ಶುಶ್ರೂಷೆಯಲ್ಲಿ ತಾಳ್ಮೆಯಿಂದಲೂ ಪೂರ್ತಿಯಾಗಿಯೂ ಇರ್ರಿ
1 ಅಪೊಸ್ತಲ ಪೌಲನು ಆಲೈಸುವವರಿಗೆಲ್ಲಾ ಸುವಾರ್ತೆಯನ್ನು ಸಾರಿದಾಗ, ತಾಳ್ಮೆಯಿಂದಲೂ ಪೂರ್ತಿಯಾಗಿಯೂ ಅದನ್ನು ಮಾಡುವ ತೀವ್ರ ಜವಾಬ್ದಾರಿಯ ಭಾವವನ್ನು ಯೆಹೋವನ ಮುಂದೆ ಕಾಪಾಡಿಕೊಂಡನು. ನೆರೆದಿದ್ದ ಎಫೆಸದ ಮೇಲಿಚಾರ್ವಕರಿಗೆ ಆತನು ಆತ್ಮವಿಶ್ವಾಸದಿಂದ ಹೇಳಿದ್ದು: “ಪ್ರಾಣವನ್ನು ಉಳಿಸಿಕೊಳ್ಳುವದೇ ವಿಶೇಷವೆಂದು ನಾನು ಎಣಿಸುವದಿಲ್ಲ. ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ (ಪೂರ್ತಿಯಾಗಿ, NW) ಪ್ರಕಟಿಸಬೇಕೆಂಬದಾಗಿ ಕರ್ತನಾದ ಯೇಸುವಿನಿಂದ ನಾನು ಹೊಂದಿದ ಸೇವೆಯೆಂಬ ಓಟವನ್ನು ಕಡೆಗಾಣಿಸುವದೊಂದೇ ನನ್ನ ಅಪೇಕ್ಷೆ.” (ಅ.ಕೃ. 20:24) ಇದೇ ರೀತಿ ಮಾಡುವಂತೆ, ನಮ್ಮ ಮೇಲೆ ಹೊರಿಸಲ್ಪಟ್ಟ ಅವಶ್ಯಕತೆಯನ್ನು ನಾವು ಅರಿತಿದ್ದೇವೂ?—1 ಕೊರಿ. 9:16
ಹೆಚ್ಚು ಸಲ ಸೇವೆಯಾದ ಕ್ಷೇತ್ರದಲ್ಲಿ
2 ನಮ್ಮ ಕ್ಷೇತ್ರವು ಆಗಿಂದಾಗ್ಯೆ ಆವರಿಸಲ್ಪಡುವದರಿಂದ, ವಿಶೇಷವಾಗಿ ತಾಳ್ಮೆಯ ಆವಶ್ಯಕತೆ ಅಲ್ಲಿದೆ. ಕ್ಷೇತ್ರವು ಸೀಮಿತವಾದಾಗ್ಯೂ, ಪುನಃ ಪುನಃ ನಾವದನ್ನು ಸಂದರ್ಶಿಸಲು ಪ್ರೇರಿಸಲ್ಪಡಬೇಕು. ಪ್ರತಿ ಮನೆಯ ಎಲ್ಲಾ ನಿವಾಸಿಗಳನ್ನು ಸಂಪರ್ಕಿಸಲು ವಿಶೇಷ ಪ್ರಯತ್ನಗಳನ್ನು ಮಾಡಿ, ದೇವರ ರಾಜ್ಯದ ಬೈಬಲಾಧರಿತ ನಿರೀಕ್ಷೆಯನ್ನು ಪ್ರಾಮಾಣಿಕ ಜನರು ಗಣ್ಯ ಮಾಡುವಂತೆ ಪ್ರಗತಿಪೂರ್ವಕವಾಗಿ ಸಹಾಯ ಮಾಡಿರಿ.
3 ನಮ್ಮ ಕ್ಷೇತ್ರವು ಹೆಚ್ಚು ಸಲ ಆವರಿಸಲ್ಪಡುವಾಗ, ತಾಳ್ಮೆಯಿಂದಿರುವ ಇನ್ನೊಂದು ಪ್ರಯೋಜನ ಏನಂದರೆ ಮನೆಯವರೊಂದಿಗೆ ವೈಯಕ್ತಿಕವಾಗಿ ಹೆಚ್ಚು ಪರಿಚಯ ನಮಗಾಗುವದೇ. ಇದು ಅವರಿಗೆ ತಮ್ಮ ಮನೆಬಾಗಲನ್ನು ನಮಗೆ ತೆರೆಯಲು ಅಧಿಕ ಸುಲಭವನ್ನಾಗಿ ಮಾಡುವದು. ಹೆಚ್ಚುಸಲ ಸೇವೆಯಾದ ಕ್ಷೇತ್ರಗಳಲ್ಲಿ ನಮ್ಮ ಪೀಠಿಕೆಗಳನ್ನು ಬದಲಾಯಿಸಿಕೊಳ್ಳಲು, ರೀಸನಿಂಗ್ ಪುಸ್ತಕದಲ್ಲಿ ಅತ್ಯುತ್ತಮ ಸಲಹೆಗಳಿವೆ.—ರೀಸನಿಂಗ್ ಪುಟ 9-15 ನೋಡಿ.
