ಆಪ್ತ ಕುಟುಂಬ ಸಂಬಂಧಗಳನ್ನು ಕಟ್ಟುವುದು
1 ಅವರ ಸಮಯದ ಮೇಲೆ ಅಷ್ಟೊಂದು ನಿರ್ಬಂಧಗಳು ಇರಲಾಗಿ ಹೆತ್ತವರು, ಸತ್ಯಾರಾಧನೆಯಲ್ಲಿ ದೃಢವಾಗಿರುವ ಒಂದು ಕುಟುಂಬವನ್ನು ಕಟ್ಟುವುದರಲ್ಲಿ ಒಂದು ಪಂಥಾಹ್ವಾನವನ್ನು ಎದುರಿಸುತ್ತಾರೆ. ಸದ್ಯದ ಕಠಿಣ ಸಮಯದಲ್ಲಿ ಬೆಂಬಲವನ್ನು ಒದಗಿಸುವ ಒಂದು ಆಪ್ತ ಬಂಧವು ಕ್ರೈಸ್ತ ಕುಟುಂಬಗಳಿಗೆ ಬೇಕಾಗಿದೆ. (ಪ್ರಸಂ. 4:9-12; 2 ತಿಮೊ. 3:1-5) ಆತ್ಮಿಕತೆಯು ಹೆಚ್ಚು ಬೆಳೆದಷ್ಟಕ್ಕೆ ಕುಟುಂಬವು ಹೆಚ್ಚು ಐಕ್ಯತೆಯನ್ನು ಹೊಂದುತ್ತದೆ ಮತ್ತು ಪಿಶಾಚನ ಮತ್ತು ಅವನ ವ್ಯವಸ್ಥೆಯ ತೀವ್ರ ಆಕ್ರಮಣವನ್ನು ಎದುರಿಸಲು ಬಲಗೊಳ್ಳುತ್ತದೆ.
ಆತ್ಮಿಕ ಗುಣಗಳನ್ನು ಕಟ್ಟುವುದು
2 ಕುಟುಂಬದ ವಾರದ ಕಾರ್ಯತಖ್ತೆಯಲ್ಲಿ ಸಭಾಕೂಟಗಳು ಮತ್ತು ಕುಟುಂಬ ಬೈಬಲಭ್ಯಾಸ ಅತ್ಯಾವಶ್ಯಕ. (ಧರ್ಮೋ. 6:6, 7; ಇಬ್ರಿ. 10:23-25; w86 11⁄1, ಪುಟ 23-25) ಆದರೂ, ಹೆಚ್ಚಿನದ್ದು ಬೇಕಾಗಿದೆ. ಮಕ್ಕಳು ಪಡೆಯುವ ಆತ್ಮಿಕ ತರಬೇತಿಯು ಇಷ್ಟೇ ಆದರೆ ಅಲ್ಲಿ ಇನ್ನೂ ನ್ಯೂನತೆ ಇದೆ.
3 ತಮ್ಮ ಮಕ್ಕಳ ಆತ್ಮಿಕ ಯೋಗಕ್ಷೇಮದಲ್ಲಿ ಹೆತ್ತವರು ನಿಜಾಸಕ್ತಿಯನ್ನು ತಕ್ಕೊಳ್ಳುವಾಗ ಒಂದು ಪುಷ್ಟಿಕರ ಕುಟುಂಬ ಸಂಬಂಧವು ಬೆಳೆಯುತ್ತದೆ. ಇಸ್ರಾಯೇಲಿನಲ್ಲಿ ಹೆತ್ತವರು, ತಮ್ಮ ಮಕ್ಕಳ ಶಿಕ್ಷಣ ಮತ್ತು ತರಬೇತಿಗೆ ಜವಾಬ್ದಾರರಾಗಿದ್ದರು, ನುಡಿಯಿಂದ ಮತ್ತು ಮಾದರಿಯಿಂದ ಅವರು ಬೋಧಿಸಬೇಕಿತ್ತು. ಇಸ್ರಾಯೇಲ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಪ್ರೌಢ ಜೀವಿತಕ್ಕಾಗಿ ವ್ಯಾವಹಾರ್ಯ ತರಬೇತು, ಮೂಲಭೂತ ವಾಚನ ಮತ್ತು ಬರಹದ ಕಲೆಗಳು, ಆತ್ಮಿಕ ಗುಣಗಳನ್ನು ಬೆಳೆಸುವ ಉಪದೇಶಗಳು ಸೇರಿದ್ದವು. ಮಕ್ಕಳ ಶಿಕ್ಷಣದಲ್ಲಿ ಯೆಹೋವನ ಭಯವನ್ನು ಕಲಿಸುವಿಕೆ, ಧರ್ಮಶಾಸ್ತ್ರ ಬೋಧೆ, ಹೆತ್ತವರಿಗೆ ಮತ್ತು ವೃದ್ಧರಿಗೆ ಗೌರವ ಮತ್ತು ವಿಧೇಯತೆಯ ಮಹತ್ವವು ಒತ್ತಿಹೇಳಲ್ಪಡುತ್ತಿತ್ತು.
