ಅಧಿಕ ಚಟುವಟಿಕೆಗಾಗಿ ಸಮಯವು
1 ಈ ಪ್ರಚಲಿತ ದುಷ್ಟ ವ್ಯವಸ್ಥೆಯ ಅಂತ್ಯವು ಸದಾ ಹತ್ತಿರವಾಗುತ್ತಾ ಬರುವಾಗ ಮತ್ತು ಯೆಹೋವನು ನಮ್ಮ ಶುಶ್ರೂಷೆಯನ್ನು ಹೇಗೆ ಹೇರಳವಾಗಿ ಆಶೀರ್ವದಿಸುತ್ತಿದ್ದಾನೆಂದು ನಾವು ಕಾಣುವಾಗ, “ಮನಸ್ಸಿನ ನಡುವನ್ನು ಕಟ್ಟಿಕೊಂಡು ಕಾರ್ಯನಡಿಸು” ವಂತೆ ಅಪೋಸ್ತಲ ಪೇತ್ರನಿತ್ತ ಬುದ್ಧಿವಾದಕ್ಕೆ ಕಿವಿಗೊಡುವುದನ್ನು ಅವಶ್ಯವನ್ನಾಗಿ ಮಾಡುತ್ತದೆ.—1ಪೇತ್ರ 1:13; ಯೆಶಾ. 60:22.
2 ಪೇತ್ರನು ಮೇಲಿನ ಬುದ್ಧಿವಾದವನ್ನು ನೀಡಿದಾಗ, ಯೇಸು ಕ್ರಿಸ್ತನ ಸುರಿದ ರಕ್ತದ ಮೂಲಕವಾಗಿ ನಮಗಾಗುವ ರಕ್ಷಣೆಯ ಕುರಿತು ಬರೆಯುತ್ತಿದ್ದನು. ತನ್ನ ಮಗನನ್ನು ದಾನವಾಗಿ ಕೊಟ್ಟ ಮೂಲಕ ಯೆಹೋವನು ವ್ಯಕ್ತಪಡಿಸಿದ ಪ್ರೀತಿಯ ಕಾರಣ ನಾವು ಹೊಂದಿದ ಪ್ರಯೋಜನಕ್ಕಾಗಿ ಗಣ್ಯತೆತೋರಿಸಲು ಮತ್ತು ನಮ್ಮ ನಂಬಿಕೆಯನ್ನು ಪ್ರದರ್ಶಿಸಲು ರಾಜ್ಯ ಸುವಾರ್ತೆಯ ಸಾರುವಿಕೆ ಒಂದು ಮಹತ್ವದ ದಾರಿಯು. (ಯೋಹಾ. 3:16) ಜ್ಞಾಪಕಾವಧಿಯು ದೇವನಿಯುಕ್ತ ಚಟುವಟಿಕೆಯಲ್ಲಿ ಇನ್ನೂ ಹೆಚ್ಚು ಕ್ರಿಯಾಶೀಲರಾಗಿರುವ ಸಮಯವಾಗಿದೆ.
ಜ್ಞಾಪಕಾಚರಣೆ
3 ಈ ವರ್ಷದ ಜ್ಞಾಪಕಾಚರಣೆಯು ಎಪ್ರಿಲ್ 10 ರ ಸೂರ್ಯಾಸ್ತಮಾನದ ನಂತರ ನಡಿಸಲ್ಪಡುವುದು. ಈ ವಿಶೇಷ ಸಂದರ್ಭದ ನೋಟದಲ್ಲಿ, ಯೆಹೋವನೊಂದಿಗೆ ನಮ್ಮ ಸಂಬಂಧವನ್ನು ಮತ್ತು ಕ್ರಿಸ್ತನ ಬಲಿಯನ್ನು ನಾವು ನೆನಪಿಸುವ ರೀತಿಯನ್ನು ಚೆನ್ನಾಗಿ ಪರೀಕ್ಷಿಸೋಣ. ನಮ್ಮ ನಡೆ, ನುಡಿ ಮತ್ತು ಯೋಚನೆಯಲ್ಲಿ ಯೆಹೋವನ ನೀತಿಯ ಮಟ್ಟಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಾವು ದಿನನಿತ್ಯವೂ ನಮ್ಮ ನಂಬಿಕೆಯನ್ನು ತೋರಿಸುತ್ತೇವೋ? ರಾಜ್ಯವನ್ನು ಸಾರುವುದರಲ್ಲಿ ಮತ್ತು ಶಿಷ್ಯರನ್ನು ಮಾಡುವುದರಲ್ಲಿ ಪರಿಶ್ರಮ ಪಡುವ ಮೂಲಕ ಇತರರಿಗಾಗಿ ಪ್ರೀತಿಯನ್ನು ನಾವು ತೋರಿಸುತ್ತೇವೋ? ಪ್ರತಿ ವರ್ಷ ಜ್ಞಾಪಕಾಚರಣೆಯಲ್ಲಿ, ಯೆಹೋವ ದೇವರು ಮತ್ತು ಯೇಸುವು ನಮಗಾಗಿ ಏನನ್ನು ಮಾಡಿದ್ದಾರೆಂಬದನ್ನು ಒಂದು ವಿಶೇಷ ರೀತಿಯಲ್ಲಿ ನಾವು ನೆನಪು ಮಾಡುತ್ತೇವೆ. (ಲೂಕ 22:19; 1 ಕೊರಿ. 