ಸಪ್ಟಂಬರಕ್ಕಾಗಿ ಸೇವಾ ಕೂಟಗಳು
ಸಪ್ಟಂಬರ 7 ರ ವಾರ
ಸಂಗೀತ 162 (89)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಆಯ್ದ ಪ್ರಕಟಣೆಗಳು. ಪ್ರಚಲಿತ ಪತ್ರಿಕೆಗಳಿಂದ ಮಾತಾಡಬಹುದಾದ ವಿಚಾರಗಳನ್ನು ಚರ್ಚಿಸಿರಿ. ಈ ವಾರಾಂತ್ಯದಲ್ಲಿ ಕ್ಷೇತ್ರ ಸೇವೆಯಲ್ಲಿ ಪಾಲಿಗರಾಗಲು ಎಲ್ಲರನ್ನೂ ಹುರಿದುಂಬಿಸಿರಿ.
15 ನಿ: “ಆಸಕ್ತಿಯನ್ನು ಪ್ರಚೋದಿಸುವ ಪೀಠಿಕೆಗಳು.” ಪ್ರಶ್ನೋತ್ತರ ಪರಿಗಣನೆ. ಪ್ಯಾರಗ್ರಾಫ್ 5 ರಲ್ಲಿ ತಿಳಿಸಲ್ಪಟ್ಟ ವಿಚಾರಗಳನ್ನು ಪ್ರತ್ಯಕ್ಷಾಭಿನಯಮಾಡಿ ತೋರಿಸಿರಿ.
20 ನಿ: “ಮುನ್ನಡೆ ಪ್ರಗತಿಯ ಕಡೆಗೆ ಸಕಾರಾತ್ಮಕ ಕ್ರಿಯೆ.” ಪುರವಣಿಯ ಮೊದಲ ಎರಡು ಪ್ಯಾರಗ್ರಾಫ್ಗಳನ್ನು ಒಂದು ಭಾಷಣದೋಪಾದಿ ವಿಕಸಿಸಿರಿ. ಲೇಖನದ ಉಳಿದ ಭಾಗವನ್ನು ಪ್ರಶ್ನೋತ್ತರಗಳ ಮೂಲಕ ಆವರಿಸಿರಿ. ಸ್ಥಳೀಕ ಅನ್ವಯದ ವಿಷಯಗಳನ್ನು ಒತ್ತಿಹೇಳಿರಿ. ಸಂಕ್ಷಿಪ್ತ ಸಾರಾಂಶದೊಂದಿಗೆ ಸಮಾಪ್ತಿಗೊಳಿಸಿರಿ.
ಸಂಗೀತ 155 (85) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸಪ್ಟಂಬರ 14 ರ ವಾರ
ಸಂಗೀತ 133 (68)
10 ನಿ: ಸ್ಥಳೀಕ ತಿಳಿಸುವಿಕೆಗಳು, ಅಕೌಂಟ್ಸ್ ವರದಿ ಮತ್ತು ಕಾಣಿಕೆಯ ಅಂಗೀಕಾರಗಳೊಂದಿಗೆ. ಸ್ಥಳೀಯ ಸಭೆಗೆ ಮತ್ತು ಸೊಸೈಟಿಯ ಲೋಕವ್ಯಾಪಕ ಕಾರ್ಯಕ್ಕಾಗಿ ಆರ್ಥಿಕ ಬೆಂಬಲ ನೀಡಿದ್ದಕ್ಕಾಗಿ ಸಭೆಯನ್ನು ಪ್ರಶಂಸಿಸಿರಿ.
