ಅಕ್ಟೋಬರಕ್ಕಾಗಿ ಸೇವಾ ಕೂಟಗಳು
ಅಕ್ಟೋಬರ 12 ರ ವಾರ
ಸಂಗೀತ 84 (30)
15 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಯುಕ್ತ ಪ್ರಕಟಣೆಗಳು. “ಆಸಕ್ತಿಯನ್ನು ಪುನಃ ಹೊತ್ತಿಸಸಾಧ್ಯವೋ?” ಲೇಖನದ ಚರ್ಚೆ ಮತ್ತು ಅಂಥ ಒಂದು ಭೇಟಿಯನ್ನು ಹೇಗೆ ಮಾಡಬಹುದು ಎಂಬುದರ ಮೇಲೆ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯ.
15 ನಿ: “ಸೃಷ್ಟಿಯ ದೇವರನ್ನು ಸ್ತುತಿಸಿರಿ.” ಪ್ರಶ್ನೋತ್ತರಗಳಿಂದ ಲೇಖನದ ಆವರಿಸುವಿಕೆ. ಪ್ಯಾರಗ್ರಾಫ್ 4 ರಲ್ಲಿ ಉದ್ಧರಿತ ಪ್ರಕಾಶನಗಳಿಂದ ಅನುಭವಗಳನ್ನು ಆದರ್ಶಪ್ರಾಯ ಯುವಕರಿಂದ ಹೇಳಲ್ಪಡುವಂತೆ ಮೊದಲೇ ಏರ್ಪಡಿಸಿರಿ, ಮತ್ತು ಪ್ಯಾರಗ್ರಾಫ್ 5 ರಲ್ಲಿ ಉಲ್ಲೇಖಿಸಲ್ಪಟ್ಟ ಅನುಭವವನ್ನು ಇನ್ನೊಬ್ಬ ಪ್ರಚಾರಕನು ಹೇಳಲಿ. ಈ ಅಮೂಲ್ಯ ಪ್ರಕಾಶನವನ್ನು ನೀಡುವಾಗ ವಿವೇಚನೆಯನ್ನುಪಯೋಗಿಸುವ ಅಗತ್ಯವನ್ನು ಒತ್ತಿಹೇಳಿರಿ.
15 ನಿ: “ಆಸಕ್ತಿಯನ್ನು ಕೆರಳಿಸುವ ಪ್ರತಿಪಾದನೆಗಳು.” ನಿಮ್ಮ ಸ್ಥಳೀಯ ಟೆರಿಟೊರಿಯಲ್ಲಿ ಸಲಹೆಗಳನ್ನು ಹೇಗೆ ಅನ್ವಯಿಸುವದು ಎಂದು ಸಭಿಕರೊಂದಿಗೆ ಚರ್ಚಿಸಿರಿ. ಒಳ್ಳೆಯದಾಗಿ ತಯಾರಿಸಿದ, ವಾಸ್ತವತೆಯ ಎರಡು ಯಾ ಮೂರು ಪ್ರತ್ಯಕ್ಷಾಭಿನಯಗಳನ್ನು ಏರ್ಪಡಿಸಿರಿ.
ಸಂಗೀತ 96 (72) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ 19 ರ ವಾರ
ಸಂಗೀತ 79 (50)
10 ನಿ: ಸ್ಥಳೀಕ ತಿಳಿಸುವಿಕೆಗಳು, ಅಕೌಂಟ್ಸ್ ವರದಿ ಮತ್ತು ಕಾಣಿಕೆಯ ಅಂಗೀಕಾರಗಳನ್ನು ಸೇರಿಸಿರಿ. ಸ್ಥಳೀಯ ಸಭೆಗೆ ಮತ್ತು ಸೊಸೈಟಿಯ ಲೋಕವ್ಯಾಪಕ ಕಾರ್ಯಕ್ಕಾಗಿ ಉದಾರವಾಗಿ ಆರ್ಥಿಕ ಬೆಂಬಲ ನೀಡಿದ್ದಕ್ಕಾಗಿ ಸಭೆಯನ್ನು ಪ್ರಶಂಸಿಸಿರಿ. ಸಮಯವಿದ್ದಷ್ಟಕ್ಕೆ, ಕ್ರಿಯೇಶನ್ ಪುಸ್ತಕ ನೀಡುವಿಕೆಗೆ ಸಂಬಂಧಿಸಿದ ತಯಾರಿಸಲ್ಪಟ್ಟ ಅನುಭವಗಳನ್ನು ಹೇಳಲು ಕರೆನೀಡಿರಿ.
