ಫೆಬ್ರವರಿಗಾಗಿ ಸೇವಾ ಕೂಟಗಳು
ಫೆಬ್ರವರಿ 1 ರ ವಾರ
ಸಂಗೀತ 171 (59)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ಸಾಹಿತ್ಯಗಳ ದರ ಏರಿಕೆಯ ಸಹಿತ, ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು. ಪ್ರಚಲಿತ ಸಂಚಿಕೆಗಳ ಆಧಾರದಲ್ಲಿ ಪತ್ರಿಕೆಗಳ ನೀಡುವಿಕೆಯನ್ನು ಎತ್ತಿ ತೋರಿಸಿರಿ.
20 ನಿ: “ನಮ್ಮ ಸಭಾ ಪುಸ್ತಕ ಅಧ್ಯಯನ ನಿರ್ವಾಹಕರೊಂದಿಗೆ ಸಹಕರಿಸುವುದು.” ಪ್ರಶ್ನೆಗಳು ಮತ್ತು ಉತ್ತರಗಳು.
15 ನಿ: “ಸರಳ ಮತ್ತು ಪರಿಣಾಮಕಾರೀ ನಿರೂಪಣೆಗಳು.” ಸಭಿಕರೊಂದಿಗೆ ಚರ್ಚೆ. ಪ್ಯಾರಗ್ರಾಫ್ 3ನ್ನು ಪರಿಗಣಿಸುವಾಗ, ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿ ಪ್ರಚಾರಕನೊಬ್ಬನು ಮನೆಯವನ ಆಸಕ್ತಿಯನ್ನು ಕೆರಳಿಸುವ ವಿಧವನ್ನು ತೋರಿಸುವ ಪ್ರತ್ಯಕ್ಷಾಭಿನಯವೊಂದಿರಲಿ. ಐದನೆಯ ಪ್ಯಾರಗ್ರಾಫ್ನ್ನು ಚರ್ಚಿಸುವಾಗ, ಮನೆಯವನು ಸ್ವಲ್ಪ ಮಾತ್ರವೇ ಅಭಿರುಚಿಯುಳ್ಳವನಾಗಿರುವಾಗ, ಚರ್ಚೆಯನ್ನು ಮುಂದುವರಿಸಲು ಪ್ರಚಾರಕನು ಕಿರುಹೊತ್ತಗೆಯನ್ನು ಹೇಗೆ ಬಳಸುತ್ತಾನೆಂದು ಪ್ರತ್ಯಕ್ಷಾಭಿನಯಿಸಲಿ.
ಸಂಗೀತ 215 (117) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 8 ರ ವಾರ
ಸಂಗೀತ 126 (10)
10 ನಿ: ಸ್ಥಳೀಕ ತಿಳಿಸುವಿಕೆಗಳು. ಪ್ರಚಲಿತ ಪತ್ರಿಕೆಗಳಿಂದ ಮಾತಾಡುವ ವಿಷಯಗಳನ್ನು ಚರ್ಚಿಸಿರಿ. ಈ ವಾರಾಂತ್ಯದಲ್ಲಿ ಕ್ಷೇತ್ರಸೇವೆಯಲ್ಲಿ ಪಾಲಿಗರಾಗಲು ಎಲ್ಲರನ್ನು ಉತ್ತೇಜಿಸಿರಿ.
20 ನಿ: “ಸದಾ ಜೀವಿಸಬಲ್ಲಿರಿ ಪುಸ್ತಕದಲ್ಲಿ ಬೈಬಲ್ ಅಧ್ಯಯನಗಳನ್ನು ನಡಿಸುವುದು.” ಪ್ರಶ್ನೋತ್ತರ ಚರ್ಚೆ. ಪ್ಯಾರಗ್ರಾಫ್ 6 ನ್ನು ಚರ್ಚಿಸಿದ ನಂತರ, ಒಬ್ಬ ಎಳೇ ವ್ಯಕ್ತಿಯು ಸದಾ ಜೀವಿಸಬಲ್ಲಿರಿ ನೀಡುವಿಕೆಯನ್ನು ಮಾಡಿ, ಅದನ್ನುಪಯೋಗಿಸಿ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸುವದನ್ನು ಪ್ರತ್ಯಕ್ಷಾಭಿನಯಿಸಲಿ. ಅಧ್ಯಯನಗಳನ್ನು ಆರಂಭಿಸಲು ಶಕ್ತರಾದ ಎಳೆಯರ ಯಾವುದೇ ಸ್ಥಳೀಕ ಅನುಭವಗಳನ್ನು ತಿಳಿಸಬಹುದು.
