ಸುವಾರ್ತೆಯನ್ನು ಧೈರ್ಯದಿಂದ ಸಾರಿರಿ
1 ನಿಜ ಕ್ರೈಸ್ತರು ತಮ್ಮ ಸಾಹಸಕ್ಕಾಗಿ ಚಾರಿತ್ರಿಕವಾಗಿ ಪ್ರಸಿದ್ಧರು. ಇದರ ಮುಖ್ಯ ಮಾದರಿಗಳು ಅಪೋಸ್ತಲರಾದ ಪೇತ್ರ ಮತ್ತು ಯೋಹಾನರು. ಸೆರೆಮನೆಗೆ ಹಾಕಲ್ಪಟ್ಟು ಬೆದರಿಸಲ್ಪಟ್ಟಾಗ್ಯೂ, ಈ ಅಪೋಸ್ತಲರು ನಿರ್ಭೀತರಾಗಿ ಮತ್ತು ಧೈರ್ಯದಿಂದ ಸತ್ಯವನ್ನು ಸಾರಿದರು. (ಅಪೋ. 4:18-20, 23, 31ಬಿ) ಪೌಲನು ಸಹಾ ಬಹು ಹಿಂಸೆಯ ನಡುವೆಯೂ ಕಷ್ಟದ ಕ್ಷೇತ್ರದಲ್ಲಿ ತನ್ನ ಶುಶ್ರೂಷೆಯನ್ನು ನಿರ್ಭೀತನಾಗಿ ಮುಂದರಿಸಿದ್ದನು.—ಅಪೋ. 20:20; 2 ಕೊರಿ. 11:23, 28.
2 ಮಹಾ ಕಷ್ಟಗಳ ನಡುವೆಯೂ ಅಪೋಸ್ತಲರು ಹಾಗೂ ಇತರ ಕ್ರೈಸ್ತರು ಇತಿಹಾಸದಲ್ಲೆಲ್ಲಾ ಸುವಾರ್ತೆಯನ್ನು ಧೈರ್ಯದಿಂದ ಸಾರುತ್ತಾ ಇರಲು ಶಕ್ತರಾದದ್ದು ಹೇಗೆ? ಅಪೋಸ್ತಲ ಪೌಲನು ಅದಕ್ಕೆ ಉತ್ತರವನ್ನು 1 ಥೆಸಲೋನಿಕ 2.2 ರಲ್ಲಿ ಹೀಗೆ ಕೊಡುತ್ತಾನೆ: “ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದೆವು.” ಅದೇ ರೀತಿಯಲ್ಲಿ, ಪೇತ್ರ ಮತ್ತು ಯೋಹಾನರು ಹಾಗೂ ಇತರ ಶಿಷ್ಯರು ಸುವಾರ್ತೆಯನ್ನು ಧೈರ್ಯದಿಂದ ಸಾರಲು ಶಕ್ತರಾದರು. ತಮ್ಮ ಸೆರೆವಾಸದಿಂದ ಮುಕ್ತರಾದ ಬಳಿಕ ಪೇತ್ರ ಮತ್ತು ಯೋಹಾನರು ತಮ್ಮ ಜತೆ ಶಿಷ್ಯರ ಬಳಿಗೆ ಹೋದರು. ಅಲ್ಲಿ ಪ್ರಾರ್ಥನೆಯ ಮೂಲಕ ಯೆಹೋವನಿಗೆ ವಿನಂತಿಸುತ್ತಾ ‘ಆತನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ’ ತಮಗೆ ಬಲವನ್ನೂ ಧೈರ್ಯವನ್ನೂ ಕೊಡುವಂತೆ ಬೇಡಿದರು. ಅವರ ಪ್ರಾರ್ಥನೆಯು ಆ ಕೂಡಲೇ ದೇವರಿಂದ ಉತ್ತರಿಸಲ್ಪಟ್ಟಿತು ಮತ್ತು “ಅವರು ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಹೇಳುವವರಾದರು.”—ಅಪೋ. 4:.29, 31.
