ನವಂಬರಕ್ಕಾಗಿ ಸೇವಾ ಕೂಟಗಳು
ನವಂಬರ 4ರ ವಾರ
ಸಂಗೀತ 199 (40)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ತಕ್ಕದಾದ್ದ ಪ್ರಕಟಣೆಗಳು.
20 ನಿ: “ಪ್ರಚಲಿತ ಘಟನೆಗಳ ನಿಜಾರ್ಥವನ್ನು ಗಣ್ಯಮಾಡುವದು.” ಪ್ರಶ್ನೋತ್ತರ ಚರ್ಚೆ. 6ನೇ ಪಾರಾವನ್ನು ಚರ್ಚಿಸಿದ ಬಳಿಕ, ಹೊಸ ಸಂಭಾಷಣೆಯ ವಿಷಯವನ್ನುಪಯೋಗಿಸಿ ಒಂದು ದೃಶ್ಯವನ್ನು ಮಾಡಿರಿ. ಪ್ರಚಲಿತ ಅವೇಕ್! [ಎಚ್ಚರ!] ಪತ್ರಿಕೆಯಿಂದ ವಿಶಿಷ್ಠ ವಿಷಯವನ್ನು ತೋರಿಸಿರಿ.
15 ನಿ: ಅವೇಕ್! [ಎಚ್ಚರ!] ಪತ್ರಿಕೆಯು ನಮಗೆ ವೈಯಕ್ತಿಕವಾಗಿ ಪ್ರಯೋಜನ ಮಾಡಿದ ವಿಧ. ನುರಿತ ಸಹೋದರನು 2-3 ಪ್ರಚಾರಕರನ್ನು ಇಂಟರ್‌ವ್ಯೂ ಮಾಡುತ್ತಾನೆ, ಇವರಲ್ಲಿ ಒಬ್ಬನಾದರೂ ಶಾಲಾವಯಸ್ಸಿನ ಯುವಕನು ಸೇರಿರಲಿ.
ಸಂಗೀತ 174 (13) ಮತ್ತು ಸಮಾಪ್ತಿಯ ಪ್ರಾರ್ಥನೆ
ನವಂಬರ 11ರ ವಾರ
ಸಂಗೀತ 27 (7)
5 ನಿ: ಸ್ಥಳೀಕ ತಿಳಿಸುವಿಕೆಗಳು.
15 ನಿ: “ಕ್ಷೇತ್ರ ಸೇವೆಯಲ್ಲಿ ಪೂರ್ಣಾತ್ಮದಿಂದಿರ್ರಿ—ಭಾಗ 4.” ಭಾಷಣ. ಮನೆವಾರ್ತೆಯ ಎಲ್ಲರೂ ಸಂಸ್ಥಾಪಿಸಲ್ಪಡುವಂತೆ ಮತ್ತು ನ್ಯಾಯಸಮ್ಮತ ಸೇವಾ ಗುರಿಗಳನ್ನಿಡುವಂತೆ ಸಹಾಯ ಮಾಡಲು ಕುಟುಂಬ ತಲೆಗಳನ್ನು ಪ್ರೋತ್ಸಾಹಿಸಿರಿ.
15 ನಿ: “ಸುವಾರ್ತೆಯನ್ನು ನೀಡುವುದು—ಪ್ರಕಾಶನ
ಗಳನ್ನು ವಿವೇಕದಿಂದ ಉಪಯೋಗಿಸುವ ಮೂಲಕ.” ಪ್ರಶ್ನೋತ್ತರಗಳು. ಸಮಾಚಾರವನ್ನು ಸ್ಥಳೀಕವಾಗಿ ಅನ್ವಯಿಸಿರಿ.
10 ನಿ: “ದೀನತೆಯನ್ನು ಯಾಕೆ ಧರಿಸಿಕೊಳ್ಳಬೇಕು?” ಜುಲೈ 15, 1991ರ ವಾಚ್‌ಟವರ್ ಲೇಖನದ ಆಧಾರದಿಂದ, ಪುಟ 27-30. (ದೇಶಭಾಷೆ: “ಒಳನೋಟಕ್ಕಾಗಿ ಯೆಹೋವನ ಕಡೆಗೆ ನೋಡಿರಿ.” ಕಾ.ಬು. ಆಗಸ್ಟ್ 1, 1990.)
ಸಂಗೀತ 92 (51) ಮತ್ತು ಸಮಾಪ್ತಿಯ ಪ್ರಾರ್ಥನೆ.
