ಪ್ರಕಟಣೆಗಳು
▪ ಪುಸ್ತಕ ನೀಡುವಿಕೆಗಳು: ಡಿಸೆಂಬರ್: ನ್ಯೂ ವರ್ಲ್ಡ್ ಟಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್‌ನ್ನು ದ ಬೈಬಲ್—ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ಪುಸ್ತಕದ ಜತೆಗೆ ರೂ. 60 ಕ್ಕೆ. ಬಂಗಾಳಿ ಮತ್ತು ನೇಪಾಲಿಯಲ್ಲಿ: ಅವರ್ ಪ್ರಾಬಮ್ಲ್ಸ್ ಬ್ರೊಷರ್. ಬೇರೆ ಭಾಷೆಗಳಲ್ಲಿ ಎಲ್ಲಿ ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ದೊರಕುವುದಿಲ್ಲವೋ ಅಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಉಪಯೋಗಿಸಬಹುದು. ಜನವರಿ 1993: 192 ಪುಟಗಳ ಹಳೇ ಪುಸ್ತಕಗಳ ವಿಶೇಷ ನೀಡುವಿಕೆ ರೂ. 6 ಪ್ರತಿಯೊಂದಕ್ಕೆ. ಮಲೆಯಾಳಂ ಮತ್ತು ತಮಿಳಲ್ಲಿ: ಟ್ರೂ ಪೀಸ್ ಆ್ಯಂಡ್ ಸೆಕ್ಯೂರಿಟಿ—ಫ್ರಮ್ ವಾಟ್ಹ್ ಸೋರ್ಸ್? (ಹಳೆಯ ಮುದ್ರಣ). ಗುಜರಾತಿಯಲ್ಲಿ: ದ ಟ್ರುತ್ ದ್ಯಾಟ್ ಲೀಡ್ಸ್ ಟು ಇಟರ್ನಲ್ ಲೈಫ್ ಮತ್ತು ಇಸ್ ದಿಸ್ ಲೈಫ್ ಆಲ್ ದೆರ್ ಇಸ್? ಹಿಂದಿ ಮತ್ತು ಕನ್ನಡದಲ್ಲಿ: ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆಯು ಮತ್ತು “ನಿನ್ನ ರಾಜ್ಯವು ಬರಲಿ.” ತೆಲುಗುನಲ್ಲಿ: ಇಸ್ ದಿಸ್ ಲೈಫ್ ಆಲ್ ದೆರ್ ಇಸ್?. ಮರಾಠಿಯಲ್ಲಿ: ಲಿಸನಿಂಗ್ ಟು ದ ಗ್ರೇಟ್ ಟೀಚರ್ ಮತ್ತು ಇಸ್ ದಿಸ್ ಲೈಫ್ ಆಲ್ ದೆರ್ ಇಸ್?. ಬಂಗಾಳಿ ಮತ್ತು ನೇಪಾಲಿಯಲ್ಲಿ: ಅವರ್ ಪ್ರಾಬಮ್ಲ್ಸ್ ಬ್ರೊಷರ್. ಫೆಬ್ರವರಿ: ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 40 ಕ್ಕೆ. (ಚಿಕ್ಕ ಸೈಜ್ ರೂ. 20) ಮಾರ್ಚ್: ಯಂಗ್ ಪೀಪ್‌ಲ್ ಆಸ್ಕ್ ಪುಸ್ತಕ ರೂ. 20 ಕ್ಕೆ. ಈ ಭಾಷೆಯಲ್ಲಿ ದೊರಕದಿದ್ದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 40 ಕ್ಕೆ. (ಚಿಕ್ಕ ಸೈಜ್ ರೂ. 20)
ಸೂಚನೆ: ಮೇಲೆ ಸೂಚಿಸಲ್ಪಟ್ಟ ಪುಸ್ತಕ ನೀಡುವಿಕೆಯಲ್ಲಿ ಕೆಲವು ಕ್ರಮಪಡಿಸುವಿಕೆಗಳು ಇವೆ. ಇದು ಯಾಕಂದರೆ ಮುಂದಿನ ಪ್ರಕಟನೆಯಲ್ಲಿ ವಿವರಿಸಲ್ಪಟ್ಟಂತೆ ‘ಭಾರತಕ್ಕೋಸ್ಕರ’ವಿರುವ ನಮ್ಮ ರಾಜ್ಯದ ಸೇವೆಯ ಕಾರ್ಯತಖ್ತೆಯಲ್ಲಿ ಕ್ರಮಗೊಳಿಸುವಿಕೆಯು ಇರುವುದರಿಂದಲೆ. ಯಾವ ಸಭೆಗಳು ಮೇಲೆ ಸೂಚಿಸಲಾದ ಕ್ಯಂಪೇನ್ ಸಾಹಿತ್ಯಗಳನ್ನು ಇನ್ನೂ ಆರ್ಡರ್ ಮಾಡಿಲ್ಲವೋ ಆ ಸಭೆಗಳು ಅವುಗಳ ಮುಂದಿನ ಲಿಟರೇಚರ್ ಆರ್ಡರ್ ಫಾರ್ಮಿನಲ್ಲಿ (S-14) ಆರ್ಡರ್ ಮಾಡಬಹುದು.
▪ ಮುಂದಿನ ಸಂಚಿಕೆಯಿಂದ ಹಿಡಿದು, ಅಂದರೆ ಜನವರಿ 1993 ರ ನಂತರದಿಂದ, ‘ಭಾರತಕ್ಕೋಸ್ಕರ’ವಿರುವ ನಮ್ಮ ರಾಜ್ಯದ ಸೇವೆಯು ‘ಯುನೊಯಿಟೆಡ್ ಸ್ಟೇಟ್ಸ್ ಆಫ್ ಅಮೆರಿಕಕ್ಕೋಸ್ಕರ’ವಿರುವ ಮುದ್ರಣದೊಂದಿಗೆ ಏಕ ಕಾಲಿಕವಾಗುವುದು. ಇಷ್ಟರವರೆಗೆ, ಸಂಸ್ಥೆಯ ಇಂಡೆಕ್ಸ್‌ನಲ್ಲಿ ಒಂದು ರೆಫರೆನ್ಸನ್ನು ನೋಡುವಾಗ, ‘ಭಾರತಕ್ಕೋಸ್ಕರ’ವಿರುವ ನಮ್ಮ ರಾಜ್ಯದ ಸೇವೆಯಲ್ಲಿ ಬೇಕಾಗಿರುವಂಥಾ ಲೇಖನವನ್ನು ಇಂಡೆಕ್ಸ್‌ನಲ್ಲಿ ಸೂಚಿಸಲಾದ ತಿಂಗಳಿನ ನಂತರದ ತಿಂಗಳಿನ ಸಂಚಿಕೆಯಲ್ಲಿ ನಿಮಗೆ ದೊರಕುತಿತ್ತು. ಜನವರಿ 1993 ರ ನಂತರದ ರೆಫರೆನ್ಸ್‌ಗಳಿಗೆ ಇಂಡೆಕ್ಸ್‌ನಲ್ಲಿ ತಿಳಿಸಲಾದ ನಮ್ಮ ರಾಜ್ಯದ ಸೇವೆಯಲ್ಲಿಯೇ ನಿಮಗೆ ಬೇಕಾಗಿರುವಂಥಾ ವಿಷಯವನ್ನು ಕಂಡುಕೊಳ್ಳುವಿರಿ. ಹೀಗೆ ನಾವು ಲೋಕದಲ್ಲಿ ಹೆಚ್ಚಿನ ಸಹೋದರರಿಗೆ ದೊರಕುವಂಥಾ ಮಾಹಿತಿ ಮತ್ತು ಬೋಧನೆಗಳನ್ನು ಅದೇ ಸಮಯದಲ್ಲಿ ಪಡೆಯಶಕ್ತರಾಗುವೆವು. ಒಳಗೂಡಿರುವ ವಿವಿಧ ಡಿಪಾರ್ಟಮೆಂಟ್‌ಗಳಲ್ಲಿ ಬದಲಾವಣೆಗಳನ್ನು ಅಳವಡಿಸಿದಕ್ಕಾಗಿ ಇದಾಗಲು ಸಾಧ್ಯವಾಯಿತು. ಇಂಗ್ಲಿಷ್ ಮತ್ತು ಈ ಬ್ರಾಂಚ್ ಮೂಲಕ ನಿರ್ವಹಿಸಲ್ಪಡುವ ಅನೇಕ ಭಾಷೆಗಳಲ್ಲಿ ಆತ್ಮಿಕ ಆಹಾರವನ್ನು ಏಕ ಕಾಲಿಕವಾಗಿ ಒದಗಿಸುವಲ್ಲಿ ಈ ದೊಡ್ಡ ಹೆಜ್ಜೆಯನ್ನು ನಾವು ತಕ್ಕೊಳ್ಳಲು ನಮಗೆ ಸಾಧ್ಯವಾದದರಿಂದ ನಾವು ಯೆಹೋವನಿಗೆ ಅಭಾರಿಗಳಾಗಿದ್ದೇವೆ.—ಫಿಲಿ. 2:2.
