ಶಿಷ್ಯರನ್ನಾಗಿ ಮಾಡಲು ನಮ್ಮ ಸಹಾಯಕ್ಕಾಗಿ ಕೂಟಗಳು
ಮಾರ್ಚ್ 11ರ ವಾರ
ಸಂಗೀತ 92 (51)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು. ಸಮಯವಿದ್ದ ಹಾಗೆ, ಸ್ಥಳೀಕ ಕ್ಷೇತ್ರದಲ್ಲಿ ಸದ್ಯದ ಪತ್ರಿಕೆಗಳನ್ನು ನೀಡುವ ವಿಧಾನಗಳನ್ನು ಸೂಚಿಸಿರಿ. ವಾರಾಂತ್ಯದ ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲು ಉತ್ತೇಜನ ಕೊಡಿ.
15 ನಿ: “ಬಾ!” ಎಂಬ ಆಮಂತ್ರಣವನ್ನು ಧೈರ್ಯದಿಂದ ನೀಡಿರಿ. ಪ್ರಶ್ನೋತ್ತರ ಚರ್ಚೆ ಮತ್ತು ದೃಶ್ಯಗಳು. ನಮ್ಮ ರಾಜ್ಯದ ಸೇವೆ ಲೇಖನದ ಈ ಸಮಾಚಾರವನ್ನು ಆವರಿಸಿ, ವರ್ಷವಚನವಾದ ಪ್ರಕಟನೆ 22:17ರ ಅನ್ವಯವನ್ನು ಎತ್ತಿಹೇಳಿರಿ. ಸ್ಥಳೀಕ ಕ್ಷೇತ್ರದಲ್ಲಿ ಸದ್ಯದ ಪುಸ್ತಕ ನೀಡುವಿಕೆಯನ್ನು ಮಾಡುವ ವಿಧಾನಗಳನ್ನು ಸೂಚಿಸಲು ಒಂದು ಚಿಕ್ಕ ದೃಶ್ಯವನ್ನು ಮಾಡಿರಿ.
10 ನಿ: “ಯೆಹೋವನನ್ನು ಸಂಗೀತದಲ್ಲಿ ಸ್ತುತಿಸುವುದು.” ಲೇಖನದಲ್ಲಿ ಆಧರಿತವಾದ ಉತ್ತೇಜನೀಯ ಭಾಷಣ. ಲೇಖನದಲ್ಲಿ ಸೂಚಿಸಲ್ಪಟ್ಟ ವಿಷಯಗಳನ್ನು ದೃಷ್ಟಾಂತಿಸಲು, ಇಂದಿನ ಸಂಜೆಯ ಕಾರ್ಯಕ್ರಮದ ಹಾಡುಗಳನ್ನು ಉಪಯೋಗಿಸಿರಿ.
10 ನಿ: ಸ್ಥಳೀಕ ಅಗತ್ಯತೆಗಳು ಅಥವಾ “ವೈ ಪರ್ಸ್ಯೂ ರೈಟ್ಯಸ್ನೆಸ್?” ವಾಚ್ಟವರ್ ಒಕ್ಟೋಬರ 15, 1990 ರಲ್ಲಾಧರಿತ ಭಾಷಣ. (ದೇಶಭಾಷೆ: ಕಾಬು. 90 8⁄1 “ನಿಕ್ಷೇಪಕ್ಕಾಗಿಯೋ ಎಂಬಂತೆ ಹುಡುಕಿರಿ.”)
ಸಂಗೀತ 20 (103) ಮತ್ತು ಸಮಾಪ್ತಿ ಪ್ರಾರ್ಥನೆ.