11:23, 24) ಅಂತಹ ವಿಚಾರಪರ ನೆನಪು ನಮ್ಮನ್ನು ನಮ್ಮ ಸಾಮರ್ಥ್ಯ ಮತ್ತು ಸ್ಥಿತಿಗತಿಗನುಸಾರ ಸಕಾರತ್ಮಕ ಕ್ರಿಯೆಗೈಯಲು ಪ್ರೇರಿಸಬೇಕು.
4 ಮಾರ್ಚ್ 25 ರಂದು ಭೂಸುತ್ತಲೂ ಇರುವ ಯೆಹೋವನ ಹೆಚ್ಚಿನ ಸಭೆಗಳು “ನಿಜ ಜೀವಿತಕ್ಕಾಗಿ ಎಟಕಿಸಿಕೊಳ್ಳಿರಿ” ಎಂಬ ವಿಶೇಷ ಭಾಷಣವನ್ನು ನೀಡಿದರು. ಇದು ಹೊಸಬರು ಸಭೆಯೊಂದಿಗೆ ಸಹವಸಿಸ ತೊಡಗಲು ಎಷ್ಟು ಒಳ್ಳೆಯ ಸಂಧಿಯನ್ನಿತಿತ್ತು! ಯಾರು ಈ ವಿಶೇಷ ಭಾಷಣಕ್ಕೆ ಹಾಜರಾದರೋ ಅವರಿಗೆ ಯೆಹೋವನ ಜನರೊಂದಿಗೆ ತಮ್ಮ ಸಹವಾಸವನ್ನು ಮುಂದರಿಸುವಂತೆ ಉತ್ತೇಜನವನ್ನು ಕೊಡತಕ್ಕದ್ದು.
ಮಹತ್ವದ ವಿಷಯಗಳುಳ್ಳ ಪತ್ರಿಕೆಗಳ ಹಂಚುವಿಕೆಯನ್ನು ಹೆಚ್ಚಿಸಿರಿ
5 ವಾಚ್ಟವರ್ ಮತ್ತು ಎವೇಕ್! ಪತ್ರಿಕೆಗಳು ಆತ್ಮಿಕ ಆಹಾರವನ್ನು ಮತ್ತು ಸಮಯೋಚಿತ ವಾಚನವನ್ನು ನಮಗೆಲ್ಲರಿಗೆ ಒದಗಿಸುವ ಮೂಲಕ ನಮ್ಮ ಬಹಿರಂಗ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಮೇ ಮತ್ತು ಜೂನ್ ತಿಂಗಳ ಪತ್ರಿಕೆಗಳ ತಯಾರಿಯಲ್ಲಿ ಹಾಕಿರುವ ವಿಶೇಷ ಪ್ರಯತ್ನವನ್ನು ರಾಜ್ಯ ಪ್ರಚಾರಕರೆಲ್ಲರೂ ಗಣ್ಯಮಾಡತಕ್ಕದ್ದು. ಚಂದಾ ನೀಡುವಾಗ ನಾವೀ ಸಂಚಿಕೆಗಳನ್ನು ಎತ್ತಿಹೇಳಲಿದ್ದೇವೆ. ನಿಮಗೆ ಸಿಕ್ಕಿದೊಡನೇ ಪ್ರತಿ ಸಂಚಿಕೆಯ ಒಳ್ಳೇ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸಿರಿ. ಇದು ಕ್ಷೇತ್ರದಲ್ಲಿ ಚಂದಾ ನೀಡುವಾಗ ಮತ್ತು ಚಂದಾ ತಕ್ಕೊಳ್ಳದವರಿಗೆ ಬಿಡಿ ಪತ್ರಿಕೆಗಳನ್ನು ಅಥವಾ ಬ್ರೊಷರಿನೊಂದಿಗೆ ಎರಡು ಪತ್ರಿಕೆಗಳನ್ನು ನೀಡುವಾಗ ಉತ್ಸಾಹದಿಂದ ನೀಡಲು ಶಕ್ಯಮಾಡುವುದು.
