ದೇವಪ್ರಭುತ್ವ ಶುಶ್ರೂಷಾ ಶಾಲಾ ಶೆಡ್ಯೂಲ್ 1993 ಕ್ಕಾಗಿ
ಸೂಚನೆಗಳು
ದೇವಪ್ರಭುತ್ವ ಶುಶ್ರೂಷಾ ಶಾಲೆಯನ್ನು 1993 ರಲ್ಲಿ ನಡಿಸುವಾಗ ಈ ಕೆಳಗಿನ ಏರ್ಪಾಡುಗಳನ್ನು ಅನುಸರಿಸಲಾಗುವುದು.
ಪಠ್ಯ ಪುಸ್ತಕಗಳು: ದ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ [bi 12], “ಆಲ್ ಸ್ಕ್ರಿಪ್ಚರ್ಸ್ ಇನ್ಸ್ಪಾಯರ್ಡ್ ಆಫ್ ಗಾಡ್ ಆ್ಯಡ್ ಬೆನಿಫಿಷಲ್” (1990 ರ ಆವೃತ್ತಿ) [si], ಥಿಯೊಕ್ರಾಟಿಕ್ ಮಿನಿಷ್ಟ್ರಿ ಸ್ಕೂಲ್ ಗೈಡ್ ಬುಕ್ [sg], ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ [gt], ಚರ್ಚೆಗಾಗಿ ಬೈಬಲ್ ವಿಷಯಗಳು [td], ಎಂಬೀ ಪುಸ್ತಕಗಳು ನೇಮಕಗಳಿಗೆ ಆಧಾರವಾಗಿವೆ.
ಶಾಲೆಯು ಸಂಗೀತ ಮತ್ತು ಪ್ರಾರ್ಥನೆ ಹಾಗೂ ಸ್ವಾಗತ ಹೇಳಿಕೆಯಿಂದ ಆರಂಭಗೊಂಡು, ಈ ಕೆಳಗಿನಂತೆ ಮುಂದರಿಯುವದು:
ನೇಮಕ ನಂಬ್ರ 1: 15 ನಿಮಿಷ. ಇದು ಹಿರಿಯನಿಂದ ಅಥವಾ ನುರಿತ ಶುಶ್ರೂಷಾ ಸೇವಕನಿಂದ ನಿರ್ವಹಿಸಲ್ಪಡಬೇಕು. ಈ ಭಾಷಣದ ವಿಷಯಗಳು, “ಆಲ್ ಸ್ಕ್ರಿಪ್ಚರ್ಸ್ ಇನ್ಸ್ಪಾಯರ್ಡ್ ಆಫ್ ಗಾಡ್ ಎಂಡ್ ಬೆನಿಫಿಷಲ್” ಯಾ ಥಿಯೊಕ್ರಾಟಿಕ್ ಮಿನಿಷ್ಟ್ರಿ ಸ್ಕೂಲ್ ಗೈಡ್ ಬುಕ್ ಸಮಾಚಾರದಲ್ಲಿ ಆಧರಿಸಿವೆ. ಈ ನೇಮಕವನ್ನು 10-12 ನಿಮಿಷಗಳ ಉಪದೇಶ ಭಾಷಣವಾಗಿ ಕೊಟ್ಟ ಮೇಲೆ, ಅನಂತರದ 3-5 ನಿಮಿಷಗಳನ್ನು, ಆ ಭಾಗದ ಕೆಳಗೆ ಕೊಡಲ್ಪಟ್ಟ ಛಾಪಿತ ಪ್ರಶ್ನೆಗಳ ಮೌಖಿಕ ಪುನರ್ವಿಮರ್ಶೆಗಾಗಿ ಬಳಸಬೇಕು. ಇದರ ಉದ್ದೇಶ ಕೇವಲ ವಿಷಯವನ್ನು ಆವರಿಸುವುದಲ್ಲ ಬದಲಾಗಿ, ಚರ್ಚಿಸುವ ವಿಷಯದ ವ್ಯಾವಹಾರಿಕ ಮೌಲ್ಯತೆಗೆ ಗಮನವನ್ನು ಕೇಂದ್ರಿಕರಿಸಿ, ಸಭೆಗೆ ಅತ್ಯಂತ ಸಹಾಯಕಾರಿಯಾದದ್ದನ್ನು ಎತ್ತಿಹೇಳುವುದೇ. ಎಲ್ಲಿ ಅಗತ್ಯವೂ ಅಲ್ಲಿ ಮುಖ್ಯ ವಿಷಯವನ್ನು (THEME) ಆರಿಸಿಕೊಳ್ಳಬೇಕು. ಈ ಸಮಾಚಾರದಿಂದ ಪ್ರಯೋಜನ ಹೊಂದುವಂತೆ, ಎಲ್ಲರನ್ನು, ಜಾಗ್ರತೆಯ ಪೂರ್ವ ತಯಾರಿ ಮಾಡುವಂತೆ ಉತ್ತೇಜಿಸಲಾಗುತ್ತದೆ.
ಈ ಭಾಷಣಕ್ಕೆ ನೇಮಿತರಾದ ಸಹೋದರರು ಸೀಮಿತ ಸಮಯದೊಳಗೆ ಅದನ್ನು ಮುಗಿಸಲು ಜಾಗ್ರತೆ ವಹಿಸಬೇಕು. ಬೇಕಾದಲ್ಲಿ ಖಾಸಗೀ ಸಲಹೆಯನ್ನು ನೀಡಸಾಧ್ಯವಿದೆ.
ಬೈಬಲ್ ವಾಚನದಿಂದ ಮುಖ್ಯಾಂಶಗಳು: 6 ನಿಮಿಷ. ಇದು ಶಾಲಾ ಮೇಲ್ವಿಚಾರಕನಿಂದ ಅಥವಾ ಅವನಿಂದ ನೇಮಿತನಾದ ಇನ್ನೊಬ್ಬ ನುರಿತ ಹಿರಿಯ ಅಥವಾ ಶುಶ್ರೂಷಾ ಸೇವಕನಿಂದ ನಿರ್ವಹಿಸಲ್ಪಡಬೇಕು. ಇದು ನೇಮಿತ ವಾಚನದ ಕೇವಲ ಸಾರಾಂಶವಾಗಿರಬಾರದು. ನೇಮಿತ ಅಧ್ಯಾಯಗಳ 30 ರಿಂದ 60 ಸೆಕಂಡುಗಳ ಒಟ್ಟು ನೋಟವನ್ನು ಕೊಟ್ಟಾದ ಮೇಲೆ, ಆ ಸಮಾಚಾರ ಹೇಗೆ ಮತ್ತು ಯಾಕೆ ನಮಗೆ ಬೆಲೆಯುಳ್ಳದೆಂದು ಸಭಿಕರು ಗಣ್ಯಮಾಡುವಂತೆ ಸಹಾಯಮಾಡಿರಿ. ಹೆಚ್ಚಿನ ಮುಖ್ಯಾಂಶ ವಿವರಗಳಿಗಾಗಿ ಕಾವಲಿನಬುರುಜು ಸಂಚಿಕೆಗಳನ್ನು ಪರಿಶೀಲಿಸಿರಿ. ಅನಂತರ , ವಿದ್ಯಾರ್ಥಿಗಳನ್ನು ಅವರ ಬೇರೆ ಬೇರೆ ವರ್ಗಗಳಿಗೆ ಶಾಲಾ ಮೇಲ್ವಿಚಾರಕನು ಕಳುಹಿಸುವನು.
ಭಾಷಣ ನಂಬ್ರ 2: 5 ನಿಮಿಷ. ಇದು ಸಹೋದರನಿಂದ ಕೊಡಲ್ಪಡುವ ನೇಮಿತ ಬೈಬಲ್ ವಾಚನ. ಇದು ಮುಖ್ಯ ಶಾಲೆಯಲ್ಲಿ ಹಾಗೂ ಶಾಖಾ ಗುಂಪುಗಳಲ್ಲಿ ಅನ್ವಯಿಸುವುದು. ಈ ವಾಚನಾ ನೇಮಕವು ಸಾಕಷ್ಟು ಚಿಕ್ಕದಾಗಿರುವುದರಿಂದ ವಿದ್ಯಾರ್ಥಿಯು, ಆರಂಭದ ಮತ್ತು ಸಮಾಪ್ತಿಯ ಹೇಳಿಕೆಗಳಲ್ಲಿ ಸಂಕ್ಷಿಪ್ತ ವಿವರಣೆಗಳನ್ನು ಕೊಡಸಾಧ್ಯವಿದೆ. ಚಾರಿತ್ರಿಕ ಹಿನ್ನೆಲೆ, ಪ್ರವಾದನೆ ಯಾ ಬೋಧನೆಯ ಅರ್ಥವಿವರಣೆ ಹಾಗೂ ತತ್ವಗಳ ಅನ್ವಯಗಳನ್ನು ಒಳಗೂಡಿಸಬಹುದು. ಎಲ್ಲಾ ನೇಮಿತ ವಚನಗಳನ್ನು ವಾಸ್ತವವಾಗಿ ನಿಲ್ಲಿಸದೇ ಓದಬೇಕು.
