ಕಾವಲಿನಬುರುಜು ಓದುವಂತೆ ಇತರರನ್ನು ಪ್ರೋತ್ಸಾಹಿಸಿರಿ
1 ಮೇ ಮತ್ತು ಜೂನ್ನಲ್ಲಿ, ಸತ್ಯಪ್ರಿಯರನ್ನು ಕಾವಲಿನಬುರುಜು ಓದುವಂತೆ ಪ್ರೋತ್ಸಾಹಿಸಲು ನಾವು ಬಯಸುತ್ತೇವೆ. ಇಂದು ಪ್ರಕಾಶಿತವಾಗುವ ಪತ್ರಿಕೆಗಳೆಲ್ಲದರಲ್ಲಿ ಅದೊಂದು ಮಾತ್ರವೇ, ಭೂಮಿಯ ಅಸಹ್ಯ ಪರಿಸ್ಥಿತಿಗಳಿಗಾಗಿ ನರಳಿ ಗೊಳಾಡುತ್ತಿರುವವರಿಗೆ ಬೇಕಾದ ಆತ್ಮಿಕ ಆಹಾರವನ್ನು ಒದಗಿಸುತ್ತದೆಂದು ನಮ್ಮ ಸ್ವಂತ ಅನುಭವವು ನಮಗೆ ಖಚಿತಗೊಳಿಸಿದೆ.—ಯೆಹೆ. 9:4.
2 ನಾವು ಅಂತ್ಯಕಾಲದಲ್ಲಿ ಜೀವಿಸುತ್ತೇವೆ ಮತ್ತು ದೇವರ ರಾಜ್ಯವು ಬೇಗನೆ ಭೂಮಿಗೆ ಶಾಂತಿಯನ್ನು ತರುವುದು ಎಂಬದನ್ನು ರುಜುಪಡಿಸುವ ಬೈಬಲ್ ಪ್ರವಾದನೆಯ ತಿಳುವಳಿಕೆಯನ್ನು ಕೊಡಲು ಕಾವಲಿನಬುರುಜು ನಮಗೆ ಸಹಾಯ ಮಾಡಿದೆ. ಇತರರ ಜೀವಕ್ಕಾಗಿ ನಮ್ಮ ನಿಜ ಚಿಂತೆಯು, ಈ ಆಶ್ಚರ್ಯಕರ ನಿರೀಕ್ಷೆಯನ್ನು ಅವರೊಂದಿಗೆ ಹಂಚುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. ಮತ್ತು ಅನೇಕ ಪ್ರಾಮಾಣಿಕ ಹೃದಯಿಗಳು ರಕ್ಷಣೆಗಾಗಿ ನಡಿಸಲ್ಪಡುತ್ತಿರುವುದನ್ನು ಕಾಣುವಾಗ, ನಾವು ಪ್ರೋತ್ಸಾಹಿಸಲ್ಪಡುತ್ತೇವೆ.—ಯೋಹಾ. 10:16.
3 “ನೀವು ನೆನಸುವುದಕ್ಕಿಂತಲೂ ಹೆಚ್ಚು ವೇಳೆಮೀರಿದೆಯೇ?” ಎಂಬದು ಎಪ್ರಿಲ್ 1, 1991ರ ವಾಚ್ಟವರ್ ಲೇಖನವೊಂದರ ವಿಚಾರಪ್ರೇರಕ ಶೀರ್ಷಿಕೆ. ಎಪ್ರಿಲ್ 15ರ ಸಂಚಿಕೆಯು, “ಶಾಂತಿಯು ನಿಜವಾಗಿ ಬರುವುದು ಯಾವಾಗ?” ಎಂಬ ಲೇಖನವನ್ನು ಕೊಡಲಿದೆ. ಈ ಲೇಖನಗಳನ್ನು ಸದ್ಯದ ಸಂಭಾಷಣೆಗಾಗಿ ವಿಷಯವಾದ “ಲೋಕ ಶಾಂತಿ—ಸಮೀಪವಿದೆಯೆ?” ಇದರೊಂದಿಗೆ ಚೆನ್ನಾಗಿ ಜೋಡಿಸಬಹುದು. ಮನೆಯವನು ಸುವಾರ್ತೆಯಲ್ಲಿ ನಿಜವಾಗಿ ಆಸಕ್ತನಿದಾನ್ದೋ ಎಂದು ನಿರ್ಧರಿಸಲು, ಒಂದು ಬೆಚ್ಚಗೂ ಸ್ನೇಹಪರವೂ ಆದ ಬೈಬಲ್ ಚರ್ಚೆಗೆಳೆಯಿರಿ. ಇದನ್ನು ಮಾಡಲು ಪೂರ್ವ ತಯಾರಿ ಮತ್ತು ಸಿದ್ಧತೆ ಬೇಕು, ಚರ್ಚಿಸುವ ವಿಷಯದ ಕುರಿತು ಮನೆಯವನ ತಿಳುವಳಿಕೆಯನ್ನು ವಿಸ್ತರಿಸಲು ಸದ್ಯದ ಪತ್ರಿಕೆಗಳ ಲೇಖನಗಳು ಅವನಿಗೆ ಹೇಗೆ ಸಹಾಯ ಮಾಡುತ್ತವೆಂದು ತೋರಿಸಬೇಕು.