20 ನಿ: “ನಿಮ್ಮ ಮಕ್ಕಳನ್ನು ರಕ್ತದ ದುರುಪಯೋಗದಿಂದ ರಕ್ಷಿಸುವದು.” ಹಿರಿಯನು ಪ್ಯಾರಗ್ರಾಫ್ 1-11 ರ ಮೇಲೆ ಭಾಷಣವನ್ನೀಯುತ್ತಾನೆ. ಪ್ಯಾರಗ್ರಾಫ್ 5-7 ರಲ್ಲಿ ನಮೂದಿಸಲ್ಪಟ್ಟ ಪರಿಸ್ಥಿತಿಗಳ ಕೆಳಗೆ ಅವರ ಮಗುವನ್ನು ಉಪಚರಿಸಲು ವೈದ್ಯನಿಗೆ ಹೆತ್ತವರ ಸಮ್ಮತಿ ಇರಬೇಕಾದ ಸಮಾಪ್ತಿಯು ಒಂದು ಒಪ್ಪಂದದೋಪಾದಿ ನೋಡುವ ಅಗತ್ಯವಿಲ್ಲ ಎಂಬುದರ ಹಿಂದೆ ಇರುವ ಕಾರಣವನ್ನು ಸೃಷ್ಟಗೊಳಿಸಿರಿ.
15 ನಿ: “ಪುನರ್ಭೇಟಿ ಮಾಡಲು ಖಚಿತ ಮಾಡಿಕೊಳ್ಳಿರಿ.” ಪ್ರಶ್ನೋತ್ತರ ಚರ್ಚೆ. ಪ್ಯಾರಗ್ರಾಫ್ 6 ರಲ್ಲಿರುವ ವಿಚಾರವನ್ನು ಆವರಿಸುವ ಉತ್ತಮವಾಗಿ ತಯಾರಿಸಿದ ಒಂದು ಪ್ರತ್ಯಕ್ಷಾಭಿನಯ. ಈ ತಿಂಗಳ ಆರಂಭದಲ್ಲಿ ಭೇಟಿಯಾಗಿರುವ ಆಸಕ್ತಿಯ ವ್ಯಕ್ತಿಗಳನ್ನು ಪುನಃ ಭೇಟಿ ಮಾಡುವ ಅಗತ್ಯವನ್ನು ಎತ್ತಿಹೇಳಿರಿ.
ಸಂಗೀತ 10 (18) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ 26 ರ ವಾರ
ಸಂಗೀತ 125 (44)
5 ನಿ: ಸ್ಥಳೀಕ ತಿಳಿಸುವಿಕೆಗಳು. ಸ್ಥಳೀಕ ಕ್ಷೇತ್ರದ ಅನುಭವವೊಂದನ್ನು ಹೇಳಿರಿ ಯಾ ಈ ವಾರದ ಕ್ಷೇತ್ರ ಸೇವೆಯಲ್ಲಿ ಉಪಯೋಗಿಸಬಹುದಾದ ಸಂಭಾಷಣಾ ವಿಚಾರಗಳನ್ನು ತಿಳಿಸಿರಿ.
15 ನಿ: “ನಿಮ್ಮ ಮಕ್ಕಳನ್ನು ರಕ್ತದ ದುರುಪಯೋಗದಿಂದ ರಕ್ಷಿಸುವದು.” ಪ್ಯಾರಗ್ರಾಫ್ 12-28 ರ ಪ್ರಶ್ನೋತ್ತರ ಚರ್ಚೆ. ಪ್ಯಾರಗ್ರಾಫ್ 12 ಮತ್ತು 20 ರಲ್ಲಿ ತೋರಿಬರುವ ಪ್ರಶ್ನೆಗಳ ಉತ್ತರಗಳ ಮೇಲೆ ಕೇಂದ್ರೀಕರಿಸಿರಿ. ರಕ್ತ ಪೂರಣವೊಂದನ್ನು ಹೋಗಲಾಡಿಸಲು ಯಶಸ್ವಿಯಾಗುವಂತೆ ಕೆಲವೊಮ್ಮೆ ಅವರ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಹೆತ್ತವರ ಮುನ್ತಯಾರಿಯು ಒಂದು ಕೀಲಿಕೈಯಾಗಿದೆ ಎಂಬುದನ್ನು ಒತ್ತಿಹೇಳಿರಿ.
