ಪ್ರಾಯಶ್ಚಿತ್ತಕ್ಕಾಗಿ ಗಣ್ಯತೆಯನ್ನು ತೋರಿಸುವುದು
1 ಮೃತಿಹೊಂದಿದ ಮಿತ್ರನಿಗೆ ಯಾ ಸಂಬಂಧಿಕನಿಗೆ ಗಣ್ಯತೆಯನ್ನು ತೋರಿಸುವ ಬಯಕೆಯು ಎಲ್ಲಾ ಸಂಸ್ಕೃತಿಗಳಲ್ಲಿ ಸಾಮಾನ್ಯವಾಗಿರುತ್ತದೆ. ಇತರರ ಜೀವಗಳನ್ನು ರಕ್ಷಿಸುತ್ತಿರುವಾಗ ಪ್ರಿಯನೊಬ್ಬನು ಮೃತಿಹೊಂದಿದ್ದರೆ, ಈ ಬಯಕೆಯು ವಿಶೇಷವಾಗಿ ಬಲವಾಗಿ ಇರುತ್ತದೆ. ನಿತ್ಯ ಜೀವದ ನಿರೀಕ್ಷೆಯಲ್ಲಿ ಪಾಲಿಗರಾಗುವವರೆಲ್ಲರಿಗೆ, ಎಪ್ರಿಲ್ 6 ರಲ್ಲಿ ಕ್ರಿಸ್ತನ ಮರಣದ ಸ್ಮಾರಕಾಚರಣೆಗೆ ಹಾಜರಾಗುವದರ ಮೂಲಕ, ಪ್ರಾಯಶ್ಚಿತ್ತಕ್ಕೆ ಗಣ್ಯತೆಯನ್ನು ತೋರಿಸಲು ಅತಿ ಮಹತ್ತಾದ ಕಾರಣಗಳು ಇರುತ್ತವೆ.—2 ಕೊರಿಂ. 5:14; 1 ಯೋಹಾ. 2:2.
2 ಯೆಹೋವನ ಪ್ರೀತಿಯನ್ನು ಗಣ್ಯಮಾಡಿರಿ: ಪ್ರಾಯಶ್ಚಿತವ್ತನ್ನು ಒದಗಿಸಿದ ನಮ್ಮ ಮಹಾ ಉಪಕಾರಿಯಾದ ಯೆಹೋವ ದೇವರಿಗೆ ನಮ್ಮ ಅತ್ಯಂತ ಆಳವಾದ ಗಣ್ಯತೆಯನ್ನು ನಾವು ತೋರಿಸುವುದು ಎಷ್ಟೊಂದು ತಕ್ಕದಾಗಿದೆ! (1 ಯೋಹಾನ 4:9, 10) ಯೆಹೋವನ ಪ್ರೀತಿಯ ಆಳವು, ನಮ್ಮ ರಕ್ಷಣೆಗಾಗಿ ಅವನು ಒದಗಿಸಿದ—ಅದು ನೀತಿಯ ಲಕ್ಷಾಂತರ ದೇವದೂತರುಗಳಲ್ಲಿ ಒಬ್ಬನಲ್ಲ, ಬದಲಿಗೆ ಅವನ ಏಕಜಾತ, ಅತ್ಯಂತ ಪ್ರೀತಿಯ ಪುತ್ರನು—ಅಸದೃಶ ಕೊಡುಗೆಯಲ್ಲಿ ವ್ಯಕ್ತವಾಗುತ್ತದೆ. (ಜ್ಞಾನೋ. 8:22, 30) ಯೆಹೋವನ ಕುರಿತು ಅತ್ಯಂತ ಹೆಚ್ಚು ತಿಳಿದಿರುವ, ಮಗನಾದ ಈ ಯೇಸು ಕ್ರಿಸ್ತನು ನಮಗೆ ನೆನಪಿಸಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.”—ಯೋಹಾನ 3:16.
