ಬೆಳಕು ವಾಹಕರು ನೆರೆಹೊರೆಯಲ್ಲಿ
1 ಇತ್ತೀಚೆಗಿನ ಜಿಲ್ಲಾ ಅಧಿವೇಶನಕ್ಕೆ ಹಾಜರಾದ ನಂತರ, ನಮ್ಮ ನೆರೆಯವರಿಗೆ ನಾವು ಬೆಳಕು ವಾಹಕರಾಗುವ ಆವಶ್ಯಕತೆಯ ಹೆಚ್ಚು ತೀವ್ರತಮ ಅರಿವು ಉಳ್ಳವರಾಗಿದ್ದೇವೆ. (ಮತ್ತಾ. 5:15) ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲ್ಪಟ್ಟ ಎಲ್ಲಾ ಸಮಾಚಾರದ ಮೇಲೆ ನಾವು ಪ್ರತಿಬಿಂಬಿಸುವಾಗ ಮತ್ತು ನಮ್ಮ ದೈನಿಕ ಜೀವಿತಗಳಲ್ಲಿ ಅದನ್ನು ಅನ್ವಯಿಸಲು ಪ್ರಯತ್ನಿಸುತ್ತಿರುವಾಗ, ಸತ್ಯಾರಾಧನೆಯಲ್ಲಿ ಯೆಹೋವನ ಬಳಿಗೆ ಹೆಚ್ಚು ಹತ್ತಿರ ಬರಲು ಮತ್ತು ಯೆಹೋವನ ವಾಗ್ದಾನಗಳ ಕುರಿತು ಕಲಿಯಲು ಇತರರಿಗೆ ಸಹಾಯ ಮಾಡಲು ನಾವು ಸಹಾಯಿಸಲ್ಪಟ್ಟಿದ್ದೇವೆ.
2 ಶುಕ್ರವಾರದ ಬೆಳಗ್ಗಿನ ಕಾರ್ಯಕ್ರಮವು ಮುಕ್ತಾಯಗೊಂಡಾಗ, ವಿಲ್ ದಿಸ್ ವರ್ಲ್ಡ್ ಸರ್ವೈವ್? ಎಂಬ ಹೊಸ ಕಿರುಹೊತ್ತಗೆ ಬಿಡುಗಡೆಯಾಯಿತು, ಆಗ ಬೆಳಕನ್ನು ಪ್ರಕಾಶಿಸುವ ನಮ್ಮ ಸಂದರ್ಭಗಳು ಹೆಚ್ಚಾದವು. ಕಿರುಹೊತ್ತಗೆಯನ್ನು ಹೇಗೆ ಉಪಯೋಗಿಸಬಹುದು ಎಂಬುದನ್ನು ತೋರಿಸುವ ಶನಿವಾರ ಬೆಳಗ್ಗಿನ ಪ್ರತ್ಯಕ್ಷಾಭಿನಯಗಳು ಬಹಳಷ್ಟು ಸಹಾಯಕಾರಿಯಾಗಿದ್ದವು. ಇದರೊಟ್ಟಿಗೆ, ಇನ್ನು ಮೂರು ಕಿರುಹೊತ್ತಗೆಗಳು ಬೇಗನೆ ದೊರಕಲಿರುವುವು ಎಂಬ ಪ್ರಕಟನೆಯೊಂದು ಅಲ್ಲಿತ್ತು. ಕಂಫರ್ಟ್ ಫಾರ್ ದ ಡಿಪ್ರೆಸ್ಡ್, ಎಂಜಾಯ್ ಫ್ಯಾಮಿಲಿ ಲೈಫ್, ಮತ್ತು ಹೂ ರೀಅಲಿ ರೂಲ್ಸ್ ದ ವರ್ಲ್ಡ್? ಎಂಬುದೇ ಇವುಗಳ ಶಿರೋನಾಮಗಳಾಗಿವೆ. ಬಳಸಲು ಸಂದರ್ಭವು ಒದಗಿಬರುತ್ತಿದ್ದಂತೆ, ಈ ಅನುಕೂಲ ಉಪಕರಣಗಳನ್ನು ನಮ್ಮೊಂದಿಗೆ ಕೊಂಡೊಯ್ಯಲು ಪ್ರೋತ್ಸಾಹವು ಕೊಡಲ್ಪಟ್ಟಿತು. ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯ ‘ಪ್ರಕಟನೆಗಳು’ ಅಂಕಣದಲ್ಲಿ ಈ ಎಲ್ಲಾ ನಾಲ್ಕು ಕಿರುಹೊತ್ತಗೆಗಳು ಇಂಗ್ಲಿಷಿನಲ್ಲಿ ದೊರಕುತ್ತವೆ ಮತ್ತು ನಮ್ಮಿಂದ ಸಭೆಗಳು ಅವುಗಳಿಗೆ ಆರ್ಡರ್ ಮಾಡಬಹುದು ಎಂಬುದನ್ನು ಗಮನಿಸಲು ನೀವು ಸಂತೋಷಿಸುವಿರಿ. ಇತರ ಅನೇಕ ಭಾಷೆಗಳಲ್ಲಿ ಅವುಗಳು ಬಲುಬೇಗನೆ ದೊರಕುವಂತೆ ಸಾಧ್ಯವಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ.