20 ನಿ: ಪುನಃ ಭೇಟಿಗಳಲ್ಲಿ ಆಸಕ್ತಿಯನ್ನು ವಿಕಸಿಸುವುದು. ಸೇವಾ ಮೇಲ್ವಿಚಾರಕನಿಂದ ಚರ್ಚೆ. ಜನರೊಂದಿಗೆ ಮಾತಾಡುವುದರಲ್ಲಿ ಮತ್ತು ಸಾಹಿತ್ಯವನ್ನು ನೀಡಿಬರುವುದರಲ್ಲಿ ಅನೇಕರು ಸಂತೋಷಿಸುತ್ತಾರೆ. (ಒಎಮ್ ಪುಟಗಳು 87-8) ನಾವು ಯಾರೊಂದಿಗೆ ಮಾತಾಡುತ್ತೇವೊ ಅವರ ಹೃದಯಗಳಲ್ಲಿ ಆಸಕ್ತಿಯನ್ನು ವಿಕಸಿಸುವುದು ಕೂಡ ನಮ್ಮ ಜವಾಬ್ದಾರಿಕೆಯಲ್ಲಿ ಸೇರಿರುತ್ತದೆ. ಮೊದಲನೆಯ ಬಾರಿ ಯಾವುದೇ ಸಾಹಿತ್ಯ ನೀಡದೆ ಇರುವಲ್ಲಿ, ಪುನಃ ಭೇಟಿಯಲ್ಲಿ ಆಸಕ್ತಿಯನ್ನು ವಿಕಸಿಸಲು ಒಂದು ಟ್ರ್ಯಾಕ್ಟ್ನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ತೋರಿಸುವ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯ ಸಾದರಪಡಿಸಿರಿ. ಕೇವಲ ಒಂದು ಯಾ ಎರಡು ವಿಷಯಗಳನ್ನು ಮಾತ್ರ ಎತ್ತಿತೋರಿಸಿರಿ. ರೀಸನಿಂಗ್ ಪುಸ್ತಕದ ವಿಷಯಸೂಚಿ (ಇಂಡೆಕ್ಷ್) ಯಲ್ಲಿ ಕಂಡುಕೊಳ್ಳುವ ಸಮಾಚಾರವನ್ನು ಕೂಡ ಹೇಗೆ ಉಪಯೋಗಿಸಬಹುದು ಎಂಬುದರ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯ ಸಾದರಪಡಿಸಿರಿ. ಬೈಬಲಿನಲ್ಲಿ ಆಸಕ್ತಿಯನ್ನು ವಿಕಸಿಸಲು ಪ್ರಕಾಶನದಲ್ಲಿರುವ ಚುಟುಕಾಗಿರುವ ಮತ್ತು ನೇರವಾದ ವಿಷಯಗಳನ್ನು ಒತ್ತಿಹೇಳಿರಿ. ಮುಂದಿನ ಸಂದರ್ಶನಗಳಿಗೆ ಏರ್ಪಾಡು ಮಾಡುವ ವಿಧವನ್ನು ತೋರಿಸಿರಿ.
15 ನಿ: “ಬ್ಯಾಬಿಲೊನ್ ದ ಗ್ರೆಟ್.” ರೀಸನಿಂಗ್ ಪುಸ್ತಕದ ಚರ್ಚೆ, ಪುಟಗಳು 49-53. ಪ್ರತ್ಯಕ್ಷಾಭಿನಯ: ಪ್ರಚಾರಕನು ಬೈಬಲ್ ವಿದ್ಯಾರ್ಥಿಯೊಂದಿಗೆ ಅವನ ಪ್ರಗತಿಯನ್ನು ಚರ್ಚಿಸುತ್ತಾನೆ. ಯೆಹೋವನಿಂದ ಪರಿಶುದ್ಧನೆಂದು ಎಣಿಸಲ್ಪಡುವ, ಅವನ ಸಹಾಯಕ್ಕೆ ಮತ್ತು ಆಶೀರ್ವಾದಕ್ಕೆ ಯೋಗ್ಯನಾಗುವ ಆವಶ್ಯಕತೆಯನ್ನು ಒತ್ತಿಹೇಳುತ್ತಾನೆ. (1 ಪೇತ್ರ 1:15, 16) ಬ್ಯಾಬಿಲೊನ್ನಿಂದ ಈಗ ಪಲಾಯನಮಾಡುವ ಮತ್ತು ಯೆಹೋವನ ಪವಿತ್ರ ಸಂಸ್ಥೆಯೊಂದಿಗೆ ಸಹವಾಸಮಾಡುವ ಪ್ರಾಮುಖ್ಯತೆಯನ್ನು ಒತ್ತಿಹೇಳಿರಿ. ಸಂಸ್ಥಾಪನೆಯ ಕಡೆಗೆ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಲು ಸಾಹಿತ್ಯಗಳನ್ನು ಬಳಸುವಂತೆ ಮತ್ತು ಹಿರಿಯರುಗಳ ಸಹಾಯದ ಸದುಪಯೋಗಮಾಡುವಂತೆ ಸಹೋದರರನ್ನು ಉತ್ತೇಜಿಸುತ್ತಾ ಅಧ್ಯಕ್ಷನು ಸಮಾಪ್ತಿಗೊಳಿಸುತ್ತಾನೆ.
