ಹೊಸ ಅಧಿವೇಶನ ಬಿಡುಗಡೆಗಳ ಪರಿಚಯ ಮಾಡಿಕೊಳ್ಳಿರಿ
1 ಎರಡು ಹೊಸ ಬಿಡುಗಡೆಗಳು, ಒಂದು ಪುಸ್ತಕ ಮತ್ತು ಒಂದು ಬ್ರೊಷೂರ್, ನಮ್ಮ ಆತ್ಮಿಕ ಆಹಾರದ ಸಮೃದ್ಧ ಸಂಗ್ರಹಕ್ಕೆ ಸೇರಿಸಲ್ಪಟ್ಟವು. “ಶುದ್ಧ ಭಾಷೆ” ಜಿಲ್ಲಾ ಸಮ್ಮೇಳನದಲ್ಲಿ ಹೊರಡಿಸಲ್ಪಟ್ಟ ಈ ಹೊಸ ಪ್ರಕಾಶನಗಳು ಶುದ್ಧ ಭಾಷೆಯನ್ನು ಅಧಿಕ ಸ್ಪಷ್ಟವಾಗಿ ಮಾತಾಡುವಂತೆ ಸಹಾಯ ಮಾಡುತ್ತಾ ಇವೆ ಮಾತ್ರವಲ್ಲ ನಮ್ಮ ಕ್ಷೇತ್ರ ಸೇವೆಯಲ್ಲಿಯೂ ಪ್ರಬಲ ಪ್ರಭಾವವನ್ನು ನಿಶ್ಚಯವಾಗಿಯೂ ಹಾಕಲಿದೆ.—ಚೆಫ. 3:9.
2 ಹೊಸ ಬ್ರೊಷೂರನ್ನು ಬಿಡುಗಡೆ ಮಾಡುವಾಗ ಅಧಿವೇಶನದ ಭಾಷಕನು ಅಂದದ್ದು: “ಕ್ಷೇತ್ರಸೇವೆ—ಮನೆಮನೆಯ ಸೇವೆ, ಪುನಃ ಸಂದರ್ಶನೆ ಮತ್ತು ಬೈಬಲಭ್ಯಾಸಗಳಲ್ಲಿ—ರಕ್ತವನ್ನು ನಾವೇಕೆ ಸೇವಿಸುವುದಿಲ್ಲವೆಂಬ ಪ್ರಶ್ನೆ ನಮಗೆ ಆಗಾಗ ಕೇಳಲ್ಪಡುತ್ತದೆ. ಆ ಪ್ರಶ್ನೆಯನ್ನು ಉತ್ತರಿಸಲು ನಿಮಗೆ ಸಹಾಯಕ್ಕಾಗಿ ಒಂದು ಹೊಸ ಪ್ರಕಾಶನವನ್ನು ಹೊರಡಿಸಲು ನಾವು ಸಂತೋಷ ಪಟ್ಟೆವು. ಹೌ ಕ್ಯಾನ್ ಬ್ಲಡ್ ಸೇವ್ ಯುವರ್ ಲೈಫ್? ಎಂಬ ಪತ್ರಿಕೆ-ಗಾತ್ರದ ಬ್ರೊಷೂರೇ ಅದು.” ಈ ಬ್ರೊಷೂರನ್ನು ಜಾಗ್ರತೆಯಿಂದ ಓದುವ ಮೂಲಕ ಅದರಲ್ಲಿರುವ ಮಹತ್ವದ ಸಮಾಚಾರವನ್ನು ನಿಮ್ಮದಾಗಿ ಮಾಡಿರುವಿರೋ? ಹಾಗೆ ಮಾಡುವುದು, ನಿಮ್ಮ ಸ್ವಂತ ನಂಬಿಕೆಯನ್ನು ಬಲಗೊಳಿಸುವುದಕ್ಕಾಗಿ ಮತ್ತು ರಕ್ತದ ವಿಷಯದಲ್ಲಿ ಕ್ರೈಸ್ತನ ನೋಟವನ್ನು ಇತರರು ತಿಳಿಯುವಂತೆ ಸಹಾಯ ಮಾಡಲಿಕ್ಕಾಗಿ ಅತಿ ಮಹತ್ವದ್ದು.—ಅಪೊ. 15:28, 29.