▪ ಎಲ್ಲಾ ಸಭೆಗಳಿಗೆ ಅವುಗಳ ವಾರ್ಷಿಕ ಫಾರ್‌ಮ್‌ಗಳ ಸಂಗ್ರಹವು ಇದೇ ತಿಂಗಳಾದ ಡಿಸೆಂಬರ್‌ನಲ್ಲಿ ದೊರಕುವವು ಮತ್ತು ನಿಮ್ಮ ಡಿಸೆಂಬರ್ ತಿಂಗಳ ಸ್ಟೇಟ್‌ಮೆಂಟ್‌ನಲ್ಲಿ ಚಾರ್ಜ್ ಮಾಡಲಾಗುವುದು. ಸಂಬಂಧಪಟ್ಟ ಸಹೋದರರಿಗೆ ತಕ್ಕದಾದ ಫಾರ್‌ಮ್‌ಗಳನ್ನು ಹಂಚುವಂತೆ ಸೆಕ್ರೆಟರಿಗಳಿಗೆ ಸಹಾಯವಾಗಲು ಸಂಗ್ರಹದೊಂದಿಗೆ ಚೆಕ್‌ಲಿಸ್ಟ್ ಕಳುಹಿಸಲ್ಪಡುವುದು. ಚೆಕ್‌ಲಿಸ್ಟ್‌ನಲ್ಲಿ ತೋರಿಸಲಾದ ತಾರೀಕಿಗಿಂತ ಹಳೆಯದಾದ ಕೈಯಲ್ಲಿರುವ ಎಲ್ಲಾ ಫಾರ್‌ಮ್‌ಗಳನ್ನು ನಾಶಪಡಿಸಬೇಕು. ಜ್ಞಾಪಕಾಚರಣೆಯ ಆಮಂತ್ರಣಗಳನ್ನು ಸೇರಿಸಲಾಗುವುದು.
▪ ವರ್ಷಪುಸ್ತಕಗಳು ನೇರವಾಗಿ ಬ್ರೂಕ್‌ಲೀನ್‌ನಿಂದ ಕಳುಹಿಸಲ್ಪಡುವುದರಿಂದ, ನೀವು ವರ್ಷಪುಸ್ತಕಗಳನ್ನು ಆರ್ಡರ್ ಮಾಡುವ ಸಮಯದಲ್ಲಿ ನೀವು ಇದ್ದ ಸಭಾ ವಿಳಾಸಕ್ಕೆ ಕಳುಹಿಸಲಾಗುವುದು. ಅಂದಿನಿಂದೀಚೆಗೆ ನಿಮ್ಮ ವಿಳಾಸವು ಬದಲಾಗಿರುವುದಾದರೆ, ನೀವು ನಿಮ್ಮ ಆರ್ಡರನ್ನು ಪಡೆದುಕೊಳ್ಳುವಂತೆ ಹಿಂದಿನ ಪೋಸ್ಟ್ ಆಫೀಸಿಗೆ ಈಗ ಕಳುಹಿಸಬೇಕಾದ ವಿಳಾಸವನ್ನು ಕೊಡಲು ದಯವಿಟ್ಟು ಖಚಿತಪಡಿಸಿಕೊಳ್ಳಿರಿ.