15 ನಿ: “ಪುರುಷರು ಎಟಕುವಂತೆ ಮತ್ತು ಅರ್ಹರಾಗುವಂತೆ ಸಹಾಯ ಮಾಡುವದು.” ಪ್ರಶ್ನೋತ್ತರಗಳ ಚರ್ಚೆ. ಜವಾಬ್ದಾರಿಕೆಗಳನ್ನು ಸ್ವೀಕರಿಸುವಂತೆ ಸ್ಥಳೀಕ ಸಹೋದರರು ಪ್ರಗತಿಮಾಡಲು ವ್ಯಾವಹಾರಿಕ ರೀತಿಗಳನ್ನು ವಿವರಿಸಿರಿ.
10 ನಿ: ಸಭೆಯ ಚಟುವಟಿಕೆಯನ್ನು ಪರಾಮರ್ಶಿಸುವದು. ಸಪ್ಟಂಬರದ ಆರಂಭದಲ್ಲಿ ಸೊಸೈಟಿಗೆ ಕಳುಹಿಸಿದ ಕಾಂಗ್ರಿಗೇಷನ್ ಅನ್ಯಾಲಿಸಿಸ್ ರಿಪೋರ್ಟ್ ಫಾರ್ಮ್ (s-10) ನ ಮುಂಭಾಗದಲ್ಲಿರುವ ಅಂಕಿಸಂಖ್ಯೆಗಳನ್ನುಪಯೋಗಿಸಿ, ಅಧ್ಯಕ್ಷ ಮೇಲ್ವಿಚಾರಕನು ಮತ್ತು ಸೇವಾ ಮೇಲ್ವಿಚಾರಕನು ಕಳೆದ ವರ್ಷದ ಸಭೆಯ ಉನ್ನತ ಬಿಂದುಗಳನ್ನು ಚರ್ಚಿಸುವರು. ಸೇವೆಯಲ್ಲಿ ಅವರ ಸ್ವ ತ್ಯಾಗದ ಪ್ರಯತ್ನಗಳಿಗಾಗಿ ಮತ್ತು ಕೂಟಗಳಿಗೆ ಹಾಜರಾಗುವಿಕೆಗೆ ಅವರ ನಂಬಿಗಸ್ತಿಕೆಗಾಗಿ ಪ್ರಚಾರಕರನ್ನು ಮತ್ತು ಪಯನೀಯರರನ್ನು ಪ್ರಶಂಸಿಸಿರಿ. ಅವರು ಉತ್ತಮವಾಗಿ ಮಾಡಿದ ನಿರ್ದಿಷ್ಟ ವಿಭಾಗವನ್ನು ನಮೂದಿಸಿರಿ. ಫೈಲಿನಲ್ಲಿ ದೊರೆಯುವದಾದರೆ, ಗತಿಸಿದ ವರ್ಷಗಳ ಚಟುವಟಿಕೆಯನ್ನು ಹೋಲಿಸಬಹುದು. ಅಲ್ಲದೆ, 1993 ನೆಯ ಸೇವಾ ವರ್ಷದಲ್ಲಿ ಪ್ರಗತಿಯನ್ನು ಮಾಡಬಹುದಾದ ವಿಭಾಗಗಳನ್ನು ತೋರಿಸಿರಿ.
ಸಂಗೀತ 43 (11) ಮತ್ತು ಸಮಾಪ್ತಿಯ ಪ್ರಾರ್ಥನೆ.
ನೊವೆಂಬರ 2 ರ ವಾರ
ಸಂಗೀತ 51 (24)
15 ನಿ: ಸ್ಥಳೀಕ ತಿಳಿಸುವಿಕೆಗಳು. ದೇವಪ್ರಭುತ್ವ ವಾರ್ತೆಗಳು. ಕ್ಷೇತ್ರ ಸೇವೆಯಲ್ಲಿ ಬಳಸಲು ದೊರೆಯುವ ಪತ್ರಿಕೆಗಳನ್ನು ಪ್ರಕಟಿಸಿರಿ, ಮತ್ತು ಸ್ಥಳೀಕವಾಗಿ ಆಕರ್ಷಿಸುವ ಒಂದೆರಡು ಸಂಭಾಷಣಾ ವಿಚಾರಗಳನ್ನು ಸೂಚಿಸಿರಿ. ಹಿಂಬದಿಯ ಪುಟದ ಮೇಲ್ಭಾಗದ ಲೇಖನದಲ್ಲಿ ನಿರ್ದೇಶಿಸಲ್ಪಟ್ಟಿರುವ ಒಂದರಂಥ ಶಾಸ್ತ್ರೀಯ ನಿರೂಪಣೆಯನ್ನು ಬಳಸಿ ಪ್ರಚಲಿತ ಪತ್ರಿಕೆಗಳನ್ನು ಹೇಗೆ ನೀಡಸಾಧ್ಯವಿದೆ ಎಂದು ಪ್ರತ್ಯಕ್ಷಾಭಿನಯಿಸಿ ತೋರಿಸಿರಿ.
