ಸುವಾರ್ತೆಯನ್ನು ನೀಡುವುದು—ಪ್ರಕಾಶನಗಳನ್ನು ವಿವೇಕದಿಂದ ಉಪಯೋಗಿಸುವ ಮೂಲಕ
1 1991ರ ಸೇವಾ ವರ್ಷದ ವಿಶೇಷ ಸಮ್ಮೇಳನ ದಿನ ಕಾರ್ಯಕ್ರಮವು, “ನಮ್ಮ ಶುಶ್ರೂಷೆಯು ಸಾಮಾನ್ಯವಲ್ಲ—ಪವಿತ್ರವಾದದ್ದು” ಎಂಬದರ ಮೇಲೆ ಒಂದು ಚರ್ಚೆಯನ್ನು ನಡಿಸಿತ್ತು. ನಮ್ಮ ಸೇವೆಯು ಪವಿತ್ರವಾಗಿದೆ ಮತ್ತು ಅದನ್ನು ಹಗುರವೆಂದೆಣಿಸಬಾರದು ಎಂದು ಅದು ಒತ್ತಿಹೇಳಿತ್ತು. ಮುದ್ರಿತ ಸಾಹಿತ್ಯದ ಉಪಯೋಗವು ನಮ್ಮ ಶುಶ್ರೂಷೆಯ ಪ್ರಧಾನ ಭಾಗವಾಗಿರುವುದರಿಂದ, ಇದನ್ನು ಸಹಾ ನಾವು ಗೌರವದಿಂದ ನೋಡಬೇಕು. ನಮ್ಮ ಪ್ರಕಾಶನಗಳನ್ನು ವಿವೇಕದಿಂದ ಉಪಯೋಗಿಸುವ ಮೂಲಕ ನಾವು ಪ್ರತಿಯೊಬ್ಬರು ನಮ್ಮ ಆಳವಾದ ಗಣ್ಯತೆಯನ್ನು ತೋರಿಸಬಲ್ಲೆವು.
2 1990ರ ಸೇವಾ ವರ್ಷದಲ್ಲಿ, ಸೊಸೈಟಿಯು ಲೋಕವ್ಯಾಪಕ ಹೊಲದಲ್ಲಿ ಉಪಯೋಗಿಸಲಿಕ್ಕಾಗಿ 67 ಕೋಟಿ 80 ಲಕ್ಷ ಪತ್ರಿಕೆಗಳನ್ನು ಮತ್ತು 5 ಕೋಟಿ 10 ಲಕ್ಷಕ್ಕಿಂತಲೂ ಹೆಚ್ಚು ಬೈಬಲ್ ಮತ್ತು ಬೌಂಡ್ ಪುಸ್ತಕಗಳನ್ನು ಉತ್ಪಾದಿಸಿತು. ಇದು ಸಮಯ, ಶಕ್ತಿ ಮತ್ತು ಹಣ ಒಳಗೂಡಿರುವ ಸಮರ್ಪಿತ ಮೂಲಸಂಪತ್ತಿನ ಒಂದು ಪ್ರಚಂಡವಾದ ವ್ಯಯವನ್ನು ಪ್ರತಿನಿಧಿಸುತ್ತದೆ. ಅನೇಕಾನೇಕ ಸ್ವಯಂಸೇವಕರ ಸಂಮಿಳಿತ ಪ್ರಯತ್ನಗಳಿಂದಾಗಿ ಕ್ಷೇತ್ರಸೇವೆಯಲ್ಲಿ ಹಂಚಲು ಮತ್ತು ವೈಯಕ್ತಿಕ ಬಳಕೆ ಎರಡಕ್ಕೂ ಬೇಕಾದ ಉಚ್ಛತಮ ಸಾಹಿತ್ಯದ ಉತ್ಪಾದನೆಯು ಫಲಿಸುತ್ತದೆ. ರಾಜ್ಯ ಸಂದೇಶವನ್ನು ಪ್ರಾಮಾಣಿಕ ಹೃದಯದ ಜನರಿಗೆ ಪ್ರಕಟಿಸುವಾಗ, ನಾವು ನಮ್ಮ ಸಾಹಿತ್ಯಕ್ಕೆ ಹೃದಯಪೂರ್ವಕ ಗಣ್ಯತೆಯನ್ನು ತೋರಿಸಬಹುದಾದ ಕೆಲವು ವಿಧಾನಗಳು ಯಾವುವು?