ನವಂಬರ 18ರ ವಾರ
ಸಂಗೀತ 164 (73)
10 ನಿ: ಸ್ಥಳೀಕ ತಿಳಿಸುವಿಕೆಗಳು, ದೇವಪ್ರಭುತ್ವ ವಾರ್ತೆ, ಎಕೌಂಟ್ಸ್ ರಿಪೋರ್ಟ್. ಮತ್ತು ದಾನ ಅಂಗೀಕಾರಗಳನ್ನು ಓದಿರಿ. ಒಕ್ಟೋಬರದ ಕ್ಷೇತ್ರ ಸೇವಾ ವರದಿಯನ್ನು ಸಭೆಗೆ ತಿಳಿಸಿರಿ.
20 ನಿ: ಸ್ಕೂಲ್ ಆ್ಯಂಡ್ ಜೆಹೋವಾಸ್ ವಿಟ್ನೆಸಸ್ ಬ್ರೊಷರಿನ ಮೂಲ್ಯತೆ. ಭಾಷಣ, ಹಿರಿಯನಿಂದ, ಇವನು ಹೆತ್ತವನಾಗಿದ್ದರೆ ಒಳ್ಳೆಯದು. ಯೆಹೋವ ಸಾಕ್ಷಿಗಳ ನಂಬಿಕೆಯನ್ನು ಶಾಲಾ ಅಧಿಕಾರಿಗಳಿಗೆ ಪರಿಚಯ ಪಡಿಸಲು ಮತ್ತು ಶಾಲಾ ಚಟುವಟಿಕೆಗಳು ಒಳಗೂಡಿರುವ ವಿಷಯಗಳಲ್ಲಿ ಕ್ರೈಸ್ತ ಹೆತ್ತವರಿಗೆ ಮತ್ತು ಯುವಕರಿಗೆ ಇಬ್ಬರಿಗೂ ನೆರವಾಗಲು ಈ ಬ್ರೊಷರ್ ಹೇಗೆ ಉಪಯುಕ್ತವೆಂಬದನ್ನು ಎತ್ತಿಹೇಳಿರಿ. ಈ ಮುದ್ರಿತ ಸಮಾಚಾರವನ್ನು ಆಗಿಂದಾಗ್ಯೆ ಯುವಕರೊಂದಿಗೆ ಪುನರಾವರ್ತಿಸಬೇಕು. ಸಮಸ್ಯೆಗಳು ಅಥವಾ ಪ್ರಶ್ನೆಗಳು ಎದ್ದಲ್ಲಿ, ಮಾರ್ಗದರ್ಶನೆಗಾಗಿ ಬ್ರೋಷರನ್ನು ನಿರ್ದೇಶಿಸಿರಿ. “ಸೌಂಡ್ ಮೋರಲ್ ಪ್ರಿನ್ಸಿಪಲ್ಸ್” ಮತ್ತು “ಹಾಲಿಡೇಸ್ ಆ್ಯಂಡ್ ಸೆಲೆಬ್ರೆಷನ್” ಕೆಳಗೆ ತಿಳಿಸಿರುವ ವಿಶಿಷ್ಠ ಸಮಾಚಾರಕ್ಕೆ ಗಮನವನ್ನು ಸೆಳೆಯಿರಿ. (ಪುಟ 9-11, 17-21) ಸಮಾಪ್ತಿಯಲ್ಲಿ, ಹೆತ್ತವರು ತಮ್ಮ ಮಕ್ಕಳ ಶಾಲಾ ವಿದ್ಯಾಭ್ಯಾಸದಲ್ಲಿ ಆಸಕ್ತಿ ತಕ್ಕೊಳ್ಳುವ ಮತ್ತು ಶಾಲಾ ಆಡಳಿತೆಯೊಂದಿಗೆ ಸಹಕರಿಸುವ ಅಗತ್ಯವನ್ನು ಎತ್ತಿಹೇಳಿರಿ.—ಪುಟ 30-1.
15 ನಿ: “ಜವಾಬ್ದಾರಿಕೆಯ ನಮ್ಮ ಸ್ವಂತ ಹೊರೆಯನ್ನು ಹೊತ್ತುಕೊಳ್ಳುವುದು.” ಹಿರಿಯನು ಲೇಖನವನ್ನು ಕುಟುಂಬ ಗುಂಪಿನೊಂದಿಗೆ ಚರ್ಚಿಸುತ್ತಾನೆ. 1991ರ ಕಾರ್ಯಕ್ರಮವು ಅವರ ಕುಟುಂಬಕ್ಕೆ ಹೇಗೆ ಸಹಾಯ ಮಾಡಿತೆಂದು ಸಭಿಕರಲ್ಲಿರುವ ಕುಟುಂಬ ತಲೆಗಳನ್ನು ಕೇಳುತ್ತಾನೆ. ಎಲ್ಲರೂ ಹಾಜರಾಗುವಂತೆ ಉತ್ತೇಜನ ಕೊಡುತ್ತಾನೆ.
