ದೇವಪ್ರಭುತ್ವ ವಾರ್ತೆಗಳು
ಭಾರತ: 1992 ರಲ್ಲಿ ಪ್ರತಿಯೊಂದು ತಿಂಗಳಲ್ಲಿ 11,597 ಮಂದಿ ವರದಿಸುವುದರೊಂದಿಗೆ ಕಳೆದ ವರ್ಷಕ್ಕಿಂತ ಎಂಟು ಪ್ರತಿಶತದ ಉತ್ತಮ ಅಭಿವೃದ್ಧಿಯಲ್ಲಿ ನಾವು ಆನಂದಿಸಿದೆವು ಮತ್ತು ಜುಲೈಯಲ್ಲಿ ವರದಿಸಿರುವ ಪ್ರಚಾರಕರ ಉಚ್ಛಾಂಕ 12,168. ಅದೇ ವರ್ಷದಲ್ಲಿ ಹತ್ತಿರ ಹತ್ತಿರ 27 ಲಕ್ಷ ತಾಸುಗಳು ಶುಶ್ರೂಷೆಯಲ್ಲಿ ಕಳೆಯಲ್ಪಟ್ಟವು ಮತ್ತು ಸಾಧಾರಣ 11 ಲಕ್ಷ ಪತ್ರಿಕೆಗಳು ಹಂಚಲಾದವು. ಪ್ರತಿಯೊಂದು ತಿಂಗಳಲ್ಲಿ 9,594 ಬೈಬಲ್ ಅಧ್ಯಯನಗಳು ನಡೆಸಲಾದುವು. ಸೇವಾ ವರ್ಷದೊಳಗೆ ಎಲ್ಲಾ ಕೂಡಿಸಿ 928 ಮಂದಿಗೆ ದೀಕ್ಷಾಸ್ನಾನವಾಯಿತು.
ಬಾಂಗ್ಲಾದೇಶ್: ಜುಲೈಯಲ್ಲಿ 42 ಪ್ರಚಾರಕರ ಉಚ್ಛಾಂಕದ ವರದಿಯೊಂದಿಗೆ ದೇಶವು ಕಳೆದ ವರ್ಷಕ್ಕಿಂತ 16 ಪ್ರತಿಶತ ಅಭಿವೃದ್ಧಿಯನ್ನು ವರದಿಸಿದೆ.
ನೇಪಾಲ್: ಈ ದೇಶವು ಒಟ್ಟಿಗೆ ಸರಾಸರಿ ಪ್ರಚಾರಕರಲ್ಲಿ 24 ಪ್ರತಿಶತ ಅಭಿವೃದ್ಧಿಯನ್ನು ಪಡೆದಿರುವಾಗ ಜೂನ್‌ನಲ್ಲಿ ಉಚ್ಛಾಂಕವಾದ 98 ಪ್ರಚಾರಕರು ವರದಿ ಮಾಡಿದರು.