ನಿಮ್ಮ ರೂಢಿ ಏನು?
1 ಕ್ರೈಸ್ತ ಕೂಟಗಳು ಯೆಹೋವನಿಗೆ ನಮ್ಮ ಆರಾಧನೆಯ ಅತ್ಯಾವಶ್ಯಕ ಭಾಗವು. “ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ” ನಾವು ಕೂಟವಾಗಿ ಕೂಡುವುದನ್ನು ಬಿಟ್ಟುಬಿಡಬಾರದೆಂದು ಅಪೋಸ್ತಲ ಪೌಲನು ನಮ್ಮನ್ನು ಯುಕ್ತವಾಗಿಯೇ ಪ್ರೇರೇಪಿಸಿದ್ದಾನೆ.—ಇಬ್ರಿ. 10:25.
2 ಕ್ರೈಸ್ತ ಕೂಟಗಳಲ್ಲಿ ನಿಮ್ಮ ಸಹೋದರರೊಂದಿಗೆ ಕೂಡಿ ಬರುವ ವಿಷಯವಾಗಿ ನಿಮಗೆ ತದ್ರೀತಿಯ ಭಾವೋದ್ರೇಕಗಳಿವೆಯೋ? ನೀವು ಎಲ್ಲಾ ಕೂಟಗಳನ್ನು, ಸಭಾ ಪುಸ್ತಕಭ್ಯಾಸವನ್ನು ಸಹಾ, ಹಾಜರಾಗುತ್ತೀರೋ? ಅಥವಾ ಕೂಟಗಳನ್ನು ತಪ್ಪಿಸುವುದು ನಿಮಗೆ ರೂಢಿಯಾಗಿದೆಯೋ? ನಿಮ್ಮ ಜೀವಿತದಲ್ಲಿ ಕೂಟಗಳಿಗೆ ಯಾವ ಸ್ಥಾನವಿದೆ? ಇತರರು ಕ್ರಮವಾಗಿ ಕೂಟಗಳಿಗೆ ಹಾಜರಾಗುವಂತೆ ನೀವು ಪ್ರೋತ್ಸಾಹನೆ ಕೊಡುತ್ತೀರೋ? ಜ್ಞಾಪಕಕ್ಕೆ ಹಾಜರಾದವರು ಕ್ರಮವಾಗಿ ಕೂಟಕ್ಕೆ ಹಾಜರಾಗುವಂತೆ ನೀವು ಉತ್ತೇಜನ ಕೊಟ್ಟಿದ್ದೀರೋ?
3 ನಮ್ಮ ನಿತ್ಯದ ದಿನಚರ್ಯೆಯು ಏನೇ ಇರಲಿ, ಪೌಲನ ಸಲಹೆಯನ್ನು ದುರ್ಲಕ್ಷಮಾಡ ಸಾಧ್ಯವಿಲ್ಲ. ಅಸ್ವಸ್ಥದ ಕಾರಣದಿಂದ ಯಾ ತನ್ನ ಅಂಕೆಗೆಮೀರಿದ ಪರಿಸ್ಥಿತಿಗಳಿಂದಾಗಿ ಕ್ರೈಸ್ತನೊಬ್ಬನು ಕೆಲವುಸಾರಿ ಕೂಟಗಳಿಗೆ ತಪ್ಪಬಹುದಾದರೂ, ಖಂಡಿತವಾಗಿ ಅದು ಅವನ ರೂಢಿಯಾಗಿರಬಾರದು. (ರೋಮಾ. 2:21) ಮಾಡಲಿರುವ ಹಂಗುಗಳು, ದೇವಪ್ರಭುತ್ವ ಚಟುವಟಿಕೆಗಳೂ ಸೇರಿ, ಅನೇಕ ಇವೆಯಾದರೂ ಅಧಿಕ ಮಹತ್ವದ ವಿಷಯಗಳು ಯಾವುವೆಂದು ನಿರ್ಧರಿಸುವ ಅಗತ್ಯವು ಕ್ರೈಸ್ತನಿಗದೆ. (ಫಿಲಿ. 1:10) ಕ್ರೈಸ್ತನಿಗೆ ಅಧಿಕ ಮಹತ್ವವಾದ ವಿಷಯಗಳಲ್ಲಿ ಕೂಟಗಳೂ ಸೇರಿರುತ್ತವೆ ಮತ್ತು ನಮ್ಮ ಆತ್ಮಿಕ ಕ್ಷೇಮಕ್ಕಾಗಿ ಅವು ಅತ್ಯಾವಶ್ಯಕ.
ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿರಿ
4 ಪೌಲನು ರೋಮಾಪುರದವರಿಗೆ ಬರೆದಾಗ, ಅವರನ್ನು ನೋಡುವ ತೀವ್ರಾಪೇಕ್ಷೆಯನ್ನು ತಿಳಿಸಿದನು. ಏಕೆ? ಏಕಂದರೆ ಅವರಿಗೇನಾದರೂ ಆತ್ಮಿಕ ದಾನವನ್ನು ಒದಗಿಸಿ ಅವರನ್ನು “ದೃಢಮಾಡುವದಕ್ಕೋಸ್ಕರವೇ.” (ರೋಮಾ. 1:11) ಅವರಿಗೆ ಕೇವಲ ಒಂದು ಪತ್ರವನ್ನು ಬರೆಯುವದರಲ್ಲಿ, ಅವರಿಗೆ ಓದಲು ಲಿಖಿತ ಸಮಾಚಾರವನ್ನು ನೀಡುವುದರಲ್ಲಿ, ಅವನು ತೃಪ್ತನಾಗಲಿಲ್ಲ. ಸಹವಾಸವು ಪ್ರಾಮುಖ್ಯ, ಆವಶ್ಯಕ, ಎಂದವನಿಗೆ ತಿಳಿದಿತ್ತು ಯಾಕಂದರೆ ಮುಂದರಿಸಿ ಅವನಂದದ್ದು: “ಈ ಮೂಲಕ ಪರಸರ್ವ ಪ್ರೋತ್ಸಾಹನೆಯ ವಿನಿಮಯವಾಗುವಂತೆ” ಅಥವಾ ರೆಫರೆನ್ಸ್ ಬೈಬಲ್ ಪಾದಟಿಪ್ಪಣಿ ಹೇಳುವ ಪ್ರಕಾರ, “ಪರಸ್ಪರ ಉತ್ತೇಜನ ಹೊಂದುವಂತೆ” ಅದು ಬೇಕಿತ್ತು. (ರೋಮಾ. 1:12) ಕ್ರಿಸ್ತೀಯ ಸಹವಾಸದ ಮೂಲಕ ದೊರೆಯುವ ಪ್ರೋತ್ಸಾಹನೆಯ ಅಗತ್ಯವನ್ನು ಪೌಲನು ಅಪೋಸ್ತಲನಿದ್ದಾಗ್ಯೂ, ಮನಗಂಡನು.
5 ಅದೇ ರೀತಿಯಲ್ಲಿ, ನಮ್ಮ ಕೂಟಗಳಲ್ಲಿ ನಾವು ಒಬ್ಬರನ್ನೊಬ್ಬರು ಪ್ರೀತಿ ಮತ್ತು ಸತ್ಕಾರ್ಯಗಳಿಗೆ ಪ್ರೇರೇಪಿಸಬೇಕು. ಒಂದು ಸ್ನೇಹದ ನಸುನಗು ಮತ್ತು ಬೆಚ್ಚಗೆನ ವಂದನೆಯು ಇತರರ ಮೇಲೆ ಸಕಾರಾತ್ಮಕ ಪರಿಣಾಮವನ್ನು ಹಾಕಬಲ್ಲದು. ಭಕ್ತಿ ವೃದ್ಧಿಯ ಮಾತುಗಳು, ಚೆನ್ನಾಗಿ ತಯಾರಿಸಿದ ಕಾರ್ಯಕ್ರಮ ಭಾಗಗಳು, ಇತರರು ಮಾಡುತ್ತಿರುವ ಆತ್ಮಿಕ ಪ್ರಗತಿಯನ್ನು ಕಾಣುವಿಕೆ ಮತ್ತು ಕೂಟಗಳಲ್ಲಿ ಸಹೋದರರೊಂದಿಗೆ ಬರೇ ಕೂಡಿಬರುವುದು ಸಹಾ ಅತ್ಯಂತ ಪ್ರೋತ್ಸಾಹನೀಯವಾಗಬಲ್ಲದು. ದಿನದಂತ್ಯದಲ್ಲಿ ನಾವು ದಣಿದಿದ್ದರು ಕೂಡಾ, ಸಾಮಾನ್ಯವಾಗಿ ಕೂಟಕ್ಕೆ ಹಾಜರಾದ ಮೇಲೆ ನಮಗೆ ಎಷ್ಟೋ ಹಿತಕರವೆನಿಸುತ್ತದೆ. ನಮ್ಮ ಸಹೋದರರು ನಮಗೆ ತೋರಿಸುವ ಕ್ರೈಸ್ತ ಸ್ನೇಹ ಮತ್ತು ಪ್ರೀತಿಯು “ನಮ್ಮ ಮುಂದಿರುವ ಓಟವನ್ನು ತಾಳ್ಮೆಯಿಂದ ಓಡುವಂತೆ” ನಮಗೆ ಉತ್ತೇಜನ ಕೊಡುತ್ತದೆ. (ಇಬ್ರಿ. 12:1) ದೇವರ ವಾಕ್ಯಕ್ಕೆ ಕಿವಿಗೊಟ್ಟುಕೇಳುವ ಮಾಲಕ ನಮ್ಮ ನಿರೀಕ್ಷೆಯ ಕುರಿತಾದ ಬಹಿರಂಗ ಘೋಷಣೆಯನ್ನು ನಿಶ್ಚಂಚಲರಾಗಿ ಮಾಡುವಂತೆ ಸಿದ್ಧರಾಗುವೆವು. ನಿಜವಾಗಿಯೂ ಕೂಟಗಳಲ್ಲಿ ಹಾಜರಿರುವದರಿಂದ ಬರುವ ಆಶೀರ್ವಾದಗಳೋ ಅನೇಕ.
6 ಎಂದಿಗಿಂತಲೂ ಹೆಚ್ಚಾಗಿ ಈಗ, ನಾವು ನಮ್ಮ ನಂಬಿಕೆಯಲ್ಲಿ ದೃಢರಾಗಿ ನಿಂತು ಇತರರನ್ನು ಪ್ರೀತಿ ಮತ್ತು ಸತ್ಕಾರ್ಯಕ್ಕೆ ಪ್ರೇರೇಪಿಸಬೇಕು. ಸಭೆಯ ಎಲ್ಲಾ ಕೂಟಗಳಿಗೆ ಹಾಜರಾಗಲು ನಮ್ಮ ಪ್ರಯತ್ನದಲ್ಲಿ ನಾವು ಶ್ರದ್ಧೆಯುಳ್ಳವರಾಗಬೇಕು. ಕೂಟಗಳಲ್ಲಿ ಕೂಡಿಬರುವದನ್ನು ಬಿಟ್ಟುಬಿಡುವ ರೂಢಿ ಯಾ ಹವ್ಯಾಸಕ್ಕೆ ಬೀಳಲು ನಾವು ಬಯಸುವುದಿಲ್ಲ. ಇತರರಿಗೆ, ಜ್ಞಾಪಕ ಉಪಸ್ಥಿತರಿಗೂ, ಕೂಟಗಳಿಗೆ ಕ್ರಮವಾಗಿರುವಂತೆ ಸಹಾಯ ಮತ್ತು ಉತ್ತೇಜನ ಕೊಡಲು ನಾವು ಮನಸಾರೆ ಪ್ರಯತ್ನಿಸಬೇಕು. ಈ ರೀತಿಯಲ್ಲಿ, ನಾವು ಇತರರಲ್ಲಿ ನಮಗಿರುವ ಪ್ರೀತಿಯನ್ನು ಮತ್ತು ಕ್ರೈಸ್ತ ಕೂಟಗಳಿಗಾಗಿ ನಮಗಿರುವ ಗಣ್ಯತೆಯನ್ನು ತೋರಿಸುವವರಾಗುವೆವು.