ಭಾಷಣ ನಂಬ್ರ 3: 5 ನಿಮಿಷ. ಈ ಭಾಷಣವು ಸಹೋದರಿಯರಿಗೆ ನೇಮಿಸಲ್ಪಡುವುದು. ಈ ಭಾಷಣದ ವಿಷಯವು, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕದಲ್ಲಿ ಆಧರಿಸಿರುವುದು. ನೇಮಿತ ವಿದ್ಯಾರ್ಥಿನಿಗೆ ಓದು ಗೊತ್ತಿರಬೇಕು. ಭಾಷಣವನ್ನು ವಿದ್ಯಾರ್ಥಿನಿಯು ನಿಂತು ಯಾ ಕೂತು ಕೊಡಬಹುದು. ಒಬ್ಬ ಸಹಾಯಕಿಯನ್ನು ಶಾಲಾ ಮೇಲ್ವಿಚಾರಕನು ನೇಮಿಸುತ್ತಾನೆ ಆದರೆ, ಹೆಚ್ಚು ಮಂದಿಯನ್ನು ಉಪಯೋಗಿಸಬಹುದು. ಕ್ಷೇತ್ರಸೇವೆ ಅಥವಾ ಅವಿಧಿ ಸಾಕ್ಷಿಯನ್ನೊಳಗೂಡಿರುವ ಸನ್ನಿವೇಶಗಳು (SETTINGS) ಆದ್ಯತೆಯವು. ಭಾಷಣಕಾರ್ತಿ ತಾನೇ ಸಂಭಾಷಣೆ ಪ್ರಾರಂಭಿಸಬಹುದು ಯಾ ಅವಳ ಸಹಾಯಕರು ಅದನ್ನು ಮಾಡಬಹುದು. ಮುಖ್ಯ ಗಮನವನ್ನು ಸನ್ನಿವೇಶಕ್ಕಲ್ಲ, ವಿಷಯಕ್ಕೆ ಕೊಡಬೇಕು. ವಿದ್ಯಾರ್ಥಿನಿ ನೇಮಿತ ಮುಖ್ಯವಿಷಯವನ್ನೇ ಉಪಯೋಗಿಸಬೇಕು.
ಭಾಷಣ ನಂಬ್ರ 4: 5 ನಿಮಿಷ. ಸಹೋದರನಿಗೆ ಅಥವಾ ಸಹೋದರಿಗೆ ನೇಮಿಸಲ್ಪಡುತ್ತದೆ. ಸಹೋದರನು ತನ್ನ ಭಾಷಣವನ್ನು ರಾಜ್ಯ ಸಭಾಗೃಹದ ಸಭಿಕರನ್ನು ಮನಸ್ಸಲ್ಲಿಟ್ಟು ತಯಾರಿಸುವುದಾದರೆ, ಕೇಳುವವರಿಗೆ ಅದು ಬೋಧಪ್ರದವೂ ಪ್ರಯೋಜನಕಾರಿಯೂ ಆಗಿರುವುದು. ಆದರೂ, ಸಮಾಚಾರವು ಇನ್ನೊಂದು ವ್ಯಾವಹಾರ್ಯ ಮತ್ತು ಯುಕ್ತವಾದ ಸಭಿಕ ರೂಪದ ಸನ್ನಿವೇಶಕ್ಕೆ ಸರಿಯಾಗಿ ಒಪ್ಪುತ್ತದಾದರೆ, ಸಹೋದರನು ಅದಕ್ಕನುಸಾರ ಭಾಷಣವನ್ನು ವಿಕಸಿಸಬಹುದು. ಕೊಡಲ್ಪಟ್ಟ ಮುಖ್ಯ ವಿಷಯವನ್ನೇ ವಿದ್ಯಾರ್ಥಿಯು ಉಪಯೋಗಿಸಬೇಕು.
ಸಹೋದರಿಗೆ ನೇಮಿಸಲ್ಪಟ್ಟಾಗ, ವಿಷಯವು 3 ನೇ ಭಾಷಣದ ಹೊರಮೇರೆಯ ಪ್ರಕಾರ ನೀಡಲ್ಪಡಬೇಕು.
ಸಲಹೆ ಮತ್ತು ಹೇಳಿಕೆಗಳು: ಪ್ರತಿಯೊಂದು ವಿದ್ಯಾರ್ಥಿ ಭಾಷಣದ ನಂತರ, ಶಾಲಾ ಮೇಲ್ವಿಚಾರಕನು ವಿಶಿಷ್ಟ ಸೂಚನೆಯನ್ನು ಕೊಡುವನು, ಇದಕ್ಕಾಗಿ ಸ್ಕೂಲ್ ಕೌನ್ಸೆಲ್ ಸ್ಲಿಪ್ ನಲ್ಲಿರುವ ಪ್ರಗತಿಪರ ಸೂಚನಾ ಏರ್ಪಾಡನ್ನೇ ಅನುಸರಿಸುವ ಅಗತ್ಯವಿಲ್ಲ. ಬದಲಿಗೆ, ವಿದ್ಯಾರ್ಥಿಗೆ ಎಲ್ಲಿ ಪ್ರಗತಿ ಮಾಡುವ ಅಗತ್ಯವಿದೆಯೋ ಆ ಕ್ಷೇತ್ರಕ್ಕೆ ಆತನು ಗಮನವನ್ನು ಕೇಂದ್ರೀಕರಿಸಬೇಕು. ವಿದ್ಯಾರ್ಥಿ ಭಾಷಣಕಾರನು ಕೇವಲ “G”ಗೆ ಪಾತ್ರನಿದ್ದರೆ ಮತ್ತು ಅಲ್ಲಿ ಬೇರೆ ಯಾವ ಭಾಷಣ ಗುಣಗಳು “I” ಅಥವಾ “W” ಎಂದು ಗುರುತು ಮಾಡಲ್ಪಟ್ಟಿಲ್ಲವಾದರೆ, ವಿದ್ಯಾರ್ಥಿಯು ಕಾರ್ಯನಡಿಸುವ ಮುಂದಣ ಭಾಷಣ ಗುಣದ ಮುಂದೆ ಸಾಮಾನ್ಯವಾಗಿ ಕಂಡುಬರುವ “G” “I” ಅಥವಾ “W” ಚೌಕಟ್ಟನ್ನು ಸಲಹೆಗಾರನು ವೃತ್ತದಿಂದ ಗುರುತಿಸಬೇಕು. ಇದರ ಕುರಿತು ಅವನು ಆ ಸಂಜೆಯೇ ವಿದ್ಯಾರ್ಥಿಗೆ ತಿಳಿಸುವನು, ಹಾಗೂ ಆ ಭಾಷಣದ ಗುಣವನ್ನು ವಿದ್ಯಾರ್ಥಿಯ ಮುಂದಿನ ಮಿನಿಸ್ಟ್ರಿ ಸ್ಕೂಲ್ ಎಸೈನ್ಮೆಂಟ್ (S-89) ಸ್ಲಿಪ್ನಲ್ಲೂ ತೋರಿಸುವನು. ಬಾಷಣ ಕೊಡುವವರು ಸಭಾಗೃಹದ ಎದುರಲ್ಲಿ ಕೂತಿರಬೇಕು. ಇದು ಸಮಯವನ್ನು ಉಳಿಸುವುದು ಮತ್ತು ಪ್ರತಿ ವಿದ್ಯಾರ್ಥಿಗೆ ನೇರವಾಗಿ ತನ್ನ ಸಲಹೆ ಕೊಡುವರೆ ಶಾಲಾ ಮೇಲ್ವಿಚಾರಕನು ಶಕ್ತನಾಗುವನು. ಸಲಹೆ ಕೊಟ್ಟಾದ ನಂತರ ಸಮಯ ಉಳಿದರೆ, ವಿದ್ಯಾರ್ಥಿಗಳಿಂದ ಆವರಿಸಲ್ಪಡದೇ ಇದ್ದ ಯಾವುದೇ ಮಾಹಿತಿ ನೀಡುವ ಯಾ ವ್ಯಾವಹಾರಿಕ ಅಂಶಗಳನ್ನು ಸಲಹೆಗಾರನು ತಿಳಿಸಸಾಧ್ಯವಿದೆ. ಪ್ರತಿ ವಿದ್ಯಾರ್ಥಿ ಭಾಷಣದ ನಂತರ ಕೊಡಲಾಗುವ ಸಲಹೆ ಮತ್ತು ಹೇಳಿಕೆಗಳಿಗೆ ಎರಡು ನಿಮಿಷಕ್ಕಿಂತ ಹೆಚ್ಚು ಸಮಯ ತಕ್ಕೊಳ್ಳದಂತೆ ಶಾಲಾ ಮೇಲ್ವಿಚಾರಕನು ಜಾಗ್ರತೆ ವಹಿಸಬೇಕು. ಬೈಬಲ್ ಮುಖ್ಯಾಂಶ ನಿರೂಪಣೆಯು ಅಪೇಕ್ಷಿತ ವಿಷಯವನ್ನು ಬಿಟ್ಟಿರುವಲ್ಲಿ, ಖಾಸಗಿ ಸಲಹೆಯನ್ನು ನೀಡಬಹುದು.