ಸಂಗೀತ 129 (66) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸಪ್ಟಂಬರ 21 ರ ವಾರ
ಸಂಗೀತ 113 (62)
15 ನಿ: ಸ್ಥಳೀಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆಗಳು. “ಸ್ವಸ್ಥಚಿತ್ತರಾಗಿಯೂ, ನೀತಿವಂತರಾಗಿಯೂ ಜೀವಿಸುವುದು” ಲೇಖನದ ಚರ್ಚೆ. 1993 ರ ಸೇವಾವರ್ಷದಲ್ಲಿ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮಕ್ಕೆ ಹಾಜರಾಗಲು ಮೊದಲೇ ಯೋಜನೆಗಳನ್ನು ಮಾಡುವಂತೆ ಸಹೋದರರನ್ನು ಉತ್ತೇಜಿಸಿರಿ. ತಿಳಿದಿರುವಲ್ಲಿ, ತಾರೀಕು ಮತ್ತು ಸ್ಥಳವನ್ನು ಪ್ರಕಟಿಸಿರಿ. ವಾರಾಂತ್ಯದ ಕ್ಷೇತ್ರಸೇವೆಯಲ್ಲಿ ಭಾಗವಹಿಸುವಂತೆಯೂ ಹುರಿದುಂಬಿಸಿರಿ.
20 ನಿ: “ಪುನಃ ಭೇಟಿಗಳನ್ನು ಮಾಡುವ ಪಂಥಾಹ್ವಾನ.” ಪ್ರಶ್ನೋತ್ತರಗಳು. ಪ್ಯಾರಗ್ರಾಫ್ 5 ಮತ್ತು 6 ನ್ನು ಪರಿಗಣಿಸಿದ ನಂತರ, ಎರಡು ಪ್ರತ್ಯಕ್ಷಾಭಿನಯಗಳು ಇರಲಿ. (1) ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಲು ಟ್ರ್ಯಾಕ್ಟ್ನ್ನು ಉಪಯೋಗಿಸಬಹುದಾದ ವಿಧವನ್ನು ತೋರಿಸಿರಿ. (2) ರೀಸನಿಂಗ್ ಪುಸ್ತಕದಿಂದ ಒಂದು ವಿಷಯವನ್ನು ಆರಿಸಿರಿ ಮತ್ತು ಪುನಃ ಭೇಟಿಯೊಂದರಲ್ಲಿ ಪ್ರಶ್ನೆಯೊಂದನ್ನು ಉತ್ತರಿಸಲು ಇದನ್ನು ಉಪಯೋಗಿಸಬಹುದಾದ ವಿಧವನ್ನು ತೋರಿಸಿರಿ. ಪ್ರ್ಯಾಕ್ಟಿಸ್ ಸೆಷನ್ಗಳ ಮೂಲ್ಯತೆಯನ್ನು ಎತ್ತಿಹೇಳಿರಿ. ಎಲ್ಲಾ ಆಸಕ್ತಿಯನ್ನು ಬಿಡದೆ ಅನುಸರಿಸುವದನ್ನು ಪ್ರೋತ್ಸಾಹಿಸಿರಿ.
