ನಮ್ಮ ಪಯನೀಯರರನ್ನು ಗಣ್ಯಮಾಡುವುದು
1 ದೇವರ ರಾಜ್ಯದ ಜೊತೆ ಸೇವಕರು ಒಬ್ಬರನ್ನೊಬ್ಬರು ಬಲಪಡಿಸುತ್ತಾರೆ. (ಕೊಲೊ. 4:11) ಕ್ರೈಸ್ತ ಸಭೆಯ ಮುಖ್ಯ ಕೆಲಸವು ಸುವಾರ್ತೆಯನ್ನು ಸಾರುವುದು ಎಂಬದನ್ನು ನಾವು ಪರಿಗಣಿಸುವಾಗ ನಮ್ಮ ನಡುವೆ ಇರುವ, ಪೂರ್ಣ ಸಮಯದ ಸೇವಕರನ್ನು ಗಣ್ಯಮಾಡಲು ನಮಗೆ ನಿರ್ಬಂಧಕ ಕಾರಣಗಳಿವೆ.—ಮಾರ್ಕ 13:10; ರೋಮಾ. 16:2; ಫಿಲಿ. 4:3.
ಯಾಕೆ?
2 ಒಂದು ನೇರವಾದ ರೀತಿಯಲ್ಲಿ ಪಯನೀಯರರು, ಸಾರುವ ಕೆಲಸದ ವಿವಿಧ ಮುಖಗಳಲ್ಲಿ, ಕಡಿಮೆ ಅನುಭವೀ ಪ್ರಚಾರಕರೊಂದಿಗೆ ಕೆಲಸಮಾಡಿ ಸಭೆಯನ್ನು ಬಲಪಡಿಸುತ್ತಾರೆ. ಇದರಲ್ಲಿ ಪತ್ರಿಕಾ ಸಾಕ್ಷೀ ಕಾರ್ಯ, ಪುನರ್ಭೇಟಿಗಾಗಿ ತಯಾರಿಸುವುದು ಮತ್ತು ಅದನ್ನು ಮಾಡುವುದು, ಬೈಬಲಧ್ಯಯನ ಆರಂಭಿಸುವುದು ಮತ್ತು ಅದನ್ನು ಪರಿಣಾಮಕಾರಿಯಾಗಿ ನಡಿಸುವುದು ಸೇರಿರುತ್ತವೆ. ಅದಲ್ಲದೆ, ಪಯನೀಯರರು ಅನೌಪಚಾರಿಕ ಸಾಕ್ಷಿಯನ್ನು ಧೈರ್ಯದಿಂದ ನೀಡುವದರಲ್ಲಿ ಮಾದರಿಯನ್ನಿಡ ಸಾಧ್ಯವಿದೆ. ವಾರ ಮಧ್ಯದ ಗುಂಪುಸೇವೆಯ ಏರ್ಪಾಡಿಗೆ ಅವರ ಬೆಂಬಲವು, ಇತರರಿಗೆ ಸಹಾಯಕರಾಗುವ ಸಂದರ್ಭವನ್ನು ಅವರಿಗೆ ಕೊಡುತ್ತದೆ. ಕ್ಷೇತ್ರದಲ್ಲಿ ಅವರ ಸಕಾರಾತ್ಮಕ ಪ್ರಭಾವವು ವಿಶೇಷವಾಗಿ, ವಾರಾಂತ್ಯಗಳ ಸೇವೆಯನ್ನು ಅವರು ಬೆಂಬಲಿಸುವಾಗ ತೋರಿಬರುತ್ತದೆ ಹೇಗಂದರೆ ಇತರ ಹೆಚ್ಚಿನ ಪ್ರಚಾರಕರು ಆ ಸೇವೆಯಲ್ಲಿ ಪಾಲಿಗರಾಗುವುದು ಆಗಲೇ.