ಭಾಷಣಗಳನ್ನು ತಯಾರಿಸುವುದು: ನೇಮಕ ನಂಬ್ರ 1 ನ್ನು ಮಾಡುವ ಸಹೋದರರು ಬೇಕಾದಲ್ಲಿ ಒಂದು ಮುಖ್ಯ ವಿಷಯವನ್ನು ಆರಿಸಿಕೊಳ್ಳಬೇಕು. ಎರಡನೇ ಭಾಷಣಕ್ಕೆ ನೇಮಿತರಾದ ವಿದ್ಯಾರ್ಥಿಗಳು ಸಹಾ ಸಮಾಚಾರವನ್ನು ಚೆನ್ನಾಗಿ ಆವರಿಸಶಕ್ತನಾದ ಒಂದು ಮುಖ್ಯ ವಿಷಯವನ್ನು ಆರಿಸಿಕೊಳ್ಳಬೇಕು. ಮೂರನೇ ಮತ್ತು ನಾಲ್ಕನೇ ಭಾಷಣಕ್ಕೆ ನೇಮಿತರಾದ ವಿದಾರ್ಥಿಗಳು ಕೊಡಲ್ಪಟ್ಟ ಮುಖ್ಯ ವಿಷಯವನ್ನೇ ಉಪಯೋಗಿಸಬೇಕು. ಭಾಷಣಕ್ಕೆ ಮುಂಚೆ ವಿದಾರ್ಥಿಗಳು ತಾವು ಮಾಡುವ ಭಾಷಣ ಗುಣದ ಕುರಿತು ಸ್ಕೂಲ್ ಗೈಡ್ ಬುಕ್ನಿಂದ ಓದಿಕೊಳ್ಳಬಹುದು.
ಸಮಯ: ಯಾವ ಭಾಷಣವಾದರೂ ವೇಳೆ ಮೀರಬಾರದು. ಸಲಹೆಗಾರನ ಸಲಹೆ ಮತ್ತು ಹೇಳಿಕೆಗಳು ಸಹಾ. ಭಾಷಣ ನಂಬ್ರ 2ರಿಂದ 4ನ್ನು ವೇಳೆ ಮೀರುವಾಗ, ಅವನ್ನು ಜಾಣ್ಮೆಯಿಂದ ನಿಲ್ಲಿಸ ಸಾಧ್ಯವಿದೆ. “ಸ್ಟಾಪ್ ಸಿಗ್ನಲ್” ಕೊಡಲು ನೇಮಿತನಾದವನು ತಕ್ಕ ಸಮಯದಲ್ಲಿ ಅದನ್ನು ಕೊಡಬೇಕು. ನೇಮಕ ನಂಬ್ರ 1 ಮತ್ತು ಬೈಬಲ್ ಮುಖ್ಯಾಂಶವನ್ನು ಮಾಡುವ ಸಹೋದರರು ವೇಳೆ ಮೀರುವಾಗ, ಖಾಸಗೀ ಸಲಹೆ ನೀಡಲ್ಪಡಬೇಕು. ಎಲ್ಲರು ತಮ್ಮ ಸಮಯವನ್ನು ಜಾಗ್ರತೆಯಿಂದ ಗಮನಿಸಬೇಕು. ಸಂಗೀತ ಮತ್ತು ಪ್ರಾರ್ಥನೆಯನ್ನು ಬಿಟ್ಟು, ಇಡೀ ಕಾರ್ಯಕ್ರಮದ ಒಟ್ಟು ಸಮಯ 45 ನಿಮಿಷ.
ಲಿಖಿತ ಪುನರ್ವಿಮರ್ಶೆ: ನಿಯತಕಾಲದಲ್ಲಿ ಒಂದು ಲಿಖಿತ ಪುನರ್ವಿಮರ್ಶೆಯನ್ನು ಕೊಡಲಾಗುವುದು. ಇದಕ್ಕೆ ತಯಾರಿಸುವಾಗ, ನೇಮಿತ ಸಮಾಚಾರವನ್ನು ಪುನರ್ವಿಮರ್ಶಿಸಿರಿ ಮತ್ತು ಬೈಬಲ್ ವಾಚನ ಕಾರ್ಯತಖ್ತೆಯನ್ನು ಓದಿ ಮುಗಿಸಿರಿ. ಪುನರ್ವಿಮರ್ಶೆಯ ಈ 25 ನಿಮಿಷಗಳಲ್ಲಿ ಕೇವಲ ಬೈಬಲನ್ನು ಮಾತ್ರ ಉಪಯೋಗಿಸಬಹುದು. ಉಳಿದ ಸಮಯವು ಪ್ರಶ್ನೋತ್ತರ ಚರ್ಚೆಗೆ ಮೀಸಲಾಗಿಡಲ್ಪಡುವುದು. ಪ್ರತಿ ವಿದ್ಯಾರ್ಥಿಯು ತನ್ನ ಸ್ವಂತ ಹಾಳೆಯನ್ನು ತಿದ್ದುವನು. ಶಾಲಾ ಮೇಲ್ವಿಚಾರಕನು ಉತ್ತರಗಳನ್ನು ಓದಿ ಹೇಳಿ, ಹೆಚ್ಚು ಕಷ್ಟದ ಪ್ರಶ್ನೆಗಳಿಗೆ ಗಮನವನ್ನು ಕೊಡುವನು ಮತ್ತು ಉತ್ತರಗಳು ಎಲ್ಲರಿಗೆ ಸ್ಪಷ್ಟವಾಗಿಗುವಂತೆ ಸಹಾಯ ಮಾಡುವನು. ಸ್ಥಳೀಕ ಪರಿಸ್ಥಿತಿಗಳ ಯಾವುದೇ ಕಾರಣವು ಅಗತ್ಯಗೊಳಿಸುವಲ್ಲಿ, ಲಿಖಿತ ಪುನರ್ವಿಮರ್ಶೆಯನ್ನು ಶೆಡ್ಯೂಲ್ನಲ್ಲಿ ತೋರಿಸಿದ್ದಕ್ಕಿಂತ ಒಂದು ವಾರ ಮುಂದೆ ಹಾಕಬಹುದು.
ದೊಡ್ಡ ಮತ್ತು ಚಿಕ್ಕ ಸಭೆಗಳು: ವಿದ್ಯಾರ್ಥಿಗಳು 50 ಕ್ಕೆ ಯಾ ಅದಕ್ಕೆ ಮಿಕ್ಕಿ ಇರುವ ಸಭೆಗಳು ನೇಮಿತ ಭಾಷಣಗಳನ್ನು ವಿಧ್ಯಾರ್ಥಿಗಳ ಅಧಿಕ ಗುಂಪುಗಳಿಗೆ ಕೊಟ್ಟು, ಬೇರೆ ಸಲಹೆಗಾರರ ಮುಂದೆ ಅವರದನ್ನು ನೀಡುವಂತೆ ಏರ್ಪಡಿಸಬಹುದು. ಕ್ರೈಸ್ತ ತತ್ವಗಳಿಗನುಸಾರ ಜೀವನ ನಡಿಸುವ ಸ್ನಾನಿತರಲ್ಲದ ವ್ಯಕ್ತಿಗಳು ಸಹಾ ಈ ಶಾಲೆಗೆ ಸೇರಿ, ನೇಮಕಗಳನ್ನು ಪಡೆಯಸಾಧ್ಯವಿದೆ.