ಯೆಹೋವನಲ್ಲಿ ಭರವಸವನ್ನು ತೋರಿಸುವುದು
3 ಯೆಹೋವನು ತಮಗೆ ಬೆಂಬಲವಾಗಿರುವನೆಂಬ ಭರವಸವು ಅಪೋಸ್ತಲರಿಗಿತ್ತು. ಯೆಹೋವನು ತನ್ನ ವಾಕ್ಯದ ಮೂಲಕವಾಗಿ ಮಾಡಿದ್ದ ವಾಗ್ದಾನಗಳೆಲ್ಲವೂ ಸತ್ಯವಾಗಿ ರುಜುವಾದವು. ಮತ್ತು ಇನ್ನು ನೆರವೇರಲಿದ್ದವುಗಳಿಗೆ ಯೇಸು ಕ್ರಿಸ್ತನು ಆಶ್ವಾಸನೆ ಕೊಟ್ಟಿದ್ದನು. ಸುವಾರ್ತೆಯನ್ನು ಧೈರ್ಯದಿಂದ ಸಾರಲು ಅಂತಹ ಭರವಸವು ನಮ್ಮಲ್ಲಿದೆಯೇ? ನಮಗೆ ನಾನಾಭಾಷೆಗಳನ್ನಾಡುವ ಮತ್ತು ರೋಗಿಗಳನ್ನು ವಾಸಿಮಾಡುವ ವರವಿಲ್ಲದ್ದಿದರೂ, ಯೆಹೋವನ ಬೆಂಬಲದ ಹೇರಳವಾದ ರುಜುವಾತು ನಮಗಿದೆ. ಬೈಬಲ್ ಪ್ರವಾದನೆಯ ನೆರವೇರಿಕೆಯನ್ನು ನಾವು ಕಾಣುವಾಗ, ದೇವರ ರಾಜ್ಯದ ಸುವಾರ್ತೆಯನ್ನು ಧೈರ್ಯದಿಂದ ಸಾರುವಂತೆ ಪ್ರೇರಿಸಲ್ಪಡಲಾರೆವೇ?
4 ಅಂತಹ ಧೀರ ಸಾರುವಿಕೆಗೆ ವಿರೋಧವು ಬರುವುದೆಂಬದು ಗ್ರಾಹ್ಯ. (ಯೋಹಾ. 15:20) ಯೇಸುವಿಗೆ ಮತ್ತು ಮೊದಲ ಶತಕದ ಕ್ರೈಸ್ತರಿಗೆ ಹಾಗಾಗಿತ್ತು. ಆದರೆ ಅದು ಅವರನ್ನು ಕುಂಠಿಸಲಿಲ್ಲ ಯಾ ಅವರ ಸಾರುವಿಕೆಯ ತೀವ್ರತೆ ಕುಂದಲಿಲ್ಲ. ವಾಸ್ತವದಲ್ಲಿ ಅಂತಹ ವಿರೋಧವು ರಾಜ್ಯ ಸುವಾರ್ತೆಯನ್ನು ಹಬ್ಬಿಸಲು ಅವರಿಗೆ ವಿಫುಲ ಸಂಧಿಗಳನ್ನು ಕೊಟ್ಟಿತು. (ಅಪೋ. 4:3, 8-13ಎ) ಕೆಲವು ಮಹತ್ವದ ವಿಷಯಗಳಲ್ಲಿ ದೇವರ ವಾಕ್ಯಕ್ಕೆ ನಮ್ಮ ಕ್ರೈಸ್ತ ನಿಷ್ಟೆಯ ಕಾರಣ ನಮ್ಮ ನಿಲುವಿಗೆ ಆಧಾರವನ್ನು ಕೊಡುವಂತೆ ನಮ್ಮನ್ನು ಕೇಳಲಾಗುತ್ತದೆ. ಅಂತಹ ಸಂಧಿಗಳನ್ನು ಸುವಾರ್ತೆಯನ್ನು ಧೈರ್ಯವಾಗಿ ಸಾರುವ ಸಂದರ್ಭವಾಗಿ ನಾವು ನೋಡುತ್ತೇವೆ. ಹಾಗೆ ಮಾಡುವ ಮೂಲಕ ನಾವು ಯೇಸು ಮತ್ತು ಆತನ ಅಪೋಸ್ತಲರನ್ನು ಅನುಕರಿಸುವೆವು.