▪ ಡಿಸೆಂಬರ್ 7 ರ ವಾರಾರಂಭದಿಂದ ಹಿಡಿದು ಮೊದಲಾಗಿ ಮುಕ್ತಿಗೆ ನಡಿಸುವ ದೈವಿಕ ಸತ್ಯದ ಹಾದಿ ಪುಸ್ತಿಕೆ ನಂತರ ಕುರುಕ್ಷೇತ್ರದಿಂದ ಹರ್ಮಗೆದ್ದೋನಿಗೆ—ಮತ್ತು ನಿಮ್ಮ ಪಾರಾಗುವಿಕೆ ಪುಸ್ತಿಕೆಯನ್ನು ನಾವು ಬಂಗಾಲಿ, ಗುಜರಾಥಿ, ನೇಪಾಲಿ ಮತ್ತು ತೆಲುಗು ನಮ್ಮ ರಾಜ್ಯದ ಸೇವೆಯ ಮುದ್ರಣಗಳ ಕಾರ್ಯತಖ್ತೆಯಲ್ಲಿ ಒಳಗೂಡಿಸುತ್ತೇವೆ. ಈ ಭಾಷೆಗಳಲ್ಲಿ ಯಾವುದೇ ಭಾಷೆಯನ್ನು ಉಪಯೋಗಿಸುವ ಪುಸ್ತಕ ಅಭ್ಯಾಸ ಕೇಂದ್ರಗಳು ಅವುಗಳ ಕಾರ್ಯತಖ್ತೆಗನುಸಾರ ಈ ಪುಸ್ತಿಕೆಗಳ ಅಧ್ಯಯನ ನಡಿಸಬೇಕು. ಬೇರೆ ಕೇಂದ್ರಗಳು ರೆವಲೇಶನ್—ಇಟ್ಸ್ ಗ್ರಾಂಡ್ ಕ್ಲೈಮೆಕ್ಸ್ ಎಟ್ ಹ್ಯಾಂಡ್ ಪುಸ್ತಕದ ಅವರ ಅಧ್ಯಯನವನ್ನು ಮುಂದುವರಿಸುವವು.
▪ ಡಿಸೆಂಬರ್ 1 ಯಾ ಅದರ ನಂತರ ಆದಷ್ಟು ಬೇಗನೆ ಸಭೆಯ ಅಕೌಂಟ್ಸ್‌ನ್ನು ಅಧ್ಯಕ್ಷ ಮೇಲ್ವಿಚಾರಕನಾಗಲಿ ಯಾ ಅವನಿಂದ ನೇಮಿತನಾದವನಾಗಲಿ ಆಡಿಟ್ (ಲೆಕ್ಕ ತಪಾಸಣೆ) ಮಾಡತಕ್ಕದ್ದು. ಇದನ್ನು ಮಾಡಿಯಾದ ಮೇಲೆ ಸಭೆಗೊಂದು ಪ್ರಕಟಣೆಯನ್ನು ಮಾಡಿರಿ.
▪ “ಯೆಹೋವನೇ, ನನಗೆ ಬೋಧಿಸು. . . ನಿನ್ನ ನಾಮಕ್ಕೆ ಭಯಪಡುವರೆ ನನ್ನ ಹೃದಯವನ್ನು ಏಕೀಕರಿಸು.”—ಕೀರ್ತನೆ 86:11 [NW], 1993 ಕ್ಕಾಗಿ ವರ್ಷವಚನವಾಗಿದೆ. ಸಭೆಗಳು ಹೊಸ ವರ್ಷವಚನದ ಅವರ ಬೋರ್ಡನ್ನು ತಯಾರಿಸುವುದು ಒಳ್ಳೇದು, ಹೀಗೆ ಅದನ್ನು ಜನವರಿ 1, 1993 ರಂದು ಯಾ ಅದರ ನಂತರ ಆದಷ್ಟು ಬೇಗನೆ ಪ್ರದರ್ಶಿಸಬಹುದು.
▪ ದೊರೆಯುವ ಹೊಸ ಪ್ರಕಾಶನಗಳು: ಸಿಂಧಿ: “ಇಗೋ! ಎಲ್ಲವನ್ನು ಹೊಸದುಮಾಡುತ್ತೇನೆ” (ಬ್ರೊಷರ್).