ಸಭಾ ಪುಸ್ತಕಭ್ಯಾಸದ ಏರ್ಪಾಡು
ಭಾಗ 2: ತಯಾರಿಸುವ ಮತ್ತು ಭಾಗವಹಿಸುವ ಅಗತ್ಯ
1 ಜ್ಞಾನವನ್ನು ಪಡೆದವನು ಮತ್ತು ವಿವೇಕವನ್ನು ಸಂಪಾದಿಸಿದವನು ಭಾಗ್ಯವಂತನು ಎಂದು ಯೆಹೋವನ ವಾಕ್ಯವು ಹೇಳುತ್ತದೆ, ಯಾಕಂದರೆ ಅದರಿಂದ ದೊರೆಯುವ ಬಹುಮಾನಗಳು ಅನೇಕ. (ಜ್ಞಾನೋ. 3:13, 14, 16-18) ಆತ್ಮಿಕ ವಿವೇಕವು ಅಮೂಲ್ಯವು, ಅದು ಜೀವವನ್ನು ರಕ್ಷಿಸುತ್ತದೆ. ಅದು ಕ್ರೈಸ್ತನನ್ನು ಅವನು ದೇವರ ವಾಕ್ಯದಿಂದ ಪಡೆಯುವ ಜ್ಞಾನವನ್ನು ಕ್ರಿಯಾಶೀಲ ಆರಾಧನೆಯಲ್ಲಿ, ದಿನದಿನದ ಸಮಸ್ಯೆಯನ್ನು ಪರಿಹರಿಸುವುದರಲ್ಲಿ ಮತ್ತು ಜೀವನದಲ್ಲಿ ತನ್ನ ಗುರಿಗಳ ಕುರಿತು ನಿರ್ಣಯಗಳನ್ನು ಮಾಡುವದರಲ್ಲಿ ಸದುಪಯೋಗಕ್ಕೆ ಹಾಕಲು ಶಕ್ತನಾಗುವಂತೆ ಮಾಡುತ್ತದೆ.
2 ಸಭಾ ಪುಸ್ತಕಭ್ಯಾಸವು ದೇವರ ವಾಕ್ಯವನ್ನು ಅಭ್ಯಾಸಿಸುವಂತೆ ಮತ್ತು ಅನ್ವಯಿಸುವಂತೆ ಮತ್ತು ಹೀಗೆ ನಾವು ಜ್ಞಾನದಲ್ಲಿ ಮತ್ತು ಆತ್ಮಿಕ ಗ್ರಹಿಕೆಯಲ್ಲಿ ಬೆಳೆಯುವಂತೆ ನಮ್ಮ ಸಹಾಯಕ್ಕಾಗಿ ರಚಿಸಲಾಗಿದೆ. ಆದ್ದರಿಂದ ಸಭಾ ಪುಸ್ತಕಭ್ಯಾಸವನ್ನು ಕ್ರಮವಾಗಿ ಹಾಜರಾಗುವುದು, ವಿವೇಕವನ್ನು ಸಂಪಾದಿಸುವ ನಮ್ಮ ವೈಯಕ್ತಿಕ ಕಾರ್ಯಕ್ರಮದ ಪ್ರಧಾನ ಭಾಗವಾಗಿರಬೇಕು.—ಜ್ಞಾನೋ. 4:7-9.
ಪೂರ್ಣವಾಗಿ ತಯಾರಿಸಿರಿ
3 ಒಂದನೇ ಶತಮಾನದ ಸಭೆಯಲ್ಲಿ ಕೂಡಿದ್ದ ಕೆಲವರು ಸತ್ಯವನ್ನು ಕಲಿಯಲು ಮತ್ತು ಸತ್ಯದ ಪ್ರಗತಿಪರ ಬೆಳಕಿಗೆ ತಮ್ಮನ್ನು ಹೊಂದಿಸಿಕೊಳ್ಳಲು ಪರಿಶ್ರಮದಿಂದ ದುಡಿಯಲಿಲ್ಲ. ಅವರು ಕ್ರಿಸ್ತನಲ್ಲಿ ಕೂಸುಗಳಾಗಿ ಮತ್ತು ನೀತಿಯ ಮಾತುಗಳಲ್ಲಿ ಪರಿಚಯವಿಲ್ಲದವರಾಗಿ ಉಳಿದರು. (ಇಬ್ರಿ. 5:11-13) ಆದ್ದರಿಂದ ಅಪೊಸ್ತಲ ಪೌಲನು ಸಭೆಯನ್ನು “ಪ್ರೌಢತೆಯ ಕಡೆಗೆ ಮುಂದರಿಯಲು” ಪ್ರಬೋಧಿಸಿದ್ದನು. (ಇಬ್ರಿಯ. 6:1) ವ್ಯಕ್ತವಾಗಿಯೇ ಇದಕ್ಕೆ, ಇತರರು ಸತ್ಯವನ್ನು ಚರ್ಚಿಸುವದಕ್ಕೆ ಬರೇ ಕಿವಿಗೊಡುವಕ್ಕಿಂತ ಹೆಚ್ಚಿನದ್ದು ಬೇಕು. “ಸ್ಪಷ್ಟವಾಗಿದ ಯೋಚನಾ ಶಕ್ತಿಯನ್ನು” ಚೇತರಿಸಲು ಆಲೋಚನೆ ಮತ್ತು ಸಂಶೋಧನೆಯು ಅತ್ಯಗತ್ಯ ಮತ್ತು ನಾವು ನಮ್ಮನ್ನು ಪರಿಶ್ರಮಪಟ್ಟು ದುಡಿಸಿಕೊಳ್ಳತಕ್ಕದ್ದು.—2 ಪೇತ್ರ 3:1, 2; ಲೂಕ 13:24.