15 ನಿ: “ದೇವರ ವಾಕ್ಯದ ತಿರುಗುವ್ಯಾಪಾರಿಗಳಲ್ಲ.” ಅಧ್ಯಕ್ಷ ಮೇಲ್ವಿಚಾರಕನಿಂದ ಯಾ ಇತರ ಹಿರಿಯನಿಂದ ಡಿಸೆಂಬರ್ 1, 1992 ದ ವಾಚ್ಟವರ್ನ ಇಂಗ್ಲಿಷ್ ಸಂಚಿಕೆಯ ಪುಟ 26-9ರ ಮೇಲಾಧಾರಿತ ಭಾಷಣ. ಸೊಸೈಟಿಯ ಲೋಕವ್ಯಾಪಕ ಕೆಲಸವನ್ನು ಹಾಗೂ ಸ್ಥಳೀಕ ಸಭೆಯನ್ನು ಬೆಂಬಲಿಸುವುದರಲ್ಲಿ ಅವರ ಪಾಲಿಗಾಗಿ ಸಹೋದರರನ್ನು ಬೆಚ್ಚಗೆ ಶ್ಲಾಘಿಸಿರಿ. ದೇಶಭಾಷೆಯ ಕೂಟಗಳಿರುವ ಸಭೆಗಳು ಕಾವಲಿನಬುರುಜುನ ನೊವೆಂಬರ್ 15, 1992 ಪಾಕ್ಷಿಕ ಸಂಚಿಕೆಯ ಪುಟ 30 ರಲ್ಲಿ ಯಾ ಡಿಸೆಂಬರ್ 1, 1992ರ ಮಾಸಿಕ ಸಂಚಿಕೆಯ ಪುಟ 31 ರಲ್ಲಿರುವ “ನಿಮಗೆ ನೆನಪಿದೆಯೇ?” ವಿಷಯವನ್ನು ಆವರಿಸಬಹುದು.
ಸಂಗೀತ 53 (27) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 15 ರ ವಾರ
ಸಂಗೀತ 143 (76)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ಅಕೌಂಟ್ಸ್ ವರದಿ. ಕಳುಹಿಸಲ್ಪಟ್ಟ ಕಾಣಿಕೆಗಳಿಗಾಗಿ ಸಂಸ್ಥೆಯ ಗಣ್ಯತೆಯ ಹೇಳಿಕೆಗಳನ್ನು ತಿಳಿಸಿರಿ, ಮತ್ತು ಸ್ಥಳೀಕ ಸಭೆಯ ಜರೂರಿಗಳ ನಿಷ್ಠೆಯ ಬೆಂಬಲಕ್ಕಾಗಿ ಸಭೆಯನ್ನು ಪ್ರಶಂಸಿಸಿರಿ. ವಾರಾಂತ್ಯದ ಕ್ಷೇತ್ರ ಚಟುವಟಿಕೆಯಲ್ಲಿ ಭಾಗವಹಿಸಲು ಉತ್ತೇಜಿಸಿರಿ.
20 ನಿ: “ನಾನು ಆಜ್ಞಾಪಿಸಿದ್ದನ್ನೆಲ್ಲಾ . . . ಉಪದೇಶಮಾಡಿರಿ” ಸಭಿಕರೊಂದಿಗೆ ಪ್ರಶ್ನೋತ್ತರ ಆವರಿಸುವಿಕೆ. ಪ್ಯಾರಗ್ರಾಫ್ 4 ಮತ್ತು 5ನ್ನು ಚರ್ಚಿಸುವಾಗ, ಸ್ಥಳೀಕ ಪರಿಸ್ಥಿತಿಗಳಿಗೆ ಹೊಂದಿಕೆಯಾಗುವ ವಚನಗಳನ್ನು ಮತ್ತು ಪ್ರಕಾಶನಗಳ ಇತರ ಉದಾಹರಣೆಗಳನ್ನು ನೀಡಿರಿ. ನಿಮ್ಮ ಪೀಠಿಕೆಯ ಚರ್ಚೆಯ ನಂತರ ಕಿರುಹೊತ್ತಗೆಗಳಲ್ಲೊಂದಕ್ಕೆ ಬದಲಾಯಿಸುವ ವಿಧವನ್ನು ತೋರಿಸುವ, ಒಳ್ಳೇದಾಗಿ ತಯಾರಿಸಿದ ಪ್ರತಕ್ಷಾಭಿನಯವೊಂದು ಇರಲಿ. ಸಮಯ ಅನುಮತಿಸಿದಂತೆ, ಕಿರುಹೊತ್ತಗೆಯ ಒಂದೆರಡು ಪ್ಯಾರಗ್ರಾಫ್ಗಳನ್ನು ಗಮನಿಸಿರಿ. ಹೊಸ ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಪ್ರಯತ್ನಿಸುವದರಲ್ಲಿ ಪಟ್ಟುಹಿಡಿಯುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿರಿ.
