ಇಂಡೆಕ್ ಕುಟುಂಬಕ್ಕೆ ಪ್ರಯೋಜನವಾಗಬಲ್ಲ ವಿಧ
1 ಕುಟುಂಬ ಸದಸ್ಯರ ಕುರಿತಾಗಿ ಮಾತಾಡುತ್ತಾ, 1 ತಿಮೊಥಿ 5:4 ಹೇಳುವುದು: “ಅವರು ಮೊದಲು ತಮ್ಮ ಮನೆಯೊಳಗೆ ಭಕ್ತಿತೋರಿಸುವುದನ್ನು ಕಲಿತುಕೊಳ್ಳಲಿ.” ನಿಶ್ಚಯವಾಗಿ, ನಮ್ಮ ಕುಟುಂಬದ ಜನರೊಂದಿಗಿನ ವ್ಯವಹಾರದಲ್ಲಿ ದಿವ್ಯ ಭಕ್ತಿಯನ್ನು ತೋರಿಸುವ ಹವ್ಯಾಸವು ಒಂದು ಕಲಿಯತಕ್ಕ ವಿಷಯವಾಗಿದೆ. ಇದರಲ್ಲಿ ನಮಗೆ ದೈವಿಕ ಮಾರ್ಗದರ್ಶನೆ ಬೇಕು ಯಾಕಂದರೆ ಕುಟುಂಬ ಸದಸ್ಯರ ಪರಿಪಾಲನೆಯು ನಮ್ಮ ಕ್ರೈಸ್ತ ಹಂಗಿನ ಒಂದು ಭಾಗವಾಗಿರುತ್ತದೆ. ಕುಟುಂಬ ಜೀವಿತದಲ್ಲಿ ಏಳುವ ಹಲವಾರು ಪರಿಸ್ಥಿತಿಗಳಿಗಾಗಿ ಮಾರ್ಗದರ್ಶನೆಯನ್ನು ಕಂಡುಕೊಳ್ಳಲು ವಾಚ್ಟವರ್ ಪಬ್ಲಿಕೇಶನ್ ಇಂಡೆಕ್ಸ್ ಸಹಾಯ ಮಾಡಬಲ್ಲದು.
2 ಒಬ್ಬ ಪುರುಷ ಮತ್ತು ಸ್ತ್ರೀಗೆ ಮದುವೆ ಆಗುವಾಗ ಒಂದು ಕುಟುಂಬವು ಅಸ್ತಿತ್ವಕ್ಕೆ ಬರುತ್ತದೆ. (ಆದಿ. 2:24) ನೀವು ಮದುವೆಯಾಗಲು ಗಂಭೀರವಾಗಿ ಯೋಚಿಸುವವರೋ? “ಮ್ಯಾರೆಜ್” ಎಂಬ ಶೀರ್ಷಿಕೆಯ ಕೆಳಗೆ, “ಸಿಲೆಕ್ಟಿಂಗ್ ಎ ಮೇಟ್” ಎಂಬ ಉಪಶೀರ್ಷಿಕೆ ಇದೆ. ಇಲ್ಲಿರುವ ನಿರ್ದೇಶನೆಗಳು ನಿಮಗೆ, ಕೆಲವು ಸಲ ಕಷ್ಟದ ಕೆಲಸವಾದ ಇದರ ಮೇಲೆ, ಸಹಾಯಕಾರಿ ಸಲಹೆಗಳನ್ನು ಕೊಡುವವು. ಇಂಡೆಕ್ಸ್ನಲ್ಲಿ, “ಗಂಡನ ಪಾತ್ರ” ಮತ್ತು “ಹೆಂಡತಿಯ ಪಾತ್ರ” ಎಂಬ ಉಪಶೀರ್ಷಿಕೆಗಳಲ್ಲಿ ಪ್ರತಿಯೊಂದು, ಮದುವೆಯಾಗಲು ಬಯಸುವವರಿಗೆ ಮತ್ತು ಮದುವೆಯಾದವರಿಗೆ ಬೇಕಾದ ಪ್ರಯೋಜನಕಾರಿ ಸಮಾಚಾರಕ್ಕೆ ನಿರ್ದೇಶನೆಗಳನ್ನು ಕೊಡುತ್ತದೆ. ಅಷ್ಟಲ್ಲದೆ, “ಕಮ್ಯುನಿಕೇಷನ್,” “ಕ್ಲೋಸ್ನೆಸ್ ಇನ್,” ಮತ್ತು “ಪೀಸ್” ಎಂಬ ಉಪಶೀರ್ಷಿಕೆಗಳು ಮದುವೆಯನ್ನು ಬಲಗೊಳಿಸುವ ಸಮಾಚಾರವನ್ನು ಒದಗಿಸುತ್ತವೆ. ತೊಂದರೆಗಳು ಬರುವಾಗ, ಉಪಶೀರ್ಷಿಕೆ “ಪ್ರಾಬ್ಲೆಮ್ಸ್ ಇನ್” ಎಂಬದು ಅವುಗಳನ್ನು ಪರಿಹರಿಸುವ ವಿಧಾನಗಳ ಕುರಿತಾದ ಪರಿಣಾಮಕಾರಿ ಸೂಚನೆಗೆ ನಿಮ್ಮನ್ನು ನಡಿಸುವುದು.