3 ಯೇಸು ಕ್ರಿಸ್ತನ ಪ್ರೀತಿಯನ್ನು ಗಣ್ಯಮಾಡಿರಿ: ತದ್ರೀತಿಯಲ್ಲಿ, ಅನೇಕರ ಪ್ರಾಯಶ್ಚಿತವ್ತಾಗಿ ತನ್ನ ಆತ್ಮವನ್ನು ಕೊಟ್ಟ ಯೇಸು ಕ್ರಿಸ್ತನಿಗಾಗಿಯೂ ಆಳವಾದ ಗಣ್ಯತೆಯನ್ನು ನಾವು ತೋರಿಸುವುದು ತಕ್ಕದಾಗಿದೆ. (ಮತ್ತಾ. 20:28) ಪ್ರಾಯಶ್ಚಿತದ್ತ ಸಂಬಂಧದಲ್ಲಿ ಅವನಿಗಾಗಿದ್ದ ಯೆಹೋವನ ಚಿತ್ತಕ್ಕೆ ಅವನು ಸ್ವ-ಇಚ್ಛೆಯಿಂದ ಅಧೀನನಾಗಿದ್ದುದರಲ್ಲಿ ಅವನ ಪ್ರೀತಿಯು ವ್ಯಕ್ತವಾಗಿದೆ. ನಮ್ಮ ಪ್ರಾಯಶ್ಚಿತವ್ತಾಗಲಿಕ್ಕೋಸ್ಕರ, ತನ್ನ ತಂದೆಯೊಂದಿಗೆ ಮತ್ತು ಕೋಟ್ಯಾನುಕೋಟಿ ನೀತಿಯ ದೇವದೂತರುಗಳೊಂದಿಗಿನ ಸಹವಾಸದಲ್ಲಿ ತನ್ನ ಅನುಕೂಲಕರ ಪರಿಸ್ಥಿತಿಗಳನ್ನು ಅವನು ತ್ಯಜಿಸಿದ ವಿಧವನ್ನು ಪರಿಗಣಿಸಿರಿ. ಪಾಪಭರಿತ ಮನುಷ್ಯರ ನಡುವೆ ಮತ್ತು ಅವರಿಗೆ ಅಧೀನನಾಗಿ ಜೀವಿಸುವ ಪಂಥಾಹ್ವಾನವಾಗಲಿ ಯಾ ಪ್ರಾಯಶ್ಚಿತವ್ತನ್ನು ಒದಗಿಸಲಿಕ್ಕಾಗಿ ತನ್ನ ಮರಣವನ್ನು ಅಪೇಕ್ಷಿಸಲಾಗುತ್ತದೆ ಎಂಬ ಅರಿವು ಆಗಲಿ ಅವನನ್ನು ಹಿಮ್ಮೆಟ್ಟಿಸಲಿಲ್ಲ. ಬದಲಾಗಿ, ಅವನು “ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು. . . . ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು.”—ಫಿಲಿ. 2:5-8.