15 ನಿ: ರೀಸನಿಂಗ್ ಪುಸ್ತಕದ ಪುಟಗಳು 54-8. ಪೀಠಿಕೆಯ ಭಾಷಣ “ಅರ್ಥನಿರೂಪಣೆ (ಡೆಫಿನಿಷನ್)” ಮೇಲಾಧಾರಿತವಾಗಿದೆ. ದೀಕ್ಷಾಸ್ನಾನದಿಂದ ಹಿಂಜರಿಯುತ್ತಿರುವ ಒಬ್ಬನೊಡನೆ ಹಿರಿಯನು ಹೇಗೆ ಮಾತಾಡಬಹುದು ಎಂದು ಪ್ರತ್ಯಕ್ಷಾಭಿನಯಿಸಿರಿ. ಪುಟ 54 ಸಮಾಚಾರವನ್ನು ಎತ್ತಿಹೇಳಿರಿ. ಸಮರ್ಪಣೆ ಮಾಡುವ ಮತ್ತು ಅದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಾಂಕೇತಿಕವಾಗಿ ತೋರಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿರಿ. ಪವಿತ್ರಾತ್ಮದೊಂದಿಗೆ ದೀಕ್ಷಾಸ್ನಾನ, ಸತ್ತವರಿಗಾಗಿ ದೀಕ್ಷಾಸ್ನಾನ, ಮತ್ತು ಬೆಂಕಿಯೊಂದಿಗೆ ದೀಕ್ಷಾಸ್ನಾನ ಎಂಬ ಸಮಾಚಾರವನ್ನು ಭಾಷಣಕರ್ತನು ಸಂಕ್ಷಿಪ್ತವಾಗಿ ಪರಿಗಣಿಸಿ ಸಮಾಪ್ತಿಗೊಳಿಸುವನು.
15 ನಿ: ನೊವೆಂಬರ್ನಲ್ಲಿ ಪತ್ರಿಕೆಗಳನ್ನು ಮುಖ್ಯನೋಟವಾಗಿ ಇಡಿರಿ. ಎಚ್ಚರ! ಮತ್ತು ಕಾವಲಿನಬುರುಜು ಇವುಗಳ ಮೌಲ್ಯವನ್ನು ಎತ್ತಿತೋರಿಸುತ್ತಾ ಚುಟುಕಾದ ಭಾಷಣ. ಇತರರಿಗೆ ಅವುಗಳನ್ನು ಶಿಫಾರಸು ಮಾಡುವಾಗ ಮತ್ತು ಚಂದಾಗಳನ್ನು ನೀಡುವಾಗ ಉತ್ಸಾಹದಿಂದ ಮಾತಾಡಲು ಆಗುವಂತೆ, ಪ್ರಚಾರಕರು ಹೊಸ ಸಂಚಿಕೆಗಳನ್ನು ತಡವಿಲ್ಲದೆ ಓದತಕ್ಕದ್ದು. ಪತ್ರಿಕೆಯೊಂದನ್ನು ಪ್ರಚಾರಕನು ನೀಡಿ, ಮುಂದಿನ ಸಂಚಿಕೆಯೊಂದಿಗೆ ಪುನಃ ಬರಲು ಏರ್ಪಾಡು ಮಾಡುವದನ್ನು, ಆ ಮೂಲಕ ಪತ್ರಿಕಾ ಪಥವನ್ನು ಹೇಗೆ ಆರಂಭಿಸುವನು ಅದನ್ನು ಪ್ರತ್ಯಕ್ಷಾಭಿನಯಿಸಿರಿ.
ಸಂಗೀತ 48 (28) ಮತ್ತು ಸಮಾಪ್ತಿಯ ಪ್ರಾರ್ಥನೆ.