ಸಮಾಧಾನ ಮತ್ತು ಭದ್ರತೆಗಾಗಿ ದೇವರ ಮಾರ್ಗವನ್ನು ಸಾರಿರಿ
1 ಸಮಾಧಾನ ಮತ್ತು ಭದ್ರತೆಗಾಗಿ ಮಾನವರು ಅನೇಕ ಪ್ರಸ್ತಾಪನೆಗಳನ್ನು ಮಾಡಿರುತ್ತಾರೆ, ಆದರೆ ಇವುಗಳಲ್ಲಿ ಒಂದೂ ಕೂಡ ಲೋಕ ವ್ಯಾಪಕ ಜನರ ನಿಜ ಆವಶ್ಯಕತೆಗಳನ್ನು ನೆರವೇರಿಸಿಲ್ಲ. ಒಂದು ಭದ್ರತೆ ಮತ್ತು ಸಮಾಧಾನಭರಿತ ಲೋಕಕ್ಕಾಗಿ ರಾಜಕೀಯ ಹೆಬ್ಬಯಕೆ ಮತ್ತು ದುರಾಶೆಯೊಂದಿಗೆ ಸಮ್ಮಿಳಿತವಾದ ಧಾರ್ಮಿಕ, ಜಾತೀಯ, ಮತ್ತು ರಾಷ್ಟ್ರೀಯ ದ್ವೇಷಗಳು, ಪ್ರಮುಖ ಹಾದಿತಡೆಗಟ್ಟುಗಳಾಗಿ ಕಂಡುಬರುತ್ತವಾದರೂ, ನಿಜ ಕ್ರೈಸ್ತರಿಗೆ ಪಿಶಾಚನಾದ ಸೈತಾನ ಮತ್ತು ಯೆಹೋವನಿಗೆ ಅಧೀನನಾಗಲು ಮಾನವನ ನಿರಾಕರಣೆ ನಿಜವಾದ ಅಡ್ಡಿಗಳೆಂದು ಗೊತ್ತಿದೆ.—ಕೀರ್ತನೆ 127:1; ಯೆರೆ. 8:9; 1 ಯೋಹಾನ 5:19.
2 ಜನವರಿಯಲ್ಲಿ, ಸಮಾಧಾನ ಮತ್ತು ಭದ್ರತೆಗಾಗಿ ದೇವರ ಮಾರ್ಗ ಒಂದೇ ಮಾರ್ಗವಾಗಿರುತ್ತದೆ ಮತ್ತು ಮಾನವ ಕುಲದ ಎಲ್ಲ ಸಮಸ್ಯೆಗಳಿಗೆ ಕಡೆಯ ಪರಿಹಾರ ಯೆಹೋವನು ಮಾತ್ರ ಹೊಂದಿರುತ್ತಾನೆಂದು ನಮ್ಮ ನೆರೆಯವರು ಕಾಣುವಂತೆ ಸಹಾಯ ಮಾಡಲು ನಾವು ಪ್ರಯತ್ನಿಸುವೆವು.
3 ಕಿರು ಹೊತ್ತಗೆಗಳನ್ನು ಉಪಯೋಗಿಸಿರಿ: ಸಂಸ್ಥೆಯು ನಮಗಾಗಿ ತಯಾರಿಸಿರುವ ಉತ್ತಮ ಕಿರು ಹೊತ್ತಗೆಗಳನ್ನು ಉಪಯೋಗಿಸುವುದರ ಮೂಲಕ ಈ ಭಕ್ತಿವೃದ್ಧಿ ಮಾಡುವ ಸಂದೇಶವನ್ನು ಹಂಚಬಹುದು. ಸಂಭಾಷಣೆಗಳನ್ನು ಆರಂಭಿಸಲು ಮತ್ತು ಬೈಬಲ್ ಅಧ್ಯಯನಕ್ಕೆ ನಡಿಸಲು ಈ ಹಿಂದೆ ನಾವು ವಿವಿಧ ಕಿರು ಹೊತ್ತಗೆಗಳನ್ನು ಉಪಯೋಗಿಸುವುದರ ಪ್ರತ್ಯಕ್ಷಾಭಿನಯಗಳನ್ನು ನೋಡಿರುತ್ತೇವೆ. ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ ಎಂಬ (ಟ್ಯ್ರಾಕ್ಟ್ ನಂಬ್ರ 13) ಕಿರು ಹೊತ್ತಗೆಯ 5 ಮತ್ತು 6 ಪುಟಗಳಲ್ಲಿ ಉದ್ಧರಿಸಲಾದ, ಈ ಲೋಕದ ಅಂತ್ಯದ ಕುರಿತು ವಿವಿಧ ಬೈಬಲಿನ ಪ್ರವಾದನೆಗಳ ನಾಟುವಂಥ ನೆರವೇರಿಕೆ, ಅನೇಕರ ಗಮನವನ್ನು ಹಿಡಿಯಬೇಕು.
