ಶಿಷ್ಯರನ್ನಾಗಿ ಮಾಡಲು ನಮ್ಮ ಸಹಾಯಕ್ಕಾಗಿ ಕೂಟಗಳು
ಜೂನ್ 10 ರ ವಾರ
ಸಂಗೀತ 63 (32)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ತಕ್ಕದಾದ್ದ ಪ್ರಕಟಣೆಗಳು. ಕ್ಷೇತ್ರ ಸೇವಾ ಏರ್ಪಾಡುಗಳನ್ನು ತಿಳಿಸಿರಿ. ಈ ತನಕ ದೊರೆತ ಚಂದಾಗಳ ಮೇಲೆ ಒಂದೆರಡು ಅನುಭವಗಳನ್ನು ತಿಳಿಸಿರಿ.
25 ನಿ: “ಜನರನ್ನು ಕತ್ತಲೆಯಿಂದ ಬೆಳಕಿಗೆ ನಡಿಸಿರಿ.” ಪ್ರಶ್ನೋತ್ತರ ಚರ್ಚೆ. 6ನೇ ಪಾರಾದಲ್ಲಿ, ಕಾವಲಿನಬುರುಜು ಅವರಿಗೆ ಅಥವಾ ಅವರ ಕುಟುಂಬಕ್ಕೆ ಹೇಗೆ ಪ್ರಯೋಜನ ಕೊಟ್ಟಿದೆ ಎಂಬ ಒಂದೆರಡು ವೈಯಕ್ತಿಕ ಅನುಭವಗಳನ್ನಾದರೂ ಸಭೆಯಿಂದ ಪಡೆಯಿರಿ.
10 ನಿ: ಪ್ರಶ್ನಾ ಪೆಟ್ಟಿಗೆ. ಪ್ರಶ್ನೋತ್ತರ ಚರ್ಚೆ. ದೇವಪ್ರಭುತ್ವ ಶಿಫಾರಸುಗಳನ್ನು ಹಿಂಬಾಲಿಸುವುದರಿಂದ ಬರುವ ಆಶೀರ್ವಾದಗಳನ್ನು ಒತ್ತಿಹೇಳಿರಿ.
ಸಂಗೀತ 192 (10) ಮತ್ತು ಸಮಾಪ್ತಿ ಪ್ರಾರ್ಥನೆ.
ಜೂನ್ 17 ರ ವಾರ
ಸಂಗೀತ 221 (73)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ಅಕೌಂಟ್ಸ್ ರಿಪೋರ್ಟ್. ದಾನ ಅಂಗೀಕಾರಗಳನ್ನು ಸೇರಿಸಿರಿ. ಸ್ಥಳೀಕವಾಗಿ ಮತ್ತು ಲೋಕವ್ಯಾಪಕವಾಗಿ ರಾಜ್ಯಾಭಿರುಚಿಗಳಿಗೆ ಸಭೆಯು ಕೊಟ್ಟ ಆರ್ಥಿಕ ಬೆಂಬಲಕ್ಕಾಗಿ ಅವರನ್ನು ಹೃತ್ಪೂರ್ವಕವಾಗಿ ಪ್ರಶಂಸಿಸಿರಿ.
20 ನಿ: “ಸುವಾರ್ತೆ ನೀಡುವುದು—ಸಂಜಾವೇಳೆಯಲ್ಲಿ.” ಪ್ರಶ್ನೋತ್ತರ ಚರ್ಚೆ. ಸಂಜಾವೇಳೆಯ ಸಾಕ್ಷಿಗಾಗಿ ಸಭೆಯಲ್ಲಿರುವ ಏರ್ಪಾಡುಗಳನ್ನು ತಿಳಿಸಿರಿ. ಸಾಯಂಕಾಲದ ತಾಸುಗಳಲ್ಲಿ ಸಾಕ್ಷಿಕೊಡುವ ಮಹತ್ವವನ್ನು ಎತ್ತಿಹೇಳಲು ಒಂದು ಚಿಕ್ಕ ಸ್ಥಳೀಕ ಅನುಭವವನ್ನು ಉಪಯೋಗಿಸಬಹುದು.
15 ನಿ: “ಡು ಯು ಹೇಟ್ ಟು ರಿಸೀವ್ ಕ್ರಿಟಿಸಿಸಂ?” ಫೆಬ್ರವರಿ 8, 1991ರ ಅವೇಕ್! ಆಧರಿತ ಭಾಷಣ. ಟೀಕೆಯನ್ನು ಹೆಚ್ಚು ಹಿತಕರವಾಗಿ ಮಾಡುವ ಆರು ವಿಧಾನಗಳನ್ನು ಭಾಷಕನು ಸ್ಪಷ್ಟವಾಗಿ ತಿಳಿಸಬೇಕು. (ದೇಶಭಾಷೆ: “ದೇವರ ಭಯದಲ್ಲಿ ಪವಿತ್ರತವ್ವನ್ನು ಸಿದ್ಧಿಗೆ ತರುವುದು” ಕಾಬು. 91 3⁄1.)
ಸಂಗೀತ 65 (36) ಮತ್ತು ಸಮಾಪ್ತಿ ಪ್ರಾರ್ಥನೆ.