3 ಕ್ಷೇತ್ರವನ್ನು ಪೂರ್ಣವಾಗಿ ಮತ್ತು ಆಗಿಂದಾಗ್ಯೆ ಆವರಿಸುವ ಮೂಲಕವೂ ಪಯನೀಯರರು ಸಭೆಗಳಿಗೆ ಸಹಾಯ ಕೊಡುತ್ತಾರೆ. ಇದು ನಮ್ಮ ಸಂದೇಶದ ಒಳ್ಳೇ ಪರಿಚಯವನ್ನು ಜನರಿಗೆ ಕೊಡುತ್ತದೆ ಮತ್ತು ನಮ್ಮ ಸಂದರ್ಶನೆಯ ವೇಳೆ ಅವರು ಗಾಬರಿಗೊಳ್ಳುವದಿಲ್ಲ ಯಾಕೆಂದರೆ ನಾವಾರೆಂದು ಅವರಿಗೆ ಗೊತ್ತಿದೆ. ಆಸಕ್ತ ಜನರೊಂದಿಗೆ ಪುಸ್ತಕ ನೀಡುತ್ತಾ, ಆಸಕ್ತಿಯನ್ನು ಬೆಳಸುತ್ತಾ, ಪಯನೀಯರರು ಕ್ಷೇತ್ರದಲ್ಲಿ ಕಳೆಯುವ ಅನೇಕ ತಾಸುಗಳು—ಕಾರ್ಯಥಃ ಸತ್ಯದ ಬೀಜಗಳನ್ನು ನೆಡುವುದು ಮತ್ತು ನೀರು ಹೊಯ್ಯುವುದು—ಕ್ಷೇತ್ರವನ್ನು ಅಧಿಕ ಫಲಪ್ರಾಪ್ತಿಗೊಳಿಸುವುದು.—1 ಕೊರಿ. 3:6.
ಸಭೆಯಲ್ಲಿ
4 ನಂಬಿಗಸ್ತ ಪಯನೀಯರರ ಹುರುಪು ಮತ್ತು ಉತ್ಸಾಹದಿಂದ ಹೃದಯ ಸ್ವರ್ಶಿತರಾದ ಕಾರಣ ಅನೇಕರು ಪೂರ್ಣ ಸಮಯದ ಸೇವೆಗಿಳಿಯಲು ಉತ್ತೇಜನ ಪಡೆದಿದ್ದಾರೆ. ಸಭೆಯಲ್ಲಿ ಬೇರೆ ಯಾರೂ ಪಯನೀಯರರು ಇಲ್ಲದ ಕಾರಣ ಒಬ್ಬಾಕೆ ಸಹೋದರಿ, ಕ್ರಮದ ಪಯನೀಯರಳಾಗಲು ಅನುಮಾನಿಸಿದಳು. ಆದರೆ ಸರ್ಕಿಟ್ ಸೇವಕನು ಉತ್ತೇಜನ ಕೊಟ್ಟಾಗ ಅವಳು ಮುಂದರಿದು ಪಯನೀಯರಳಾದಳು. ಇತರರೂ ಹಿಂಬಾಲಿಸಿದರು. ಈಗ ಸಭೆಯಲ್ಲಿ ಹಲವಾರು ಹುರುಪಿನ ಪಯನೀಯರರು ಇದ್ದಾರೆ.
5 ಅಕ್ರಮ ಅಥವಾ ನಿಷ್ಕ್ರಿಯರಾದ ಪ್ರಚಾರಕರಿಗೆ ಸಹಾಯ ಮಾಡಲು ಕೆಲವು ಸಾರಿ ಹಿರಿಯರು ಪಯನೀಯರರನ್ನು ಕೇಳಿಕೊಳ್ಳುತ್ತಾರೆ. ಈ ಸಹಾಯದಲ್ಲಿ ವ್ಯಕ್ತಿಯೊಂದಿಗೆ ಬೈಬಲು ಅಭ್ಯಾಸ ನಡಿಸುವದೂ ಸೇರಿರಬಹುದು. ಹೀಗೆ, ಪಯನೀಯರನ ನಂಬಿಕೆ ಮತ್ತು ಹುರುಪು, ಸತ್ಯಕ್ಕಾಗಿ ಆ ವ್ಯಕ್ತಿಯ ಪ್ರೀತಿಯನ್ನು ಪುನಃ ಚೇತರಿಸಲು ನೆರವಾಗುವುದು ಮತ್ತು ಅವನು ತನ್ನ ಸಮರ್ಪಣೆಯ ಹಂಗನ್ನು ಪೂರೈಸುವ ಕೆಲಸಕ್ಕೆ ಸಕ್ರಿಯನಾಗಲು ಸಹಾಯವಾಗುವುದು.—1 ಥೆಸಲೊನಿಕ 5:14.
