ಶಿಷ್ಯರನ್ನಾಗಿ ಮಾಡಲು ನಮ್ಮಸಹಾಯಕ್ಕಾಗಿ ಕೂಟಗಳು
ಮೇ 7 ರ ವಾರ
ಸಂಗೀತ 87 (47)
8 ನಿ: ಸ್ಧಳಿಕ ತಿಳಿಸುವಿಕೆಗಳು. ವಿಶೇಷ ಭಾಷಣ ಮತ್ತು ಜ್ಞಾಪಕವನ್ನು ಹಾಜರಾದವರಿಗೆ ಸಹಾಯ ಕೊಡುತ್ತಾ ಇರುವ ಅಗತ್ಯವನ್ನು ಎಲ್ಲರಿಗೆ ನೆನಪಿಸಿರಿ. ಅವರು ಆತ್ಮಿಕ ಪ್ರಗತಿಮಾಡುವಂತೆ ಸಹಾಯ ಕೊಡಲು ಸಂದರ್ಶನೆ ಮಾಡಲಾಗುತ್ತದೋ?
20 ನಿ: “ಸುವಾರ್ತೆಯನ್ನು ನೀಡುವುದು—ಧೈರ್ಯದಿಂದ ಚಂದಾ ನೀಡುವ ಮೂಲಕ.” ಪ್ರಶ್ನೋತ್ತರಗಳು. ಪಾರಾ 4ರ ನಂತರ, ಸಂಭಾಷಣೆಗಾಗಿ ವಿಷಯವನ್ನುಪಯೋಗಿಸಿ ಒಂದು ದೃಶ್ಯಮಾಡಿರಿ. ವಾಚ್ಟವರ್ ನಲ್ಲಿರುವ ಶಾಂತಿಯ ವಿಷಯವಾದ ಮುಖ್ಯ ಲೇಖನಗಳಿಂದ ಅಂಶಗಳನ್ನು ತೋರಿಸಿರಿ. ನೀಡುವಿಕೆ ಮಾಡುವವನು ಸಕಾರಾತ್ಮಕ ಭಾವದಿಂದ ಚಂದಾ ನೀಡಬೇಕು.
17 ನಿ: “ದೇವಭಕ್ತಿಯಲ್ಲಿ ತರಬೇತಾಗಲು ಹೊಸ ಹೊರಡಿಸುವಿಕೆಗಳು ನಮಗೆ ನೆರವಾಗುತ್ತವೆ.” ಎಲ್ಲರೂ ಹೊಸ ಹೊರಡಿಸುವಿಕೆಗಳ ಪೂರ್ಣ ಪರಿಚಯ ಮಾಡಿಕೊಳ್ಳುವಂತೆ ಉತ್ತೇಜಕ ಭಾಷಣ. ಯಾರು ಈ ಪ್ರಕಾಶನಗಳನ್ನುಪಯೋಗಿಸಿರುವರೋ ಅವರಿಂದ ಗಣ್ಯತೆಯ ಒಂದೆರಡು ಚಿಕ್ಕ ಹೇಳಿಕೆಗಳನ್ನು ಸೇರಿಸಿರಿ.
ಸಂಗೀತ 181 (10) ಮತ್ತು ಸಮಾಪ್ತಿ ಪ್ರಾರ್ಥನೆ.
ಮೇ 14 ರ ವಾರ
ಸಂಗೀತ 148 (50)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ಎಕೌಂಟ್ಸ್ ರಿಪೋರ್ಟ್. ಸದ್ಯದ ಪತ್ರಿಕೆಗಳಿಗಾಗಿ 30-60 ಸೆಕೆಂಡುಗಳ ಎರಡು ಪ್ರಸಂಗಗಳನ್ನು ದೃಶ್ಯಮಾಡಿರಿ. ಎಪ್ರಿಲಿನ ಕ್ಷೇತ್ರಸೇವಾ ವರದಿಯನ್ನು ಸಭೆಗೆ ತಿಳಿಸಿರಿ. ಮಾಡಿದ ಒಳ್ಳೇ ಕಾರ್ಯಕ್ಕಾಗಿ ಪ್ರಶಂಸಿಸಿರಿ.
18 ನಿ: “ನಮ್ಮ ನಂಬಿಕೆಯ ಅಸ್ತಿವಾರವಾದ ಯೇಸು ಕ್ರಿಸ್ತನನ್ನು ಗೌರವಿಸಿರಿ.” ಪ್ರಶ್ನೋತ್ತರ ಚರ್ಚೆ.