ಗೈರುಹಾಜರಿಯಾಗುವವರು: ಸಭೆಯಲ್ಲಿರುವವರೆಲ್ಲರೂ ಪ್ರತಿ ವಾರ ಈ ಕಾರ್ಯಕ್ರಮಕ್ಕೆ ಹಾಜರಾಗಲು ಪ್ರಯತ್ನಿಸುವ ಮೂಲಕ, ನೇಮಕಗಳನ್ನು ಚೆನ್ನಾಗಿ ತಯಾರಿಸುವ ಮೂಲಕ ಮತ್ತು ಪ್ರಶ್ನೋತ್ತರಗಳಲ್ಲಿ ಪಾಲಿಗರಾಗುವ ಮೂಲಕ ಈ ಶಾಲೆಗೆ ಗಣ್ಯತೆ ತೋರಿಸ ಸಾಧ್ಯವಿದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ನೇಮಕಗಳನ್ನು ಮನಃಪೂರ್ವಕತೆಯಿಂದ ತಕ್ಕೊಳ್ಳುವರೆಂದು ನಿರೀಕ್ಷಿಸಲಾಗುತ್ತದೆ. ನೇಮಿತ ವಿದ್ಯಾರ್ಥಿಯು ಗೈರುಹಾಜರಾದರೆ, ಬೇರೊಬ್ಬನು ವಾಲಂಟಿಯರನಾಗಿ, ತನ್ನಿಂದ ಶಕ್ತನಾದ ಯಾವುವೇ ಅನ್ವಯಗಳನ್ನು ಆ ಕೊಂಚ ಸಮಯದೊಳಗೆ ಮಾಡುವಂತೆ ಪ್ರಯತ್ನಿಸುವನು. ಅಥವಾ, ಶಾಲಾ ಮೇಲ್ವಿಚಾರಕನು ತಕ್ಕದಾದ ಸಭಾ ಭಾಗವಹಿಸುವಿಕೆಯೊಂದಿಗೆ ವಿಷಯವನ್ನು ಆವರಿಸಬಹುದು.
ಶೆಡ್ಯೂಲ್
ಮಾರ್ಚ್ 1 ಬೈಬಲ್ ವಾಚನ: 1 ಸಮುವೇಲ 25 ರಿಂದ 27
ಸಂಗೀತ 62 (34)
ನಂ. 1: sg ಪು. 84-8 ಪ್ಯಾರ. 1-9
ನಂ. 2: 1 ಸಮುವೇಲ 26:7-25
ನಂ. 3: ಕರುಣೆಯ ಒಂದು ಪಾಠ (gt ಅಧ್ಯಾ. 40)
ನಂ. 4: td 3ಸಿ ಸತ್ತವರಿಗಾಗಿ ದೀಕ್ಷಾಸ್ನಾನ ಅಶಾಸ್ತ್ರೀಯವಾಗಿದೆ
ಮಾರ್ಚ್ 8 ಬೈಬಲ್ ವಾಚನ: 1 ಸಮುವೇಲ 28 ರಿಂದ 31
ಸಂಗೀತ 59 (31)
ನಂ. 1: 1 ಸಮುವೇಲ—ಯಾಕೆ ಉಪಯುಕ್ತವಾಗಿದೆ (si ಪು. 57-8 ಪ್ಯಾರ. 27-35)
ನಂ. 2: 1 ಸಮುವೇಲ 30:7-25
ನಂ. 3: ಯೇಸುವು ವಾಗ್ವಾದದ ಒಂದು ಕೇಂದ್ರವಾಗಿದ್ದಾನೆ (gt ಅಧ್ಯಾ. 41)
ನಂ. 4: td 4ಎ ಬೈಬಲ್ ದೇವರಿಂದ ಪ್ರೇರಿತವಾದದ್ದೋ?
ಮಾರ್ಚ್ 15 ಬೈಬಲ್ ವಾಚನ: 2 ಸಮುವೇಲ 1 ರಿಂದ 4
ಸಂಗೀತ 43 (10)
ನಂ. 1: 2 ಸಮುವೇಲ—ಪೀಠಿಕೆ (si ಪು. 59 ಪ್ಯಾರ. 1-5)
ನಂ. 2: 2 ಸಮುವೇಲ 1:1-4, 17-27
ನಂ. 3: ಯೇಸುವು ಫರಿಸಾಯರನ್ನು ಗದರಿಸುತ್ತಾನೆ (gt ಅಧ್ಯಾ. 42)
ನಂ. 4: td 4ಬಿ ದೇವರ ವಾಕ್ಯವನ್ನು ತಿಳುಕೊಳ್ಳಲು ನಮಗೆ ಸಹಾಯ ಅವಶ್ಯ
ಮಾರ್ಚ್ 22 ಬೈಬಲ್ ವಾಚನ: 2 ಸಮುವೇಲ 5 ರಿಂದ 8
ಸಂಗೀತ 42 (22)
ನಂ. 1: sg ಪು. 88-90 ಪ್ಯಾರ. 10-15
ನಂ. 2: 2 ಸಮುವೇಲ 6:1-19
ನಂ. 3: ದೋಣಿಯ ಮೇಲಿರುವಾಗ ಐದು ದೃಷ್ಟಾಂತಗಳು (gt ಅಧ್ಯಾ. 43 ಪ್ಯಾರ. 1-8)
ನಂ. 4: td 4ಸಿ ಆಧುನಿಕ ದಿನದ ಜೀವಿತಕ್ಕೆ ಬೈಬಲು ವ್ಯಾವಹಾರಿಕವೋ?
ಮಾರ್ಚ್ 29 ಬೈಬಲ್ ವಾಚನ: 2 ಸಮುವೇಲ 9 ರಿಂದ 12
ಸಂಗೀತ 40 (28)
ನಂ. 1: sg ಪು. 90-2 ಪ್ಯಾರ. 1-7
ನಂ. 2: 2 ಸಮುವೇಲ 10:1-14
ನಂ. 3: ಯೇಸುವಿನ ಕಲಿಸುವಿಕೆಗಳಿಂದ ಶಿಷ್ಯರು ಪ್ರಯೋಜನ ಪಡೆದ ವಿಧ (gt ಅಧ್ಯಾ. 43 ಪ್ಯಾರ. 9-19)
ನಂ. 4: td 4ಡಿ ಚದರಿದ ವಚನಗಳನ್ನು ಉದ್ಧರಿಸುವುದಕ್ಕೆ ಶಾಸ್ತ್ರೀಯ ಬೆಂಬಲವಿದೆ
ಏಪ್ರಿಲ್ 5 ಬೈಬಲ್ ವಾಚನ: 2 ಸಮುವೇಲ 13 ರಿಂದ 15
ಸಂಗೀತ 91 (9)
ನಂ. 1: sg ಪು. 92-5 ಪ್ಯಾರ. 8-18
ನಂ. 2: 2 ಸಮುವೇಲ 15:1-17
ನಂ. 3: ಯೇಸುವು ಹೆಚ್ಚಿನ ಬೋಧನೆಯೊಂದಿಗೆ ಶಿಷ್ಯರನ್ನು ಆಶೀರ್ವದಿಸುತ್ತಾನೆ (gt ಅಧ್ಯಾ. 43 ಪ್ಯಾರ. 20-31)
ನಂ. 4: td 4ಇ ಇತರ “ಪವಿತ್ರ ಗ್ರಂಥಗಳು” ದೇವಪ್ರೇರಿತವಾದವುಗಳಲ್ಲ
ಏಪ್ರಿಲ್ 12 ಬೈಬಲ್ ವಾಚನ: 2 ಸಮುವೇಲ 16 ರಿಂದ 18
ಸಂಗೀತ 38 (65)
ನಂ. 1: sg ಪು. 96-9 ಪ್ಯಾರ. 1-10
ನಂ. 2: 2 ಸಮುವೇಲ 18:1-17
ನಂ. 3: ಯೇಸುವು ಭಯಂಕರ ಚಂಡಮಾರುತವನ್ನು ಸುಮ್ಮನಾಗಿಸುತ್ತಾನೆ (gt ಅಧ್ಯಾ. 44)
ನಂ. 4: td 4ಎಫ್ ಎಲ್ಲಾ ಜನಾಂಗಗಳ ಮತ್ತು ಕುಲಗಳ ಜನರಿಗೆ ಬೈಬಲ್ ಸಹಾಯ ಮಾಡಬಲ್ಲದೋ?