ಪಯನೀಯರರನ್ನು ಪ್ರೋತ್ಸಾಹಿಸಿರಿ
6 ಇತರರನ್ನು ಉತ್ತೇಜಿಸುವದರಲ್ಲಿ ಹೆಚ್ಚಿನದನ್ನು ಮಾಡುವಾಗ ಪಯನೀಯರಿಗೆ ಸ್ವತಃ ಸೇವೆಯಲ್ಲಿ ಸಂತೋಷದಿಂದ ಮುಂದರಿಯಲು ಉತ್ತೇಜನದ ಅಗತ್ಯವಿದೆ. (ರೋಮಾ. 1:12) ಪಯನೀಯರ ಶುಶ್ರೂಷೆಯ ಕುರಿತು ನೀವು ಸಕಾರಾತ್ಮಕವಾಗಿ ಮಾತಾಡುತ್ತೀರೋ? ಪಯನೀಯರರನ್ನು, ಅವನ ಅಥವಾ ಅವಳ ಸ್ವ-ತ್ಯಾಗದ ಸೇವೆಗಾಗಿ ನೀವು ಕೊನೆಯ ಸಾರಿ ಪ್ರಶಂಸಿಸಿದ್ದು ಯಾವಾಗ? ಪಯನೀಯರರು ಸಾಮಾನ್ಯವಾಗಿ, ಕೆಲವೇ ಪ್ರಚಾರಕರು ಸೇವೆಮಾಡುವ ದಿನದ ಆ ತಾಸುಗಳಲ್ಲಿ ಯಾರಾದರೂ ತಮ್ಮೊಂದಿಗೆ ಸೇವೆ ಮಾಡಲು ಇರುವುದನ್ನು ಗಣ್ಯಮಾಡುತ್ತಾರೆ. ನೀವು ಪಯನೀಯರರೊಂದಿಗೆ ಜತೆಗೂಡಿ, ಸಾರುವ ಕಾರ್ಯದ ಬೆಂಬಲಕ್ಕಾಗಿ ಹೆಚ್ಚು ತಾಸುಗಳನ್ನು ಪ್ರಾಯಶಃ ಹಾಕಬಲ್ಲಿರೋ?
7 ಪಯನೀಯರರನ್ನು ಬೇರೆ ಯಾವ ರೀತಿಯಲ್ಲಿ ನೀವು ಉತ್ತೇಜಿಸಬಹುದು? ಪ್ರಶಂಸೆಯನ್ನು ಕೊಡುವದಲ್ಲದೆ, ಅವರೊಂದಿಗೆ ಒಂದು ಊಟದಲ್ಲಿ ಪಾಲಿಗರಾಗುವ ಮೂಲಕ, ಅವರ ಪ್ರಯಾಣದ ಖರ್ಚಿಗೆ ಯಾ ಬೇರೆ ವಿಧದಲ್ಲಿ ನಿಮ್ಮ ಶಕ್ತ್ಯಾನುಸಾರ ಸ್ವಯಂ ಸಹಾಯ ನೀಡುವ ಮೂಲಕ ಸ್ಫುಟ ಪ್ರೋತ್ಸಾಹವನ್ನು ನೀಡಬಲ್ಲಿರಿ.—1 ಥೆಸ. 5:12, 13 ಹೋಲಿಸಿರಿ.
8 ಹಿರಿಯರು ಮತ್ತು ಶುಶ್ರೂಷೆ ಸೇವಕರು ಸಭೆಯಲ್ಲಿ ನಾಯಕತ್ವವನ್ನು ವಹಿಸುವಾಗ ಪಯನೀಯರರು ಮತ್ತು ಪ್ರಚಾರಕರು, ಸೇವೆಯ ಸುಸಂಸ್ಥಾಪಿತ ಏರ್ಪಾಡುಗಳಿಗೆ ಪೂರ್ಣ ಬೆಂಬಲವನ್ನು ಕೊಡುವರು. ಹೀಗೆ, ನಾವೆಲ್ಲರು ನಮ್ಮಲ್ಲಿ ಯಾವ ವರಗಳಿವೆಯೋ ಅವನ್ನು, “ಎಲ್ಲರ ಸೇವೆಯಲ್ಲಿ” ಉಪಯೋಗಿಸುವವರಾಗುವೆವು.—1 ಪೇತ್ರ 4:10, 11.