿಗೆ ಮಾತಾಡುವಾಗ, ಅವರ ವೈಯಕ್ತಿಕ ಸ್ಥಿತಿಗತಿಗಳನ್ನು ಗಮನಕ್ಕೆ ತರಬೇಕು ಮತ್ತು ಅವರಿಗೆ ನೀಡುವ ವಿಷಯದ ಆಯ್ಕೆಯಲ್ಲಿ ವಿವೇಚನೆ ಉಪಯೋಗಿಸಬೇಕು.
3 ಮನೆಯವನನ್ನು ಗೋಚರಿಸುವಾಗ ಸುತ್ತಮುತ್ತಣ ವಿಷಯಗಳಿಗೆ ಗಮನಕೊಡಿ. ಮನೆಯವನು ಹೆತ್ತವನೋ, ನಿರ್ದಿಷ್ಟ ಧರ್ಮದವನೋ, ಮನೆಯ ಆರೈಕೆಯಲ್ಲಿ ತೀವ್ರಾಸಕ್ತನೋ ಮುಂತಾದ ವಿಷಯಗಳನ್ನು ನೀವು ವಿವೇಚಿಸಿ ತಿಳುಕೊಳ್ಳಬಹುದು. ಹಾಗೆ ಮಾಡಿದ ಮೇಲೆ ಮನೆಯವನ ಪರಿಸ್ಥಿತಿ ಮತ್ತು ಆಸಕ್ತಿಗೆ ಒಪ್ಪುವ ಪೀಠಿಕೆಯನ್ನು ನೀವು ಅಳವಡಿಸಬಹುದು. ಜಾಣತನದಿಂದ, ವಿವೇಚನೆಯ ಪ್ರಶ್ನೆಗಳಿಂದ ಮತ್ತು ಅವನು ಹೇಳುವುದಕ್ಕೆ ಕಿವಿಗೊಡುವದರಿಂದ ನೀವವನ ನಂಬಿಕೆಗಳನ್ನು ಹಾಗೂ ಮತ್ತು ಭಾವನೆಗಳನ್ನು ಅರಿತು ಕೊಳ್ಳುವಿರಿ ಮತ್ತು ಆಮೇಲೆ ನಿಮ್ಮ ಪ್ರಸಂಗವನ್ನು ಒಳ್ಳೇದಾಗಿ ಮುಂದರಿಸುವ ರೀತಿಯನ್ನು ನಿರ್ಧರಿಸ ಶಕ್ತರಾಗುವಿರಿ.
ನಿಮ್ಮ ಪ್ರಸಂಗವನ್ನು ತಕ್ಕಂತೆ ಹೆಣೆಯುವುದು
4 ನೀವು ಮನೆಯನ್ನು ಸಮೀಪಿಸುವಾಗ ಆಟಿಕೆಗಳನ್ನು ಯಾ ಮಕ್ಕಳನ್ನು ಕಾಣುವುದಾದರೆ ಸದ್ಯದ ಸಂಭಾಷಣಾ ವಿಷಯವನ್ನು ಹೀಗೆ ಆರಂಬಿಸಬಹುದು: “ನಾವೀ ಸಮಾಜದ ಹೆತ್ತವರೊಂದಿಗೆ ಅವರು ತಮ್ಮ ಮಕ್ಕಳಿಗೆ ಕೊಡುವ ಮಾರ್ಗದರ್ಶನೆಗಳ ಕುರಿತು ಮಾತಾಡುತ್ತಿದ್ದೇವೆ. ತಮ್ಮ ಮಕ್ಕಳಿಗೆ ಶಾಲೆಯಲ್ಲಿ ದೊರಕುವ ನೈತಿಕ ಮಾರ್ಗದರ್ಶನೆಯ ಕೊರತೆಯ ಕುರಿತು ಅನೇಕ ಹೆತ್ತವರು ಚಿಂತಿಸುತ್ತಾರೆ. ಈ ವಿಷಯದಲ್ಲಿ ಒಂದು ಸಮಸ್ಯೆಯನ್ನು ನೀವು ಅವಲೋಕಿಸಿರುವಿರೋ?” ಮನೆಯವನ ಪ್ರತಿವರ್ತನೆಗೆ ಕಿವಿಗೊಡಿರಿ. ಮನೆಯವನ ಪ್ರತಿಕ್ರಿಯೆಯು ಅವನು ಧರ್ಮಭಾವದವನೆಂದು ತೋರಿಸಿದರೆ, ಹೀಗೆ ಮುಂದರಿಸಿರಿ: “ನಮಗೂ ನಮ್ಮ ಮಕ್ಕಳಿಗೂ ಸುಜ್ನ ಮಾರ್ಗದರ್ಶನೆಯ ಅಗತ್ಯವನ್ನು ಬೈಬಲು ಎತ್ತಿ ಹೇಳುವುದು ಕುತೂಹಲಕಾರಿ. ಇಲ್ಲಿ ಜ್ಞಾನೋಕ್ತಿ 14:12 ರಲ್ಲಿ ಏನು ಹೇಳಿದೆಂದು ನೋಡಿರಿ.” ವಚನವನ್ನು ಓದಿದ ನಂತರ ಹೀಗನ್ನಬಹುದು: “ಬೈಬಲಿನ ಸೂಚನೆಯು ನಮಗೆಷ್ಟು ವ್ಯಾವಹಾರ್ಯವೆಂದು ಒತ್ತಿಹೇಳಿದ ಒಂದು ಲೇಖವನ್ನು ನಾನು ಇತ್ತೀಚೆಗೆ ಓದುತ್ತಿದ್ದೆ.” ಅನಂತರ ಸರ್ವೈವಲ್ ಪುಸ್ತಕದ 30ನೇ ಪುಟ ತೆರೆದು 1ನೇ ಪಾರಾ ಓದಿರಿ. ಆಮೇಲೆ 33ನೇ ಪುಟ ತೆರೆದು ಚಿತ್ರ ತೋರಿಸಿರಿ. ಕೊನೆಗೆ 37ನೇ ಪುಟದ ಕಡೇ ಎರಡು ವಾಕ್ಯಗಳನ್ನು ಓದಿ, ಮುಗಿಸಿರಿ ಮತ್ತು ಪುಸ್ತಕವನ್ನು 10 ರೂಪಾಯಿಗೆ ನೀಡಿರಿ.
5 ಮನೆಯವನು ಬೇರೊಂದು ಪವಿತ್ರಗ್ರಂಥವನ್ನು ನಂಬುವವನೆಂದು ಅವನ ಪ್ರತಿಕ್ರಿಯೆ ತೋರಿಸಿದರೆ, ನೀವು ಪ್ರಸಂಗವನ್ನು ಬದಲಾಯಿಸುವ ಮೂಲಕ ವಿವೇಚನೆ ತೋರಿಸಿ, ಹೀಗನ್ನಿರಿ: “ಒಬ್ಬನ ಧಾರ್ಮಿಕ ನಂಬಿಕೆ ಏನೇ ಇರಲಿ, ವಿಚಾರವಂತರಾದ ಮನುಷ್ಯರು ಪ್ರಚಲಿತ ಅಸಂತುಷ್ಟ ಲೋಕವು ಏನಾದರೂ ಒಳ್ಳೇ ವಿಷಯದಿಂದ ಪಲ್ಲಟವಾಗಬೇಕೆಂದು ಬಯಸುವರು. ಅಂತಹ ಒಂದು ನಿರೀಕ್ಷೆಯ ಕುರಿತು ಈ ಪುಸ್ತಕ ಏನನ್ನುತ್ತದೆಂದು ನೋಡಿರಿ.” 7ನೇ ಅಧ್ಯಾಯದ ಪಾರಾ 1-3 ರಲ್ಲಿರುವ ವಿಷಯಗಳನ್ನು ಉಪಯೋಗಿಸಿರಿ. ಹಾಗೂ, 24ನೇ ಅಧ್ಯಾಯದ ಪಾರಾ 5 ಯಾ 14ನ್ನು. ಪುಸ್ತಕವನ್ನು 10 ರೂಪಾಯಿಗೆ ನೀಡಿರಿ.
6 ನಾವು ಚೆನ್ನಾಗಿ ತಯಾರಿಸಿದರೆ ಮತ್ತು ಯೆಹೋವನ ಸೇವೆಯಲ್ಲಿ ವಿವೇಚನೆ ತೋರಿಸಿದರೆ, ಅಪೋಸ್ತಲ ಪೌಲನಂತೆ ಹೀಗೆ ಹೇಳಶಕ್ತರಾಗುವೆವು: “ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾಗಿದ್ದೇನೆ.”—1 ಕೊರಿ. 9:22; ಜ್ಞಾನೋ. 19:8.