ಸರಳ ಮತ್ತು ಪರಿಣಾಮಕಾರೀ ನಿರೂಪಣೆಗಳು
1 ಯೇಸು ದೇವರ ರಾಜ್ಯವನ್ನು ಸರಳ ಮತ್ತು ನೇರವಾದ ವಿಧಾನದಲ್ಲಿ ಘೋಷಿಸಿದನು. ಕುರಿಗಳಂತಿರುವವರು ಸತ್ಯವನ್ನು ಆಲಿಸಿದಾಗ, ಮೆಚ್ಚಿಕೆಯಿಂದ ಪ್ರತಿವರ್ತಿಸುವರು ಎಂದು ಅವನಿಗೆ ತಿಳಿದಿತ್ತು. ಜನರು ತಮ್ಮ ಅಲೋಚನೆಗಳಲ್ಲಿ, ಅಭಿರುಚಿಗಳಲ್ಲಿ, ಮತ್ತು ವಿವೇಚನಾ ಸಾಮರ್ಥ್ಯದಲ್ಲಿ ಭಿನ್ನರಾಗಿರುವರೆಂದೂ ಕೂಡ ಅವನಿಗೆ ತಿಳಿದಿತ್ತು. ಅದಕ್ಕನುಸಾರವಾಗಿಯೇ, ಅವನ ಕೇಳುಗರ ಗಮನವನ್ನು ಸೆರೆಹಿಡಿಯಲಾಗುವಂತೆ ಮತ್ತು ಅವರ ಹೃದಯಗಳನ್ನು ಸ್ಪರ್ಶಿಸಲಾಗುವಂತೆ, ಅವನು ಸಂಕ್ಲಿಷ್ಟಕರವಲ್ಲದ ಪೀಠಿಕೆಗಳನ್ನು, ಪ್ರಶ್ನೆಗಳನ್ನು, ಮತ್ತು ದೃಷ್ಟಾಂತಗಳನ್ನು ಬಳಸಿದನು. ನಾವು ಅವನ ಮಾದರಿಯನ್ನು ಅನುಕರಿಸಬಹುದು ಮತ್ತು ಸರಳ ಹಾಗೂ ಪರಿಣಾಮಕಾರೀ ನಿರೂಪಣೆಗಳ ಉತ್ತಮ ಬಳಕೆಯನ್ನು ಮಾಡಬಹುದು.
2 ರೀಸನಿಂಗ್ ಪುಸ್ತಕವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರಿ: ರೀಸನಿಂಗ್ ಪುಸ್ತಕದ 11 ನೆಯ ಪುಟದ “ಉದ್ಯೋಗ ⁄ ವಸತಿ” ಶಿರೋನಾಮದ ಕೆಳಗಿನ ಮೊದಲ ಪೀಠಿಕೆಯು ಸಮಯೋಚಿತವೂ, ನಿರೂಪಿಸಲು ಸುಲಭವೂ ಆಗಿರುತ್ತದೆ.
ನೀವು ಈ ರೀತಿ ಹೇಳಬಹುದು:
▪ “ಪ್ರತಿಯೊಬ್ಬರಿಗೆ ಉದ್ಯೋಗ ಮತ್ತು ವಸತಿಯು ಇರುವುದರ ಆಶ್ವಾಸನೆಯನ್ನೀಯಲು ಏನು ಮಾಡಸಾಧ್ಯವಿದೆ ಎಂಬುದರ ಕುರಿತು ನಿಮ್ಮ ನೆರೆಯವರೊಂದಿಗೆ ನಾವು ಮಾತಾಡುತ್ತಾ ಇದ್ದೆವು. ಇದನ್ನು ಮಾನವ ಸರಕಾರಗಳು ಪೂರೈಸಲಿವೆ ಎಂದು ನಿರೀಕ್ಷಿಸುವುದು ಸಮಂಜಸತೆಯದ್ದಾಗಿದೆ ಎಂದು ನೀವು ನಂಬುವಿರೋ? . . . ಆದರೆ ಈ ಸಮಸ್ಯೆಗಳನ್ನು ಪರಿಹರಿಸುವ ವಿಧ ತಿಳಿದಿರುವ ಒಬ್ಬನು ಇದ್ದಾನೆ; ಆತನೇ ಮಾನವ ಕುಲದ ನಿರ್ಮಾಣಿಕನು.” ಯೆಶಾಯ 65:21-23ನ್ನು ಓದಿರಿ. ಅನಂತರ ಇದು ಮನೆಯವನಿಗೆ ಹೇಗೆನಿಸುತ್ತದೆ ಎಂದು ಅವನನ್ನು ನೀವು ಕೇಳಬಹುದು.