ಜೂನ್ 24 ರ ವಾರ
ಸಂಗೀತ 181 (10)
10 ನಿ: ಸ್ಥಳೀಕ ತಿಳಿಸುವಿಕೆಗಳು. ಸದ್ಯದ ಪತ್ರಿಕೆಗಳಿಂದ ಒಂದೆರಡು ಮಾತಾಡುವ ವಿಷಯಗಳನ್ನು ಎತ್ತಿಹೇಳಿರಿ.
17 ನಿ: “ಕ್ಷೇತ್ರಸೇವೆಯಲ್ಲಿರುವಾಗ ಇತರರಿಗೆ ಸಹಾಯ ಕೊಡುವುದು.” ಭಾಷಣ ಮತ್ತು ಸ್ವಲ್ಪ ಸಭಾ ಭಾಗವಹಿಸುವಿಕೆ. ಕ್ಷೇತ್ರದಲ್ಲಿ ಇತರರೊಂದಿಗೆ ಸೇವೆ ಮಾಡಿದ್ದರಿಂದ ದೊರೆತ ವೈಯಕ್ತಿಕ ಪ್ರಯೋಜನಗಳನ್ನು ವಿವರಿಸುವ ಒಬ್ಬ ಆದರ್ಶ ಪ್ರಚಾರಕನ ಸಂಕ್ಷಿಪ್ತ ಇಂಟರ್ವ್ಯೂ.
18 ನಿ: “ವೈ ಫಿಯರ್ ಗಾಡ್, ನಾಟ್ ಮೆನ್?” ಜೂನ್ 1, 1989ರ ವಾಚ್ಟವರ್ ಆಧರಿತ ಭಾಷಣ. (ದೇಶಭಾಷೆ: ಸಪ್ಟಂಬರ 1, 1990.) ಸ್ಥಳೀಕವಾಗಿ ಏಳಬಹುದಾದ ಪರಿಸ್ಥಿತಿಗಳಿಗೆ ಅನ್ವಯವನ್ನು ಮಾಡಿರಿ.
ಸಂಗೀತ 115 (36) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜುಲೈ 1 ರ ವಾರ
ಸಂಗೀತ 170 (95)
10 ನಿ: ಸ್ಥಳೀಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆ. ಜುಲೈ ನೀಡುವಿಕೆಯನ್ನು ಪರಾಮರ್ಶಿಸಿರಿ ಮತ್ತು ಅದನ್ನು ಹೊಸ ಸಂಭಾಷಣೆಗಾಗಿ ವಿಷಯವಾದ, “ದೇವರಿಗಾಗಿ ಹುಡುಕುವ ಸಮಯ ಈಗಲೇ” ಎಂಬದಕ್ಕೆ ಜೋಡಿಸುವುದು ಹೇಗೆಂದು ತಿಳಿಸಿರಿ. ಸೂಚಿಸಲ್ಪಟ್ಟ ವಚನಗಳು ಯೆಶಾಯ 55:6, 7 (ಸತ್ಯ ದೇವರನ್ನು ಕಂಡುಕೊಳ್ಳ ಸಾಧ್ಯವಿದೆ) ಮತ್ತು ಅಪೊಸ್ತಲರ ಕೃತ್ಯ 17:26, 27 (ಮನುಷ್ಯನು ದೇವರನ್ನು ಈಗ ಹುಡುಕಲೇ ಬೇಕು).
20 ನಿ: “ಕ್ಷೇತ್ರ ಸೇವೆಯಲ್ಲಿ ಬೈಬಲ್ ಉಪಯೋಗಿಸಿರಿ.” ಪ್ರಶ್ನೋತ್ತರ ಚರ್ಚೆ. 6 ನೇ ಪಾರಾದ ಸಂಬಂಧದಲ್ಲಿ, ಜುಲೈ ನೀಡುವಿಕೆಯನ್ನು ನೀಡುವ ಸಂಕ್ಷಿಪ್ತ ದೃಶ್ಯ ಮಾಡಿರಿ. ಹೊಸ ಸಂಭಾಷಣೆಗಾಗಿ ವಿಷಯದಿಂದ ಬರೇ ಒಂದು ವಚನವನ್ನು ಉಪಯೋಗಿಸಿರಿ.
15 ನಿ: “ಇಂಡೆಕ್ಸ್ ಕುಟುಂಬಕ್ಕೆ ಪ್ರಯೋಜನವಾಗಬಲ್ಲ ವಿಧ.” ಸಮಾಚಾರದ ಪ್ರಶ್ನೋತ್ತರ ಚರ್ಚೆ. ಎರಡನೇ ಪಾರಾ ಚರ್ಚಿಸುವಾಗ, ಇಂಡೆಕ್ಸ್ನ ಉಪಯೋಗವನ್ನು ಒಬ್ಬ ವಿವಾಹಿತ ದಂಪತಿಗಳು ದೃಶ್ಯ ಮಾಡಲಿ, ಅವರು “ಮ್ಯಾರೆಜ್” ಎಂಬ ಮುಖ್ಯ ಮೇಲ್ಬರಹದ ಕೆಳಗಿರುವ ಆಸಕ್ತಿಯ ಹಲವಾರು ಉಪಶೀರ್ಷಿಕೆಗಳನ್ನು ಎತ್ತಿಹೇಳುವರು.
ಸಂಗೀತ 151 (25) ಮತ್ತು ಸಮಾಪ್ತಿ ಪ್ರಾರ್ಥನೆ.