5 ಸುವಾರ್ತೆಯನ್ನು ಸಾರಲು ಸಹಾಯಕ ಪಯನೀಯರ ಸೇವೆಯು ನಮಗೆ ಅಧಿಕ ಸಂದರ್ಭಗಳನ್ನು ಕೊಡುತ್ತದೆ. ಮೇಯಲ್ಲಿ ಅನೇಕರು ಸಹಾಯಕ ಪಯನೀಯರಾಗಲಿದ್ದಾರೆ, ಬೇರೆಯವರು ಮುಂದಣ ತಿಂಗಳುಗಳಲ್ಲಿ ಅದನ್ನು ಮಾಡಲು ಏರ್ಪಡಿಸುವರು. ನಿಮ್ಮ ಪರಿಸ್ಥಿತಿಗಳು ಅರ್ಜಿಮಾಡಲು ಅನುಮತಿಸುತ್ತವೋ? ಸಹಾಯಕ ಪಯನೀಯರ ಸೇವೆಯನ್ನು ಮಾಡಲು ಪ್ರಯತ್ನಿಸುವ ಮೂಲಕ ನಾವು ನಮ್ಮನ್ನು ಪೌಲ ಮತ್ತು ಬಾರ್ನಬರಂತೆ ರುಜುಪಡಿಸುವೆವು. ಅಪೋಸ್ತಲರ ಕೃತ್ಯ 14:3 ರಲ್ಲಿ “ಅವರು ಬಹುಕಾಲ ಅಲ್ಲಿದ್ದು ಯೆಹೋವನ ಶಕಿಯ್ತಿಂದ ಧೈರ್ಯದಿಂದ ಮಾತಾಡಿದರು” ಎಂದು ಹೇಳಿದೆ. ಕ್ಷೇತ್ರ ಸೇವೆಯಲ್ಲಿ ಒಂದು ತಿಂಗಳಲ್ಲಿ ಕಡಿಮೆ ಪಕ್ಷ 60 ತಾಸುಗಳನ್ನಾದರೂ ಹಾಕುವಂತೆ ಬೇರೆ ಚಟುವಟಿಕೆಯಿಂದ ನಾವು ಸಮಯವನ್ನು ಖರೀದಿಸುವುದಾದರೆ, ನಮ್ಮ ಆಶೀರ್ವಾದಗಳು ನಿಸ್ಸಂದೇಹವಾಗಿ ಹೆಚ್ಚುವವು.
6 ಶುಶ್ರೂಷೆಯಲ್ಲಿ ಧೈರ್ಯದಿಂದಿರುವುದು ಚಂದಾಗಳನ್ನು ನೀಡುವಾಗ ವಿಶೇಷ ಸಹಾಯಕಾರಿಯು. ದೇವರ ವಾಕ್ಯದಲ್ಲಿ ಆಧರಿಸಿದ ಜೀವರಕ್ಷಕ ಸಂದೇಶವು ಪತ್ರಿಕೆಯಲ್ಲಿದೆ. ಆದ್ದರಿಂದ ನಾವು ಹಿಂಜರಿಯದೇ ಇದ್ದು ನಮ್ಮ ಮಾದರಿಯಾದ ಯೇಸು ಮತ್ತು ಅಪೋಸ್ತಲರ ಅನುಕರಣೆಯಲ್ಲಿ ಧೈರ್ಯದಿಂದ ಸಾರುತ್ತಾ ಇರೋಣ.