4 ನಿಮ್ಮ ಕುಟುಂಬದೊಂದಿಗೆ ಪ್ರತಿದಿನವೂ ಗುಣಮಟ್ಟದ ಸಮಯವನ್ನು ಕಳೆಯಿರಿ. ಊಟದ ವೇಳೆಯೇ ಮುಂತಾದ ಅನೌಪಚಾರಿಕ ಸಂದರ್ಭಗಳಲ್ಲಿ ಆತ್ಮಿಕ ವಿಷಯಗಳನ್ನು ಚರ್ಚಿಸ ಬಹುದು. ಒಬ್ಬ ಹೆತ್ತವನು ವಿವೇಕದಿಂದ ಅವಲೋಕಿಸಿದ್ದು: “ಹೆತ್ತವರು ಮಕ್ಕಳೊಂದಿಗೆ—ಒಂದಾ ಆತ್ಮಿಕ ಗುಣಗಳನ್ನು ಬೆಳೆಸಲಿಕ್ಕಾಗಿ ಇಲ್ಲವೇ ಸಮಸ್ಯೆಯ ಹಿಂದೆ ಸಮಸ್ಯೆಯನ್ನು ನಿಭಾಯಿಸಲು—ಸಮಯ ಕಳೆಯುವರು.” ಲೋಕದ ಕುಣಿಗಳಲ್ಲಿ ಬೀಳದಂತೆ ತಡೆಯಲು ಮಕ್ಕಳಲ್ಲಿ ಬೇಕಾದ ಆತ್ಮಿಕ ಗುಣಗಳನ್ನು ಕಟ್ಟುವುದು ಅದೆಷ್ಟು ಉತ್ತಮ !—1 ಕೊರಿ. 3:10-15.
ಕ್ಷೇತ್ರ ಸೇವಾ ಚಟುವಟಿಕೆಯನ್ನು ಆನಂದಿಸುವುದು
5 ಒಳ್ಳಿತನ್ನು ಸಂಪಾದಿಸುವ ಅಥವಾ ಮುನ್ನೋಡುವ ಮೂಲಕ ಆನಂದ ಭಾವವು ಉದ್ರೇಕಿಸಲ್ಪಡುತ್ತದೆ. ಕ್ಷೇತ್ರ ಸೇವೆಗಾಗಿ ಒಬ್ಬನು ತಯಾರಿಸಲ್ಪಡುವಾಗ ಅವನು ಒಳ್ಳೇ ಫಲಿತಾಂಶಗಳಿಗಾಗಿ ಯೋಗ್ಯವಾಗಿಯೇ ಮುನ್ನೋಡಬಹುದು. ಹೀಗೆ, ಆನಂದದ ಕ್ಷೇತ್ರ ಸೇವೆಗಾಗಿ ತಯಾರಿಯು ಕೀಲಿಕೈಯಾಗಿದೆ. ಕ್ಷೇತ್ರ ಸೇವೆಗೆ ಹೋಗುವ ಮುಂಚೆ ಏನು ಹೇಳಬೇಕೆಂಬದನ್ನು ಕುಟುಂಬವು ಕ್ರಮವಾಗಿ ಪ್ರಾಕ್ಟಿಸ್ ಮಾಡುವುದು ಆತ್ಮ ವಿಶ್ವಾಸವನ್ನು ಕಟ್ಟುತ್ತದೆ. (ತೀತ 3:1ಬಿ ಹೋಲಿಸಿ.) ಪ್ರತಿಯೊಬ್ಬನು ತನ್ನ ಮನಸ್ಸಲ್ಲಿ ಒಂದು ಧ್ಯೇಯವನ್ನಿಡ ಸಾಧ್ಯವಿದೆ. ಚಿಕ್ಕ ಮಕ್ಕಳೊಂದಿಗೆ ಅಥವಾ ಕ್ಷೇತ್ರ ಸೇವೆಯನ್ನು ಹೊಸದಾಗಿ ಆರಂಭಿಸಿದವರೊಂದಿಗೆ ಒಂದು ಸುಲಭವಾದ ಪ್ರಸಂಗವನ್ನು ರಿಹರ್ಸ್ ಮಾಡ ಬಹುದು.