10 ನಿ: ಏಪ್ರಿಲ್ 15, 1992 ರ ವಾಚ್ಟವರ್ ನಲ್ಲಿರುವ “ಡು ಯು ರಿಮೆಂಬರ್?” ಲೇಖನದ ಚರ್ಚೆ. ಇಂಗ್ಲಿಷ್ ಅಲ್ಲದೆ ಬೇರೆ ಭಾಷೆಗಳಲ್ಲಿ ತಿಂಗಳಿಗೆರಡು ಬಾರಿಯ ಕಾವಲಿನಬುರುಜು ಪತ್ರಿಕೆಯನ್ನುಪಯೋಗಿಸುವ ಸಭೆಗಳು ಜೂಲೈ 15, 1992 ಸಂಚಿಕೆಯಲ್ಲಿ ಬಂದಿರುವ “ನಿಮಗೆ ನೆನಪಿದೆಯೇ?” ಲೇಖನವನ್ನು ಬಳಸಬಹುದು. ಮಾಸಿಕ ವಾಚ್ಟವರ್ ಪತ್ರಿಕೆಯನ್ನುಪಯೋಗಿಸುವ ಸಭೆಗಳು ಜೂನ್ 1, 1992 ರಲ್ಲಿ ಅದೇ ಶಿರೋನಾಮವಿರುವ ಲೇಖನವನ್ನು ಆವರಿಸಬಹುದು. ಪತ್ರಿಕೆಗಳನ್ನು ಓದಲು ಒಂದು ಉತ್ತಮ ಕಾರ್ಯತಖ್ತೆಯನ್ನು ಇಟ್ಟುಕೊಳ್ಳುವಂತೆ ಎಲ್ಲರನ್ನು ಉತ್ತೇಜಿಸಿರಿ. ವ್ಯಾವಹಾರಿಕ ಸಲಹೆಗಳನ್ನು ನೀಡಿರಿ.
ಸಂಗೀತ 130 (58) ಮತ್ತು ಸಮಾಪ್ತಿಯ ಪ್ರಾರ್ಥನೆ.
ಸಪ್ಟಂಬರ 28 ರ ವಾರ
ಸಂಗೀತ 72 (39)
5 ನಿ: ಸ್ಥಳೀಕ ತಿಳಿಸುವಿಕೆಗಳು.
15 ನಿ: “ಮನೆಯಿಂದ ಮನೆಗೆ ಪರಿಣಾಮಕಾರಿಯಾಗಿ ಕಾರ್ಯನಡಿಸುವುದು.” ಅಕ್ಟೋಬರ್ನಲ್ಲಿ ಸಹಾಯಕ ಪಯನೀಯರಿಂಗ್ನ್ನು ಉತ್ತೇಜಿಸಿರಿ. ಸಹಾಯಕ ಪಯನೀಯರಿಂಗ್ ಮಾಡುವವರು ಸಾಮಾನ್ಯವಾಗಿ ಅದನು ಹಿಂಬಾಲಿಸಿ ಬರುವ ತಿಂಗಳುಗಳಲ್ಲಿಯೂ ಚಟುವಟಿಕೆಯ ಉನ್ನತ ಮಟ್ಟವನ್ನು ಕಾಪಾಡಿಕೊಳ್ಳುತ್ತಾರೆ ಎಂದು ತಿಳಿಸಿರಿ.
15 ನಿ: ಅಕ್ಟೋಬರ್ನಲ್ಲಿ ಕ್ರಿಯೇಶನ್ ಪುಸ್ತಕವನ್ನು ಮುಖ್ಯನೋಟವಾಗಿ ಇಡಿರಿ. ಪ್ರತ್ಯಕ್ಷಾಭಿನಯದೊಂದಿಗೆ ಭಾಷಣ. ಕ್ರಿಯೇಶನ್ ಪುಸ್ತಕ ನೀಡುವಾಗ ಮಾತಾಡಬಹುದಾದ ವಿಷಯಗಳನ್ನು ಮತ್ತು ಮುಖ್ಯನೋಟವಾಗಿ ತೋರಿಸಬಹುದಾದ ಚಿತ್ರಗಳನ್ನು ಚರ್ಚಿಸಿರಿ. ಎಲ್ಲಿ ಅನ್ವಯವಾಗುತ್ತದೊ ಅಲ್ಲಿ ರೀಸನಿಂಗ್ ಪುಸ್ತಕದ “ಕ್ರಿಯೇಶನ್” ಶಿರೋನಾಮದ ಕೆಳಗೆ ಇರುವ ವಿಷಯಗಳನ್ನು ಉಪಯೋಗಿಸಸಾಧ್ಯವಿದೆ. ಅಧ್ಯಾಯ 16 ಮತ್ತು 19 ಗಳಲ್ಲಿ “ವೈ ವುಡ್ ಗಾಡ್ ಪರ್ಮಿಟ್ ಸಫರಿಂಗ್?” “ಎನ್ ರ್ತ್ಲೀ ಪಾರಡೈಸ್ ಸೂನ್ ಟು ಕಮ್” ಎಂಬ ವಿಷಯಗಳು ಮನೆಯವನಿಗೆ ಆಕರ್ಷಿತವಾಗಬಹುದು. ಒಬ್ಬ ಅರ್ಹತೆಯುಳ್ಳ ಪ್ರಚಾರಕನು ಜ್ಞಾನೋಕ್ತಿ 2:21, 22 ಮತ್ತು ಪುಟ 197 ರಲ್ಲಿರುವ ಚಿತ್ರವನ್ನುಪಯೋಗಿಸಿ, ಭೂಮಿಯನ್ನು ಸೃಷ್ಟಿಸುವದರ ದೇವರ ಮೂಲ ಕಾರಣವು ಬಲುಬೇಗನೆ ನೆರವೇರಲಿದೆ ಎಂದು ಎತ್ತಿತೋರಿಸುತ್ತಾ ನೀಡುವಿಕೆಯನ್ನು ಪ್ರತ್ಯಕ್ಷಾಭಿನಯ ಮಾಡಿ ತೋರಿಸಲಿ.