3 ಪುಟ 12 ರಲ್ಲಿರುವ “ಅನ್ಯಾಯ ⁄ ಕಷ್ಟಾನುಭವ” ಎಂಬ ಶಿರೋನಾಮದ ಕೆಳಗಿನ ಪೀಠಿಕೆಯು ಅನೇಕರಿಗೆ ಇಂದು ಹಿಡಿಸಬಹುದು.
ನೀವು ಹೀಗನ್ನಸಾಧ್ಯವಿದೆ:
▪ “ನೀವು ಎಂದಾದರೂ ಆಶ್ಚರ್ಯಪಟ್ಟಿದ್ದರೋ: ಮಾನವರು ಅನುಭವಿಸುತ್ತಿರುವ ಅನ್ಯಾಯ ಮತ್ತು ಕಷ್ಟಾನುಭವದ ಕುರಿತು ದೇವರು ನಿಜವಾಗಿಯೂ ಚಿಂತಿಸುತ್ತಾನೋ?” ಉತ್ತರಿಸಲು ಮನೆಯವನಿಗೆ ಅನುಮತಿಸಿರಿ, ತದನಂತರ ಪ್ರಸಂಗಿ 4:1 ಮತ್ತು ಕೀರ್ತನೆ 72:12-14ನ್ನು ಓದಿರಿ. ಅನಂತರ ಪುಟ 150-3ರ ಚಿತ್ರಗಳನ್ನು ತೆರಳುತ್ತಾ, ಮತ್ತು ಲೋಕದ ಪರಿಸ್ಥಿತಿಗಳು ಇಂದು ಬೈಬಲ್ ಪ್ರವಾದನೆಯ ಒಂದು ನೆರವೇರಿಕೆಯಾಗಿದೆ ಎಂದು ಸಂಕ್ಷಿಪ್ತವಾಗಿ ತೋರಿಸುತ್ತಾ, ನೀವು ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಪ್ರಧಾನವಾಗಿ ಕಾಣುವಂತೆ ಮಾಡಬಹುದು. ಅನಂತರ ಮಾನವನ ಆಶೀರ್ವಾದಕ್ಕಾಗಿ ದೇವರು ಇನ್ನೂ ಅಧಿಕವಾಗಿ ಏನನ್ನು ಮುಂತಿಳಿಸಿದ್ದಾನೆ ಎಂದು ತೋರಿಸಲು 161-2 ಪುಟಗಳಿಗೆ ತೆರಳಿರಿ. ಯಾವ ವಿಭಾಗವು ಮನೆಯವನಿಗೆ ಅತಿ ಹೆಚ್ಚು ಹಿಡಿಸುತ್ತದೆ ಎಂದು ವಿಚಾರಿಸಿರಿ.
4 ಮನೆಯವನೊಂದಿಗೆ ಒಂದು ಚುಟುಕಾದ ಚರ್ಚೆಯ ನಂತರ, ಸದಾ ಜೀವಿಸಬಲ್ಲಿರಿ ಪುಸ್ತಕಕ್ಕಿಂತ, ಪತ್ರಿಕೆಗಳಲ್ಲೊಂದರ ಲೇಖನಕ್ಕೆ, ಬ್ರೊಷರ್ಗೆ, ಯಾ ಒಂದು ಕಿರುಹೊತ್ತಗೆಗೆ ಅವನ ಗಮನವನ್ನು ಹರಿಸುವುದು ಹೆಚ್ಚು ತಕ್ಕದಾಗಿರಬಹುದೆಂದು ನೀವು ತೀರ್ಮಾನಿಸಲೂ ಬಹುದು.