ಏಪ್ರಿಲ್ 19 ಬೈಬಲ್ ವಾಚನ: 2 ಸಮುವೇಲ 19 ರಿಂದ 21
ಸಂಗೀತ 29 (11)
ನಂ. 1: sg ಪು. 100-102 ಪ್ಯಾರ. 1-12
ನಂ. 2: 2 ಸಮುವೇಲ 19:1-14
ನಂ. 3: ದೆವ್ವ ಹಿಡಿದ ಮನುಷ್ಯನು ಶಿಷ್ಯನಾಗುತ್ತಾನೆ (gt ಅಧ್ಯಾ. 45)
ನಂ. 4: td 4ಜಿ “ಹಳೇ” ಮತ್ತು “ಹೊಸ” ಒಡಂಬಡಿಕೆಗಳೆರಡೂ ಮಹತ್ವವುಳ್ಳವುಗಳು
ಏಪ್ರಿಲ್ 26 ಬೈಬಲ್ ವಾಚನ: 2 ಸಮುವೇಲ 22 ರಿಂದ 24
ಸಂಗೀತ 82 (44)
ನಂ. 1: 2 ಸಮುವೇಲ—ಯಾಕೆ ಉಪಯುಕ್ತವಾಗಿದೆ (si ಪು. 63 ಪ್ಯಾರ. 28-31)
ನಂ. 2: 2 ಸಮುವೇಲ 22:1-4, 24-36
ನಂ. 3: ಅವಳು ಅವನ ಉಡುಪನ್ನು ಮುಟ್ಟಿದಳು (gt ಅಧ್ಯಾ. 46)
ನಂ. 4: td 4ಏಚ್ ಬೈಬಲಿನ ಪುಸ್ತಕಗಳ ಸಪ್ರಮಾಣ ಅಂಗೀಕಾರವು ಆಂತರಿಕ ಸಾಕ್ಷ್ಯಗಳಿಂದ ಚೆನ್ನಾಗಿ ನಿರ್ಧರಿಸಲ್ಪಡುತ್ತದೆ
ಮೇ 3 ಬೈಬಲ್ ವಾಚನ: 1 ಅರಸುಗಳು 1 ಮತ್ತು 2
ಸಂಗೀತ 85 (16)
ನಂ. 1: 1 ಅರಸುಗಳು—ಪೀಠಿಕೆ (si ಪು. 64-5 ಪ್ಯಾರ. 1-5)
ನಂ. 2: 1 ಅರಸುಗಳು 1:32-48
ನಂ. 3: ದುಃಖಾಶ್ರುಗಳು ಮಹಾ ಹರ್ಷೋನ್ಮಾದವಾಗಿ ಪರಿವರ್ತಿಸಿದ್ದು (gt ಅಧ್ಯಾ. 47)
ನಂ. 4: td 5ಎ ಕ್ರೈಸ್ತರು ರಕ್ತ ಪೂರಣಗಳನ್ನು ಯಾಕಾಗಿ ಸ್ವೀಕರಿಸುವುದಿಲ್ಲ?
ಮೇ 10 ಬೈಬಲ್ ವಾಚನ: 1 ಅರಸುಗಳು 3 ರಿಂದ 6
ಸಂಗೀತ 25 (58)
ನಂ. 1: sg ಪು. 103-8 ಪ್ಯಾರ. 13-21
ನಂ. 2: 1 ಅರಸುಗಳು 3:10-28
ನಂ. 3: ಆತನು ಅದ್ಭುತಗಳನ್ನು ನಡಿಸಿದರೂ, ಯೇಸುವು ತಿರಸ್ಕರಿಸಲ್ಪಟ್ಟದ್ದು (gt ಅಧ್ಯಾ. 48)
ನಂ. 4: td 5ಬಿ ಏನೇ ಆಗಲಿ ಒಬ್ಬನ ಜೀವವನ್ನು ಉಳಿಸಬೇಕೋ?
ಮೇ 17 ಬೈಬಲ್ ವಾಚನ: 1 ಅರಸುಗಳು 7 ಮತ್ತು 8
ಸಂಗೀತ 107 (57)
ನಂ. 1: sg ಪು. 108-12 ಪ್ಯಾರ. 1-20
ನಂ. 2: 1 ಅರಸುಗಳು 8:54-66
ನಂ. 3: ಗಲಿಲಾಯಕ್ಕೆ ಮೂರನೇ ಸಾರುವ ಸಂಚಾರ (gt ಅಧ್ಯಾ. 49)
ನಂ. 4: td 6ಎ ಅನ್ಯ ಜನಾಂಗಗಳ ಕಾಲಗಳು 1914 ರಲ್ಲಿ ಮುಕ್ತಾಯಗೊಂಡವೆಂದು ನಮಗೆ ಹೇಗೆ ಗೊತ್ತು?
ಮೇ 24 ಬೈಬಲ್ ವಾಚನ: 1 ಅರಸುಗಳು 9 ರಿಂದ 11
ಸಂಗೀತ 174 (51)
ನಂ. 1: sg ಪು. 113-16 ಪ್ಯಾರ. 1-16
ನಂ. 2: 1 ಅರಸುಗಳು 10:1-13
ನಂ. 3: ಆತನ ಶಿಷ್ಯರು ವಿರೋಧವನ್ನು ಎದುರಿಸುವಂತೆ ತಯಾರಿಸುವುದು (gt ಅಧ್ಯಾ. 50)
ನಂ. 4: td 6ಬಿ ಮೆಸ್ಸೀಯ
ನ ಮೊದಲ ಆಗಮನಕ್ಕಾಗಿ ಸಮಯವು ಮುಂತಿಳಿಸಲ್ಪಟ್ಟಿತ್ತೊ?
ಮೇ 31 ಬೈಬಲ್ ವಾಚನ: 1 ಅರಸುಗಳು 12 ರಿಂದ 14
ಸಂಗೀತ 170 (95)
ನಂ. 1: sg ಪು. 116-18 ಪ್ಯಾರ. 1-12
ನಂ. 2: 1 ಅರಸುಗಳು 12:1-15
ನಂ. 3: ಒಂದು ಹುಟ್ಟು ಹಬ್ಬದಂದು ಕೊಲೆ (gt ಅಧ್ಯಾ. 51)
ನಂ. 4: td 6ಸಿ ಯೇಸುವಿನ ಜನನ ತಾರೀಕು ಸಾ.ಶ.ಪೂ. ಎರಡೋ?
ಜೂನ್ 7 ಬೈಬಲ್ ವಾಚನ: 1 ಅರಸುಗಳು 15 ರಿಂದ 17
ಸಂಗೀತ 6 (4)
ನಂ. 1: sg ಪು. 119-21 ಪ್ಯಾರ. 13-28
ನಂ. 2: 1 ಅರಸುಗಳು 17:1-16
ನಂ. 3: ಯೇಸುವು ಅದ್ಭುತಕರವಾಗಿ ಸಾವಿರಾರು ಮಂದಿಗೆ ಉಣಿಸುವುದು (gt ಅಧ್ಯಾ. 52)
ನಂ. 4: td 6ಡಿ ಕ್ರಿಸ್ತನ ಶುಶ್ರೂಷೆ ಮೂರುವರೆ ವರ್ಷಗಳಷ್ಟು ಉದ್ದ
ಜೂನ್ 14 ಬೈಬಲ್ ವಾಚನ: 1 ಅರಸುಗಳು 18 ರಿಂದ 20
ಸಂಗೀತ 175 (104)
ನಂ. 1: sg ಪು. 122-25 ಪ್ಯಾರ. 1-21
ನಂ. 2: 1 ಅರಸುಗಳು 18:25-40
ನಂ. 3: ಯೇಸುವು ನೀರಿನ ಮೇಲೆ ನಡೆದಾಡಿದಾಗ (gt ಅಧ್ಯಾ. 53)
ನಂ. 4: td 6ಇ ಸೃಷ್ಟಿದಿನಗಳು ಎಷ್ಟು ಉದ್ದವಾಗಿದ್ದವು?
ಜೂನ್ 21 ಲಿಖಿತ ಪುನರ್ವಿಮರ್ಶೆ. ಸಂಪೂರ್ಣ 1 ಸಮುವೇಲ 25 ರಿಂದ 1 ಅರಸುಗಳು 20 ರ ವರೆಗೆ
ಸಂಗೀತ 8 (50)
ಜೂನ್ 28 ಬೈಬಲ್ ವಾಚನ: 1 ಅರಸುಗಳು 21 ಮತ್ತು 22
ಸಂಗೀತ 150 (83)
ನಂ. 1: 1 ಅರಸುಗಳು—ಯಾಕೆ ಉಪಯುಕ್ತವಾಗಿದೆ (si ಪು. 68-9 ಪ್ಯಾರ. 23-26)
ನಂ. 2: 1 ಅರಸುಗಳು 21:15-29
ನಂ. 3: ಪರಲೋಕದಿಂದ ರೊಟ್ಟಿ—ಯಾರ ಕೊಡುಗೆ? (gt ಅಧ್ಯಾ. 54)
ನಂ. 4: td 7ಎ “ಚರ್ಚ್” ಎಂಬ ಪದಕ್ಕೆ ಬೈಬಲ್ ಯಾವ ಅರ್ಥವನ್ನು ಕೊಡುತ್ತದೆ?
ಜೂಲೈ 5 ಬೈಬಲ್ ವಾಚನ: 2 ಅರಸುಗಳು 1 ರಿಂದ 3
ಸಂಗೀತ 50 (23)
ನಂ. 1: 2 ಅರಸುಗಳು—ಪೀಠಿಕೆ (si ಪು. 69 ಪ್ಯಾರ. 1-4)
ನಂ. 2: 1 ಅರಸುಗಳು 2:1-14
ನಂ. 3: ಅನೇಕರು ಯೇಸುವನ್ನು ಹಿಂಬಾಲಿಸುವುದನ್ನು ಬಿಡಲು ಕಾರಣ (gt ಅಧ್ಯಾ. 55)
ನಂ. 4: td 7ಬಿ ಕ್ರಿಸ್ತನ ಚರ್ಚ್ 1,44,000 ಕ್ಕೆ ಸೀಮಿತವಾಗಿದೆಯೋ?