ಮಾರ್ಚ್ 18ರ ವಾರ
ಸಂಗೀತ 193 (22)
10 ನಿ: ಸ್ಥಳೀಕ ತಿಳಿಸುವಿಕೆಗಳು. ಎಕೌಂಟ್ಸ್ ರಿಪೋರ್ಟ್. ಸ್ಥಳೀಕ ಅಗತ್ಯತೆಗಳನ್ನು ಪೂರೈಸಲು ಸಭೆಯು ಕೊಟ್ಟ ಉದಾರ ಕಾಣಿಕೆಗಾಗಿ ಗಣ್ಯತೆ ವ್ಯಕ್ತಪಡಿಸಿರಿ, ಮತ್ತು ಸೊಸೈಟಿಗೆ ಕಳುಹಿಸಿದ ದಾನವನ್ನು ಸೊಸೈಟಿ ಅಂಗೀಕರಿಸಿದ್ದನ್ನು ಸಹೋದರರಿಗೆ ತಿಳಿಸಿರಿ. ಮುಂದಿನ ವಾರ ಎಲ್ಲರೂ ಲಿವ್ವ್ ಫಾರೆವರ್ ಪುಸ್ತಕವನ್ನು ಸೇವಾ ಕೂಟಕ್ಕೆ ತರುವಂತೆ ನೆನಪುಮಾಡಿರಿ.
20 ನಿ: “ಸುವಾರ್ತೆಯನ್ನು ನೀಡುವುದು—ಬೀದಿ ಸಾಕ್ಷಿಕಾರ್ಯದ ಮೂಲಕ.” ಪ್ರಶ್ನೋತ್ತರಗಳು. ಪ್ರಚಾರಕರು ಈ ವಾರ ಬೀದಿ ಸಾಕ್ಷಿಯಲ್ಲಿ ಉಪಯೋಗಿಸ ಶಕ್ತರಾಗುವ ವಿಷಯಗಳನ್ನು ಸೂಚಿಸುವ ಎರಡು ಯಾ ಮೂರು ಚಿಕ್ಕ ದೃಶ್ಯಗಳನ್ನು ನಡುವೆ ಸೇರಿಸಿರಿ.
15 ನಿ: ಸಹಾಯಕ ಪಯನೀಯರ ಸೇವೆಗಾಗಿ ಯೋಜನೆಗಳನ್ನು ಮಾಡಿರಿ. ಎಪ್ರಿಲ್ ಅಥವಾ ಮೇಯಲ್ಲಿ, ಯಾ ಎರಡೂ ತಿಂಗಳುಗಳಲ್ಲಿ ಸಹಾಯಕ ಪಯನೀಯರರಾಗ ಬಯಸುವವರಿಗಾಗಿ ಸಹಾಯಕಾರಿ ಸಮಾಚಾರದೊಂದಿಗೆ ಉತ್ತೇಜಕ ಭಾಷಣ. ಸಹಾಯಕ ಪಯನೀಯರ ಸೇವೆಯ ಕುರಿತು ಪ್ರಕಟನೆಯ ಕೆಳಗಿರುವ ವಿಷಯಕ್ಕೆ ಸೂಚಿಸಿರಿ. ವಿಶೇಷ ಚಟುವಟಿಕೆಯ ಸಮಯದಲ್ಲಿ ಪಯನೀಯರರಾಗುವವರಿಗೆ ಉತ್ತೇಜನ ಮತ್ತು ಸಹಾಯ ಕೊಡಲು ಸಭೆ ಮತ್ತು ವೈಯಕ್ತಿಕ ಪ್ರಚಾರಕರು ಏನು ಏರ್ಪಾಡು ಮಾಡಬಹುದೆಂದು ವಿವರಿಸಿರಿ. ಸಹಾಯಕ ಪಯನೀಯರ ಅರ್ಜಿಗಳನ್ನು ವಿನಂತಿಸುವವರಿಗಾಗಿ ಕೊಡಲು ಕೂಟದ ನಂತರ ತಯಾರಿಡಿರಿ. ಮಾರ್ಚ್ 30ರ ಸ್ಮಾರಕಾಚರಣೆಗೆ ಮತ್ತು ಎಪ್ರಿಲ್ 7ರ ವಿಶೇಷ ಬಹಿರಂಗ ಭಾಷಣಕ್ಕೆ ಜನರನ್ನು ಆಮಂತ್ರಿಸಲು ವಿಶೇಷ ಪ್ರಯತ್ನಗಳನ್ನು ಮಾಡಲಾಗುವದೆಂದು ಹೇಳಿರಿ.