15 ನಿ: “ರಕ್ತ,” ರೀಸನಿಂ ಪುಸ್ತಕ, ಪುಟಗಳು 72-4. ವಿಷಯದಲ್ಲಿರುವ ದಪ್ಪಕ್ಷರಗಳ ಪ್ರಶ್ನೆಗಳನ್ನು ಮನೆಯವನು ಪುನರ್ಭೇಟಿಯ ಅಳವಡಿಸುವಿಕೆಯಲ್ಲಿ ಉಪಯೋಗಿಸಲಿ. ಪ್ರಚಾರಕನ ಪ್ರತಿವರ್ತನೆಗಳು ರೀಸನಿಂಗ್ ಪುಸ್ತಕದ ಹೇಳಿಕೆಗಳ ಮೇಲೆ ಆಧಾರಿತವಾಗಿರತಕ್ಕದ್ದು.
ಸಂಗೀತ 181 (105) ಮತ್ತು ಸಮಾಪ್ತಿಯ ಪ್ರಾರ್ಥನೆ.
ಫೆಬ್ರವರಿ 22 ರ ವಾರ
ಸಂಗೀತ 150 (83)
10 ನಿ: ಸ್ಥಳೀಕ ತಿಳಿಸುವಿಕೆಗಳು. ಸ್ಥಳೀಕ ಟೆರಿಟೊರಿಯಲ್ಲಿ ಹೊಸ ಪ್ರಕಾಶನಗಳನ್ನು ಬಳಸುವ ವಿಧಾನಗಳನ್ನು ಎತ್ತಿತೋರಿಸುತ್ತಾ, “ಬೆಳಕು ವಾಹಕರು ನೆರೆಹೊರೆಯಲ್ಲಿ” ಲೇಖನವನ್ನು ಚರ್ಚಿಸಿರಿ.
20 ನಿ: “ಪ್ರಾಯಶ್ಚಿತ್ತಕ್ಕಾಗಿ ಗಣ್ಯತೆಯನ್ನು ತೋರಿಸುವುದು” ಹಿರಿಯನಿಂದ ಭಾಷಣ.
15 ನಿ: ಸ್ಥಳೀಕ ಆವಶ್ಯಕತೆಗಳು ಯಾ “ಶಿಸ್ತನ್ನು ಸ್ವೀಕರಿಸುವುದರ ಮೂಲಕ ವಿಧೇಯತೆಯನ್ನು ಕಲಿಯಿರಿ,” ಇದು ದ ವಾಚ್ಟವರ್ನ ಒಕ್ಟೋಬರ್ 1, 1992 ಇಂಗ್ಲಿಷ್ ಸಂಚಿಕೆ ಮತ್ತು ಕಾವಲಿನಬುರುಜುನ ಜನವರಿ 1, 1993ರ ಪಾಕ್ಷಿಕ ಸಂಚಿಕೆಗಳಲ್ಲಿ ಕಂಡುಬರುವ ಲೇಖನದಲ್ಲಿರುವ ಸಮಾಚಾರದ ಮೇಲಾಧಾರಿತ ಸಕಾರಾತ್ಮಕ ಭಾಷಣ. ಯೆಹೋವನ ಎಲ್ಲಾ ಸೇವಕರು—ಯುವಕರು ಮತ್ತು ವಯಸ್ಸಾದವರು, ಇಬ್ಬರೂ—ಶಿಸ್ತನ್ನು ಪಡೆಯುತ್ತಾರೆ, ಮತ್ತು ವಿಧೇಯತೆಯನ್ನು ಸಕಾರಾತ್ಮಕವಾಗಿ ವೀಕ್ಷಿಸುವುದರಿಂದ ಬರುವ ಪ್ರಯೋಜನಗಳನ್ನು ಚರ್ಚಿಸಿರಿ. ಮಾಸಿಕವಾಗಿ ಮುದ್ರಿತವಾಗುವ ಭಾಷೆಯೊಂದರ ದ ವಾಚ್ಟವರ್ ಉಪಯೋಗಿಸುವ ಸಭೆಗಳು ನೊವೆಂಬರ್ 1, 1992 ಸಂಚಿಕೆಯಲ್ಲಿರುವ “ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು” ಲೇಖನವನ್ನುಪಯೋಗಿಸಬಹುದು.
ಸಂಗೀತ 211 (66) ಮತ್ತು ಸಮಾಪ್ತಿಯ ಪ್ರಾರ್ಥನೆ.