ದೇವಪ್ರಭುತ್ವ ವಾರ್ತೆಗಳು
◆ ಹಂಗೆರಿಯಲ್ಲಿ 11,257 ಪ್ರಚಾರಕರ ಹೊಸ ಉನ್ನತ ಸಂಖ್ಯೆಯು ದೊರೆತಿದೆ. ಬೈಬಲಭ್ಯಾಸದ ಸಂಖ್ಯೆ ಕಳೆದ ವರ್ಷದ 5,400 ರಿಂದ 7,219ಕ್ಕೆ ಏರಿದೆ
◆ ಯುದ್ಧದ ಸಮಯದಲ್ಲಿ ಕ್ಷಿಪಣಿ ಧಾಳಿಯಿಂದಾಗಿ ಕೆಲವು ಸಹೋದರರ ಮನೆಗಳು ನಷ್ಟವಾಗಿವೆಂದು ಇಸ್ರೇಲ್ ವರದಿ ಮಾಡಿದೆ, ಆದರೆ ಯಾರಿಗೂ ದೈಹಿಕ ಹಾನಿಯಾಗಿಲ್ಲ.
◆ ಲೈಬೀರಿಯದ ಕೆಲವು ಸ್ಥಳಗಳಲ್ಲಿ ಸಭಾ ಪ್ರಚಾರಕರು, ಬಹಳ ಕಷ್ಟದ ನಡುವೆಯೂ ಕ್ಷೇತ್ರ ಸೇವೆಯಲ್ಲಿ ಸರಾಸರಿ 20 ತಾಸುಗಳನ್ನು ಹಾಕುತ್ತಿದ್ದಾರೆ. ಪರಿಹಾರ ದ್ರವ್ಯವು ಕೋಟ್ ಡವ್ಲೈರ್ ಮತ್ತು ಸಿಯರ ಲಿಯೊನ್ ಬ್ರಾಂಚುಗಳಿಂದ ಪ್ರೀತಿಪೂರ್ವಕವಾಗಿ ಒದಗಿಸಲ್ಪಡುತ್ತಿದೆ.
◆ ನಿಕಾರಗದ್ವಲ್ಲಿ ಸಹೋದರರು, ಮನಾಗದ್ವ ಒಂದು ದೊಡ್ಡ ಸ್ಟೇಡಿಯಂ ನಲ್ಲಿ ಒಟ್ಟಾಗಿ ಕೂಡಲು ಶಕ್ತರಾದದ್ದು ಒಂಭತ್ತು ವರ್ಷಗಳಲ್ಲಿ ಇದು ಮೊದಲನೆ ಬಾರಿ. ಹಾಜರಿಯ ಉಚ್ಛಾಂಕ 11,404 ಮತ್ತು 283 ದೀಕ್ಷಾಸ್ನಾನಗಳು.