ಸಭೆಯಲ್ಲಿ ನಮ್ಮ ರಾಜ್ಯ ಶುಶ್ರೂಷೆಯನ್ನು ನೆರವೇರಿಸುವುದು
1 ಕ್ರೈಸ್ತ ಸಭೆಯ ಶಿರಸ್ಸಾದ ಯೇಸು ಕ್ರಿಸ್ತನ ಮಾಲಕ, ಯೆಹೋವನು, “ನಂಬಿಗಸ್ತ ಮನೆವಾರ್ತೆಯವನಿಗೆ” ಅಥವಾ ಗೃಹ ಪಾರುಪತ್ಯಗಾರನಿಗೆ ಒಂದು ಜವಾಬ್ದಾರಿಕೆಯನ್ನು ನೇಮಿಸಿಕೊಟ್ಟಿದ್ದಾನೆ. (ಲೂಕ 12:42, 43) ಈ ಏರ್ಪಾಡು ನಮಗೆ, ‘ದೇವರ ಮನೆಯಲ್ಲಿ ನಡೆದುಕೊಳ್ಳಬೇಕಾದ’ ರೀತಿಯ ಕುರಿತಾದ ಮುದ್ರಿತ ಮಾರ್ಗದರ್ಶನೆಯನ್ನು ಪಡೆಯುವಂತೆ ಸಾಧ್ಯಮಾಡಿದೆ. (1 ತಿಮೊ. 3:15) ಛಾಪಿಸಲ್ಪಟ್ಟ ವಿಷಯಗಳನ್ನು ಕಂಡುಕೊಳ್ಳುವ ನಮ್ಮ ಮುಖ್ಯ ಉಪಕರಣವು ವಾಚ್ಟವರ್ ಪಬ್ಲಿಕೇಶನ್ಸ್ ಇಂಡೆಕ್ಸ್. ಅದು ನಿಮಗೆ ಹೇಗೆ ಸಹಾಯ ಮಾಡಬಲ್ಲದು?
2 ನೀವೊಬ್ಬ ಹಿರಿಯರೋ? ನಿಮ್ಮ ಜವಾಬ್ದಾರಿಕೆಗಳಿಗೆ ಸಂಬಂಧಿಸಿದ ಎರಡು ಸಾಮಾನ್ಯ ಮೇಲ್ಬರಹಗಳು ಅಲ್ಲಿವೆ. “ಎಲರ್ಡ್ಸ್” (ಹಿರಿಯರು) ಮತ್ತು “ಓವರ್ಸಿಯರ್ಸ್” (ಮೇಲ್ವಿಚಾರಕರು). “ಎಲರ್ಡ್ಸ್” ವಿಭಾಗದಲ್ಲಿ, ಸಭೆಯಲ್ಲಿರುವ ವಿವಿಧ ಜನರಿಗೆ ಸಹಾಯ ಮಾಡುವ ಸಮಾಚಾರಕ್ಕೆ ನಡಿಸುವ ಹೆಚ್ಚಿನ ರೆಫರೆನ್ಸ್ಗಳು ಅಂದರೆ, ಸೂಚನೆ ಕೊಡುವ ವಿಧಾನ, ಹಿರಿಯ ಮಂಡಲಿಯೊಳಗಿನ ಸಂಬಂಧಗಳು, ಹಿರಿಯನ ಜವಾಬ್ದಾರಿಕೆಗಳು ಮುಂತಾದವುಗಳಿವೆ. ಯೋಗ್ಯತೆಗಳಿಗೆ ಸಂಬಂಧಿಸಿದ ರೆಫರೆನ್ಸ್ಗಳು “ಓವರ್ಸಿಯರ್ಸ್” ವಿಭಾಗದಲ್ಲಿವೆ ಯಾಕಂದರೆ ಅವನ್ನು ಚರ್ಚಿಸುವಾಗ ಬೈಬಲು ಉಪಯೋಗಿಸುವ ಶಬ್ದ ಅದಾಗಿದೆ. ಅಲ್ಲದೆ, “ಒವರ್ಸಿಯರ್ಸ್” ಕೆಳಗೆ ಅವರ ಅಧಿಕೃತ ನೇಮಕಗಳಾದ “ಪ್ರಿಸೈಡಿಂಗ್ ಓವರ್ಸಿಯರ್,” “ಸರ್ವಿಸ್ ಓವರ್ಸಿಯರ್” ಮತ್ತು “ಸೆಕ್ರಿಟರಿ” ಇವುಗಳಿವೆ. ಮುಖ್ಯ ಶೀರ್ಷಿಕೆಯಾದ “ಕಾಂಗ್ರಿಗೇಶನ್” ಸಹಾ ಸಹಾಯಕರ ಸಮಾಚಾರವನ್ನು ಒದಗಿಸುವುದು.