17 ನಿ: ದಿ ವೇಲ್ಯೂ ಆಫ್ ದ ಗುಡ್ನ್ಯೂಸ್ ಇನ್ ಅವರ್ ಲೈಫ್. ಭಾಷಣ. ಜನವರಿ 1, 1990 ರ ವಾಚ್ಟವರ್ ಪುಟ 4-6 ರ ಸಮಾಚಾರದ ಆಧಾರದಿಂದ. (ದೇಶಭಾಷೆ: “ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಭ್ಯಸಿಸುವ ಮೂಲಕ ಯೆಹೋವನಲ್ಲಿ ಭರವಸವನ್ನು ಕಟ್ಟಿರಿ.” ಕಾ.ಬು. ನವಂ. 1989) ಸುವಾರ್ತೆಯು ತಮ್ಮ ಜೀವಿತದಲ್ಲಿ ಪ್ರಗತಿ ಮಾಡಲು ಹೇಗೆ ಸಹಾಯ ಮಾಡಿತೆಂದು ಹೇಳುವಂತೆ ಕೆಲವರನ್ನು ಏರ್ಪಡಿಸಿರಿ.
ಸಂಗೀತ 193 (103) ಮತ್ತು ಸಮಾಪ್ತಿ ಪ್ರಾರ್ಥನೆ.
ಮೇ 21 ರ ವಾರ
ಸಂಗೀತ 23 (40)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯ ಸಂಬಂಧಿತ ಪ್ರಕಟನೆಗಳು.
20 ನಿ: “ಸುವಾರ್ತೆಯನ್ನು ಧೈರ್ಯದಿಂದ ಸಾರಿರಿ.” ಪ್ರಶ್ನೋತ್ತರ ಚರ್ಚೆ. ಸಮಯವಿದ್ದ ಹಾಗೆ ಪಾರಾಗಳನ್ನೋದಿರಿ.
15 ನಿ: ಬೈಬಲಿನ ದೃಷ್ಟಿಕೋನವು. ಭಾಷಣ ಮತ್ತು ದೃಶ್ಯ. ಜುಲೈ 8, 1985 ರ ಎವೇಕ್! ಸಂಚಿಕೆಯಿಂದ ಸುರುವಾದ “ಬೈಬಲ್ಸ್ ವ್ಯೂಪಾಯಿಂಟ್” ಎಂಬದು ಪತ್ರಿಕೆಯ ಒಂದು ಆಸಕ್ತಿಯ ವೈಶಿಷ್ಟವು. ಒಬ್ಬನು ಬೈಬಲನ್ನು ನಂಬಲಿ, ನಂಬದಿರಲಿ, ಚರ್ಚಿಸಿದ ವಿಷಯಗಳ ಮೇಲೆ ಬೈಬಲಿನ ನಿಲುವನ್ನು ತಿಳಿಸಿರುವ ಲೇಖನಗಳು ವಿಚಾರವಂತ ವ್ಯಕ್ತಿಗಳಿಗಾಗಿ ರಚಿಸಲಾಗಿವೆ. ನಾವೀ ವೈಶಿಷ್ಟ್ಯವನ್ನು ಕ್ಷೇತ್ರಸೇವೆಯಲ್ಲಿ ಬಳಸುತ್ತೇವೋ? ನಿಮ್ಮ ಸ್ಥಳಿಕ ಕ್ಷೇತ್ರಕ್ಕೆ ತಕ್ಕದಾದ ಈ ಹಲವಾರು ಲೇಖನಗಳನ್ನು ಸಭೆಯೊಂದಿಗೆ ಪರಾಮರ್ಶಿಸಿರಿ. ಸೇವೆಯಲ್ಲಿ ಈ ಲೇಖನಗಳನ್ನು ಹೇಗೆ ತೋರಿಸಬಹುದೆಂಬ ದೃಶ್ಯಮಾಡಿರಿ. (ದೇಶಭಾಷೆ: “ಯೇಸುವಿನ ಜೀವನ ಮತ್ತು ಶುಶ್ರೂಷೆ.” ನಿಮ್ಮ ಕ್ಷೇತ್ರಕ್ಕೆ ತಕ್ಕದಾದ ಲೇಖನಗಳನ್ನು ಆರಿಸಿರಿ.)
ಸಂಗೀತ 92 (51) ಮತ್ತು ಸಮಾಪ್ತಿ ಪ್ರಾರ್ಥನೆ.
