ಶಿಷ್ಯರನ್ನಾಗಿ ಮಾಡಲು ನಮ್ಮ ಸಹಾಯಕ್ಕಾಗಿ ಕೂಟಗಳು
ಜೂನ್ 4 ರ ವಾರ
ಸಂಗೀತ 67 (38)
5 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಆಯ್ದ ಪ್ರಕಟನೆಗಳು. ವಾರದಿನದ ಮತ್ತು ವಾರಾಂತ್ಯದ ಗುಂಪು ಸಾಕ್ಷಿ ಏರ್ಪಾಡುಗಳನ್ನು ಪುನರ್ವಿಮರ್ಶಿಸಿರಿ.
25 ನಿ: “ಇತರರೊಂದಿಗೆ ಆತ್ಮಿಕ ಐಶ್ವರ್ಯವನ್ನು ಹಂಚಿರಿ.” ಪ್ರಶ್ನೋತ್ತರ ಚರ್ಚೆ. ನಮ್ಮ ಆತ್ಮಿಕ ಕೊಡುವಿಕೆಯಲ್ಲಿ ಔದಾರ್ಯವನ್ನು ಬೆಚ್ಚಗಾಗಿ ಉತ್ತೇಜಿಸಿರಿ. ಸಮಯವಿದ್ದ ಹಾಗೆ, ವಾಚ್ಟವರ್ ಮತ್ತು ಎವೇಕ್! ಚಂದಾನೀಡಿಕೆಯ ಮೇಲೆ ಆಯ್ದ ಅನುಭವಗಳನ್ನು ತಿಳಿಸಿರಿ.
15 ನಿ: ಪ್ರಶ್ನಾ ಪೆಟ್ಟಿಗೆ. ಸಭಿಕರೊಂದಿಗೆ ಚರ್ಚಿಸಿರಿ.
ಸಂಗೀತ 19 (29) ಮತ್ತು ಸಮಾಪ್ತಿ ಪ್ರಾರ್ಥನೆ.
ಜೂನ್ 11ರ ವಾರ
ಸಂಗೀತ 28(5)
8 ನಿ: ಸ್ಥಳಿಕ ತಿಳಿಸುವಿಕೆಗಳು, ದೇವಪ್ರಭುತ್ವ ವಾರ್ತೆ ಮತ್ತು ಎಕೌಂಟ್ಸ್ ರಿಪೋರ್ಟ್. ಯಾವುದೇ ಕಾಣಿಕೆಯ ಅಂಗೀಕಾರವನ್ನು ಸೇರಿಸಿರಿ. ರಾಜ್ಯಾಭಿವೃದ್ಧಿಗಾಗಿ ಸಭೆಯು ಕೊಡುವ ಆರ್ಥಿಕ ಬೆಂಬಲವನ್ನು ಬೆಚ್ಚಗಾಗಿ ಹೊಗಳಿರಿ.
22 ನಿ: “ನಿಮ್ಮ ರೂಢಿ ಏನು?” ಪ್ರಶ್ನೋತ್ತರ ಚರ್ಚೆ. ಕೂಟಗಳಿಗೆ ಗಣ್ಯತೆಯನ್ನು ಎತ್ತಿಹೇಳಿರಿ, ಮತ್ತು ಕೂಟಗಳಿಗೆ ತಪ್ಪುವ ರೂಢಿಯನ್ನು ವಿಸರ್ಜಿಸುವ ಅಗತ್ಯವನ್ನು ತಿಳಿಸಿರಿ. ಈ ಭಾಗವನ್ನು ನಿರ್ವಹಿಸುವ ಸಹೋದರನು ಸ್ಥಳಿಕ ಸಭೆಯು ಕೂಟದ ಹಾಜರಿಯಲ್ಲಿ ಹೇಗಿದೆ ಎಂಬ ಸಮಾಚಾರವನ್ನು ಸೇರಿಸಬಹುದು.
15 ನಿ: “ವಿನ್ನಿಂಗ್ ದಿ ಬ್ಯಾಟ್ಲ್ ಎಗೈನ್ಟ್ಸ್ ಡಿಪ್ರೆಶ್ಯನ್.” ಹಿರಿಯನಿಂದ ಭಾಷಣ, ಮಾರ್ಚ್ 1, 1990 ವಾಚ್ಟವರ್ ಪುಟ 5-9 ಲೇಖನದಲ್ಲಿ ಆಧರಿಸಿದೆ. (ದೇಶಭಾಷೆ: “ಪತಿಯಾಗಿದ್ದು ಪ್ರೀತಿ ಮತ್ತು ಗೌರವವನ್ನು ತೋರಿಸುವುದು.” ಕಾ.ಬು. 90 2⁄1.) 4ನೇ ಪುಟದಲ್ಲಿ ಕೊಟ್ಟ ತೀವ್ರ ಕುಗ್ಗಿನ ಮೂಲಗಳಿಗೆ ನಿರ್ದೇಶಿಸುವ ಮೂಲಕ ಭಾಷಣವನ್ನು ಸುರುಮಾಡಿರಿ. ಈ ಸಮಾಚಾರವನ್ನು ಅನುಕಂಪ ಮತ್ತು ತಿಳುವಳಿಕೆ ಸಹಿತ ನೀಡಬೇಕು. ಈ ವಿಷಯದಿಂದ ಸಹೋದರರು ಪ್ರಯೋಜನ ಪಡೆಯುವಂತೆ ಮತ್ತು ಅದನ್ನು ಇತರರೊಂದಿಗೆ ಹಂಚುವಂತೆ ಉತ್ತೇಜನ ಕೊಡಿರಿ.