3 ವೈಯಕ್ತಿಕ ಮತ್ತು ಕುಟುಂಬ ಅಭ್ಯಾಸ: ರೋಮಾಪುರ 2:21ರಲ್ಲಿ ಅಪೊಸ್ತಲ ಪೌಲನು ಅನ್ನುವದು: “ಹೀಗಿರಲಾಗಿ ಮತ್ತೊಬ್ಬನಿಗೆ ಉಪದೇಶ ಮಾಡುವ ನೀನು ನಿನಗೆ ಉಪದೇಶ ಮಾಡಿಕೊಳ್ಳದೆ ಇದಿಯ್ದೋ?” ನಮ್ಮ ಬೈಬಲಾಧಾರಿತ ಸಾಹಿತ್ಯವನ್ನು ಓದಲು, ಅಧ್ಯಯನಿಸಲು ಮತ್ತು ಪ್ರಾರ್ಥನಾಪೂರ್ವಕವಾಗಿ ಮನನ ಮಾಡಲು ಸಮಯ ತಕ್ಕೊಳ್ಳುವಾಗ, ಯೆಹೋವನು ತನ್ನ ನಂಬಿಗಸ್ತ ಮನೆವಾರ್ತೆಯ ಮೂಲಕ ಹೊತ್ತುಹೊತ್ತಿಗೆ ಕೊಡುತ್ತಿರುವ ಆತ್ಮಿಕ ಆಹಾರವನ್ನು ನಾವೆಷ್ಟು ಬೆಲೆಯಳ್ಳದ್ದೆಂದು ಮಾನ್ಯಮಾಡುತ್ತೇವೆಂದು ಆ ಮೂಲಕ ಪ್ರದರ್ಶಿಸುತ್ತೇವೆ. (ಲೂಕ 12:42) ವೈಯಕ್ತಿಕ ಅಭ್ಯಾಸದಿಂದಾಗಲಿ ಯಾ ಕುಟುಂಬ ಅಭ್ಯಾಸದಿಂದಾಗಲಿ, ಪ್ರಕಟಿಸಲ್ಪಟ್ಟ ಸತ್ಯಕ್ಕೆ ನಾವು ಸರಿಯೆದೆಯಾಗಿ ಮುಂದರಿಯುವ ಮೂಲಕ ಯೆಹೋವನು ನಮ್ಮ ಜೋಕೆಗೆ ಒಪ್ಪಿಸಿರುವ ಎಲ್ಲದಕ್ಕಾಗಿ ಉಚ್ಛತಮ ಗಣ್ಯತೆಯನ್ನು ಬೆಳಿಸಿಕೊಳ್ಳಲು ಶಕ್ತರಾಗುತ್ತೇವೆ. ಮಕ್ಕಳು ಕೂಡಾ ತಮ್ಮ ಪುಸ್ತಕಗಳನ್ನು ಗಣ್ಯ ಮಾಡುವಂತೆ ಮತ್ತು ಜೋಕೆ ಮಾಡುವಂತೆ ಯೋಗ್ಯ ತರಬೇತಿಯನ್ನು ಕೊಡಬೇಕು, ಅದರ ಮೇಲೆ ಅಡ್ಡಾತಿಡಿಯ್ಡಾಗಿ ಗೀಚುವಂತೆ ಯಾ ಅಂದಗೆಡಿಸುವಂತೆ ಬಿಡಬಾರದು. ಅದಲ್ಲದೆ, ಕ್ಷೇತ್ರದಲ್ಲಿ ಬಳಸಲು ನಮ್ಮ ಸಾಹಿತ್ಯವು ನೀಟಾಗಿಯೂ ಶುಚಿಯಾಗಿಯೂ ಇರುವಂತೆ ಅವನ್ನು ಯೋಗ್ಯವಾಗಿ ಸಂಗ್ರಹಿಸಿಡಬೇಕು.
4 ದುಂದುತನವನ್ನು ವರ್ಜಿಸಿರಿ: ನಿಜ ಪ್ರಯೋಜನ ತರಬೇಕಾದರೆ, ನಮ್ಮ ಸಾಹಿತ್ಯವು ಸತ್ಯಾನೇಷ್ವಕರ, ಅಂದರೆ ನಮ್ಮ ಸಂದೇಶದಲ್ಲಿ ಮತ್ತು ಕಾರ್ಯದಲ್ಲಿ ನಿಜಾಸಕ್ತಿಯುಳ್ಳವರ ಕೈಗೆ ತಲಪಬೇಕು. (ಮತ್ತಾ. 10:11) ಆದುದರಿಂದ ಅಸಾಧಾರಣ ಸಂದರ್ಭದಲ್ಲೇ ಹೊರತು ಬೇರೆ ಯಾವಾಗಲಾದರೂ ನಾವು ಸಾಹಿತ್ಯವನ್ನು ಕೊಟ್ಟುಬಿಡುವದನ್ನು ವರ್ಜಿಸಬೇಕು. ಪತ್ರಿಕೆಗಳು, ಪುಸ್ತಕಗಳು ಮತ್ತು ಇತರ ಸಾಹಿತ್ಯಗಳು ಮನೆಯಲ್ಲಿ ರಾಶಿಯಾಗಿ ಸಂಚಯವಾಗುವಂತೆ ಬಿಡುವಾಗಲೂ ದುಂದುತನ ಸಂಭವಿಸುತ್ತದೆ.