4 ಸಭಾ ಪುಸ್ತಕಭ್ಯಾಸಕ್ಕಾಗಿ ಪೂರಾ ರೀತಿಯ ತಯಾರಿಯು ನಮ್ಮ ತಿಳುವಳಿಕೆಯನ್ನು ಅಧಿಕಗೊಳಿಸುತ್ತದೆ ಮತ್ತು ಸಮಾಚಾರಕ್ಕಾಗಿ ನಮ್ಮ ಗಣ್ಯತೆಯನ್ನು ಹೆಚ್ಚಿಸುತ್ತದೆ. ಆದರೂ, ಪರಿಣಾಮಕಾರಿ ತಯಾರಿಯಲ್ಲಿ ಕೇವಲ ಪಾರೆಗ್ರಾಫ್ ಓದುವಿಕೆ ಮತ್ತು ಪ್ರಶ್ನೆಗಳ ಮೂಲಭೂತ ಉತ್ತರಕ್ಕೆ ಬೇಗನೇ ಅಡಿಗೀಟು ಹಾಕುವಿಕೆಗಿಂತ ಹೆಚ್ಚು ಸೇರಿದೆ. ಸಮಾಚಾರದ ಅರ್ಥ ಮತ್ತು ಅದು ನಮಗೆ ವೈಯಕ್ತಿಕವಾಗಿ ಹೇಗೆ ಬೆಲೆಯುಳ್ಳದ್ದು ಎಂದು ಮನನ ಮಾಡುವ ಮೂಲಕ ಅದನ್ನು ಸವಿದು ನೋಡಲು ಸಮಯದ ಅಗತ್ಯ ನಮಗಿದೆ. ಕೊಡಲ್ಪಟ್ಟ ವಚನಗಳನ್ನು ತೆರೆದು ನೋಡಿರಿ ಮತ್ತು ಅವು ಪಾರೆಗ್ರಾಫ್ನ ವಿಷಯಗಳಿಗೆ ಹೇಗೆ ಸಂಬಂಧಿಸಿದೆಂದು ಯೋಚಿಸಿರಿ. ಪೂರ್ಣವಾಗಿ ಅರ್ಥವಾಗದ ಶಬ್ದಗಳನ್ನು ತೆರೆದು ನೋಡಿರಿ.
ಭಾಗವಹಿಸಿರಿ
6 ಪ್ರತಿಯೊಂದು ಕೂಟದಲ್ಲಿ ನಾವು ಭಾಗವಹಿಸಲು ಪ್ರಯತ್ನ ಮಾಡಬೇಕು. ಯಾಕೆ? ಚೆನ್ನಾಗಿ ತಯಾರಿಸಿದ ನಮ್ಮ ಉತ್ತರವು ನಮ್ಮ ನಂಬಿಕೆಯ ವ್ಯಕ್ತಪಡಿಸುವಿಕೆಯಾಗಿದೆ ಮಾತ್ರವಲ್ಲ ಅವು ನಮ್ಮ ಸಹೋದರರನ್ನು ಕಟ್ಟುತ್ತದೆ ಮತ್ತು ಅವರಿಗೆ ಪ್ರೋತ್ಸಾಹನೆಯನ್ನೂ ಕೊಡುತ್ತದೆ. (ರೋಮಾ. 10:10; ಇಬ್ರಿ. 10:23-25) ಸಭಾ ಪುಸ್ತಕಭ್ಯಾಸದಲ್ಲಿ ಕ್ರಿಯಾಶೀಲ ಭಾಗವಹಿಸುವಿಕೆಯು ನಮ್ಮ ಆಶ್ಮಿಕ ವಿಕಾಸದಲ್ಲಪಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಅನುಭವಸ್ಥರು, ಮಕ್ಕಳು, ಹೊಸಾಸಕ್ತಿ ತೋರಿಸುವವರು ಎಲ್ಲರೂ ಸರಾಗವಾಗಿ ಉತ್ತರಕೊಡುವದಾದರೆ, ಗುಂಪು ಒಂದು ಸಮೃದ್ಧವಾದ ವ್ಯಕ್ತಪಡಿಸುವಿಕೆಯಲ್ಲಿ ಆನಂದಿಸುತ್ತದೆ.—KM 4⁄86 ಪುಟ 3.
7 ಸಭಾ ಪುಸ್ತಕಭ್ಯಾಸಕ್ಕೆ ನಾವು ಶ್ರದ್ಧಾಪೂರ್ವಕವಾಗಿ ತಯಾರಿಸುವುದಾದರೆ, ಕ್ರಮವಾಗಿ ಹಾಜರಾಗಿ ಸರಾಗವಾಗಿ ಉತ್ತರ ಕೊಡುವದಾದರೆ, ಜ್ಞಾನಕ್ಕಾಗಿ ನಮ್ಮ ಹುಡುಕುವಿಕೆಯ ಸಫಲಗೊಳ್ಳುವದು ಮತ್ತು “ಆಗ ನಾವು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದು ಕೊಳ್ಳುವೆವು.”—ಜ್ಞಾನೋ. 2:4, 5.