ಮೇ 28 ರ ವಾರ
ಸಂಗೀತ 106 (55)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ದೇವಪ್ರಭುತ್ವ ವಾರ್ತೆ. ಮೇ 1ರ ವಾಚ್ಟವರ್ ಸಂಚಿಕೆ ನೀಡುವಾಗ ಏನು ಹೇಳಬಹುದೆಂಬದನ್ನೂ ಭಾಷಕನು ಸಭಿಕರೊಂದಿಗೆ ಚರ್ಚಿಸಬೇಕು. ಯಾರು ಆಶ್ವಾಸನೆ ಕೊಡಬಲ್ಲನೋ ಅಷ್ಟು ಪ್ರಭಲನಾಗಿರುವ ಒಬ್ಬ ಅಧಿಪತಿಯ ಮೂಲಕ ಮಾತ್ರವೇ ನಿಜಶಾಂತಿ ಬರಲಬಲ್ಲದೆಂದು ಒಬ್ಬನು ಹೇಳಬಹುದು. ಕೀರ್ತನೆ 72:7 ಕ್ರಿಸ್ತನ ಕೆಳಗಿನ ದೇವರ ರಾಜ್ಯವು ವಿಫುಲ ಶಾಂತಿಯನ್ನು ತರುವುದೆಂದು ಹೇಳುತ್ತದೆ. ನೀತಿಯ ರಾಜನೋಪಾದಿ ಆತನು ದುಷ್ಟರನ್ನು ನಾಶಮಾಡಶಕ್ತನು ಮತ್ತು ಸತ್ತವರನ್ನು ಪುನರ್ಜೀವಿಸಲೂ ಶಕ್ತನು. (ಕೀರ್ತನೆ 37:10,11) ಮೇ 1 ರ ಸಂಚಿಕೆಯಿಂದ ಪತ್ರಿಕಾ ದಿನದಲ್ಲಿ ಯಾ ಚಂದಾ ನೀಡುವಾಗಲೂ ಉಪಯೋಗಿಸಬಹುದಾದ ವಿಶಿಷ್ಟ ಅಂಶಗಳನ್ನು ತಿಳಿಸಿರಿ.
25 ನಿ: “ಜ್ಞಾನಿಯಾಗಿರು—ನೀನು ಕಲಿತ ವಿಷಯಗಳನ್ನು ಅನ್ವಯಿಸಿಕೋ.” ಹಿರಿಯನು ಸಭಿಕರೊಂದಿಗೆ ವಿಷಯವನ್ನು ಚರ್ಚಿಸುವನು. ತಾವೇನನ್ನು ಕಲಿಯುತ್ತಾರೋ ಅವನ್ನು ನೆನಪಿನಲ್ಲಿಟ್ಟು ಅನ್ವಯಿಸಲಾಗುವಂತೆ ಜಾಗ್ರತೆಯಿಂದ ಪ್ರಕಾಶನಗಳನ್ನು ಅಭ್ಯಸಿಸುವ ಅಗತ್ಯವನ್ನು ಒತ್ತಿಹೇಳಿರಿ. ಇತ್ತೀಚಿನ ಪ್ರಕಾಶನಗಳಲ್ಲಿ ಸ್ಥಳೀಕ ಅನ್ವಯವಿರುವ ವ್ಯಾವಹಾರ್ಯ ವಿಷಯಗಳಿಗೆ ಗಮನ ಸೆಳೆಯಿರಿ. ಉದಾಹರಣೆಗಳು: ಯುವಕರು ಶಾಲೆಯಲ್ಲಿ ಏಳುವ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬಹುದು; ಕೆಲ್ಸದ ಸ್ಥಳದಲ್ಲಿ ಏಳುವ ಸಮಸ್ಯೆಗಳನ್ನು ಹೇಗೆ ನಿವಾರಿಸಬಹುದು; ಸಹೋದರರ ನಡುವೆ ಮತ್ತು ವಿವಾಹಿತ ಜೋಡಿಗಳ ನಡುವಣ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು. ಸ್ಥಳೀಕ ಸಭೆಗೆ ಅತಿ ಸಹಾಯಕಾರಿಯಾದ ಸಮಾಚಾರವನ್ನು ಉಪಯೋಗಿಸಿರಿ.