4 ಕೆಲವು ಸಾರಿ ನಾವು ಸಂದರ್ಶನೆ ಮಾಡುವಾಗ ಜನರು ಸ್ವಲ್ಪ ಅಭಿರುಚಿ ತೋರಿಸುತ್ತಾರೆ, ಆದರೆ ಪುಸ್ತಕ ತಕ್ಕೊಳ್ಳುವದಿಲ್ಲ. ನಾವು ಹೇಗೆ ಪ್ರತಿಕ್ರಿಯೆ ತೋರಿಸಬೇಕು? ಪೂರ್ತಿಯಾಗಿ ಸೇವೆ ಮಾಡುವ ನಮ್ಮ ಪ್ರಯತ್ನದಲ್ಲಿ, ನಾವು ಆ ಅಭಿರುಚಿಯನ್ನು ಬಿಡದೆ ವಿಕಸಿಸಲು ಪ್ರೇರಿಸಲ್ಪಡಬೇಕು. ಅವರ ಹೃದಯದಲ್ಲಿ ನೆಡಲ್ಪಟ್ಟ ಆಸಕ್ತಿಯನ್ನು ಬೆಳೆಸಬೇಕು, ಇದರಿಂದಾಗಿ ಕಟಕಡ್ಟೆಗೆ ಒಂದು ಬೈಬಲ್ ಅಧ್ಯಯನವನ್ನು ಅವರು ಸ್ವೀಕರಿಸಲೂಬಹುದು. ಒಬ್ಬ ಸಹೋದರನು ಒಬ್ಬ ಅಸಕ್ತ ಮನೆಯವನನ್ನು ಅನುಕ್ರಮವಾಗಿ ಐದು ವಾರ ಸಂದರ್ಶಿದರೂ, ಪುಸ್ತಕವನ್ನು ನೀಡಶಕ್ತನಾಗಲಿಲ್ಲ. ಆರನೆಯ ಸಂದರ್ಶನೆಯಲ್ಲಿ ಮನೆಯವನು ಪುಸ್ತಕ ತಕ್ಕೊಂಡನು ಮತ್ತು ಕೊನೆಗೆ ಒಂದು ಬೈಬಲಧ್ಯಯವೂ ಪ್ರಾರಂಭಿಸಿತು.
ಬ್ರೊಷೂರ್ಗಳನ್ನು ನೀಡುವುದು
5 ಆಗಸ್ಟ್ ಮತ್ತು ಸಪ್ಟಂಬರಗಳಲ್ಲಿ ನಮ್ಮ ಸಂಭಾಷಣಾ ವಿಷಯವು “ಒಂದು ಹೊಸಲೋಕ—ಯಾರಿಂದ?” ಎಂಬದು. ಈ ವಿಷಯವು ಈ ಕೆಳಗಿನ ಯಾವುದೇ ಬ್ರೊಷೂರನ್ನು ನೀಡುವಾಗ ಬಳಸಲು ಸಾಕಷ್ಟು ಮಣನೀಯವಾಗಿದೆ: ಎಂಜಾಯ್ ಲೈಫ್ ಆನ್ ಅರ್ಥ್ ಫಾರೆವರ್!, “ಲುಕ್ ಐ ಏಮ್ ಮೇಕಿಂಗ್ ಅಲ್ ತಿಂಗ್ಸ್ ನ್ಯೂ,” ಶುಡ್ ಯು ಬಿಲಿವ್ ಇನ್ ದ ಟ್ರಿನಿಟಿ?, ದಿ ಡಿವೈನ್ ನೇಮ್ ದೇಟ್ ವಿಲ್ಲ್ ಎಂಡ್ಯೂರ್ ಫಾರೆವರ್, ಮತ್ತು ಗವರ್ನ್ಮೆಂಟ್ ದೇಟ್ ವಿಲ್ಲ್ ಬ್ರಿಂಗ್ ಪಾರಡೈಸ್. ಈ ಬ್ರೊಷೂರ್ಗಳ ಪರಿಚಯ ಮಾಡಿಕೊಳ್ಳಲು ನಾವು ಸಮಯ ಕೊಡುವದಾದರೆ, ಸಂಭಾಷಣೆಯ ವಿಷಯದೊಂದಿಗೆ ಉಪಯೋಗಿಸ ಬಹುದಾದ ತಕ್ಕದಾದ ಹಲವಾರು ಮಾತಾಡುವ ವಿಷಯಗಳನ್ನು ಕಂಡುಕೊಳ್ಳುವೆವು