4 ತನ್ನ ಅಂಚೇ ವಿಳಾಸವನ್ನು ನಮಗೆ ಕೊಡುವ ಯಾವನಿಗಾದರೂ ಬರೇ ಪತ್ರಿಕೆಗಳನ್ನು ಕಳುಹಿಸುವುದರಲ್ಲಿ ನಾವು ಆಸಕ್ತರಿಲ್ಲ. ನಮ್ಮ ನಿಯೋಗವು ಸುವಾರ್ತೆಯನ್ನು ಸಾರುವುದು ಮತ್ತು ಶಿಷ್ಯರನ್ನಾಗಿ ಮಾಡುವುದು ಎಂಬದನ್ನು ನೆನಪಿಡಿರಿ. (ಮತ್ತಾ. 24:14; 28:19, 20) ಒಬ್ಬ ವ್ಯಕ್ತಿಯು ಆಗಿಂದಾಗ್ಯೆ ಕೆಲವು ನಿರ್ದಿಷ್ಟ ಲೇಖನಗಳನ್ನು ಓದುವುದರಲ್ಲಿ ಮಾತ್ರ ಆಸಕ್ತನಿದ್ದರೆ, ಪ್ರಾಯಶಃ ಅವನ ಹೆಸರನ್ನು ನಿಮ್ಮ ಪತ್ರಿಕಾ-ಮಾರ್ಗದ ಪಟ್ಟಿಯಲ್ಲಿಟ್ಟು, ಕ್ರಮದ ಸಂದರ್ಶನೆಗಳನ್ನು ಮಾಡುವುದೊಳ್ಳೆಯದು. ಆ ವ್ಯಕ್ತಿಯೊಡನೆ ನಿಮ್ಮ ಕ್ರಮದ ಸಂಪರ್ಕವು ಅವನ ಆಸಕ್ತಿಯನ್ನು ಬೆಳೆಸಲು ಅನುಕೂಲ ಮಾಡುವುದು ಮತ್ತು ಕ್ರಮೇಣ, ಅಂಚೆಯ ಮೂಲಕ ಕಾವಲಿನಬುರುಜು ಪಡೆಯಲು ಅವನಿಗೆ ಯಾವಾಗ ಯುಕ್ತವೆಂದು ನಿರ್ಧರಿಸಬಹುದು.
5 ಮೇ ಮತ್ತು ಜೂನ್ ತಿಂಗಳುಗಳು ಯೆಹೋವನ ರಾಜ್ಯದ ಸುವಾರ್ತೆಯನ್ನು ಮನೆಯಿಂದ ಮನೆಗೆ ಸಾರುವುದಕ್ಕೆ ಹಾಗೂ ನಾವು ಭೇಟಿಯಾಗುವ ಜನರೊಂದಿಗೆ ಅವಿಧಿಯಾಗಿ ಮಾತಾಡುವುದಕ್ಕೆ ಅನೇಕ ಸಂದರ್ಭಗಳನ್ನು ಕೊಡುವುವು. ನಮ್ಮ ಟೆರಿಟೆರಿಯಲ್ಲಿರುವ ದೀನರಾದ ಜನರನ್ನು ಹುಡುಕಿ, ಅವರಿಗೆ ಬೇಕಾದ ಆತ್ಮಿಕ ಪೋಷಣೆಯನ್ನು ಒದಗಿಸುವ ನಮ್ಮ ದಕ್ಷತೆಯ ಪ್ರಯತ್ನವನ್ನು ಯೆಹೋವನು ಆಶೀರ್ವದಿಸುತ್ತಾ ಇರುವನೆಂಬ ಭರವಸೆ ನಮಗಿರ ಸಾಧ್ಯವಿದೆ.