3 ಈ ಬ್ರೊಷೂರಿನಲ್ಲಿರುವ ಸಪ್ರಮಾಣ್ಯ ದಾಖಲೆಗಳುಳ್ಳ ಸಮಾಚಾರವು ನಿಮ್ಮ ನಿಲುವನ್ನು ಮತ್ತು ಇಷ್ಟವನ್ನು ಯಾವುದೇ ಡಾಕ್ಟರರಿಗೆ ವಿವರಿಸಲು ನಿಮ್ಮನ್ನು ಇನ್ನಷ್ಟು ಸನ್ನದ್ಧರಾಗಿ ಮಾಡುವುದು. ಆದರೂ ಈ ಹೊಸ ಬ್ರೊಷೂರ್ ಮುಖ್ಯವಾಗಿ ಡಾಕ್ಟರರಿಗೆ ಅಥವಾ ವಕೀಲರಿಗಾಗಿ ಮಾತ್ರವೇ ಅಲ್ಲ. ಅದು ವಿಶಿಷ್ಟವಾಗಿ ಸಾರ್ವಜನಿಕರಿಗಾಗಿ ರಚಿಸಲ್ಪಟ್ಟು, ಬರೆಯಲ್ಪಟ್ಟಿದೆ. ಅದರ ಈ ಇಮ್ಮಡಿ ಉದ್ದೇಶವು ಅದನ್ನು, ಈ ಕಾಲದಲ್ಲಿ ನಮಗಾಗಿರುವ ಅತ್ಯಂತ ಮೂಲ್ಯತೆಯ ಉಪಕರಣವಾಗಿ ಮಾಡುತ್ತದೆ. ಇದರ ಒಂದೆರಡು ಪ್ರತಿಗಳನ್ನು ನೀವು ನಿಮ್ಮ ಕ್ಷೇತ್ರ ಸೇವೆಯಲ್ಲಿ ನಿಮ್ಮೊಂದಿಗೆ ಒಯ್ಯುವಂತೆ ಸೂಚಿಸಲಾಗಿದೆ. ನಿಮ್ಮ ವೈಯಕ್ತಿಕ ಪ್ರಯೋಜನಕ್ಕಾಗಿ ಮತ್ತು ರಕ್ತಕ್ಕೆ ಯೋಗ್ಯ ಗೌರವವನ್ನು ಇತರರು ತೋರಿಸುವಂತೆ ಸಹಾಯ ಮಾಡಲು, ಈ ಬೆಲೆಯಳ್ಳ ಸಮಾಚಾರದ ಪೂರ್ಣ ಉಪಯೋಗವನ್ನು ಮಾಡಿರಿ.
ಒಂದು ಹೊಸ ಪುಸ್ತಕ
4 ನಮ್ಮ ಶುಶ್ರೂಷೆಯಲ್ಲಿ ನಮಗೆ ಸಹಾಯವಾಗಲು, ಮ್ಯಾನ್ಕೈಂಡ್ಸ್ ಸರ್ಚ್ ಫಾರ್ ಗಾಡ್ ಎಂಬ ಹೊಸ ಪುಸ್ತಕದ ಮೂಲ್ಯತೆಯನ್ನು ಸ್ವಲ್ಪ ಊಹಿಸಿಕೊಳ್ಳಿರಿ. ಅದರ ಅಧ್ಯಯನವು, ಇತರ ಧರ್ಮಗಳ ಸ್ಪಷ್ಟವಾದ ತಿಳುವಳಿಕೆ ಮತ್ತು ಅವುಗಳ ಚಾರಿತ್ರಿಕ ಹಿನ್ನೆಲೆಯನ್ನು ನಮಗೆ ಕೊಡುತ್ತದೆ. ಕ್ರೈಸ್ತ ಪ್ರಪಂಚದ ಜನರಿಗೆ ಹಾಗೂ ಇತರ ಧರ್ಮಾವಲಂಬಿಗಳಿಗೆ ಸಾರಲು ಅದು ನಮ್ಮನ್ನು ಅಧಿಕ ಸನ್ನದ್ಧರಾಗುವಂತೆ ಸಹಾಯ ಮಾಡುತ್ತದೆ. ಈ 20ನೇ ಶತಮಾನದಲ್ಲಿ ಜನಸಂಖ್ಯೆಯ ಪ್ರಚಂಡ ಮುನ್ನಡೆಯಿಂದಾಗಿ, ಮನೆಯಿಂದ ಮನೆಗೆ ಸಾರುವಾಗ ನಮಗೆ ಅನೇಕ ವಿವಿಧ ಭಾಷೆಗಳ ಮತ್ತು ಧರ್ಮಗಳ ಜನರು ನಮಗೆ ಸಿಗಬಹುದು. ಈ ಜನರ ನಂಬಿಕೆಗಳ ಮತ್ತು ಆಚಾರಗಳ ಪರಿಚಯವು ನಮಗಿಲ್ಲದಾಗ, ನಿಜ ಪಂಥಾಹ್ವಾನವಾಗಿ ಅದು ಪರಿಣಮಿಸಬಹುದು. ಈ ಹೊಸ ಪುಸ್ತಕದ ಸಹಾಯ ನಮಗಿರುವಲ್ಲಿ, ವಿವಿಧ ಧಾರ್ಮಿಕ ಹಿನ್ನೆಲೆಗಳ ಜನರು ಕ್ಷೇತ್ರದಲ್ಲಿ ಸಿಗುವಾಗ ನಾವು ಧೈರ್ಯಗೆಡೆವು.