10 ನಿ: ನಾವೇನನ್ನು ಕಲಿಯುತ್ತೇವೋ ಅದನ್ನು ಅನ್ವಯಿಸುವುದರಿಂದ ಪ್ರಯೋಜನಗಳು. ಕಲಿತ ವಿಷಯಗಳನ್ನು ಹೇಗೆ ಅನ್ವಯಿಸಲಾಯಿತು ಮತ್ತು ಹಾಗೆ ಅನ್ವಯಿಸಿದವರಿಗೆ ಯಾವ ಆಶೀರ್ವಾದಗಳು ದೊರೆತವೆಂದು ತಿಳಿಸುವ ಒಳ್ಳೇ ತಯಾರಿಸಿದ ಅನುಭವಗಳನ್ನು ಸೇರಿಸಿರಿ. ಸ್ಥಳೀಕ ಅನುಭವಗಳಿದ್ದರೆ ಅತ್ಯುತ್ತಮ, ಆದರೆ ಬೇಕಾದಲ್ಲಿ 1990 ವರ್ಷಪುಸ್ತಕ ದಲ್ಲಿರುವುದನ್ನು ಉಪಯೋಗಿಸಬಹುದು.— ಪುಟ 7-9, 43-5, 50-3, 57-8, 64 ನೋಡಿರಿ.
ಸಂಗೀತ 75 (58) ಮತ್ತು ಸಮಾಪ್ತಿ ಪ್ರಾರ್ಥನೆ.
ಜೂನ್ 4 ರ ವಾರ
ಸಂಗೀತ 200 (108)
10 ನಿ: ಸ್ಥಳೀಕ ತಿಳಿಸುವಿಕೆಗಳು. ಸಭೆಯಿಂದ ನೀಡಲ್ಪಟ್ಟ ಚಂದಾಗಳ ಸಂಖ್ಯೆಯನ್ನು ತಿಳಿಸಿರಿ, ಮತ್ತು ತಿಂಗಳಲ್ಲಿ ಸಹಾಯಕ ಪಯನೀಯರರಾದವರಿಂದ ಅನಂದಿಸಲ್ಪಟ್ಟ ಅನುಭವಗಳನ್ನು ಕೇಳಿರಿ.
10 ನಿ: ಆತ್ಮಿಕ ಸುಸಮಯಕ್ಕಾಗಿ ಮುಂದಾಗಿ ಯೋಜಿಸುವುದು. ಮುಂದಣ ತಿಂಗಳುಗಳಿಗಾಗಿ, ವಿಶೇಷ ಸಮ್ಮೇಲನ ದಿನಗಳನ್ನು ಹಾಜರಾಗಲು ಸಹಾ, ಯೋಜನೆಗಳನ್ನು ಸೇವಾ ಮೇಲ್ವಿಚಾರಕನು ಸಭೆಯೊಂದಿಗೆ ಚರ್ಚಿಸುತ್ತಾನೆ. ಬೇಸಗೆಯ ತಿಂಗಳುಗಳು ರಜೆಯಲ್ಲಿರುವ ಯುವಕರಿಗೆ ಅಧಿಕ ಸೇವೆಯನ್ನು ಮಾಡಲು ಅವಕಾಶ ಕೊಡುತ್ತದೆ.
25 ನಿ: “ಬೇರಿಂಗ್ ಫ್ರುಟ್ ವಿದ್ ಎಂಡ್ಯೂರೆನ್ಸ್.” 1990 ವರ್ಷಪುಸ್ತಕ ಪುಟ 253-5 ರ ಸಮಾಚಾರದ ಮೇಲೆ ಭಾಷಣ. (ದೇಶಭಾಷೆ: “ಯೆಹೋವನಿಗೆ ಸಾಕ್ಷಿಕೊಡಿರಿ, ಸೋತುಹೋಗಬೇಡಿರಿ.” ಕಾ.ಬು. ಜನವರಿ, 1990) ಸಂಕಟ ಮತ್ತು ಕಷ್ಟಗಳ ನಡುವೆಯೂ ಧೈರ್ಯದಿಂದ ಸಾಕ್ಷಿ ನೀಡಿದರಲ್ಲಿ ಮತ್ತು ಫಲಫಲಿಸಿದರಲ್ಲಿ ಸ್ಥಳೀಕ ಸಭೆಯ ಪಾಲಿಗಾಗಿ ಪ್ರಚಾರಕರನ್ನು ಬೆಚ್ಚಗಾಗಿ ಪ್ರಶಂಸಿಸಿರಿ.
ಸಂಗೀತ 72 (58) ಮತ್ತು ಸಮಾಪ್ತಿ ಪ್ರಾರ್ಥನೆ.