ಉದಾಹರಣೆಗೆ, ಈ ಲೇಖನದ ಎರಡನೆಯ ಪ್ಯಾರಗ್ರಾಫ್ನಲ್ಲಿರುವ ಪೀಠಿಕೆಯನ್ನುಪಯೋಗಿಸಿದ ನಂತರ, ನೀವು ಹೀಗನ್ನಬಹುದು:
▪ “ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? ಎಂಬ ಈ ಬ್ರೊಷರ್ ಸ್ಪಷ್ಟವಾಗಿಗಿ, ನಮ್ಮ ದೈನಿಕ ಜೀವನದ ಸಮಸ್ಯೆಗಳನ್ನು ಬಗೆಹರಿಸಲು ದೇವರು ಏನನ್ನು ಮಾಡಲು ವಾಗ್ದಾನಿಸಿದ್ದಾನೆ ಎಂದು ವಿವರಿಸುತ್ತದೆ ಮತ್ತು ನಾವು ಪ್ರಯೋಜನ ಹೇಗೆ ಪಡೆಯಬಹುದೆಂದು ತೋರಿಸುತ್ತದೆ.” ಅನಂತರ ಬ್ರೊಷರಿನ 18 ಮತ್ತು 19 ಪುಟಗಳಿಗೆ ತೆರಳಿರಿ, ಮತ್ತು ಯೆಹೋವನು ಮಾಡಿರುವ ಮಹಾ ವಾಗ್ದಾನಗಳಿಗೆ ಗಮನವನ್ನು ಅದು ಸೆಳೆಯುತ್ತದೆ.
5 ಇಲ್ಲವೇ, ಪ್ಯಾರಗ್ರಾಫ್ ಮೂರರಲ್ಲಿರುವ ಪೀಠಿಕೆಯನ್ನು ಬಳಸಿದ ನಂತರ, ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಕಿರುಹೊತ್ತಗೆಯನ್ನು ಎತ್ತಿತೋರಿಸಬಹುದು.
ನೀವು ಹೀಗನ್ನಬಹುದು:
▪ “ಬಹಳಷ್ಟು ದುರವಸ್ಥೆ ಮತ್ತು ತೊಂದರೆ ಇಂದು ಲೋಕದಲ್ಲಿ ಇದೆ. ಮಾನವ ಕುಲಕ್ಕಾಗಿ ಒಂದು ಅದ್ಭುತಕರ ಬದಲಾವಣೆಯನ್ನು ತರಲು ದೇವರು ವಾಗ್ದಾನಿಸಿದ್ದಾನೆ ಮತ್ತು ಯುದ್ಧ, ಆಹಾರದ ಅಭಾವಗಳು, ಮತ್ತು ಆರೋಗ್ಯದ ಸಮಸ್ಯೆಗಳು ಬಲುಬೇಗನೆ ಗತಕಾಲದ ವಿಷಯಗಳಾಗಲಿರುವುವು ಎಂದು ಈ ಕಿರುಹೊತ್ತಗೆ ತೋರಿಸುತ್ತದೆ.” ಕಿರುಹೊತ್ತಗೆಯ ಮೂರನೆಯ ಪುಟದಲ್ಲಿರುವ ಎರಡನೆಯ ಪ್ಯಾರಗ್ರಾಫ್ನ್ನು ಓದಿರಿ.
6 ಹೃದಯವನ್ನು ತಾಕುವ ಒಂದು ಸರಳ ಹಾಗೂ ಪರಿಣಾಮಕಾರೀ ನಿರೂಪಣೆಯ ಜೊತೆಯಲ್ಲಿ, ಜನರಲ್ಲಿ ನಮ್ಮ ಯಥಾರ್ಥವಾದ ಅಭಿರುಚಿಯು ಕುರಿಗಳಂಥವರಿಗೆ ಖಂಡಿತವಾಗಿ ಹಿಡಿಸುತ್ತದೆ.—ಯೋಹಾನ 10:16.