ಜೂಲೈ 12 ಬೈಬಲ್ ವಾಚನ: 2 ಅರಸುಗಳು 4 ರಿಂದ 6
ಸಂಗೀತ 132 (70)
ನಂ. 1: sg ಪು. 126-9 ಪ್ಯಾರ. 1-22
ನಂ. 2: 2 ಅರಸುಗಳು 5:1-14
ನಂ. 3: ಮನುಷ್ಯನನ್ನು ಹೊಲೆಮಾಡುವದು ಯಾವುದು? (gt ಅಧ್ಯಾ. 56)
ನಂ. 4: td 7ಸಿ ಮನೆಗಳಲ್ಲಿ ಯಾ ಕಟ್ಟಡದ ಸಭಾಂಗಣಗಳಲ್ಲಿ ಸಭೆ ಸೇರುವುದು ಯೋಗ್ಯ
ಜೂಲೈ 19 ಬೈಬಲ್ ವಾಚನ: 2 ಅರಸುಗಳು 7 ರಿಂದ 9
ಸಂಗೀತ 18 (106)
ನಂ. 1: sg ಪು. 130-3 ಪ್ಯಾರ. 1-20
ನಂ. 2: 2 ಅರಸುಗಳು 9:1-14
ನಂ. 3: ಪೀಡಿತರಿಗಾಗಿ ಯೇಸುವಿನ ಕನಿಕರ (gt ಅಧ್ಯಾ. 57)
ನಂ. 4: td 7ಡಿ ಕ್ರೈಸ್ತ ಸಭೆಯು ಪೇತ್ರನ ಮೇಲೆ ಕಟ್ಟಲ್ಪಡಲಿಲ್ಲ
ಜೂಲೈ 26 ಬೈಬಲ್ ವಾಚನ: 2 ಅರಸುಗಳು 10 ರಿಂದ 12
ಸಂಗೀತ 119 (111)
ನಂ. 1: sg ಪು. 133-5 ಪ್ಯಾರ. 1-8
ನಂ. 2: 2 ಅರಸುಗಳು 10:15-30
ನಂ. 3: ಯೇಸುವು ತಪ್ಪು ತಿಳುವಳಿಕೆಯನ್ನು ಸರಿಪಡಿಸುತ್ತಾನೆ (gt ಅಧ್ಯಾ. 58)
ನಂ. 4: td 7ಇ ಉತ್ತರಾಧಿಕಾರಿಯಾಗಿ ಯಾವ ಪೋಪನನ್ನೂ ಕ್ರಿಸ್ತನು ಸ್ಥಾಪಿಸಲಿಲ್ಲ
ಆಗಸ್ಟ್ 2 ಬೈಬಲ್ ವಾಚನ: 2 ಅರಸುಗಳು 13 ರಿಂದ 15
ಸಂಗೀತ 168 (84)
ನಂ. 1: sg ಪು. 135-8 ಪ್ಯಾರ. 9-21
ನಂ. 2: 2 ಅರಸುಗಳು 13:14-25
ನಂ. 3: ಯೇಸುವು ನಿಜವಾಗಿ ಯಾರು? (gt ಅಧ್ಯಾ. 59)
ನಂ. 4: td 8ಎ ಬೈಬಲಿನ ನೈತಿಕ ಮಟ್ಟವನ್ನು ಎತ್ತಿ ಹಿಡಿಯಲೇಬೇಕು
ಆಗಸ್ಟ್ 9 ಬೈಬಲ್ ವಾಚನ: 2 ಅರಸುಗಳು 16 ರಿಂದ 18
ಸಂಗೀತ 181 (103)
ನಂ. 1: sg ಪು. 138-41 ಪ್ಯಾರ. 1-19
ನಂ. 2: 2 ಅರಸುಗಳು 17:1-15
ನಂ. 3: ಕ್ರಿಸ್ತನ ರಾಜ್ಯದ ಮಹಿಮೆಯ ಮುನ್ನೋಟ (gt ಅಧ್ಯಾ. 60)
ನಂ. 4: td 8ಬಿ ನಿಜವಾದ ಅಲಂಕಾರವು ಹೃದಯದ್ದಾಗಿರುತ್ತದೆ
ಆಗಸ್ಟ್ 16 ಬೈಬಲ್ ವಾಚನ: 2 ಅರಸುಗಳು 19 ರಿಂದ 22
ಸಂಗೀತ 144 (78)
ನಂ. 1: sg ಪು. 142-5 ಪ್ಯಾರ. 1-15
ನಂ. 2: 2 ಅರಸುಗಳು 19:14-28, 35
ನಂ. 3: ನಂಬಿಕೆಯ ಶಕ್ತಿ (gt ಅಧ್ಯಾ. 61)
ನಂ. 4: td 9ಎ ಸೃಷ್ಟಿಯು ಒಪ್ಪುವುದು ಸಾಬೀತಾದ ವಿಜ್ಞಾನದೊಂದಿಗೊ ಯಾ ವಿಕಾಸವಾದದೊಂದಿಗೊ?
ಆಗಸ್ಟ್ 23 ಬೈಬಲ್ ವಾಚನ: 2 ಅರಸುಗಳು 23 ರಿಂದ 25
ಸಂಗೀತ 213 (55)
ನಂ. 1: 2 ಅರಸುಗಳು—ಯಾಕೆ ಉಪಯುಕ್ತವಾಗಿದೆ (si ಪು. 74 ಪ್ಯಾರ. 33-36)
ನಂ. 2: 2 ಅರಸುಗಳು 23:1-15
ನಂ. 3: ನಮ್ರತೆಯ ಒಂದು ಪಾಠ (gt ಅಧ್ಯಾ. 62)
ನಂ. 4: td 9ಬಿ ಸೃಷ್ಟಿಯ ದಿನವು 24 ತಾಸುಗಳಷ್ಟು ಉದ್ದವೋ?
ಆಗಸ್ಟ್ 30 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 1 ರಿಂದ 3
ಸಂಗೀತ 105 (46)
ನಂ. 1: 1 ಪೂರ್ವಕಾಲವೃತ್ತಾಂತ—ಪೀಠಿಕೆ (si ಪು. 75-6 ಪ್ಯಾರ. 1-7)
ನಂ. 2: 1 ಪೂರ್ವಕಾಲವೃತ್ತಾಂತ 3:1-16
ನಂ. 3: ಇತರರನ್ನು ಎಡವುವುದರ ವಿರುದ್ಧ ಕಾದುಕೊಳ್ಳಿರಿ (gt ಅಧ್ಯಾ. 63)
ನಂ. 4: td 10ಎ ಯೇಸುವು ಕ್ರೂಜೆಯ ಮೇಲೆ ತೂಗಹಾಕಲ್ಪಟ್ಟನೋ?
ಸೆಪ್ಟೆಂ. 6 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 4 ರಿಂದ 6
ಸಂಗೀತ 110 (56)
ನಂ. 1: sg ಪು. 145-8 ಪ್ಯಾರ. 16-34
ನಂ. 2: 1 ಪೂರ್ವಕಾಲವೃತ್ತಾಂತ 5:1-17
ನಂ. 3: ಕ್ಷಮೆಯ ಒಂದು ಪಾಠ (gt ಅಧ್ಯಾ. 64)
ನಂ. 4: td 10ಬಿ ಕ್ರೈಸ್ತರು ಕ್ರೂಜೆಯನ್ನು ಆರಾಧಿಸಬೇಕೊ?
ಸೆಪ್ಟೆಂ. 13 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 7 ರಿಂದ 10
ಸಂಗೀತ 151 (25)
ನಂ. 1: sg ಪು. 149-50 ಪ್ಯಾರ. 1-8
ನಂ. 2: 1 ಪೂರ್ವಕಾಲವೃತ್ತಾಂತ 7:1-12
ನಂ. 3: ಯೆರೂಸಲೇಮಿಗೆ ಒಂದು ಗುಟ್ಟಿನ ಪ್ರಯಾಣ (gt ಅಧ್ಯಾ. 65)
ನಂ. 4: td 11ಎ ಎಲ್ಲಾ ಮಾನವ ಜಾತಿಗೆ ಮರಣವು ಯಾಕೆ ಬಂದಿರುತ್ತದೆ?
ಸೆಪ್ಟೆಂ. 20 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 11 ರಿಂದ 14
ಸಂಗೀತ 155 (107)
ನಂ. 1: sg ಪು. 150-3 ಪ್ಯಾರ. 9-21
ನಂ. 2: 1 ಪೂರ್ವಕಾಲವೃತ್ತಾಂತ 13:1-14
ನಂ. 3: ಪರ್ಣಶಾಲೆಗಳ ಜಾತ್ರೆಯಲ್ಲಿ ಅಪಾಯ (gt ಅಧ್ಯಾ. 66)
ನಂ. 4: td 11ಬಿ ಮೃತರ ಸ್ಥಿತಿಯು ಏನಾಗಿದೆ?