ಸಂಗೀತ 183 (24) ಮತ್ತು ಸಮಾಪ್ತಿಯ ಪ್ರಾರ್ಥನೆ.
ನವಂಬರ 25ರ ವಾರ
ಸಂಗೀತ 59 (31)
10 ನಿ: ಸ್ಥಳೀಕ ತಿಳಿಸುವಿಕೆಗಳು. ಈ ವಾರ ಸಾಕ್ಷಿ ಕಾರ್ಯದಲ್ಲಿ ಉಪಯೋಗಿಸುವುದಕ್ಕಾಗಿ ಪತ್ರಿಕೆಗಳಿಂದ ಮಾತಾಡತಕ್ಕ ವಿಷಯಗಳನ್ನು ಸಂಕ್ಷೇಪವಾಗಿ ತಿಳಿಸಿರಿ.
20 ನಿ: “ಸಭಾ ಪುಸ್ತಕಭ್ಯಾಸ ಏರ್ಪಾಡು—ಭಾಗ 4.” ಪ್ರಶ್ನೋತ್ತರ ಚರ್ಚೆ. ಪುಸ್ತಕಭ್ಯಾಸ ಗುಂಪಿನ ಪ್ರತಿಯೊಬ್ಬರಲ್ಲಿ ಎಲ್ಲರೂ ವೈಯಕ್ತಿಕ ಆಸಕ್ತಿಯನ್ನು ತಕ್ಕೊಳ್ಳುವ ಅಗತ್ಯವನ್ನು ಎತ್ತಿಹೇಳಿರಿ.
15 ನಿ: “ನಮ್ಮ ಮಕ್ಕಳಲ್ಲಿ ಕ್ರೈಸ್ತ ವ್ಯಕ್ತಿತ್ವಗಳನ್ನು ಕಟ್ಟುವುದು.” ಜುಲೈ 1, 1991ರ ವಾಚ್‌ಟವರ್, ಪುಟ 24-7ರ ಲೇಖನವನ್ನು ಇಬ್ಬರು ಸಹೋದರರು ಚರ್ಚಿಸುತ್ತಾರೆ. ಹೆತ್ತವರು ತಮ್ಮ ಪ್ರಯತ್ನಗಳನ್ನು ಎಡೆಬಿಡದೆ ಕೇಂದ್ರೀಕರಿಸುವ ಅಗತ್ಯವನ್ನು ಒತ್ತಿಹೇಳಿರಿ. ಸಮಾಚಾರವನ್ನು ಸಭೆಯ ಸ್ಥಳೀಕ ಅಗತ್ಯತೆಗಳಿಗೆ ಅನ್ವಯಿಸಿರಿ. (ದೇಶಭಾಷೆ: “ಈ ಅಂತ್ಯಕಾಲದಲ್ಲಿ ಹೊಣೆಯುಳ್ಳ ಮಕ್ಕಳಹಡೆಯುವಿಕೆ.” ಕಾ.ಬು. ಎಪ್ರಿಲ್ 1, 1989.)
ಸಂಗೀತ 116 (108) ಮತ್ತು ಸಮಾಪ್ತಿಯ ಪ್ರಾರ್ಥನೆ.
ದಶಂಬರ 2ರ ವಾರ
ಸಂಗೀತ 107 (57)
10 ನಿ: ಸ್ಥಳೀಕ ತಿಳಿಸುವಿಕೆಗಳು. ದಶಂಬರ ತಿಂಗಳ ನೀಡುವಿಕೆಯನ್ನು ಚುಟುಕಾಗಿ ಚರ್ಚಿಸಿರಿ.
