ಬೈಬಲಧ್ಯಯನ ಆರಂಭಿಸಲು ಎಚ್ಚರವಿರ್ರಿ
1 ಮನೆ ಬೈಬಲಭ್ಯಾಸ ಆರಂಭಿಸುವುದು ಮತ್ತು ನಡಿಸುವುದು ಯೆಹೋವನ ಸಾಕ್ಷಿಗಳಾದ ನಮ್ಮ ನಿಯೋಗದ ಭಾಗವು. (ಮತ್ತಾ. 28:19, 20) ಆದ್ದರಿಂದ, ಇದನ್ನು ಮಾಡುವುದರಲ್ಲಿ ದೇವರ ಜತೆ ಕೆಲಸಗಾರರಲ್ಲಿ ನೀವು ಒಬ್ಬರಾಗುವಿರೋ? (1 ಕೊರಿ. 3:9) ವಿಶ್ವವೆಲ್ಲಾದರಲ್ಲಿ ಅತ್ಯಂತ ಶ್ರೇಷ್ಟನಾದ ವ್ಯಕ್ತಿಯನ್ನು ಇತರರು ತಿಳಿಯುವಂತೆ ಸಹಾಯ ಮಾಡುವುದು ಅದೆಷ್ಟು ದೊಡ್ಡ ಸುಯೋಗವು!
2 ತೀವ್ರ-ಬದಲಾಗುತ್ತಿರುವ ಲೋಕ ಸಂಭವಗಳಿಗೆ ಸಂಬಂಧಿಸಿದ ಎಷ್ಟೋ ಸಮಸ್ಯೆಗಳಿರಲಾಗಿ ಪ್ರಾಮಾಣಿಕ ಜನರು, ಇವೆಲ್ಲಾ ಯಾಕೆ ಸಂಭವಿಸುತ್ತಿವೆ ಎಂಬದಕ್ಕೆ ಉತ್ತರವನ್ನು ಹುಡುಕುತ್ತಿದ್ದಾರೆ. ಬಹಳ ಹಿಂದೆಯೇ ಯೆಹೋವನು ಅವರ ಪ್ರಶ್ನೆಗಳಿಗೆ ಉತ್ತರವನ್ನು ಒದಗಿಸಿರುತ್ತಾನೆ. ಪ್ರಾಮಾಣಿಕ ಜನರು ದೇವರ ವಾಕ್ಯದಿಂದ ಬೋಧಿಸಲ್ಪಡುವಾಗ ಆದರಣೆಯು ಅವರಿಗೆ ಸಿಗುತ್ತದೆ. ಆದ್ದರಿಂದ, ಬೈಬಲಧ್ಯಯನ ಆರಂಭಿಸುವ ಸಂದರ್ಭಗಳಿಗೆ ನಾವು ಎಚ್ಚತ್ತಿರಬೇಕು.—ಜ್ಞಾನೋ. 3:27.
ಸಂದರ್ಭಗಳಿಗೆ ಎಚ್ಚರವಿರ್ರಿ
3 ಸತ್ಯದಲ್ಲಿಲ್ಲದ ಆಪ್ತಸಂಬಂಧಿಕ ಯಾ ಪರಿಚಯಸ್ಥನೊಂದಿಗೆ ಬೈಬಲ್ ಅಭ್ಯಾಸ ನಡಿಸುವ ಕುರಿತು ನೀವೆಂದಾದರೂ ಯೋಚಿಸಿದ್ದೀರೋ? ನೀವು ಅವರನ್ನು ತಿಳಿದಿರುವುದರಿಂದ, ವಿಷಯವನ್ನು ಅವರೊಂದಿಗೆ ಚರ್ಚಿಸಲು ಯಾವುದು ಉತ್ತಮ ಸಮಯವೆಂಬ ವಿವೇಚನೆಯು ನಿಮಗೆ ಸಿಕ್ಕುತ್ತದೆ. ಒಂದು ಚೆನ್ನಾಗಿ ಆಯ್ದ ಪ್ರಶ್ನೆ ಯಾ ಸಮಯೋಚಿತ ಮಾತು, ಸತ್ಯದಲ್ಲಿ ಅವರ ಆಸಕ್ತಿಯನ್ನು ಕೆರಳಿಸಬಹುದೆಂಬದನ್ನು ಮನಸ್ಸಿನಲ್ಲಿಡಿರಿ. ವ್ಯಕ್ತಿಯ ಕುತೂಹಲವು ಎಬ್ಬಿಸಲ್ಪಟ್ಟಾಗ ಫಲಕಾರಿ ಚರ್ಚೆಗಳು ಹೆಚ್ಚಾಗಿ ಲಭಿಸುವವು, ಬೈಬಲ್ ಅಭ್ಯಾಸವೂ ಆರಂಭಿಸಲ್ಪಡಬಹುದು.