ಸೆಪ್ಟೆಂ. 27 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 15 ರಿಂದ 18
ಸಂಗೀತ 156 (9)
ನಂ. 1: sg ಪು. 153-6 ಪ್ಯಾರ. 1-14
ನಂ. 2: 1 ಪೂರ್ವಕಾಲವೃತ್ತಾಂತ 17:1-15
ನಂ. 3: ಯೇಸುವನ್ನು ಸೆರೆಹಿಡಿಯಲು ಅಧಿಕಾರಿಗಳು ಅಸಫಲರಾದ ಕಾರಣ (gt ಅಧ್ಯಾ. 67)
ನಂ. 4: td 11ಸಿ ಜೀವಿತರು ಸತ್ತವರೊಂದಿಗೆ ಮಾತಾಡಬಹುದೊ?
ಅಕ್ಟೋ. 4 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 19 ರಿಂದ 22
ಸಂಗೀತ 2 (79)
ನಂ. 1: sg ಪು. 156-8 ಪ್ಯಾರ. 15-24
ನಂ. 2: 1 ಪೂರ್ವಕಾಲವೃತ್ತಾಂತ 22:6-19
ನಂ. 3: ಯೇಸುವಿನ ದೈವಿಕ ಮೂಲ ಮತ್ತು ಸ್ವರ್ಗದಲ್ಲಿ ಆತನ ಭವಿಷ್ಯತ್ತು (gt ಅಧ್ಯಾ. 68 ಪ್ಯಾರ. 1-11)
ನಂ. 4: td 11ಡಿ ಸತ್ತವರನ್ನು ಗೌರವಿಸುವುದು ತಪ್ಪು
ಅಕ್ಟೋ. 11 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 23 ರಿಂದ 26
ಸಂಗೀತ 121 (100)
ನಂ. 1: sg ಪು. 158-60 ಪ್ಯಾರ. 1-9
ನಂ. 2: 1 ಪೂರ್ವಕಾಲವೃತ್ತಾಂತ 23:1-5, 24-32
ನಂ. 3: ಜನರನ್ನು ಬಿಡುಗಡೆಗೊಳಿಸುವ ಸತ್ಯವು (gt ಅಧ್ಯಾ. 68 ಪ್ಯಾರ. 12-16)
ನಂ. 4: td 12ಎ ಯೆಹೋವನಿಗೆ ಸಮರ್ಪಣೆ ಜೀವಕ್ಕಾಗಿ ಅಗತ್ಯ
ಅಕ್ಟೋ. 18 ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 27 ರಿಂದ 29
ಸಂಗೀತ 88 (22)
ನಂ. 1: 1 ಪೂರ್ವಕಾಲವೃತ್ತಾಂತ—ಯಾಕೆ ಉಪಯುಕ್ತವಾಗಿದೆ (si ಪು. 78-9 ಪ್ಯಾರ. 22-25)
ನಂ. 2: 1 ಪೂರ್ವಕಾಲವೃತ್ತಾಂತ 27:23-34
ನಂ. 3: ತಂದೆತನದ ಪ್ರಶ್ನೆ (gt ಅಧ್ಯಾ. 69)
ನಂ. 4: td 13ಎ ಬಾಲಕರ ಅಪರಾಧಗಳ ಸಮಸ್ಯೆಗೆ ಬೈಬಲಿನ ಉತ್ತರ
ಅಕ್ಟೋ. 25 ಲಿಖಿತ ಪುನರ್ವಿಮರ್ಶೆ. ಸಂಪೂರ್ಣ 1 ಅರಸುಗಳು 21 ರಿಂದ 1 ಪೂರ್ವಕಾಲವೃತ್ತಾಂತ 29 ರ ವರೆಗೆ
ಸಂಗೀತ 217 (112)
ನೊವೆಂ. 1 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 1 ರಿಂದ 5
ಸಂಗೀತ 191 (91)
ನಂ. 1: 2 ಪೂರ್ವಕಾಲವೃತ್ತಾಂತ—ಪೀಠಿಕೆ (si ಪು. 79-80 ಪ್ಯಾರ. 1-6)
ನಂ. 2: 2 ಪೂರ್ವಕಾಲವೃತ್ತಾಂತ 5:1-14
ನಂ. 3: ಹುಟ್ಟು ಕುರುಡನನ್ನು ಗುಣಪಡಿಸುವುದು (gt ಅಧ್ಯಾ. 70)
ನಂ. 4: td 14ಎ ಪಿಶಾಚನೊಬ್ಬ ನಿಜ ಸೃಷ್ಟಿಜೀವಿಯೋ?
ನೊವೆಂ. 8 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 6 ರಿಂದ 8
ಸಂಗೀತ 47 (21)
ನಂ. 1: sg ಪು. 160-3 ಪ್ಯಾರ. 10-24
ನಂ. 2: 2 ಪೂರ್ವಕಾಲವೃತ್ತಾಂತ 7:1-16
ನಂ. 3: ಒಬ್ಬ ಬಿಕುಕ್ಷನು ಫರಿಸಾಯರನ್ನು ತಬ್ಬಿಬ್ಬುಗೊಳಿಸುತ್ತಾನೆ (gt ಅಧ್ಯಾ. 71)
ನಂ. 4: td 14ಬಿ ಲೋಕದ ನಿಜವಾದ ಅಧಿಪತಿ ಯಾರು?
ನೊವೆಂ. 15 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 9 ರಿಂದ 12
ಸಂಗೀತ 201 (82)
ನಂ. 1: sg ಪು. 163-5 ಪ್ಯಾರ. 1-9
ನಂ. 2: 2 ಪೂರ್ವಕಾಲವೃತ್ತಾಂತ 9:1-14
ನಂ. 3: ಯೇಸುವು 70 ಮಂದಿಯನ್ನು ಕಳುಹಿಸುತ್ತಾನೆ (gt ಅಧ್ಯಾ. 72)
ನಂ. 4: td 14ಸಿ ಲೋಕ ಸಂಕಟಕ್ಕೆ ಪಿಶಾಚನು ಜವಾಬ್ದಾರನು
ನೊವೆಂ. 22 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 13 ರಿಂದ 17
ಸಂಗೀತ 202 (80)
ನಂ. 1: sg ಪು. 165-7 ಪ್ಯಾರ. 10-21
ನಂ. 2: 2 ಪೂರ್ವಕಾಲವೃತ್ತಾಂತ 13:8-22
ನಂ. 3: ನಮ್ಮ ನೆರೆಯವನು ನಿಜವಾಗಿಯೂ ಯಾರು? (gt ಅಧ್ಯಾ. 73)
ನಂ. 4: td 14ಡಿ ದೆವ್ವಗಳ ಉಗಮ ಎಲ್ಲಿಂದ?