4 ಕಿರು ಹೊತ್ತಗೆ ನಂಬ್ರ 14 ಯೆಹೋವನ ಸಾಕ್ಷಿಗಳ ನಂಬಿಕೆ ಏನು? ಎಂಬ ಪ್ರಶ್ನೆಗೆ ಚುಟುಕಾಗಿ ಉತ್ತರವನ್ನೀಯುತ್ತದೆ. ಅದು ನಮ್ಮ ನಂಬಿಕೆಗಳು ಕ್ರೈಸ್ತಪ್ರಪಂಚದ ಚರ್ಚುಗಳ ನಂಬಿಕೆಗಳಿಗಿಂತ ಭಿನ್ನವಾಗಿರುವುದು ಯಾಕೆಂದು ವಿವರಿಸುತ್ತದೆ ಮತ್ತು ದೇವರ ರಾಜ್ಯದಲ್ಲಿ ನಂಬಿಕೆಯನ್ನಿಡಲು ಜನರಿಗೆ ಸಹಾಯ ಮಾಡುವ ನಮ್ಮ ಸತತ ಪ್ರಯತ್ನಗಳಿಗಾಗಿ ಕಾರಣಗಳನ್ನು ಕೊಡುತ್ತದೆ. ಈ ರಾಜ್ಯವು ಇನ್ನು ಕೊಂಚ ಸಮಯದಲ್ಲಿಯೆ ಏನನ್ನು ಪೂರೈಸುವುದೆಂಬದನ್ನು ಕೂಡ ಅದು ತೋರಿಸಿಕೊಡುತ್ತದೆ ಮತ್ತು ಬರುವ ನಾಶನದಿಂದ ಪಾರಾಗುವ ನಮ್ಮ ಆಶ್ಚರ್ಯಕರ ನಿರೀಕ್ಷೆಗೆ ಕೈ ತೋರಿಸುತ್ತದೆ.
5 ಇಂದು ಲಕ್ಷಗಟ್ಟಲೆ ಜನರು ಖಿನ್ನರಾಗಿರುತ್ತಾರೆ, ಮತ್ತು ಅವರು ಗುಣಪಡಿಸುವ ಸಮಯಕ್ಕಾಗಿ ಮತ್ತು ನಿಜ ಶಾಂತಿ, ಭದ್ರತೆ, ಮತ್ತು ನೆಮ್ಮದಿಗಾಗಿ ಕಾಯುತ್ತಾರೆ. ಶಾಂತಿಭರಿತ ಹೊಸ ಲೋಕದಲ್ಲಿ ಜೀವಿತವು (ಟ್ಯ್ರಾಕ್ಟ್ ನಂಬ್ರ 15) ಅನೇಕರಿಗೆ ಪ್ರೋತ್ಸಾಹನೆಯ ನಿಜ ಮೂಲವಾಗಬಹುದು.
6 ಕಿರು ಹೊತ್ತಗೆ ನಂಬ್ರ 16, ಸತ್ತ ಪ್ರಿಯ ಜನರಿಗಾಗಿ ನಿರೀಕ್ಷೆ ಏನು? ಮರಣದಲ್ಲಿ ಯಾರನ್ನಾದರೂ ಕಳೆದುಕೊಂಡಿರುವ ವ್ಯಕ್ತಿಗಳಿಗೆ ದುಃಖೋಪಶಮನ ನೀಡುತ್ತದೆ ಮತ್ತು ದೇವರ ಹೊಸ ಲೋಕದಲ್ಲಿ ಅವರ ಪ್ರಿಯರು ಎಬ್ಬಿಸಲ್ಪಡುವ ನಿರೀಕ್ಷೆಯನ್ನು ಕೊಡುತ್ತದೆ.
