ನಮ್ಮ ನಂಬಿಕೆಯ ಅಸ್ತಿವಾರವಾದ ಯೇಸು ಕ್ರಿಸ್ತನನ್ನು ಗೌರವಿಸಿರಿ
1 ಯೆಹೋವನ ಉದ್ದೇಶಗಳ ನೆರವೇರಿಕೆಯಲ್ಲಿ ಯೇಸು ಕ್ರಿಸ್ತನ ಪಾತ್ರವನ್ನು ತಿಳುಕೊಳ್ಳುವದು ಮಹತ್ವದ್ದಾಗಿದೆ. ವಿಧೇಯ ಮಾನವ ಕುಲಕ್ಕಾಗಿ ಯೇಸು ತನ್ನ ಜೀವವನ್ನೇ ಬಲಿಯಾಗಿ ಕೊಟ್ಟನು. (ಮತ್ತಾ. 20:28) ಕ್ರಿಸ್ತ ಯೇಸುವಿನ ಮೂಲಕವಾದ ಯೆಹೋವನ ಪ್ರೀತಿಯ ಒದಗಿಸುವಿಕೆಯ ಹೊರತು, ನಾವು ಭವಿಷ್ಯದ ಯಾವ ನಿರೀಕ್ಷೆಯೂ ಇಲ್ಲದವರಾಗಿ ಮೃತಾವಸ್ಥೆಯಲ್ಲೇ ಮುಂದರಿಯುತ್ತಿದ್ದೆವು.
2 ವಿಶೇಷವಾಗಿ ಜ್ಞಾಪಕದ ಅವಧಿಯಲ್ಲಿ ನಾವು ಯೇಸುವಿನ ಜೀವನವನ್ನು, ಆತನ ಬೋಧನೆಗಳನ್ನು ಮತ್ತು ಆತನ ಬಲಿದಾನವನ್ನು ಮನಸ್ಸಿಗೆ ತಂದುಕೊಳ್ಳುವೆವು. (ಲೂಕ 22:19) “ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತ ಪಡಿಸಿದ್ದಾನೆಂದು” ಗಣ್ಯಮಾಡುತ್ತಾ, ಸುವಾರ್ತೆಯನ್ನು ಇತರರಿಗೆ ಕೊಡುವುದರಲ್ಲಿ ಉತ್ಸಾಹದಿಂದ ಪಾಲಿಗರಾಗುವ ಮೂಲಕ ದೇವರಿಗೂ ಕ್ರಿಸ್ತನಿಗೂ ನಾವು ಗೌರವ ತೋರಿಸಬೇಕು. ನಾವದನ್ನು ಹೇಗೆ ಮಾಡಬಹುದು?—ರೋಮಾ. 5:8, 10.
ಕೃತಜ್ಞತೆ ವ್ಯಕ್ತಪಡಿಸುವುದು
3 ಯೆಹೋವನ ದೃಶ್ಯ ಸಂಸ್ಥೆಯು ಯೇಸುವಿನ ಶಿರಸ್ಸಿನ ಕೆಳಗೆ ಕಾರ್ಯನಡಿಸುದನ್ನು ನಾವು ಮನಗಾಣುತ್ತೇವೆ. ಇಲ್ಲಿ ಭೂಮಿಯಲ್ಲಿ ನಂಬಿಗಸ್ತ ಆಳು ವರ್ಗವು ನಮಗೆ ಬೇಕಾದ ಆತ್ಮಿಕ ಆಹಾರವನ್ನು ಒದಗಿಸುತ್ತಾ ಇದೆ. ಯೇಸು