ದೇವಪ್ರಭುತ್ವ ವಾರ್ತೆಗಳು
ಬೆನಿನ್: ಏಪ್ರಿಲಿನ ವರದಿಯು, 2,793 ಪ್ರಚಾರಕರು 4,442 ಮನೆ ಬೈಬಲ್ ಅಭ್ಯಾಸಗಳನ್ನು ಮತ್ತು 30,814 ಪುನಃ ಸಂದರ್ಶನಗಳನ್ನು ಮಾಡಿದರೆಂದು ತೋರಿಸುತ್ತದೆ. ಈ ಅಂಕೆಗಳು ಮೂರು ಹೊಸ ಉಚ್ಛಾಂಕಗಳನ್ನು ಪ್ರತಿನಿಧಿಸುತ್ತವೆ.
ಬಲ್ಗೆರೀಯ: ಒಂದು ವರ್ಷದೊಳಗೆ ಪ್ರಚಾರಕರ ಸಂಖ್ಯೆಯು 107 ರಿಂದ 218 ಕ್ಕೆ ಏರಿತು, ಇದು ಮಾರ್ಚ್‌ನಲ್ಲಿ ವರದಿಯಾಗಿದೆ. ಇದು 104 ಪ್ರತಿಶತ ಅಭಿವೃದ್ಧಿಯಾಗಿದೆ. ಕ್ಷೇತ್ರ ಸೇವೆಯಲ್ಲಿ ಪ್ರಚಾರಕರ ಸರಾಸರಿ ತಾಸುಗಳು 19.7 ಆಗಿದ್ದು, ಜುಮ್ಲಾ 585 ಮನೆ ಬೈಬಲ್ ಅಭ್ಯಾಸಗಳನ್ನು ನಡಿಸಿದರು. ಅವರ ಮೊದಲ ವಿಶೇಷ ಸಮ್ಮೇಳನ ದಿನವು ಮಾರ್ಚ್‌ನಲ್ಲಿ ನಡೆದು, 900 ಹಾಜರಿಯಿತ್ತು.
ಚೆಕೊಸ್ಲೊವೇಕಿಯಾ: ಮಾರ್ಚ್‌ನಲ್ಲಿ 25,111 ಪ್ರಚಾರಕರ ಒಂದು ಹೊಸ ಉಚ್ಛಾಂಕವು ವರದಿಯಾಗಿದೆ. ಇದು ಕಳೆದ ವರ್ಷದ ಸರಾಸರಿಗಿಂತ ಶೇಕಡ 9 ಹೆಚ್ಚಾಗಿರುತ್ತದೆ.
ಎಕಡ್ವಾರ್: ಈ ವರ್ಷದ ಸ್ಮಾರಕಾಚರಣೆಯ ಹಾಜರಿಯು 99,987. ಏಪ್ರಿಲ್‌ನಲ್ಲಿ 21,734 ಪ್ರಚಾರಕರ ಹೊಸ ಉಚ್ಛಾಂಕದೊಂದಿಗೆ, ಬೆಳವಣಿಗೆಯ ಮುಂದರಿಯೋಣವು ನಿರೀಕ್ಷಿಸಲ್ಪಟ್ಟಿದೆ.
ನಿಕಾರಾಗುವ: ಏಪ್ರಿಲ್‌ನಲ್ಲಿ ರಾಜ್ಯ ಸೇವೆಯ ಪ್ರತಿಯೊಂದು ಸರ್ತದಲ್ಲಿಯೂ ಹೆಚ್ಚು ಕಡಿಮೆ ಹೊಸ ಉಚ್ಛಾಂಕಗಳು ತಲುಪಲ್ಪಟ್ಟಿವೆ. ಈ ತಿಂಗಳಲ್ಲಿ ಪ್ರಚಾರಕರ ಜುಮ್ಲಾ ಸಂಖ್ಯೆಯು 9,629 ಕ್ಕೆ ತಲುಪಿತು, ಇದರ ಐದು ಪಟ್ಟು ಸ್ಮಾರಕಾಚರಣೆಗೆ ಹಾಜರಿ ಇತ್ತು.