4 ಅನೇಕ ಸಂದರ್ಭಗಳಲ್ಲಿ ಕ್ರೈಸ್ತ ಜೊತೆಯ ಒಳ್ಳೇ ನಡವಳಿಕೆಯು ನಂಬದವರು ಸತ್ಯಕ್ಕೆ ಬರುವಂತೆ ದಾರಿಯನ್ನು ತೆರೆದಿದೆ. (1ಪೇತ್ರ 3:1, 2) ನಂಬದ ಜತೆಗಾರರು ಮತ್ತು ನಂಬದ ಇತರ ಕುಟುಂಬ ಸದಸ್ಯರು ತಾವು ಸಭೆಯವರಿಂದ ಗುರುತಿಸಲ್ಪಡುವದನ್ನು ಮತ್ತು ಆದರಿಸಲ್ಪಡುವದನ್ನು ಸಾಮಾನ್ಯವಾಗಿ ಗಣ್ಯಮಾಡುತ್ತಾರೆ. ಅವರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವುದು ಸ್ನೇಹ ಸಂಬಂಧವನ್ನು ಕಟ್ಟುವರೇ ಹೆಚ್ಚು ಸಹಾಯಕಾರಿಯು. ಜೊತೆಗಾರನೊಂದಿಗೆ ಯಾ ಸತ್ಯದಲ್ಲಿರುವ ಸಂಬಂಧಿಕರೊಂದಿಗೆ ಕೆಲಸ ಮಾಡುವ ಮೂಲಕ ನೀವು ಒಂದು ಬೈಬಲಭ್ಯಾಸವನ್ನು ಸ್ಥಾಪಿಸಬಲ್ಲಿರಿ.
5 ಮನೆಮನೆಯ ಸೇವೆ ಮಾಡುವಾಗ ಪ್ರಾರಂಭದ ಸಂದರ್ಶನೆಯಲ್ಲೇ ಒಂದು ಅಧ್ಯಯನವನ್ನಾರಂಭಿಸಲು ನಾವು ಪ್ರಯತ್ನಿಸಬಹುದು. ಇದನ್ನು ಮಾಡುವುದು ಹೇಗೆ? ಮನೆಯವನು ಕೇಳುವ ಪ್ರಶ್ನೆಗಳನ್ನು ನೇರವಾಗಿ ಪುಸ್ತಕದಿಂದಲೇ ಉತ್ತರಿಸುವ ಮೂಲಕ ಕೆಲವರು ಅದನ್ನು ಮಾಡುವುದರಲ್ಲಿ ಸಫಲರಾಗಿದ್ದಾರೆ. ವ್ಯಕ್ತಿಯು ಪುಸ್ತಕವನ್ನು ಓದಲು ಒಪ್ಪುವುದಾದರೆ ಯಾ ನಮ್ಮನ್ನು ಒಳಗೆ ಆಮಂತ್ರಿಸಿದರೆ, ಚರ್ಚೆಯನ್ನು ಮುಂದರಿಸುವ ಸಂಧಿಯನ್ನು ನಾವು ಬಿಗಿಹಿಡಿದು ಅಭ್ಯಾಸ ಮಾಡುವಿಕೆಯನ್ನು ಪ್ರಾಯಶಃ ದೃಶ್ಯಮಾಡಿ ತೋರಿಸಬಹುದು. ಮೊದಲ ಭೇಟಿಯಲ್ಲಿ ಎಷ್ಟು ಹೊತ್ತು ಉಳಿಯಬಹುದೆಂದು ನೀವೇ ವಿವೇಚಿಸಿಕೊಳ್ಳಿರಿ. ಸ್ವಲ್ಪ ಸಮಯದ ನಂತರ ಅಥವಾ ಬೇರೊಂದು ದಿನ ಬಂದು ಚರ್ಚೆಯನ್ನು ಮುಂದರಿಸುವುದು ಪ್ರಯೋಜನಕಾರಿ ಎಂದು ಕಾಣಲೂ ಬಹುದು. ಮೊದಲ ಭೇಟಿಯಲ್ಲಿ ಚರ್ಚಿಸಿದ ವಿಷಯವನ್ನೇ ಮುಂದಣ ಭೇಟಿಯಲ್ಲೂ ಮುಂದರಿಸಲು ನೀವು ಬಯಸಬಹುದು. ಅಥವಾ ಹಿಂದಿನ ಭೇಟಿಯ ಸಮಾಪ್ತಿಯಲ್ಲಿ ಎಬ್ಬಿಸಿದ ಪ್ರಶ್ನೆಯನ್ನು ನೀವು ಚರ್ಚಿಸಬಹುದು.