ತನ್ನ ಯೌವನದಿಂದಲೇ ತನ್ನ ತಂದೆಯ ವಾಕ್ಯಕ್ಕೆ ಆಳವಾದ ಗಣ್ಯತೆ ತೋರಿಸಿದನು, ನಾವು ಸಹಾ ಇತರರಿಗೆ ಪರಿಣಾಮಕಾರಿಯಾಗಿ ಕಲಿಸುವ ನೋಟದಿಂದ ಒದಗಿಸಲಾದ ಆತ್ಮಿಕ ಆಹಾರವನ್ನು ಅಭ್ಯಸಿಸುವ ಮತ್ತು ಜೀರ್ಣಿಸುವ ಮೂಲಕ ಆತನ ಮಾದರಿಯನ್ನು ಅನುಸರಿಸ ಬಯಸಬೇಕು. (ಮತ್ತಾ. 24:45, 46; ಲೂಕ 2:46-50) ಸಂಸ್ಥೆಗಾಗಿ ಮತ್ತು ಅದು ಒದಗಿಸುವ ಆತ್ಮಿಕ ಒದಗಿಸುವಿಕೆಗಾಗಿ ನಮ್ಮ ಕೃತಜ್ಞತೆಯನ್ನು ಅದರ ಮಾರ್ಗದರ್ಶನೆಯನ್ನು ಪಾಲಿಸುವ ಮೂಲಕ ಮತ್ತು ಹಿರಿಯರಿಗೆ ಸಹಕಾರವನ್ನು ಕೊಡುವ ಮೂಲಕ ನಾವು ತೋರಿಸ ಸಾಧ್ಯವಿದೆ.
4 ದೇವರ ವಾಕ್ಯದಿಂದ ಏನನ್ನು ಕಲಿಯುತ್ತೇವೋ ಅದನ್ನು ಅನ್ವಯಿಸುವ ಮೂಲಕವೂ ನಾವು ಕ್ರಿಸ್ತನಿಗೆ ಗೌರವ ಮತ್ತು ನಮ್ಮ ಶುಶ್ರೂಷೆಗೆ ಶೋಭೆಯನ್ನು ತರುವೆವು. ಯೇಸುವು ನಿರ್ದೋಷಿಯಾದ, “ಪಾಪಿಗಳಲ್ಲಿ ಸೇರದೆ ಪ್ರತ್ಯೇಕನಾಗಿದ್ದ” ಒಬ್ಬ ಮಹಾಯಾಜಕನಾಗಿದ್ದನು. (ಇಬ್ರಿ. 7:26) ಹೇಳುವದೊಂದು, ಮಾಡುವದೊಂದಕ್ಕೆ ಅವನು ದೋಷಿಯಾಗಿರಲ್ಲಿಲ್ಲ. ಜತೆಆಳುಗಳಾದ ನಾವು ಸಹಾ ಅದೇ ಉನ್ನತ ಮಟ್ಟದ ಜೀವಿತವನ್ನು ಜೀವಿಸಬೇಕು. ಆದ್ದರಿಂದ, ಯೆಹೋವನ ನೀತಿಯ ಹೊಸ ಲೋಕದ ಕುರಿತಾಗಿ ನಾವು ಇತರರಿಗೆ ತಿಳಿಸುವಾಗ, ನಮ್ಮನ್ನು ಆ ಹೊಸ ಲೋಕದೊಂದಿಗೆ ಗುರುತಿಸುವ ರೀತಿಯಲ್ಲಿ ಜೀವಿತನಡಿಸ ನಾವು ಬಯಸಬೇಕು.—ಮತ್ತಾ. 7:21; 1 ಕೊರಿ. 1:18; 1 ಯೋಹಾ. 2:17.
