ಸುವಾರ್ತೆಯನ್ನು ನೀಡುವದು—ಬಾರಿಬಾರಿ ಆವರಿಸಲ್ಪಟ್ಟ ಟೆರಿಟೆರಿಯಲ್ಲಿ ಪತ್ರಿಕೆಗಳೊಂದಿಗೆ
1 ಅಪೊಸ್ತಲರ ಕೃತ್ಯ 8:25ರಲ್ಲಿ ನಾವು, ಪೇತ್ರ ಮತ್ತು ಯೋಹಾನರು ಸಮಾರ್ಯದಲ್ಲಿ ಒಂದು ಪೂರ್ಣ ಸಾಕ್ಷಿಯನ್ನಿತ್ತ ಮತ್ತು ಅಲ್ಲಿನ “ಅನೇಕ ಊರುಗಳಲ್ಲಿ ಸುವಾರ್ತೆಯನ್ನು ಸಾರಿದ” ಕುರಿತು ಓದುತ್ತೇವೆ. ಇಂದು ನಾವು ಸಹಾ ಒಂದು ಪೂರ್ಣ ರೀತಿಯಲ್ಲಿ ಸಾಕ್ಷಿ ಕೊಡಲಾಗುವಂತೆ, ನಮ್ಮ ಸಭೆಗೆ ನೇಮಿತವಾದ ಟೆರಿಟೆರಿಯನ್ನು ಆವರಿಸುವುದರಲ್ಲಿ ಶ್ರದ್ಧೆಯಿಂದಿರಬೇಕು.
2 ಪ್ರಚಾರಕರಲ್ಲಿ ತೀವ್ರ ವೃದ್ಧಿಯಾಗುತ್ತಿರುವುದರಿಂದ ಅನೇಕ ಸಭೆಗಳು, ತಮ್ಮ ಟೆರಿಟೆರಿಯನ್ನು ಬಾರಿಬಾರಿ ಆವರಿಸುತ್ತಿದ್ದಾರೆ. ಅನೇಕಾವರ್ತಿ ಸೇವೆಯಾಗಿರುವ ಕ್ಷೇತ್ರದಲ್ಲಿ ನಮ್ಮ ಆರಂಭದ ಪ್ರತಿಕ್ರಿಯೆ ನಕಾರಾತ್ಮಕವಾಗಿರ ಬಹುದಾದರೂ, ವಿಷಯವು ಹಾಗಿರಬಾರದು. ವಾಚ್ಟವರ್ ಮತ್ತು ಅವೇಕ್!ನ ಪ್ರತಿಯೊಂದು ಹೊಸ ಸಂಚಿಕೆಯೊಂದಿಗೆ, ನಮ್ಮ ಕ್ಷೇತ್ರದ ಜನರೊಂದಿಗೆ ಹಂಚಲು ಅಲ್ಲಿ ಯಾವಾಗಲೂ ಹೊಸ ಮತ್ತು ಆಸಕ್ತಿಯ ವಿಷಯಗಳಿವೆ. ಅಲ್ಲದೆ ನಾವು ನಮ್ಮ ಕ್ಷೇತ್ರವನ್ನು ಬಾರಿಬಾರಿಗೆ ಆವರಿಸುತ್ತಿರುವುದರಿಂದ, ಪ್ರತಿ ಮನೆಬಾಗಲಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಸಂದರ್ಭವು ಅಲ್ಲಿದೆ.
ಜನರೊಂದಿಗೆ ಸಂಭಾಷಿಸಿರಿ
3 ನಮ್ಮೆಲ್ಲಾ ಟೆರಿಟೆರಿಯನ್ನು ಆವರಿಸಲು ಮತ್ತು ಪತ್ರಿಕೆಗಳನ್ನು ವಿಸ್ತಾರವಾಗಿ ನೀಡಲು ಅತಿ ಸಂಕ್ಷೇಪ ಪತ್ರಿಕಾ ಪ್ರಸಂಗವನ್ನು ಉಪಯೋಗಿಸಲಾಗುತ್ತದೆ. ಆದರೂ ಬಾರಿಬಾರಿಗೆ ಸೇವೆಯಾದ ಕ್ಷೇತ್ರಗಳನ್ನು ಆವರಿಸುವ ಪ್ರಚಾರಕರು ಮನೆಯವರೊಂದಿಗೆ ಮಾತಾಡಲು ಹೆಚ್ಚು ಸಮಯವನ್ನು ತಕ್ಕೊಳ್ಳುವುದಾದರೆ, ಅದು ವಿಶೇಷ ಒಳ್ಳೆಯದು. ಎಳೆಯರು ಕೂಡಾ ಲೇಖನದಲ್ಲಿ ತಮಗೆ ಆಸಕ್ತಿ ಹುಟ್ಟಿಸಿದ ವಿಷಯದ ಕುರಿತು ವಿಸ್ತರಿಸಿ ಹೇಳಬಹುದು. ಇದನ್ನು