3 ಶನಿವಾರ ಅಪರಾಹ್ನದ “ಯೇಸು ಕ್ರಿಸ್ತನ ಪ್ರಕಟನೆಯಲ್ಲಿ ವಿಮೋಚನೆ” ಎಂಬ ಭಾಷಣದ ಕೊನೆಯಲ್ಲಿ, ಡಸ್ ಗಾಡ್ ರೀಅಲಿ ಕೇರ್ ಅಬೌಟ್ ಅಸ್? ಎಂಬ ಒಂದು ಉತ್ತಮ ಹೊಸ ಬ್ರೊಷರ್ ಬಿಡುಗಡೆಗೊಳಿಸಲ್ಪಟ್ಟಿತು. ಈ ಪೂರ್ಣವರ್ಣದ, ಸುಂದರವಾದ ಸಚಿತ್ರದ ಬ್ರೊಷರ್ ಜನರು ಕೇಳುವ ಇಂತಹ ಅನೇಕ ಪ್ರಶ್ನೆಗಳನ್ನು ಉತ್ತರಿಸುತ್ತದೆ: ಕಷ್ಟಾನುಭವವನ್ನು ದೇವರು ಅನುಮತಿಸುವುದೇಕೆ? ಕಷ್ಟಾನುಭವವು ಎಂದಾದರೂ ಅಂತ್ಯಗೊಳ್ಳುವುದೋ? ನಾವು ಕಡೇ ದಿವಸಗಳಲ್ಲಿ ಇದ್ದೇವೆ ಎಂದು ನಮಗೆ ತಿಳಿದಿರುವುದು ಹೇಗೆ? ಭೂಮಿಯು ಒಂದು ಪ್ರಮೋದವನವಾಗಿ ಬದಲಾಯಿಸಲ್ಪಡುವುದು ಹೇಗೆ? ದೇವರ ಹೊಸ ಲೋಕದಲ್ಲಿ ನಾವು ನಿತ್ಯ ಜೀವವನ್ನು ಹೇಗೆ ಪಡೆಯಬಹುದು? ಹೊಸ ಅಧ್ಯಯನಗಳನ್ನು ಆರಂಭಿಸಲು ಈ ಬ್ರೊಷರ್ ಒಂದು ಉತ್ಕೃಷ್ಟ ಉಪಕರಣವಾಗಲಿರುವುದು. ವಿತರಣೆಗಾಗಿ ಅದು ಇಂಗ್ಲಿಷಿನಲ್ಲಿ ಈಗ ದೊರಕಲಿರುವುದು ಮತ್ತು ಸಮಯಾನಂತರ ಇತರ ಭಾಷೆಗಳಲ್ಲಿ ಅದಿರುವುದನ್ನು ನಾವು ಮುನ್ನೋಡುತ್ತೇವೆ.
4 “ಬೆಳಕು ವಾಹಕರು” ಜಿಲ್ಲಾ ಅಧಿವೇಶನದಲ್ಲಿ ಹೇರಳ ಆತ್ಮಿಕ ಆಹಾರವನ್ನು ಪಡೆದಿದುದ್ದಕ್ಕಾಗಿ ನಾವೆಷ್ಟು ಆಭಾರಿಗಳಾಗಿದ್ದೇವೆ! ದೇವರ ಆತ್ಮಿಕ ಬೆಳಕಿನ ವಾಹಕರೋಪಾದಿ, ನಾವೇನನ್ನು ಕಲಿತಿದ್ದೇವೋ ಅದನ್ನು ಪ್ರಜ್ಞಾಪೂರ್ವಕವಾಗಿ ಅನ್ವಯಿಸುವ ಮೂಲಕ ಮತ್ತು ಎಲ್ಲೆಡೆಗಳಲ್ಲಿಯೂ ಇರುವ ಜನರಿಗೆ ಯೆಹೋವನನ್ನು ಅರಿಯಲು ಮತ್ತು ಸೇವಿಸಲು ಸಹಾಯ ಮಾಡುವುರಲ್ಲಿ ಈ ಉತ್ತಮ ಹೊಸ ಬಿಡುಗಡೆಗಳನ್ನು ಕಾರ್ಯತತ್ಪರತೆಯಿಂದ ಉಪಯೋಗಿಸುವುದರ ಮೂಲಕ ನಮ್ಮ ಹೃದಯಪೂರ್ವಕ ಗಣ್ಯತೆಯನ್ನು ನಾವು ಪ್ರದರ್ಶಿಸಲು ನಿರ್ಧಾರಮಾಡೋಣ.