ಸಂಗೀತ 130 (58) ಮತ್ತು ಸಮಾಪ್ತಿ ಪ್ರಾರ್ಥನೆ.
ಮಾರ್ಚ್ 25ರ ವಾರ
ಸಂಗೀತ 71 (92)
10 ನಿ: ಸ್ಥಳೀಕ ತಿಳಿಸುವಿಕೆಗಳು. ಪ್ರಶ್ನಾ ಪೆಟ್ಟಿಗೆ. ತಮ್ಮ ಸಭೆಯ ಸರಿಯಾದ ಹೆಸರನ್ನು ಹಾಗೂ ಎಲ್ಲರದಲ್ಲದಿದ್ದರೆ ಕೆಲವು ಹಿರಿಯರದಾದ್ದರೂ ಹೆಸರನ್ನು ಎಲ್ಲಾ ಪ್ರಚಾರಕರು ತಿಳಿದಿರುವ ಅಗತ್ಯವನ್ನು ಎತ್ತಿಹೇಳಿರಿ. ಈ ವಾರಾಂತ್ಯದಲ್ಲಿ ಎಲ್ಲರೂ ಕ್ಷೇತ್ರ ಸೇವೆಯಲ್ಲಿ ಪಾಲಿಗರಾಗಲು ಪ್ರೋತ್ಸಾಹನೆ ಕೊಡಿರಿ. ಸದ್ಯದ ಪತ್ರಿಕೆಯಲ್ಲಿರುವ ತಕ್ಕದಾದ್ದ ಮಾತಾಡುವ ವಿಷಯಗಳಲ್ಲಿ ಕೆಲವನ್ನು ಸೂಚಿಸಬಹುದು.
15 ನಿ: “ಯೆಹೋವನ ಸಾಕ್ಷಿಗಳಾಗಿ ನಮ್ಮ ರಾಜ್ಯ ಶುಶ್ರೂಷೆಯನ್ನು ನೆರವೇರಿಸುವುದು.” ನುರಿತ ಶಿಕ್ಷಕನಾದ ಸಹೋದರನು ಸಮಾಚಾರವನ್ನು ಚರ್ಚಿಸುವನು ಮತ್ತು ನಮ್ಮ ಶುಶ್ರೂಷೆಯನ್ನು ಪ್ರಗತಿ ಮಾಡಲು ತಿಳಿಸಲಾದ ವೈಶಿಷ್ಟ್ಯಗಳ ಉಪಯೋಗವನ್ನು ದೃಶ್ಯಮಾಡುವನು.