ಕ್ರಿಸ್ತನ ಶಿರಸ್ಸಿನ ಕೆಳಗೆ ಸಾರುವುದು
5 ಮೇ ಮತ್ತು ಜೂನ್ನಲ್ಲಿ ವಾಚ್ಟವರ್ ಚಂದಾವನ್ನು ನಾವು ನೀಡಲಿದ್ದೇವೆ. ನಮ್ಮ ಭಾವೀ ವಾಚಕರಿಗೆ ವಾಚ್ಟವರ್ ನ ಉದ್ದೇಶವು ಅದರ ಪ್ರತಿ ಸಂಚಿಕೆಯ 2ನೇ ಪುಟದಲ್ಲಿ ತೋರಿಸಿದ ಹಾಗೆ, “ಯಾರ ಸುರಿದ ರಕ್ತವು ಮಾನವ ಕುಲಕ್ಕೆ ನಿತ್ಯಜೀವವನ್ನು ಪಡೆಯುವ ಮಾರ್ಗವನ್ನು ತೆರೆದಿದೆಯೋ ಆ ಈಗಾಳುವ ರಾಜನಾದ ಯೇಸುಕ್ರಿಸ್ತನಲ್ಲಿ ನಂಬಿಕೆಯನ್ನು” ಉತ್ತೇಜಿಸುವುದೇ ಆಗಿದೆ ಎಂದು ತೋರಿಸುವ ಮೂಲಕ ನಾವು ಯೇಸುವನ್ನು ಗೌರವಿಸಬಲ್ಲೆವು. ಸಾಧ್ಯವಾದಲ್ಲೆಲ್ಲಾ ಮೊದಲು ಚಂದಾ ನೀಡಲು ಪ್ರಯತ್ನಿಸಿರಿ. ಚಂದಾ ಸ್ವೀಕರಿಸಲ್ಪಡದಿದ್ದಲ್ಲಿ, ಎರಡು ಪತ್ರಿಕೆ ಮತ್ತು ಒಂದು ಬ್ರೊಷರನ್ನು ನೀಡಿ ಹೀಗೆ, ಸತ್ಯದ ಸ್ವಲ್ಪ ಬೀಜವನ್ನಾದರೂ ಹಾಕಿರಿ.
6 ಇನ್ನೂ ಸಾಕ್ಷಿಗಳಾಗಿರದ ಜನರ ಒಂದು ಮಹಾ ಸಮೂಹವು ಜ್ಞಾಪಕಕ್ಕೆ ಹಾಜರಾದ ಮೂಲಕ ಯೇಸುವಿಗೆ ಗೌರವವನ್ನು ತೋರಿಸಿದರು. ಇವರೊಂದಿಗೆ ಅಧಿಕ ಆತ್ಮಿಕ ಪ್ರಗತಿಯನ್ನು ಮಾಡುವಂತೆ ಒಂದು ವೈಯಕ್ತಿಕ ಬೈಬಲಧ್ಯಯನ ಆರಂಭಿಸಸಾಧ್ಯವೂ? ಯಾರಾದರೂ ಅವರನ್ನು ಸಂದರ್ಶಿಸಿ ಅವರಿಗೆ ಬೇಕಾದ ಸಹಾಯ ನೀಡುವಂತೆ ಏರ್ಪಡಿಸುವದೊಳ್ಳೆಯದು. ಇಂತಹ ಪ್ರೀತಿಯುಳ್ಳ ಸಹಾಯದಿಂದ ಕೆಲವರಾದರೂ ಮುಂದಿನ ಕರ್ತನ ರಾತ್ರಿ ಭೋಜನದಾಚರಣೆಗೆ ಮುಂಚೆ ಸೇವೆಗಿಳಿಯುವ ಬಿಂದುವಿಗೆ ಪ್ರಗತಿ ಮಾಡಲೂ ಬಹುದು.
7 ನಮ್ಮ ವಿಮೋಚಕನಾದ ಯೇಸುವಿನ ಪ್ರೀತಿಯ ಬಲಿದಾನಕ್ಕಾಗಿ ನಾವೆಷ್ಟು ಕೃತಜ್ಞರು! ಆತನು ನಮಗೆ ಒಂದು ದೃಢವಾದ ನಿರೀಕ್ಷೆಯನ್ನು ಒದಗಿಸಿದ್ದಾನೆ. ಆತನ ಜೀವಿತಕ್ರಮ ಮತ್ತು ಶುಶ್ರೂಷೆಯು ನಾವು ಅನುಸರಿಸುವಂತೆ ಒಂದು ಪರಿಪೂರ್ಣ ಮಾದರಿಯಾಗಿ ಕಾರ್ಯನಡಿಸುತ್ತದೆ.