10 ನಿ: “ಪುನಃ ಭೇಟಿಗಳಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನುಪಯೋಗಿಸುವುದು.” ಚುಟುಕಾಗಿ ಮೊದಲ ಎರಡು ಪ್ಯಾರಗ್ರಾಫ್ಗಳನ್ನು ಚರ್ಚಿಸಿರಿ. ಅನಂತರ ಬೈಬಲ್ ಅಭ್ಯಾಸವೊಂದನ್ನು ಆರಂಭಿಸಲು ನೇರ ಪ್ರಸ್ತಾವನೆಯನ್ನು (ಡೈರೆಕ್ಟ್ ಅಪ್ರೋಚ್) ಬಳಸಿ ಒಂದು ಪುನಃ ಭೇಟಿಯ ಪ್ರತ್ಯಕ್ಷಾಭಿನಯ ಮಾಡಿರಿ.
ಸಂಗೀತ 126 (25) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ 5 ರ ವಾರ
ಸಂಗೀತ 30 (91)
5 ನಿ: ಸ್ಥಳೀಕ ತಿಳಿಸುವಿಕೆಗಳು.
15 ನಿ: ನೀವು ಆತ್ಮಿಕ ಏಳಿಗೆಯನ್ನು ಮಾಡುತ್ತಾ ಇದ್ದೀರೋ? ಹಿರಿಯನಿಂದ ಚರ್ಚೆ. ಗತ ಸೇವಾ ವರ್ಷದಲ್ಲಿ ಸಭೆಯಲ್ಲಿರುವವರು ನಿರ್ದಿಷ್ಟ ಧ್ಯೇಯಗಳನ್ನು ಮುಟ್ಟಿರುತ್ತಾರೊ? ಇಲ್ಲದಿದ್ದರೆ, ಯಾಕೆ? ಸಾಧ್ಯವಾಗುವ ಧ್ಯೇಯಗಳನ್ನು ಸೂಚಿಸಿರಿ. ಆತ್ಮಿಕತೆಯನ್ನು ಸುರಕ್ಷಿತವಾಗಿಡಲು ಪ್ರಗತಿಯು ಆವಶ್ಯಕವಾಗಿದೆ. (ಫಿಲಿ. 3:16) ಕುಟುಂಬದ ಒಂದು ಪ್ರತ್ಯಕ್ಷಾಭಿನಯ, ಕುಟುಂಬದ ಅಭ್ಯಾಸದ ಸಮಯದಲ್ಲಿ ಅವರು ಎಲ್ಲಿ ಆತ್ಮಿಕ ಏಳಿಗೆಯನ್ನು ಮಾಡಸಾಧ್ಯವಿದೆ ಎಂದು ನಿರ್ಧರಿಸಲು ಅವರ ಸ್ವಂತ ಶುಶ್ರೂಷೆಯನ್ನು ಪುನರಾವಲೋಕನೆ ಮಾಡುತ್ತಾರೆ.
10 ನಿ: ಹಿರಿಯನಿಂದ ಸ್ಥಳೀಕ ಆವಶ್ಯಕತೆಗಳು ಯಾ ಸಭೆಯ ಕ್ಷೇತ್ರಸೇವೆಯ ಕಾರ್ಯಚಟುವಟಿಕೆಯ ಚರ್ಚೆ.