5 ಈ ಹೊಸ ಪುಸ್ತಕದಲ್ಲಿರುವ ಸಮಾಚಾರವು, ಚರ್ಚಿಸಲ್ಪಟ್ಟಿರುವ ವಿಷಯಗಳನ್ನು ಪೂರ್ಣ ತಿಳಿದಿರುವ ವ್ಯಕ್ತಿಗಳಿಂದ ಸಂಶೋಧಿಸಲ್ಪಟ್ಟದ್ದೂ ಪರಾಮರ್ಶಿಸಲ್ಪಟ್ಟದ್ದೂ ಆಗಿದೆ. ಆದ್ದರಿಂದ, ಪುಸ್ತಕದಲ್ಲಿ ಕಂಡುಬರುವ ವಿಚಾರಗಳನ್ನು ಉಪಯೋಗಿಸುವಾಗ ಅಧಿಕಾರಯುಕ್ತವಾಗಿ ನಾವು ಮಾತಾಡ ಸಾಧ್ಯವಿದೆ. ಇಂಥಾ ಸಮಾಚಾರವು ಈ ಸಮಯದಲ್ಲಿ ಒದಗಿಸಲ್ಪಟ್ಟಿರುವುದು, ಸಕಲ ಜನಾಂಗಗಳಲ್ಲಿರುವ ಜನರ ಕಡೆಗೆ ಯೆಹೋವನಿಗಿರುವ ಮಹಾ ಪ್ರೀತಿಯ ಇನ್ನೊಂದು ರುಜುವಾತು ನಿಶ್ಚಯ. ಈ ಹೊಸ ಪ್ರಕಾಶನದ ಒಳ್ಳೇ ಪರಿಚಯ ಮಾಡಲು ನಾವು ವಿಶೇಷ ಪ್ರಯತ್ನಗಳನ್ನು ಮಾಡೋಣ ಮತ್ತು ಅನಂತರ, ವಿವಿಧ ರಾಷ್ಟ್ರೀಯ ಮತ್ತು ಧಾರ್ಮಿಕ ಹಿನ್ನೆಲೆಗಳಿರುವ ಪ್ರಾಮಾಣಿಕ ಜನರಿಗೆ ಸಹಾಯ ಮಾಡುವುದರಲ್ಲಿ ಅದನ್ನು ಪರಿಣಾಮಕಾರಿಯಾಗಿ ಉಪಯೋಗಿಸೋಣ. ಹೌದು, ಈ ಹೊಸ ಪ್ರಕಾಶನವನ್ನು ಪರಿಣಾಮಕಾರಿಯಾಗಿ ಉಪಯೋಗಿಸುವಿಕೆಯು, ನಮ್ಮ ನೇಮಿತ ಕ್ಷೇತ್ರದಲ್ಲಿ ನಮಗೆ ದೊರೆಯುವ ಎಲ್ಲಾ ರೀತಿಯ ಜನರಿಗೆ ಸುವಾರ್ತೆಯನ್ನು ನಾವು ತಿಳಿಯಪಡಿಸುತ್ತೇವೆಂಬ ಪೂರ್ಣ ತೃಪ್ತಿಯನ್ನು ನಮಗೆ ಕೊಡುವುದು.—ಮತ್ತಾ. 28:19, 20; ತೀತ 2:11.