20 ನಿ: ಎಪ್ರಿಲಿನ ಸೇವೆಗಾಗಿ ತಯಾರಿಸಿರಿ. ಎಪ್ರಿಲಿನಲ್ಲಿ ನಾವು ಲಿವ್ವ್ ಫಾರೆವರ್ ಪುಸ್ತಕವನ್ನು ನೀಡಲಿದ್ದೇವೆ. ಈ ವಾರಾಂತ್ಯದಲ್ಲಿ ಪುಸ್ತಕ ನೀಡುವಿಕೆಗಾಗಿ ಕೆಳಗಿನ ಕೆಲವು ಸಲಹೆಗಳನ್ನು ಚರ್ಚಿಸಿರಿ: ಕ್ರೈಸ್ತೇತರರಿಗೆ ನೀಡುವಾಗ ಅಧ್ಯಾಯ 7, 11 ಅಥವಾ 19 ರಿಂದ ಯಾವ ವಿಷಯಗಳನ್ನು ನೀವು ಉಪಯೋಗಿಸಬಹುದು? ಪುಟ 11, 33, 100, 128, 131, 156, 157, 161 ಅಥವಾ 162ನೇ ಪುಟಗಳ ಚಿತ್ರವನ್ನು ಸದ್ಯದ ಸಂಭಾಷಣೆಗಾಗಿ ವಿಷಯದೊಂದಿಗೆ ನೀವು ಹೇಗೆ ಜೋಡಿಸುವಿರಿ? ಪುಸ್ತಕದಲ್ಲಿ ನೀವು ತೋರಿಸ ಬಯಸುವ ವಿಷಯವನ್ನು ಎತ್ತಿಹೇಳಲು ಪುಟದ ಕೆಳಗಿನ ಪ್ರಶ್ನೆಗಳನ್ನು ಉಪಯೋಗಿಸಬಹುದು. ಪುಸ್ತಕ ನೀಡುವಿಕೆಯನ್ನು ದೃಶ್ಯವಾಗಿ ಮಾಡಿರಿ.
ಸಂಗೀತ 211 (105) ಮತ್ತು ಸಮಾಪ್ತಿಯ ಪ್ರಾರ್ಥನೆ.
ಎಪ್ರಿಲ್ 1ರ ವಾರ
ಸಂಗೀತ 148 (50)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ದೇವಪ್ರಭುತ್ವ ವಾರ್ತೆ. ತಕ್ಕದಾದ ಪತ್ರಿಕೆ ನೀಡುವಿಕೆಯನ್ನು ಸೂಚಿಸಿರಿ ಮತ್ತು ದೃಶ್ಯ ಮಾಡಿರಿ. ಈ ವಾರಾಂತ್ಯ ಕ್ಷೇತ್ರಸೇವೆಯಲ್ಲಿ ಪಾಲಿಗರಾಗಲು ಪ್ರೋತ್ಸಾಹನೆ ಕೊಡಿರಿ.
15 ನಿ: “ಹೌ ಜೆಹೋವ ಪ್ರಾಸ್ಪರ್ಸ್ ಹಿಸ್ ವರ್ಕ್.” ವಾಚ್ಟವರ್, ದಶಂಬರ 1, 1990 ಲೇಖನಾಧರಿತ ಭಾಷಣ. (ದೇಶಭಾಷೆ: ಕಾಬು. 90 9⁄1 “ಯೆಹೋವನಿಗೆ ಹೇಗೆ ಹಿಂದೆ ಸಲ್ಲಿಸೋಣ?”)
20 ನಿ: “ಬಾ!” ಎಂದು ಹೇಳುವುದರಿಂದ ಲೋಕವ್ಯಾಪಕ ಸಂತೋಷದಲ್ಲಿ ಪಾಲಿಗರಾಗಿರಿ. ಭಾಷಣ, ಇಂಟರ್ವ್ಯೂ (ಗಳು) ಮತ್ತು ಅನುಭವ (ಗಳು), ಜನವರಿ 1, 1991 ವಾಚ್ಟವರ್ ಮುಖ್ಯ ಲೇಖನಗಳಿಂದ. (ದೇಶಭಾಷೆ: ಕಾಬು. 91 4⁄1) ವಾಚ್ಟವರ್ನ ಈ ಸಮಾಚಾರದ ಉತ್ಸಾಹಭರಿತ ಮತ್ತು ಉತ್ತೇಜಕ ಭಾಷಣ ಮತ್ತು ಸ್ಥಳಿಕ ಪ್ರಚಾರಕರಿಂದ ಅಂಥಾ ಸಂತೋಷವನ್ನು ಪ್ರತಿಬಿಂಬಿಸುವ ಹೇಳಿಕೆಗಳು ಮತ್ತು ಅನುಭವಗಳು.
ಸಂಗೀತ 63 (32) ಮತ್ತು ಸಮಾಪ್ತಿ ಪ್ರಾರ್ಥನೆ.