ಅನೌಪಚಾರಿಕ ಸಂದರ್ಭಗಳು
6 ಅನೌಪಚಾರಿಕ ಸಾಕ್ಷಿಯು ಮನೆ ಬೈಬಲಧ್ಯಯನ ಆರಂಭಿಸುವ ನಮ್ಮ ಪ್ರಯತ್ನಕ್ಕೆ ಇನ್ನೊಂದು ಫಲಕಾರೀ ಮಾರ್ಗವು. ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಬೈಬಲ್ ಅಭ್ಯಾಸ ಮಾಡಬಯಸುವ ಅನೇಕರ ಸಂಪರ್ಕಕ್ಕೆ ನಾವು ಬರುತ್ತೇವೆ. ನಾವು ಪರಿಣಾಮಕಾರಿಯಾಗುವಂತೆ ರೀಸನಿಂಗ್ ಪುಸ್ತಕದಲ್ಲಿರುವ ಶೋಧಿತ ಪೀಠಿಕೆಗಳಲ್ಲಿ ಒಂದನ್ನು ಸಂಭಾಷಣೆ ಆರಂಭಿಸುವುದಕ್ಕೆ ಉಪಯೋಗಿಸಬಹುದು. ಮತ್ತು ಆರಂಭದ ಭೇಟಿಯಲ್ಲೇ ಒಂದು ಬೈಬಲಭ್ಯಾಸ ನೀಡಿಕೆ ಮಾಡಲು ಮರೆಯದಿರ್ರಿ ಯಾಕಂದರೆ ಆ ವ್ಯಕ್ತಿಯು ಬೇರೆ ಕಡೆ ವಾಸಿಸುತ್ತಾನೆ ಮತ್ತು ನಾವಾಗಿಯೇ ಆ ಅಭ್ಯಾಸ ನಡಿಸುವ ಸಂದರ್ಭ ಒಂದುವೇಳೆ ಸಿಕ್ಕಲಿಕ್ಕಿಲ್ಲ.
7 ಅನೌಪಚಾರಿಕ ಸಾಕ್ಷಿಗೆ ಸಿಗುವ ಸಂದರ್ಭಗಳಿಗೆ ಎಚ್ಚರದಿಂದಿರ್ರಿ, ಮತ್ತು ಕೇಳುವವರ ಆಸಕ್ತಿಯನ್ನು ಸತ್ಯದಲ್ಲಿ ಹೆಚ್ಚಿಸುವ ಟ್ರೇಕ್ಗ್ಟಳ ಮತ್ತು ಪತ್ರಿಕೆಗಳ ಒಳ್ಳೇ ಸಂಗ್ರಹವನ್ನು ಸಂಗಡ ಒಯ್ಯಿರಿ. (ಪ್ರಸಂ. 11:1) ಸತ್ಯದಲ್ಲಿ ಆಸಕ್ತಿ ತೋರಿಸುವ ವ್ಯಕ್ತಿಯು ನಿಮ್ಮ ಸಭಾ ಟೆರಿಟೆರಿಯವನಲ್ಲವಾದರೆ, ಅವನ ವಿಳಾಸವನ್ನು ಮತ್ತು ಆವಶ್ಯಕ ಸಮಾಚಾರವನ್ನು ಪಡಕೊಂಡು ಅವನು ವಾಸಿಸುವ ಸ್ಥಳದಲ್ಲಿರುವ ಸಭೆಗೆ ಕೊಡುವುದಾದರೆ, ಯಾರಾದರೂ ಅವನಿಗೆ ಯೋಗ್ಯ ಗಮನಕೊಡ ಶಕ್ತರಾಗುವರು.
8 ಶಿಷ್ಯರನ್ನಾಗಿ ಮಾಡುವ ಕೆಲಸವು ಕೇವಲ ಕೆಲವರದಲ್ಲ. ಸಭೆಯಲ್ಲಿರುವ ಎಲ್ಲರಿಗಾಗಿ ಅದು ಇದೆ. ಶಿಷ್ಯರನ್ನಾಗಿ ಮಾಡುವುದು ಕ್ರೈಸ್ತನ ನಿಯೋಗವೆಂಬದನ್ನು ನಮ್ಮ ಮನಸ್ಸಲ್ಲಿಡುವ ಮೂಲಕ ಬೈಬಲಧ್ಯಯನ ಆರಂಭಿಸುವ ಸಂದರ್ಭಗಳಿಗಾಗಿ ಎಚ್ಚತ್ತಿರುವಂತೆ ನಾವು ಉತ್ತೇಜಿಸಲ್ಪಡುತ್ತೇವೆ.