4 ಪ್ರಾಯಶ್ಚಿತ್ತಕ್ಕಾಗಿ ಗಣ್ಯತೆಯನ್ನು ನಾವು ಹೇಗೆ ತೋರಿಸುತ್ತೇವೆ?: ಪ್ರಾಯಶ್ಚಿತ್ತಕ್ಕಾಗಿರುವ ನಮ್ಮ ಗಣ್ಯತೆಯು ಕೇವಲ ಉಪಕಾರ-ನಿನಗೆ ಎನ್ನುವುದಕ್ಕಿಂತಲೂ ಮೀರಿ ಹೋಗಬೇಕು. ಯೇಸು ಕ್ರಿಸ್ತನ ಮೂಲಕ ರಕ್ಷಣೆಗಾಗಿರುವ ದೇವರ ಒದಗಿಸುವಿಕೆಯ ಕುರಿತು ನಾವು ಕಲಿಯುವ ಅಗತ್ಯವಿದೆ. (ಯೋಹಾನ 17:3) ಅನಂತರ ಪ್ರಾಯಶ್ಚಿತದ್ತಲ್ಲಿ ನಾವು ನಂಬಿಕೆಯನ್ನು ಪ್ರದರ್ಶಿಸತಕ್ಕದ್ದು. (ಅ.ಕೃ. 3:19) ಪ್ರತಿಯಾಗಿ, ನಾವು ಸಮರ್ಪಣೆಯಲ್ಲಿ ಯೆಹೋವ ದೇವರಿಗೆ ನಮ್ಮನ್ನು ಒಪ್ಪಿಸಿಕೊಡುವಂತೆ ಮತ್ತು ದೀಕ್ಷಾಸ್ನಾನ ಪಡೆಯುವಂತೆ ಪ್ರೇರಿಸಲ್ಪಡತಕ್ಕದ್ದು. (ಮತ್ತಾ. 16:24) ನಾವು ನಮ್ಮ ಸಮರ್ಪಣೆಗನುಸಾರವಾಗಿ ಜೀವಿಸುತ್ತಿರುವಾಗ, ರಕ್ಷಣೆಯ ಅದ್ಭುತಕರ ಪ್ರಾಯಶ್ಚಿತ್ತ ಒದಗಿಸುವಿಕೆಯ ಕುರಿತು ಇತರರಿಗೆ ಹೇಳಲು ಇರುವ ಪ್ರತಿಯೊಂದು ಸಂದರ್ಭವನ್ನು ನಾವು ಸದುಪಯೋಗಿಸತಕ್ಕದ್ದು.—ರೋಮಾ. 10:10.
5 ಈ ಆವಶ್ಯಕತೆಗಳನ್ನು ಮುಟ್ಟುವುದು ನಮ್ಮಲ್ಲಿ ಯಾರೊಬ್ಬನ ಸಾಮರ್ಥ್ಯಕ್ಕೂ ಮೀರಿದ್ದಾಗಿ ಅದಿಲ್ಲ. ಮೀಕ 6:8 ನಮಗೆ ಆಶ್ವಾಸನೆಯನ್ನೀಯುವುದು: “ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?” ತದ್ರೀತಿಯಲ್ಲಿ, ದಾವೀದನು ಯೆಹೋವನಿಗೆ ಅಂದದ್ದು: “ಸಮಸ್ತವು ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಕೊಟ್ಟೆವು.”—1 ಪೂರ್ವಕಾಲ. 29:14.
6 ಯೆಹೋವನ ಅದ್ಭುತಕರ ಒದಗಿಸುವಿಕೆಗಳಿಗಾಗಿ ನಮ್ಮ ಗಣ್ಯತೆಯನ್ನು ಆಳಗೊಳಿಸಲು, ಸ್ಮಾರಕಾಚರಣೆಯ ತಾರೀಕಿನ ಮೊದಲು, ಕುಟುಂಬದೋಪಾದಿ ಗ್ರೇಟೆಸ್ಟ್ ಮ್ಯಾನ್ ಪುಸ್ತಕದ 112 ರಿಂದ 126 ಅಧ್ಯಾಯಗಳನ್ನು ಓದಿ, ಯಾಕೆ ಚರ್ಚಿಸಬಾರದು? ಈ ರೀತಿಯಲ್ಲಿ, ಎಪ್ರಿಲ್ 6, 1993 ರಲ್ಲಿ ಜರುಗಲಿರುವ ಸ್ಮಾರಕಾಚರಣೆಯಲ್ಲಿ ಪ್ರಾಯಶ್ಚಿತ್ತಕ್ಕಾಗಿ ಗಣ್ಯತೆಯನ್ನು ತೋರಿಸಲು, ನಾವೆಲ್ಲರೂ ಮಾನಸಿಕವಾಗಿ ನಮ್ಮನ್ನೇ ಸಿದ್ಧಪಡಿಸಿಟ್ಟುಕೊಳ್ಳಸಾಧ್ಯವಿದೆ.