6 ಉದಾಹರಣೆಗಾಗಿ, ನಾವು ನಮ್ಮ ಪರಿಚಯ ಮಾಡಿಸಿದನಂತರ ಹೀಗನ್ನಬಹುದು: “ಲೋಕ ಶಾಂತಿಯನ್ನು ತರುವ ವಿಷಯದಲ್ಲಿ ಮನುಷ್ಯನು ನೀಡುವ ವಾಗಾನದ್ದ ಕುರಿತು ನಿಮ್ಮ ಅಭಿಪ್ರಾಯವೇನು? [ಉತ್ತರಿಸಲು ಸಮಯಕೊಡಿ.] ಈ ವಿಷಯದಲ್ಲಿ ಮನುಷ್ಯನಿಗಿರುವ ಸಾಮರ್ಥ್ಯಗಳ ಕುರಿತು ಬೈಬಲಿನ ಹೇಳಿಕೆಗಳನ್ನು ಗಮನಿಸಿರಿ. [ಯೆರೆಮೀಯ 10:23 ಓದಿ.] ಶತಮಾನಗಳಲ್ಲೆಲ್ಲಾ ಮನುಷ್ಯನು, ತನ್ನನ್ನು ತಾನೇ ಆಳಿಕೊಳ್ಳಲು ನಿಜವಾಗಿ ಅಸಮರ್ಥನೆಂದು ರುಜುಪಡಿಸಿದ್ದಾನೆ. ಆದರೂ, ದೇವರ ನಂಬಲರ್ಹವಾದ ವಾಗ್ದಾನವನ್ನು ಗಮನಿಸಿರಿ. [2 ಪೇತ್ರ 3:13 ಓದಿ.] ಹೀಗೆ, ಹೊಸಲೋಕದ ದೇವರ ದೃಢವಾಗ್ದಾನವು ಸತ್ಯವಾಗಲಿದೆ.” ಅನಂತರ ಮನೆಯವನನ್ನು ನಮ್ಮ ಬ್ರೊಷೂರುಗಳಲ್ಲಿ ಒಂದನ್ನು ಓದುವಂತೆ ಉತ್ತೇಜಿಸಬಹುದು. “ಲುಕ್!” ಬ್ರೊಷೂರನ್ನು ನಾವು ಉಪಯೋಗಿಸುವುದಾದರೆ, ಪುಟ 30, ಪಾರೆಗ್ರಾಫ್ 58ರಲ್ಲಿ ತಿಳಿಸಿರುವ ವಿಷಯದ ಕಡೆಗೆ ನಾವು ಮನೆಯವನ ಗಮನವನ್ನು ಎಳೆಯಬಹುದು. ಗವರ್ನ್ಮೆಂಟ್ ಬ್ರೊಷೂರನ್ನು ನೀಡುವಾಗ, 3ನೇ ಪುಟದ ಮೊದಲನೆ ಪಾರಾದಲ್ಲಿ ತಿಳಿಸಿರುವುದನ್ನು ನಾವು ಎತ್ತಿಹೇಳಬಹುದು. ಲೈಫ್ ಆನ್ ಅರ್ಥ್ ಬ್ರೊಷೂರಿನ ಎದುರಿನ ಚಿತ್ರವು ಮನಸೆಳೆಯುತ್ತದೆ ಮಾತ್ರವಲ್ಲ ಸಂಭಾಷಣಾ ವಿಷಯದೊಂದಿಗೂ ಸಮ್ಮಿಳಿತವಾಗುತ್ತದೆ. ಅಲ್ಲದೆ, ಡಿವೈನ್ ನೇಮ್ ಬ್ರೊಷೂರ್ನ 31ನೇ ಪುಟದ 3ನೇ ಪಾರಾವನ್ನೂ ಉಪಯೋಗಿಸಬಹುದು.
7 ತಾಳ್ಮೆಯಿಂದಲೂ ಪೂರ್ತಿಯಾಗಿಯೂ ನಮ್ಮ ಕ್ಷೇತ್ರವನ್ನು ಸುವಾರ್ತೆಯಿಂದ ಆವರಿಸುವ ಫಲಿತಾಂಶವಾಗಿ, ಆಲೈಸುವವರಿಗೆ ರಕ್ಷಣೆಯು ದೊರಕುವದು. (1 ತಿಮೊ. 4:16) ಸಮಯವು ಸ್ವಲ್ಪವೇ ಉಳಿದಿದೆ! ಆದ್ದರಿಂದ ನಾವು ಈ ರಕ್ಷಣಾ ಸಂದೇಶವನ್ನು ಸಾರುವದರಲ್ಲಿ ಪೂರ್ಣ ಪಾಲಿಗರಾಗುವಾಗ ತಾಳ್ಮೆಯುಳ್ಳವರಾಗೋಣ ಮತ್ತು ಪೂರ್ತಿಯಾದ ಸಾಕ್ಷಿಯನ್ನು ನೀಡೋಣ.