15 ನಿ: ಅವರ ಹೃದಯಗಳಲ್ಲಿ ದೇವರ ಆಲೋಚನೆಗಳೊಂದಿಗೆ, ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿರಿ. ಹಿರಿಯನಿಂದ ಭಾಷಣ. ಅದರ ಅಚ್ಚಿನಲ್ಲಿ ನಮ್ಮನ್ನು ಇರುಕುವಂತೆ ಪ್ರಯತ್ನಿಸಲು ನಿಶ್ಚಯಿಸಿರುವ ಲೋಕವೊಂದರಲ್ಲಿ ನಾವು ಜೀವಿಸುತ್ತಿದ್ದೇವೆ. ಮತ್ತು ಇದು ನಮ್ಮ ಎಳೆಯರ ಕುರಿತು ವಿಶೇಷವಾಗಿ ಸತ್ಯವಾಗಿರುತ್ತದೆ. ಅವರ ಆವಶ್ಯಕತೆಗಳ ಮತ್ತು ಸಮಸ್ಯೆಗಳ ಕುರಿತು ಹೆತ್ತವರು ಸೂಕ್ಷ್ಮಸಂವೇದಿಗಳಾಗಿರುವ ಜರೂರಿಯಿದೆ. (ಜ್ಞಾನೋ. 20:5) ದೇವರ ನಿಯಮಗಳನ್ನು ಮತ್ತು ಪ್ರೀತಿಯನ್ನು ಅವರ ಮಕ್ಕಳೆಡೆಗಿರುವ ಹೆತ್ತವರ ಪ್ರೀತಿಯೊಂದಿಗೆ ಬೋಧಿಸಿರಿ. ಪ್ರತ್ಯಕ್ಷಾಭಿನಯ: ಸ್ಕೂಲ್ ಬ್ರೊಷೂರ್ನ್ನುಪಯೋಗಿಸುವುದರ ವಿಧದ ಕುರಿತು ಕುಟುಂಬವು ಚರ್ಚಿಸುತ್ತದೆ. ಒಂದು ಮಗುವು ಮೊದಲ ಬಾರಿ ಶಾಲೆಗೆ ಹೋಗುತ್ತದೆ, ಆದರೆ ಇನ್ನಿತರ ಇಬ್ಬರು ಕೆಲವು ವರ್ಷಗಳಿಂದ ಶಾಲೆಗೆ ಹೋಗುತ್ತಾ ಇದ್ದಾರೆ. ಪ್ರತಿಯೊಬ್ಬನ ಪರಿಸ್ಥಿತಿಗಳಿಗೆ ಅನ್ವಯಿಸುವಂಥ ಒಂದು ವಿಚಾರವನ್ನು ಆಯ್ಕೆ ಮಾಡಿರಿ. ಹೆತ್ತವರು ಅಧ್ಯಾಪಕನ ಪಾತ್ರವನ್ನು ಆಡುವಾಗ, ಮಕ್ಕಳು ಸ್ವತಃ ತಾವಾಗಿಯೇ ತಮ್ಮ ಸ್ವಂತ ಮಾತುಗಳಲ್ಲಿ ತಮ್ಮನ್ನು ವ್ಯಕ್ತಪಡಿಸಲಿ. ಒಳಗೊಂಡಿರುವ ಸೂತ್ರಗಳನ್ನು ಮಕ್ಕಳು ಅರ್ಥೈಸಿಕೊಂಡಿದ್ದಾರೆಂದು ಖಚಿತಮಾಡಿಕೊಳ್ಳಿರಿ. ಈ ಭಾಗವನ್ನು ನಿರ್ವಹಿಸುವ ಸಹೋದರನು ಕುಟುಂಬ ಬೈಬಲ್ ಅಭ್ಯಾಸವನ್ನು ಉತ್ತೇಜಿಸುತ್ತಾನೆ ಮತ್ತು ತಮ್ಮ ಮಕ್ಕಳೊಂದಿಗೆ ನಿಕಟವಾದ ಆಪ್ತ ಸಂಬಂಧವಿಟ್ಟುಕೊಳ್ಳುವದರ ಆವಶ್ಯಕತೆಯನ್ನು ಒತ್ತಿಹೇಳುತ್ತಾನೆ.
ಸಂಗೀತ 109 (119) ಮತ್ತು ಸಮಾಪ್ತಿಯ ಪ್ರಾರ್ಥನೆ.