3 ಮಕ್ಕಳು ಯೆಹೋವನಿಂದ ಬಂದ ಸ್ವಾಸ್ತ್ಯವು. (ಕೀರ್ತ. 127:3) ಹೆತ್ತವರು ಮಕ್ಕಳನ್ನು “ಯೆಹೋವ ಮಾನಸಿಕ ಶಿಸ್ತು ಮತ್ತು ಕ್ರಮಪಡಿಸುವಿಕೆಯಲ್ಲಿ” ಹೇಗೆ ಬೆಳೆಸಬಹುದು? (ಎಫೆ. 6:4) ಯೆಹೋವನು ತನ್ನ ವಾಕ್ಯದ ಮತ್ತು ನಂಬಿಗಸ್ತ ಆಳು ವರ್ಗದ ಮೂಲಕ ಒದಗಿಸುವ ಮಾರ್ಗದರ್ಶನೆ ಅತ್ಯಂತ ಮಹತ್ವದ್ದು. ಮಕ್ಕಳ ಭಾವನೆಗಳ ಮತ್ತು ಅವಶ್ಯಕತೆಗಳ ಒಳನೋಟವನ್ನು ಪಡೆಯುವ ಅಗತ್ಯ ಹೆತ್ತವರಿಗಿದೆ. ಸಹಾಯಕಾರಿ ಸೂಚನೆ ಮತ್ತು ಸಲಹೆಗಳನ್ನು ಇಂಡೆಕ್ಸ್ ಶೀರ್ಷಿಕೆಗಳಾದ, “ಚಿಲ್ಡ್ರನ್” ಮತ್ತು “ಯೂಥ್ಸ್”ನಲ್ಲಿ ಕಾಣ ಸಾಧ್ಯವಿದೆ. ಅವರ ಎಳೆಯ ಹೃದಯದೊಳಗೆ ಯೆಹೋವನ ನಿಯಮವನ್ನು ಒಳಸೇರಿಸುವುದರ ಕುರಿತೇನು? “ಚೈಲ್ಡ್ ಟ್ರೈನಿಂಗ್” ಮೇಲ್ಬರಹವು ಮಕ್ಕಳನ್ನು ಬೆಳೆಸುವ ಪ್ರತಿಯೊಂದು ವಿಭಾಗದ ಗ್ರಹಣೀಯ ಚರ್ಚೆಗಳಿಗೆ ನಡಿಸುತ್ತದೆ ಮಾತ್ರವಲ್ಲ ಯೆಹೋವನೊಂದಿಗೆ ವೈಯಕ್ತಿಕ ಸಂಬಂಧವನ್ನು ವಿಕಾಸಿಸಲು ಮತ್ತು ಸತ್ಯಕ್ಕಾಗಿ ಹಂಬಲವನ್ನು ಬೆಳೆಸಲು ಅವರಿಗೆ ಸಹಾಯ ಮಾಡುವ ವಿಧಾನವನ್ನೂ ತೋರಿಸಿದೆ.—1 ಪೇತ್ರ 2:2.