6 ತಮ್ಮ ಮಕ್ಕಳೊಂದಿಗೆ ಕ್ರೈಸ್ತ ಶುಶ್ರೂಷೆಯಲ್ಲಿ ಭಾಗಿಗಳಾಗುವ ಮೂಲಕ ಹೆತ್ತವರು ಅವರಲ್ಲಿ, ಜನರಲ್ಲಿ ವೈಯಕ್ತಿಕ ಆಸಕ್ತಿಯನ್ನು ಬೆಳೆಸಲು ಸಹಾಯ ಮಾಡುವರು, ಯೆಹೋವ ಮತ್ತು ಯೇಸುವಿನಿಂದ ಉದಾಹರಿಸಲ್ಪಟ್ಟಂಥ ವೈಯಕ್ತಿಕ ಆಸಕ್ತಿಯ ಅನುಕರಣೆಯಲ್ಲಿ. (w81 11⁄1 ಪುಟ 14-20) ಕೆಲವು ಕುಟುಂಬಗಳು ಇಡೀ ದಿನದ ಶೆಡ್ಯೂಲನ್ನು ಮಾಡಿ ಸೇವೆಯ ನಂತರ ಹಿತಕರವಾದ ಮನೋರಂಜನೆಯನ್ನು ಯೋಜಿಸುತ್ತಾರೆ. ಇದು ಆರಾಮದ ಪರಿಸರದಲ್ಲಿ ಸಂಭಾಷಿಸುವದಕ್ಕೆ ಅನುಕೂಲಿಸುವುದು ಮತ್ತು ಹೀಗೆ, ಹೆತ್ತವರು ಮತ್ತು ಮಕ್ಕಳು ಅಪ್ತ ತೆಗೆ ಎಳೆಯಲ್ಪಡುವರು.
7 ನಿಮ್ಮ ಮಕ್ಕಳೊಂದಿಗೆ ಆಪ್ತ ಸಂಬಂಧವನ್ನು ಉಳಿಸಲಿಕ್ಕಾಗಿ ಬೇಕಾದ ಸಂಭಾಷಣಾ ಕಲೆಯನ್ನು ಬೆಳೆಸಿಕೊಳ್ಳಲು ನಿರ್ಧಾರ ಮಾಡಿರಿ. ನಿಮ್ಮ ಕುಟುಂಬವನ್ನು ಆತ್ಮಿಕವಾಗಿ ಬಲಪಡಿಸಲು ಬೇಕಾದ ಸಮಯವನ್ನು ತಕ್ಕೊಳ್ಳುವದರಿಂದ ನಿಮ್ಮನ್ನು ಯಾವುದೂ ತಡೆಯದಿರಲಿ. ನಿಮ್ಮ ಈ ಕಟ್ಟುವ ಪ್ರಯತ್ನಗಳನ್ನು ಯೆಹೋವನು ಸಾಫಲ್ಯದಿಂದ ಬಹುಮಾನಿಸುವಂತೆ ನಿಮ್ಮ ಮಕ್ಕಳೊಡಗೂಡಿ ಪ್ರಾರ್ಥನೆ ಮಾಡುತ್ತಾ ಇರ್ರಿ.—ಕೀರ್ತ. 127:1; ಜ್ಞಾನೋ. 24:3.