7 ಬೈಬಲ್ ಅಧ್ಯಯನಗಳನ್ನು ಆರಂಭಿಸಿರಿ: ಒಂದು ಕಿರು ಹೊತ್ತಗೆ, ಬ್ರೊಷರ್, ಯಾ ಪುಸ್ತಕದಿಂದ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಬಹುದು. ಮನೆಯವರ ಹತ್ತಿರ ಈಗಾಗಲೆ ನಮ್ಮ ಸಾಹಿತ್ಯಗಳು ಇರುವುದಾಗಿ ನಿಮಗೆ ಗೊತ್ತಾದಲ್ಲಿ, ಅವನ್ನು ಬೈಬಲ್ ಅಧ್ಯಯನದಲ್ಲಿ ಹೇಗೆ ಉಪಯೋಗಿಸಬಹುದೆಂದು ತೋರಿಸಲು ಜಾಣ್ಮೆಯಿಂದ ಕೇಳಿಕೊಳ್ಳಿರಿ. ನಮ್ಮ ಕಿರು ಹೊತ್ತಗೆಗಳು ಮತ್ತು ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? ಎಂಬ ಬ್ರೊಷರ್ ಮನೆಯವನ ಅಭಿರುಚಿಯನ್ನು ಕೆರಳಿಸಲು ಮತ್ತು ಬೈಬಲ್ ಅಧ್ಯಯನವನ್ನು ಆರಂಭಿಸಲು ಉತ್ತಮ ಸಾಧನಗಳಾಗಿವೆ. ಇನ್ನು, ಈ ತಿಂಗಳಲ್ಲಿ ನಾವು ನಮ್ಮ ಹಳೇ 192 ಪುಟದ ಸಾಹಿತ್ಯಗಳನ್ನು ನೀಡಲಿದ್ದೇವೆ. ನಿಮ್ಮ ಭಾಷೆಯಲ್ಲಿ ಸೂಚಿಸಲಾದ ನೀಡುವಿಕೆಯಾಗಿ ‘ಪ್ರಕಟನೆಗಳ’ ವಿಭಾಗದಲ್ಲಿ ಪಟ್ಟಿ ಮಾಡಲಾದ ಪುಸ್ತಕಗಳನ್ನು ದಯವಿಟ್ಟು ಗಮನಿಸಿರಿ ಮತ್ತು ಇವನ್ನು ಶುಶ್ರೂಷೆಯಲ್ಲಿ ಬಳಸಲಾಗುವಂತೆ ಸಂಗ್ರಹವನ್ನು ಪಡಕೊಳ್ಳಿರಿ.
8 ಸೃಷ್ಟಿಕರ್ತ, ಯೆಹೋವ ದೇವರಿಂದ ಮಾತ್ರ ಯಥಾರ್ಥ ಭದ್ರತೆಯು ಬರಬಹುದು. ದೇವರ ವಾಕ್ಯದ ಸತ್ಯಕ್ಕೆ ಸಾಧ್ಯವಾದಷ್ಟು ಹೆಚ್ಚು ಮಂದಿ ಅವರ ಹೃದಯ ಮತ್ತು ಮನಸ್ಸುಗಳನ್ನು ತೆರೆಯಲು ಮತ್ತದು ನಮಗಾಗಿ ಎತ್ತಿ ಹಿಡಿಯುವ ನಿರೀಕ್ಷೆಯನ್ನು ಸ್ವೀಕರಿಸುವಂತೆ ನಾವು ಸಹಾಯ ಮಾಡಲು ಅಪೇಕ್ಷಿಸಬೇಕು. ಸಮಾಧಾನ ಮತ್ತು ಭದ್ರತೆಗಾಗಿ ದೇವರ ಮಾರ್ಗವನ್ನು ಸಾರುವಂತೆ ನಮಗಿರುವ ಕಲಿಸುವ ಸಹಾಯಕಗಳ ಒಳ್ಳೇ ಉಪಯೋಗವನ್ನು ಮಾಡುವಂತಾಗಲಿ.—ಯೆಶಾಯ 2:3, 4.