4 ಮುನ್ನೇರ್ಪಡಿಸಿದ ಕುಟುಂಬ ಬೈಬಲಭ್ಯಾಸಗಳು ಕುಟುಂಬ ಸಾಫಲ್ಯಕ್ಕೆ ಅತ್ಯಾವಶ್ಯಕವು. (ಧರ್ಮೋ. 6:6-9; ಯೆಶಾ. 54:13; ಎಫೆ. 5:25, 26) ಆನಂದಭರಿತ ಕುಟುಂಬ ಚರ್ಚೆಗಳನ್ನು ನಡಿಸುವ ವಿಧಾನಗಳ ನಿರ್ದೇಶನೆಗಳು “ಫ್ಯಾಮಿಲೀಸ್” ಮೇಲ್ಬರಹದ ಕೆಳಗಿದೆ. ಪ್ರಚಲಿತ ಇಂಡೆಕ್ಸ್ನಲ್ಲಿ “ಬೈಬಲ್ ಸಡ್ಟಿ” ಎಂಬ ಉಪ ಶೀರ್ಷಿಕೆಯ ಕೆಳಗೆ, “ಮೇಕಿಂಗ್ ಇಟ್ ಇಫೆಕ್ಟಿವ್,” “ಮೇಕಿಂಗ್ ಇಟ್ ಎಂಜಾಯ್ಎಬೆಲ್” ಮತ್ತು “ಮೇಕಿಂಗ್ ಇಟ್ ಇಂಟರೆಸ್ಟಿಂಗ್” ಎಂಬಂಥ ಉಪಶೀರ್ಷಿಕೆಗಳಿವೆ. ಅಲ್ಲದೆ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರ ಜೀವನ ವೃತ್ತಾಂತವನ್ನು ಆಗಿಂದಾಗ್ಯೆ ಯಾಕೆ ಚರ್ಚಿಸಬಾರದು? “ಫುಲ್ಟೈಮ್ ಮಿನಿಷ್ಟ್ರಿ” ಶೀರ್ಷಿಕೆಯ ಕೆಳಗೆ, “ನಾನೆಂದೂ ವಿಷಾದಿಸದ ಒಂದು ಆಯ್ಕೆ” ಮತ್ತು “ನನ್ನ ಹೃದಯದ ಅಪೇಕ್ಷೆಗಳನ್ನು ಪಡೆದದ್ದು” ಎಂಬ ವಿಷಯಗಳ ಕೆಳಗೆ ಜೀವನ ವೃತ್ತಾಂತಗಳ ನಿರ್ದೇಶನೆಗಳು ಕೊಡಲ್ಪಟ್ಟಿವೆ. ಇಂಥ ಇನ್ನೂ ಹೆಚ್ಚಿನ ವೃತ್ತಾಂತಗಳು “ಮಿಶನೆರೀಸ್” ಕೆಳಗೆ ಕೊಡಲ್ಪಟ್ಟಿವೆ. ಇದರ ಪೂರ್ಣ ಪಟ್ಟಿಯನ್ನು “ಲೈಫ್ ಸ್ಟೋರಿಸ್ ಆಫ್ ಜೆಹೋವಸ್ ವಿಟ್ನೆಸಸ್” ಕೆಳಗೆ ಕಾಣಬಹುದು.
5 ದಿ ವಾಚ್ಟವರ್ ಪಬ್ಲಿಕೇಶನ್ಸ್ ಇಂಡೆಕ್ಸ್ ಕುಟುಂಬ ಜೀವನಕ್ಕೆ ಸಲಹೆ ಮತ್ತು ಸೂಚನೆಗಳನ್ನು ಒಟ್ಟುಗೂಡಿಸುವುದಕ್ಕಾಗಿ ಇರುವ ಆಶ್ಚರ್ಯಕರ ಸಾಧನವಾಗಿದೆ. ಅದು ಕುಟುಂಬದೊಳಗಿನ ನಿಮ್ಮ ಜವಾಬ್ದಾರಿಕೆಯನ್ನು ನೆರವೇರಿಸುವುದರಲ್ಲಿ ಮಹಾ ಸಂತೋಷವನ್ನು ನೀವು ಕಂಡುಕೊಳ್ಳುವಂತೆ ಸಹಾಯ ಮಾಡುವಂತಾಗಲಿ.