20 ನಿ: ಅರ್ಹರಾದವರನ್ನು ಹುಡುಕುವುದು ಮತ್ತು ಕಲಿಸುವುದು. ಭಾಷಣ ಮತ್ತು ಇಂಟರ್‌ವ್ಯೂ. ಮತ್ತಾಯ 10:11ನ್ನು ಎತ್ತಿಹೇಳಿರಿ. ಜನರನ್ನು ಮನೆಯಲ್ಲಿ ಕಂಡುಕೊಳ್ಳುವುದು ಒಂದು ಹೆಚ್ಚುತ್ತಿರುವ ಸಮಸ್ಯೆಯಾಗಿದೆ ಮತ್ತು ಇದು ನಮ್ಮ ಫಲಪ್ರಾಪ್ತಿ ಮತ್ತು ಸಂತೋಷದ ಮೇಲೆ ನಿಶ್ಚಿತ ಪ್ರಭಾವವನ್ನು ಹಾಕಬಲ್ಲದು. ಏನು ಮಾಡಬಹುದು? (km 7⁄85 ಪು. 8) ಜನರನ್ನು ಅವರ ವಠಾರದಲ್ಲಿ ಭೇಟಿ ಮಾಡಿರಿ. ಮನೆಯಲ್ಲಿ ಸಿಗದವರ ಪಟ್ಟಿಯನ್ನು ಮಾಡಿ ಆದಷ್ಟು ಬೇಗ ಪುನಃಸಂದರ್ಶಿಸಿರಿ. ಅಂಥ ವ್ಯಕ್ತಿಗಳನ್ನು ಸಂಜೆಗೆ ಮನೆಯಲ್ಲಿ ಕಾಣುವುದರಲ್ಲಿ ಕೆಲವರಿಗೆ ಅತ್ಯುತ್ತಮ ಸಾಫಲ್ಯ ದೊರೆತದೆ, ಆದ್ದರಿಂದ ಸಾಯಂಕಾಲದ ಸಾಕ್ಷಿ ಕಾರ್ಯದಲ್ಲಿ ಭಾಗವಹಿಸಿರಿ. (km 7⁄87 ಪು. 8) ಬೀದಿ ಸಾಕ್ಷಿಯೂ ಕಾರ್ಯಸಾಧಕವಾಗಬಲ್ಲದು. ಬೀದಿಯಲ್ಲಿ ಆಸಕ್ತ ಜನರು ದೊರೆತಾಗ, ಅವರ ಹೆಸರು ಮತ್ತು ವಿಳಾಸವನ್ನು ತಕ್ಕೊಳ್ಳಿರಿ. ಅವರ ಮನೆಗಳನ್ನು ಸಂದರ್ಶಿಸುವಂತೆ ಏರ್ಪಾಡುಗಳನ್ನು ಮಾಡಿರಿ. (ಸಾಯಂಕಾಲದ ಸಾಕ್ಷಿ ಯಾ ಬೀದಿ ಸಾಕ್ಷಿಯಲ್ಲಿ ಸಾಫಲ್ಯ ಪಡೆದ 2-3 ಪ್ರಚಾರಕರನ್ನು ಮತ್ತು⁄ಯಾ ಪಯನೀಯರರನ್ನು ಸಂಕ್ಷೇಪವಾಗಿ ಇಂಟರ್‌ವ್ಯೂ ಮಾಡಿರಿ.) ಅರ್ಹರಾದವರನ್ನು ಹುಡುಕುವುದರಿಂದ ನಮ್ಮನ್ನು ತಡೆಯಲು ಸೈತಾನನು ಶಕ್ಯವಾದ ಎಲ್ಲಾ ಸಾಧನಗಳನ್ನು ಉಪಯೋಗಿಸುವನು. ಆದರೆ ನಾವು ಅವರಿಗಾಗಿ ಹುಡುಕಲೇಬೇಕು. ಆ “ಕುರಿಗಳು” ಯೇಸು ಕ್ರಿಸ್ತನಿಗೆ ಸೇರಿವೆ. ಅವನ್ನು ಹುಡುಕಲು ಮತ್ತು ಮೇಯಿಸಲು ಆತನು ನಮಗೆ ಆಜ್ಞಾಪಿಸಿದ್ದಾನೆ. (ಯೋಹಾ. 21:15-17) ಇದು, ಶಕ್ಯವಾದರೆ ಪ್ರತಿಯೊಂದು ಮನೆಯ ನಿವಾಸಿಗಳನ್ನು ತಲಪುವ ಅಗತ್ಯವನ್ನು ಗಣ್ಯಮಾಡುವಂತೆ ನಮಗೆ ಸಹಾಯ ಮಾಡುತ್ತದೆ.