ಸಂಗೀತ 65 (36) ಮತ್ತು ಸಮಾಪ್ತಿ ಪ್ರಾರ್ಥನೆ.
ಜೂನ್ 18 ರ ವಾರ
ಸಂಗೀತ 133 (68)
5 ನಿ: ಸ್ಥಳಿಕ ತಿಳಿಸುವಿಕೆಗಳು. ಹೊಸಪತ್ರಿಕೆಗಳಿಂದ ಒಂದೆರಡು ಮಾತಾಡುವ ವಿಷಯಗಳನ್ನು ಸಂಕ್ಷೇಪವಾಗಿ ಎತ್ತಿಹೇಳಿ. ವಾರಾಂತ್ಯದ ಕೇತ್ರಸೇವೆಗಾಗಿ ಸ್ಥಳಿಕ ಏರ್ಪಾಡುಗಳನ್ನು ತಿಳಿಸಿರಿ.
22 ನಿ: “ಸುವಾರ್ತೆಯನ್ನು ನೀಡುವುದು—ಬೈಬಲಧ್ಯಯನಗಳ ಮೂಲಕ.” ಪ್ರಶ್ನೋತ್ತರ ಆವರಿಸುವಿಕೆ. ಬೈಬಲಧ್ಯಯನ ನಡಿಸುವ ಪ್ರಚಾರಕರನ್ನು ಹೊಗಳಿರಿ ಮತ್ತು ಯಾರಿಗೆ ಇಲ್ಲವೋ ಅವರು ತಮ್ಮ ಪರಿಸ್ಥಿತಿಯನ್ನು ಸುಧಾರಿಸಲು ಏನು ಮಾಡಬಹುದೆಂದು ದಯೆಯಿಂದ ಉತ್ತೇಜಿಸಿರಿ. ಪಾರಾ 4 ಮತ್ತು 5 ರಲ್ಲಿರುವ ಸಲಹೆಗಳನ್ನು ಸಂಕ್ಷೇಪವಾಗಿ ದೃಶ್ಯಮಾಡಿರಿ.
18 ನಿ: “ಬೈಬಲನ್ನು ಹೆಚ್ಚಾಗಿ ಉಪಯೋಗಿಸುವುದು.” ಸಭೆಯೊಂದಿಗೆ ಚರ್ಚಿಸಿರಿ.
ಸಂಗೀತ 127 (64) ಮತ್ತು ಸಮಾಪ್ತಿ ಪ್ರಾರ್ಥನೆ.
ಜೂನ್ 25 ರ ವಾರ
ಸಂಗೀತ 29 (11)
8 ನಿ: ಸ್ಥಳಿಕ ತಿಳಿಸುವಿಕೆಗಳು
22 ನಿ: “ಸತ್ಯಕ್ಕೆ ಸಾಕ್ಷಿ ಕೊಡಿರಿ.” ಲೇಖನದ ಪ್ರಶ್ನೋತ್ತರ ಚರ್ಚೆ. ಸಹಾಯಕ ಪಯನೀಯರ ಸೇವೆ ಮಾಡುವಂತೆ ತಮ್ಮ ಶೆಡ್ಯೂಲನ್ನು ಏರ್ಪಡಿಸ ಶಕ್ತರಾದ ಪ್ರಚಾರಕರನ್ನು ಇಂಟರ್ವ್ಯೂ ಮಾಡಿರಿ.
15 ನಿ: “ಗಾಡ್ಸ್ ವರ್ಡ್—ನಾಟ್ ಮ್ಯಾನ್ಸ್.” ಈ ಪುಸ್ತಕದೊಂದಿಗೆ ಎಲ್ಲರೂ ಪೂರ್ಣ ಪರಿಚಿತರಾಗುವಂತೆ ಉತ್ತೇಜಿಸುವ ಉತ್ಸಾಹಭರಿತ ಭಾಷಣ. ಯಾರು ಈ ಪುಸ್ತಕ ಓದಿರುವರೋ ಮತ್ತು ಉಪಯೋಗಿಸಿದ್ದಾರೋ ಅವರಿಂದ ಒಂದೆರಡು ಗಣ್ಯತೆಯ ಹೇಳಿಕೆಗಳನ್ನು ಸೇರಿಸಬಹುದು.
ಸಂಗೀತ 30 (117) ಮತ್ತು ಸಮಾಪ್ತಿ ಪ್ರಾರ್ಥನೆ.