ಪೂರೈಸುವುದು ಹೇಗೆ? ಪತ್ರಿಕೆಗಳ ಲೇಖನಗಳ ಒಳ್ಳೇ ಪರಿಚಯವು ನಮಗಿರುವುದು ಅತ್ಯಾವಶ್ಯಕ. ಇದಕ್ಕೆ ಸಮಯ ಮತ್ತು ಮುಂದಾಲೋಚನೆಯ ಅಗತ್ಯವಿದೆ. ಪತ್ರಿಕೆಗಳನ್ನು ಓದುವಾಗ, ನಿಮ್ಮ ಕ್ಷೇತ್ರದ ಜನರಿಗೆ ಯಾವ ವಿಷಯ ಅಪ್ಪೀಲಾಗಬಹುದೆಂದು ನಿರ್ಧರಿಸಿರಿ. ಅನಂತರ, ಸೇವೆಗೆ ಹೋಗುವ ಮೊದಲು, ಪತ್ರಿಕೆಗಳನ್ನು ತೆರೆದು ನೋಡಿರಿ ಮತ್ತು ನೀವು ತೋರಿಸಲಿರುವ ವಿಷಯಗಳನ್ನು ಹೆಕ್ಕಿರಿ. ಮನೆಬಾಗಲಲ್ಲಿ ಎದುರಾಗುವ ವಿವಿಧ ಪರಿಸ್ಥಿತಿಗಳಲ್ಲಿ ಯಾವ ಲೇಖನವನ್ನು ತೋರಿಸಬಹುದೆಂದು ಯೋಚಿಸಿಡಿರಿ. ಪತ್ರಿಕೆಯ ಒಂದು ಒಳ್ಳೇ ವಿಷಯವನ್ನು ನಿಮ್ಮ ಪೀಠಿಕೆಯ ಕೇಂದ್ರ ಬಿಂದುವಾಗಿ ಉಪಯೋಗಿಸಿರಿ. ಮನೆಯವನ ದೃಷ್ಟಿಕೋನವನ್ನು ಸ್ನೇಹಪರ ಸಂಭಾಷಣೆಯಲ್ಲಿ ಹೊರತೆಗೆದು ಸಕಾರಾತ್ಮಕ ಭಾವದಿಂದ ಪತ್ರಿಕೆ ನೀಡಿರಿ.
ನಿಮ್ಮ ಉದ್ದೇಶವನ್ನು ಮನಸ್ಸಿನಲ್ಲಿಡಿರಿ
4 ಮನೆಯಿಂದ ಮನೆಗೆ ಹೋಗುವ ನಮ್ಮ ಉದ್ದೇಶವು ಎಷ್ಟು ಪತ್ರಿಕೆಗಳನ್ನು ಯಾ ಪುಸ್ತಕಗಳನ್ನು ನಾವು ಹಂಚಬಹುದೆಂದು ನೋಡಲಿಕ್ಕಾಗಿ ಅಲ್ಲ. ಇತರರು ಸತ್ಯದ ನಿಷ್ಕೃಷ್ಟ ಜ್ಞಾನಕ್ಕೆ ಬರುವಂತೆ ಮಾಡುವದೇ ನಮ್ಮ ಅಪೇಕ್ಷೆಯಾಗಿರುತ್ತದೆ. ಪೇತ್ರ ಮತ್ತು ಯೋಹಾನರು ಸಮಾರ್ಯದವರಿಗೆ ಯೆಹೋವನ ವಾಕ್ಯವನ್ನು ಪೂರ್ಣ ರೀತಿಯಲ್ಲಿ ಸಾರಿದರು. ತದ್ರೀತಿ ನಾವು ಸಹಾ, ಕ್ಷೇತ್ರದ ಜನರು ಸತ್ಯಕ್ಕೆ ಪ್ರತಿಕ್ರಿಯೆ ತೋರಿಸುವಂತೆ ಸಂದರ್ಭಕೊಡಲು ಬೇಕಾದ ಸಮಯವನ್ನು ವ್ಯಯಿಸಲು ಸಿದ್ಧರಿರಬೇಕು.
5 ಪತ್ರಿಕೆಗಳನ್ನು ನಮ್ಮ ಸಂಭಾಷಣೆಯ ಮೂಲಾಧಾರವಾಗಿಟ್ಟು, ಪರಿಣಾಮಕಾರಿಯಾಗಿ ಉಪಯೋಗಿಸುವ ಮೂಲಕ ನಾವೀ ಉದ್ದೇಶವನ್ನು ಪೂರೈಸುವೆವು. “ಸುವಾರ್ತಾ ಸತ್ಯಾರ್ಥವನ್ನು ಭಯವಿಲ್ಲದೆ ತಿಳಿಸಲು ಬೇಕಾದ ಮಾರ್ಗವನ್ನು ಅನುಗ್ರಹಿಸಬೇಕೆಂದು” ನಾವು ನಮಗಾಗಿ ಹಾಗೂ ಇತರರಿಗಾಗಿ ಪ್ರಾರ್ಥನೆಯನ್ನು ಮಾಡುತ್ತಾ ಇರಬೇಕು.—ಎಫೆ. 6:18-20.