15 ನಿ: ಯೆಹೋವನ ಸಾಕ್ಷಿಗಳ ಜೀವನ ವೃತ್ತಾಂತಗಳಿಂದ ಪ್ರಯೋಜನ ಪಡೆಯುವುದು. ಇಬ್ಬರು ಸಹೋದರರಿಂದ ಚರ್ಚೆ. ದೇವರ ಆಧುನಿಕ-ದಿನದ ಸೇವಕರ ಜೀವನ ಕಥೆಗಳು ಆಗಿಂದಾಗ್ಯೆ ದಿ ವಾಚ್‌ಟವರ್ ಮತ್ತು ಅವೇಕ್! ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ಅವುಗಳು ವಾಚ್‌ಟವರ್ ಪಬ್ಲಿಕೇಶನ್ ಇಂಡೆಕ್ಸ್‌ನಲ್ಲಿ ಹೆಸರು ಮತ್ತು ಲೇಖನ ಎರಡರಿಂದಲೂ ಪಟ್ಟಿಮಾಡಲ್ಪಟ್ಟಿವೆ. (ವಿಶಿಷ್ಠ ಲೇಖನಗಳನ್ನು ಕಂಡು ಹಿಡಿಯುವ ವಿಧಾನವನ್ನು ತೋರಿಸಿರಿ.) ಈ ಲೇಖನಗಳನ್ನು ನಾವು ಜಾಗ್ರತೆಯಿಂದ ಓದುವುದು ಮತ್ತು ಅದರಿಂದ ಬಲವನ್ನು ಮತ್ತು ಪ್ರೋತ್ಸಾಹನೆಯನ್ನು ಹೀರುವುದು ಪ್ರಾಮುಖ್ಯವು. ಆ ಸಮಾಚಾರವನ್ನು ನಮ್ಮ ಸಹೋದರರಿಗೆ ಮತ್ತು ಬೈಬಲ್ ವಿದ್ಯಾರ್ಥಿಗಳಿಗೆ ಉತ್ತೇಜನಕೊಡಲು ಉಪಯೋಗಿಸಿರಿ. ವಾಚ್‌ಟವರ್, ಆಗಸ್ಟ್ 1, 1991 ಪುಟ 25-9ರಲ್ಲಿರುವ, “ವಾಟ್ ಎ ಜಾಯ್ ಟು ಸಿಟ್ ಎಟ್ ಜೆಹೋವಾಸ್ ಟೇಬಲ್!” ಲೇಖನವನ್ನು ಸಂಕ್ಷೇಪವಾಗಿ ಪುನರಾವರ್ತಿಸಿರಿ. ಲೇಖನದ ವಿಶಿಷ್ಠ ವಿಷಯಗಳು, (ಎ) ನಮ್ಮ ಕ್ಷೇತ್ರ ಸೇವೆಯಲ್ಲಿ, (ಬಿ) ಕಷ್ಟಗಳನ್ನು ತಾಳಿಕೊಳ್ಳಲು, (ಸಿ) ಯೆಹೋವನನ್ನು ಮತ್ತು ಅತನ ಸಂಸ್ಥೆಯನ್ನು ಉತ್ತಮವಾಗಿ ಗಣ್ಯಮಾಡಲು ಮತ್ತು (ಡಿ) ನಮ್ಮ ವಿಶ್ವವ್ಯಾಪಕ ಸಹೋದರತ್ವವನ್ನು ಗಣನೆಗೆ ತರಲು ಹೇಗೆ ಸಹಾಯ ಮಾಡುತ್ತವೆಂದು ಎತ್ತಿಹೇಳಿರಿ. “ಯಾರು ನಂಬಿಕೆಯಿಂದಲೂ ತಾಳ್ಮೆಯಿಂದಲೂ ವಾಗ್ದಾನಗಳ ಫಲವನ್ನು ಬಾಧ್ಯವಾಗಿ ಹೊಂದುತ್ತಾರೋ ಅವರನ್ನು ಅನುಸರಿಸುವದರಿಂದ” ನಾವು ಬಹಳಷ್ಟು ಪ್ರಯೋಜನವನ್ನು ಹೊಂದುತ್ತೇವೆ.—ಇಬ್ರಿ. 6:11, 12. (ದೇಶಭಾಷೆ: “ಯೆಹೋವನು ಮೆಚ್ಚುವ ಯಜ್ಞಗಳನ್ನು ಸಮರ್ಪಿಸಿರಿ.” ಕಾ.ಬು. ಜನವರಿ 1, 1990.)
ಸಂಗೀತ 13 (81) ಮತ್ತು ಸಮಾಪ್ತಿಯ ಪ್ರಾರ್ಧನೆ.