5 ಪತ್ರಿಕೆಗಳು ತಾರೀಕನ್ನು ತೋರಿಸುವುದರಿಂದ, ಹೊಸ ಪತ್ರಿಕೆಗಳಾಗಿ ಅವನ್ನು ನೀಡಲು ನಮಗಿರುವ ಸಮಯವು ಸೀಮಿತ. ಆದ್ದರಿಂದ ಸೇವೆಗೆ ಹೋಗಿ ಈ ಪತ್ರಿಕೆಗಳನ್ನು ಆಸಕ್ತ ಜನರಿಗೆ ದೊರಕುವಂತೆ ಮಾಡಲು ಹೆಚ್ಚು ಪ್ರಯತ್ನಗಳನ್ನು ಮಾಡುವ ಅಗತ್ಯ ನಮಗಿದೆ. ನಮ್ಮ ಪತ್ರಿಕೆಗಳು ಇನ್ನೂ ಸಂಚಯವಾಗುತ್ತಿವೆಂದು ಕಂಡು ಬಂದರೆ, ನಮ್ಮ ಕಾಲತಖ್ತೆಯನ್ನು ಅಳವಡಿಸಿ ಪತ್ರಿಕಾ ಸೇವೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವುದು ಒಳ್ಳೆಯದು. ಅಥವಾ ಇದನ್ನು ಸಮಂಜಸವಾಗಿ ಮಾಡಶಕ್ಯತೆ ಇಲ್ಲದಿದ್ದರೆ, ನಿಮ್ಮ ಆರ್ಡರನ್ನು ಕಡಿಮೆ ಮಾಡಿರಿ. ಈ ಸಲಹೆಗಳನ್ನು ಪಾಲಿಸುವ ಮೂಲಕ, ದೇವರ ಅಪಾತ್ರ ಕೃಪೆಯ ನಂಬಿಗಸ್ತ ಮನೆವಾರ್ತೆಯವರಾಗಿ ನಮ್ಮನ್ನು ತೋರಿಸಿ ಕೊಡುವೆವು.—1 ಕೊರಿ. 4:2; 1 ಪೇತ್ರ 4:10, 11; ಲೂಕ 16:1, 10ನ್ನು ಹೋಲಿಸಿ.
6 ಯೆಹೋವನು ತನ್ನ ಸಮರ್ಪಿತ ಜನರ “ವಶಕ್ಕೆ” ಒಂದು ಅತ್ಯಂತ ಭಾರವಾದ ಜವಾಬ್ದಾರಿ ಮತ್ತು ಕೆಲಸವನ್ನು ಒಪ್ಪಿಸಿರುತ್ತಾನೆ, ಯಾವುದರ ಮೇಲೆ ಆತನ ನಂಬಿಗಸ್ತ “ಮನೆವಾರ್ತೆಗಾರ”ನಿಗೆ ಅಧಿಕಾರವಿದೆಯೇ ಆ “ಆಸ್ತಿಯೂ” ಅದರಲ್ಲಿ ಸೇರಿದೆ. (2 ತಿಮೊ. 1:12; ಲೂಕ 12:42-44, 48ಬಿ; 1 ತಿಮೊ. 6:20) ದೇವರ ಸೇವೆಯಲ್ಲಿ ನಮ್ಮ ಸುಯೋಗಗಳಿಗಾಗಿ ಆಳವಾದ ಗಣ್ಯತೆಯೊಂದಿಗೆ, ಇತರರಿಗೆ ಸುವಾರ್ತೆಯನ್ನು ನೀಡುವುದರಲ್ಲಿ ನಾವು ನಮ್ಮ ಸಾಹಿತ್ಯವನ್ನು ವಿವೇಕದಿಂದ ಉಪಯೋಗಿಸುವುದನ್ನು ಮುಂದರಿಸೋಣ.