6 ಮೇ ಮತ್ತು ಜೂನ್ನಲ್ಲಿ ಸಹಾಯಕ ಪಯನೀಯರಾಗುವಂತೆ ನೀವು ನಿಮ್ಮ ಕಾಲತಖ್ತೆಯಲ್ಲಿ ಸ್ಥಳಮಾಡಬಲ್ಲಿರೋ? ಸಭೆಯಲ್ಲಿನ ಹಲವಾರು ಪ್ರಚಾರಕರು ಒಂದೇ ಸಮಯದಲ್ಲಿ ಪಯನೀಯರಾಗಲು ಏರ್ಪಡಿಸುವುದಾದರೆ, ಈ ಹೆಚ್ಚು ಚಟುವಟಿಕೆಯ ವಿಶೇಷ ಅವಧಿಯಲ್ಲಿ ಒಬ್ಬರಿಗೊಬ್ಬರು ಸಹಾಯ ಮತ್ತು ಉತ್ತೇಜನ ನೀಡಶಕ್ತರಾಗುವರು. ಹಿರಿಯರು ಎಲ್ಲಿ ಅವಶ್ಯವೋ ಅಲ್ಲಿ ಗುಂಪು ಸಾಕ್ಷಿಗಾಗಿ ಅಧಿಕ ಏರ್ಪಾಡುಗಳನ್ನು ಮಾಡುವ ಮೂಲಕ ಸಹಾಯ ಮಾಡಲು ಸಂತೋಷಪಡುವರು.
7 ಕುಟುಂಬ ಜವಾಬ್ದಾರಿಕೆಗಳು, ಶಾರೀರಿಕ ಸೌಖ್ಯ, ಉದ್ಯೋಗ, ಶಾಲಾಭ್ಯಾಸಗಳೇ ಮುಂತಾದ ನಿಮ್ಮ ಸ್ವಂತ ಸ್ಥಿತಿಗತಿಗಳ ಕುರಿತು ಗಂಭೀರವಾಗಿ ಯೋಚಿಸಿರಿ. ಒಂದುವೇಳೆ ಈ ಸಮಯದಲ್ಲಿ ಪಯನೀಯರಾಗಲು ನಿಮಗೆ ಶಕ್ಯವಾಗದ್ದಲ್ಲಿ, ಎಷ್ಟರ ಮಟ್ಟಿಗೆ ನೀವು ನಿಮ್ಮ ಕ್ಷೇತ್ರ ಸೇವೆಯ ಪಾಲನ್ನು ಹೆಚ್ಚಿಸ ಬಲ್ಲಿರಿ? ಆತನಿಗಾಗಿ ಮತ್ತು ಆತನ ಪುತ್ರ ಯೇಸುವಿನ ಅಮೂಲ್ಯ ದಾನಕ್ಕಾಗಿ ನಮ್ಮ ಪ್ರೀತಿ ಮತ್ತು ಗಣ್ಯತೆಯನ್ನು ವ್ಯಕ್ತಪಡಿಸುವ ಪೂರ್ಣಾತ್ಮದ ಸೇವೆಯನ್ನು ಯೆಹೋವನು ಖಂಡಿತವಾಗಿಯೂ ಮೆಚ್ಚುತ್ತಾನೆ. ದೇವರ ವಾಕ್ಯದ ಬೆಳಕಿನಲ್ಲಿ ನಾವು ನಮ್ಮನ್ನು ಪರೀಕ್ಷಿಸಿಕೊಂಡು ಚಟುವಟಿಕೆಗಾಗಿ ಮನಸ್ಸಿನ ನಡುಕಟ್ಟಿಕೊಂಡರೆ, ಸ್ವೀಕರಣೀಯವಾದ ಸ್ತುತಿಬಲಿಗಳನ್ನು ಅರ್ಪಿಸಲು ಯೆಹೋವನಾತ್ಮದ ಶಕ್ತಿಯನ್ನು ಪಡೆಯುವ ಭರವಸವುಳ್ಳವರಾಗ ಸಾಧ್ಯವಿದೆ.—ಇಬ್ರಿ. 13:15.