ನೊವೆಂ. 29 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 18 ರಿಂದ 21
ಸಂಗೀತ 172 (92)
ನಂ. 1: sg ಪು. 168-70 ಪ್ಯಾರ. 1-14
ನಂ. 2: 2 ಪೂರ್ವಕಾಲವೃತ್ತಾಂತ 19:1-11
ನಂ. 3: ಯೇಸು ಮಾರ್ಥಳಿಗೆ ಬುದ್ಧಿವಾದ ನೀಡುತ್ತಾನೆ (gt ಅಧ್ಯಾ. 74 ಪ್ಯಾರ. 1-5)
ನಂ. 4: td 15ಎ ಬಹಿಷ್ಕರಿಸುವಿಕೆಗೆ ಶಾಸ್ತ್ರೀಯ ಆಧಾರ
ಡಿಸೆಂ. 6 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 22 ರಿಂದ 25
ಸಂಗೀತ 161 (87)
ನಂ. 1: sg ಪು. 170-1 ಪ್ಯಾರ. 15-22
ನಂ. 2: 2 ಪೂರ್ವಕಾಲವೃತ್ತಾಂತ 23:1-15
ನಂ. 3: ಪ್ರಾರ್ಥನೆಯಲ್ಲಿ ನಿರತರಾಗಿರುವ ಅವಶ್ಯಕತೆ (gt ಅಧ್ಯಾ. 74 ಪ್ಯಾರ. 6-9)
ನಂ. 4: td 15ಬಿ ಬಹಿಷ್ಕರಿಸುವಿಕೆಗೆ ಕಾರಣಗಳು
ಡಿಸೆಂ. 13 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 26 ರಿಂದ 28
ಸಂಗೀತ 222 (119)
ನಂ. 1: sg ಪು. 172-5 ಪ್ಯಾರ. 1-13
ನಂ. 2: 2 ಪೂರ್ವಕಾಲವೃತ್ತಾಂತ 26:11-23
ನಂ. 3: ಯೇಸುವಿನ ಅದ್ಭುತಕಾರ್ಯಗಳಿಗೆ ಯೋಗ್ಯವಾದ ಪ್ರತಿಕ್ರಿಯೆ (gt ಅಧ್ಯಾ. 75)
ನಂ. 4: td 15ಸಿ ದೈವಿಕ ಕ್ಷಮಾಪಣೆಗೆ ಪಶ್ಚಾತ್ತಾಪವು ಅತ್ಯಾವಶ್ಯಕ
ಡಿಸೆಂ. 20 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 29 ರಿಂದ 30
ಸಂಗೀತ 34 (8)
ನಂ. 1: sg ಪು. 175-7 ಪ್ಯಾರ. 1-14
ನಂ. 2: 2 ಪೂರ್ವಕಾಲವೃತ್ತಾಂತ 30:1-12
ನಂ. 3: ಯೇಸುವು ಫರಿಸಾಯರನ್ನು ಮತ್ತು ನ್ಯಾಯವಾದಿಗಳನ್ನು ಬಹಿರಂಗಗೊಳಿಸುತ್ತಾನೆ (gt ಅಧ್ಯಾ. 76)
ನಂ. 4: td 16ಎ ಕ್ರೈಸ್ತರು ಮಾದಕೌಷಧಗಳನ್ನು ದೂರವಿಡುತ್ತಾರೆ
ಡಿಸೆಂ. 27 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 31 ರಿಂದ 33
ಸಂಗೀತ 215 (117)
ನಂ. 1: sg ಪು. 177-80 ಪ್ಯಾರ. 15-20
ನಂ. 2: 2 ಪೂರ್ವಕಾಲವೃತ್ತಾಂತ 32:10-22
ನಂ. 3: ಯೇಸುವು ಹಕ್ಕುಬಾಧ್ಯತೆಯ ಪ್ರಶ್ನೆಯನ್ನು ನಿರ್ವಹಿಸುವುದು (gt ಅಧ್ಯಾ. 77)
ನಂ. 4: td 17ಎ ಭೂಮಿಗಾಗಿ ದೇವರ ಉದ್ದೇಶವೇನು?
ಜನ. 3 ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 34 ರಿಂದ 36
ಸಂಗೀತ 211 (109)
ನಂ. 1: 2 ಪೂರ್ವಕಾಲವೃತ್ತಾಂತ—ಯಾಕೆ ಉಪಯುಕ್ತವಾಗಿದೆ (si ಪು. 84 ಪ್ಯಾರ. 34-36)
ನಂ. 2: 2 ಪೂರ್ವಕಾಲವೃತ್ತಾಂತ 34:22-33
ನಂ. 3: ಯೇಸುವು ತನ್ನ ಹಿಂದಿರುಗುವಿಕೆಗೆ ಸಿದ್ಧವಾಗಿರುವಂತೆ ತನ್ನ ಶಿಷ್ಯರನ್ನು ಪ್ರೇರೇಪಿಸುತ್ತಾನೆ (gt ಅಧ್ಯಾ. 78)
ನಂ. 4: td 17ಬಿ ನಷ್ಟಗೊಂಡ ಪ್ರಮೋದವನದಿಂದ ಪುನಃ ಸ್ವಾಧೀನವಾಗಿರುವ ಭೂಮಿಗೆ
ಜನ. 10 ಬೈಬಲ್ ವಾಚನ: ಎಜ್ರನು 1 ರಿಂದ 3
ಸಂಗೀತ 195 (105)
ನಂ. 1: 2 ಎಜ್ರನು—ಪೀಠಿಕೆ (si ಪು. 85 ಪ್ಯಾರ. 1-7)
ನಂ. 2: ಎಜ್ರನು 3:1-13
ನಂ. 3: ಜನಾಂಗವೊಂದು ನಷ್ಟವಾಯಿತು, ಆದರೆ ಎಲ್ಲರೂ ಅಲ್ಲ (gt ಅಧ್ಯಾ. 79 ಪ್ಯಾರ. 1-5)
ನಂ. 4: td 17ಸಿ ಭೂಮಿಯು ಯಾವಾಗಲೂ ಜನನಿವಾಸಿತವಾಗಿರುವುದೋ?
ಜನ. 17 ಬೈಬಲ್ ವಾಚನ: ಎಜ್ರನು 4 ರಿಂದ 7
ಸಂಗೀತ 177 (48)
ನಂ. 1: sg ಪು. 181-3 ಪ್ಯಾರ. 1-14
ನಂ. 2: ಎಜ್ರನು 6:1-13
ನಂ. 3: ಸಬ್ಬತ್ ದಿನದಂದು ಗುಣಪಡಿಸಿದ್ದನ್ನು ಪ್ರತಿಭಟಿಸುವವರನ್ನು ಖಂಡಿಸುವುದು (gt ಅಧ್ಯಾ. 79 ಪ್ಯಾರ. 6-9)
ನಂ. 4: td 17ಡಿ ಮಾನವರು ಭೂಮಿಯನ್ನು ನಾಶ ಮಾಡಲು ಅಶಕ್ತರು
ಜನ. 24 ಬೈಬಲ್ ವಾಚನ: ಎಜ್ರನು 8 ರಿಂದ 10
ಸಂಗೀತ 148 (16)
ನಂ. 1: ಎಜ್ರನು—ಯಾಕೆ ಉಪಯುಕ್ತವಾಗಿದೆ (si ಪು. 87 ಪ್ಯಾರ. 14-18)
ನಂ. 2: ಎಜ್ರನು 9:1-9, 15
ನಂ. 3: ಕುರೀಹಟ್ಟಿಗಳು ಮತ್ತು ಒಳೇ ಕುರುಬನು (gt ಅಧ್ಯಾ. 80)
ನಂ. 4: td 18ಎ ವಿಕಾಸ ಅಶಾಸ್ತ್ರೀಯವಾಗಿದೆ
ಜನ. 31 ಬೈಬಲ್ ವಾಚನ: ನೆಹೆಮೀಯ 1 ರಿಂದ 3
ಸಂಗೀತ 53 (27)
ನಂ. 1: ನೆಹೆಮೀಯ—ಪೀಠಿಕೆ (si ಪು. 88 ಪ್ಯಾರ. 1-5)
ನಂ. 2: ನೆಹೆಮೀಯ 3:1-14
ನಂ. 3: ಅವರು ಯೇಸುವನ್ನು ಕೊಲ್ಲಲು ಪ್ರಯತ್ನಿಸುವ ಕಾರಣ (gt ಅಧ್ಯಾ. 81)
ನಂ. 4: td 19ಎ ನಮ್ಮ ಕಾಲದ ಸುಳ್ಳು ಪ್ರವಾದಿಗಳು ಯಾರು?
ಫೆಬ್ರು. 7 ಬೈಬಲ್ ವಾಚನ: ನೆಹೆಮೀಯ 4 ರಿಂದ 6
ಸಂಗೀತ 143 (76)
ನಂ. 1: sg ಪು. 184-7 ಪ್ಯಾರ. 15-34
ನಂ. 2: ನೆಹೆಮೀಯ 6:1-13
ನಂ. 3: ಯಾರು ರಕ್ಷಿಸಲ್ಪಡರು? (gt ಅಧ್ಯಾ. 82 ಪ್ಯಾರ. 1-6)
ನಂ. 4: td 20ಎ ಲೋಕದ ಸರಕಾರಗಳಿಗೆ ಕ್ರೈಸ್ತನ ಸಂಬಂಧ
ಫೆಬ್ರು. 14 ಬೈಬಲ್ ವಾಚನ: ನೆಹೆಮೀಯ 7 ಮತ್ತು 8
ಸಂಗೀತ 123 (63)
ನಂ. 1: sg ಪು. 188-91 ಪ್ಯಾರ. 1-13
ನಂ. 2: ನೆಹೆಮೀಯ 8:1-12
ನಂ. 3: ಯೆರೂಸಲೇಮಿನ ದಾರಿಯಲ್ಲಿರುವಾಗಿನ ಕಾರ್ಯಗಳು (gt ಅಧ್ಯಾ. 82 ಪ್ಯಾರ. 7-11)
ನಂ. 4: td 20ಬಿ ಕ್ರೈಸ್ತನ ಪ್ರಥಮ ಜವಾಬ್ದಾರಿಕೆಯು ದೇವರಿಗೆ ಆಗಿರತಕ್ಕದ್ದು
ಫೆಬ್ರು. 21 ಲಿಖಿತ ಪುನರ್ವಿಮರ್ಶೆ. ಸಂಪೂರ್ಣ 2 ಪೂರ್ವಕಾಲವೃತ್ತಾಂತ 1 ರಿಂದ ನೆಹೆಮೀಯ 8 ರ ವರೆಗೆ
ಸಂಗೀತ 111 (19)