3 ಶುಶ್ರೂಷಕ ಸೇವಕರಾದ ನೀವು ಸಹಾ ಸಭೆಯಲ್ಲಿ ಮಹತ್ವದ ಪಾತ್ರವನ್ನು ನಡಿಸುತ್ತೀರಿ. “ಮಿನಿಷ್ಟ್ರಿಯಲ್ ಸರ್ವೆಂಟ್ಸ್” (ಶುಶ್ರೂಷಾ ಸೇವಕರು) ಶೀರ್ಷಿಕೆಯ ಕೆಳಗೆ ನಿಮ್ಮ ಯೋಗ್ಯತೆಗಳು ಮತ್ತು ಜವಾಬ್ದಾರಿಕೆಗಳ ಸಮಾಚಾರವು ಕೊಡಲ್ಪಟ್ಟಿದೆ. ನಿಮಗೆ ತೆರೆದಿರುವ ಸೇವಾ ಸುಯೋಗಗಳ ಮಹತ್ವ ಮತ್ತು ಹೆಚ್ಚಿನ ಜವಾಬ್ದಾರಿಕೆಗಳಿಗಾಗಿ ನೀವು ಪ್ರಯತ್ನಿಸಬಹುದಾದ ವಿಧಾನ ಇವುಗಳ ಕುರಿತಾದ ರೆಫರೆನ್ಸ್ಗಳನ್ನೂ ನೀವಲ್ಲಿ ಕಾಣುವಿರಿ.
4 ಹಿರಿಯರು ಮತ್ತು ಶುಶ್ರೂಷಾ ಸೇವಕರು ಇಬ್ಬರಿಗೂ ಸಭೆಯಲ್ಲಿ ಕೂಟಗಳ ಸಂಬಂಧದಲ್ಲಿ ಸುಯೋಗಗಳಿವೆ. “ಮೀಟಿಂಗ್ಸ್” (ಕೂಟಗಳು) ಶೀರ್ಷಿಕೆಯು ವಿಷಯದ ಪ್ರತಿಯೊಂದು ವಿಭಾಗಕ್ಕೆ ರೆಫರೆನ್ಸ್ಗಳನ್ನು ನೀಡುತ್ತದೆ, “ಎಫರ್ಟ್ಸ್ ಟು ಎಟೆಂಡ್” ಕೆಳಗೆ ರೋಮಾಂಚಕರ ಉದಾಹರಣೆಗಳೂ ಸೇರಿವೆ. ಪ್ರತಿಯೊಂದು ಕೂಟಗಳಿಗಾಗಿ ಮುಖ್ಯ ಮೇಲ್ಬರಹಗಳೂ ಅದರಲ್ಲಿವೆ ನಿಶ್ಚಯ.
5 ಕೀರ್ತನೆ 68:11 ಹೇಳುವುದು: “ಶುಭವಾರ್ತೆಯನ್ನು ಪ್ರಸಿದ್ಧಪಡಿಸುವ ಸ್ತ್ರೀ ಸಮೂಹವು ಎಷ್ಟೋ ದೊಡ್ಡದು.” ಸಭೆಯ ಗಂಡು ಸದಸ್ಯರಂತೆ ಸಹೋದರಿಯರು ಸಹಾ, ದೇವರ ಮನೆವಾರ್ತೆಯಲ್ಲಿ ಅವರಿಗಾಗಿರುವ ಯೋಗ್ಯ ನಡವಳಿಕೆಯನ್ನು ಪಾಲಿಸಬೇಕು. ಸಹೋದರಿಯು ಯಾವಾಗ ತಲೆಗೆ ಮುಸುಕು ಹಾಕಬೇಕು, ಅಥವಾ ಕೂಟವನ್ನು ನಡಿಸಲು ಯಾ ಸಭೆಯನ್ನು ಪ್ರಾರ್ಥನೆಯಲ್ಲಿ ಪ್ರತಿನಿಧಿಸಲು ಯಾವ ಸಹೋದರನೂ ಇರದಾಗ ಏನು ಮಾಡಬೇಕು ಎಂಬ ವಿಷಯಗಳ ಕುರಿತು ಕೆಲವು ಸಲ ಪ್ರಶ್ನೆಗಳೇಳುತ್ತವೆ. “ವಿಮೆನ್” (ಸ್ತ್ರೀಯರು) ಶೀರ್ಷಿಕೆಯು ಈ ವಿಷಯಗಳ ಕುರಿತಾದ ಸಮಾಚಾರಕ್ಕೆ ನಿಮ್ಮನ್ನು ನಡಿಸುವುದು. ಅಲ್ಲದೆ, “ಸಿಸ್ಟರ್ಸ್,” “ಹೆಡ್ ಕವರಿಂಗ್” ಮತ್ತು “ಪ್ರೇಯರ್” ಶೀರ್ಷಿಕೆಗಳೂ ಸಹಾಯಕಾರಿಯಾಗಿವೆ.
6 1ನೇ ತಿಮೊಥಿ 3:15ರ ಕೊನೆಯ ಭಾಗವು ಕ್ರೈಸ್ತ ಸಭೆಯನ್ನು, “ಸತ್ಯಕ್ಕೆ ಸ್ತಂಭವೂ ಆಧಾರವೂ” ಆಗಿ ನಿರ್ದೇಶಿಸಿಯದೆ. ದೇವರ ಮನೆಯಲ್ಲಿ ನಮ್ಮನ್ನು ಯೋಗ್ಯವಾಗಿ ನಡೆಸಿಕೊಳ್ಳುವಾಗ, ಸಭೆಯೊಳಗೆ ನಮ್ಮ ರಾಜ್ಯ ಶುಶ್ರೂಷೆಯನ್ನು ನೆರವೇರಿಸುತ್ತಾ, ಸತ್ಯಕ್ಕೆ ಆಧಾರವನ್ನು ಕೊಡುವುದು ನಮ್ಮ ಸುಯೋಗವಾಗಿದೆ.