ನಮ್ಮ ಪೀಠಿಕೆಯನ್ನು ನೀಡುವಿಕೆಯೊಂದಿಗೆ ಜೋಡಿಸುವುದು
1 ಈ ತಿಂಗಳಲ್ಲಿ ನಿಮ್ಮ ನಿರೂಪಣೆಯನ್ನು ತಯಾರಿಸುವಾಗ, ನಿಮ್ಮ ವಠಾರದಲ್ಲಿರುವ ಜನರು ಎದುರಿಸುವ ಪ್ರಮುಖ ಸಮಸ್ಯೆಗಳನ್ನು ಮೊದಲಾಗಿ ನೀವು ಪರಿಗಣಿಸಬಹುದು ಮತ್ತು ಅನಂತರ, ಆಗಸ್ಟ್ನಲ್ಲಿ ನಾವು ನೀಡಲಿರುವ ಬ್ರೊಷರ್ಗಳಲ್ಲೊಂದರಲ್ಲಿರುವ ವ್ಯಾವಹಾರಿಕ, ಶಾಸ್ತ್ರೀಯ ಪರಿಹಾರವನ್ನು ಸೂಚಿಸುವ ಹೇಳಿಕೆಗಳನ್ನು ಆರಿಸಬಹುದು.
2 ಕೆಲವೊಂದು ನೆರೆಹೊರೆಗಳಲ್ಲಿ, ಏರುತ್ತಿರುವ ನಿರುದ್ಯೋಗ ಮತ್ತು ಜೀವನದ ಬೆಲೆಯೇರಿಕೆಯ ಕುರಿತು ಚಿಂತಿತರಾಗಿರಬಹುದು. ಅಂಥ ಒಂದು ಸನ್ನಿವೇಶವನ್ನು ನೀವು ಎದುರಿಸುವುದಾದರೆ, ನಿಮ್ಮ ಪೀಠಿಕೆಯಲ್ಲಿ ಸಮಸ್ಯೆಯನ್ನು ನಿರ್ದಿಷ್ಟವಾಗಿ ಹೇಳಸಾಧ್ಯವಿದೆ.
ನೀವು ಹೀಗನ್ನಬಹುದು:
▪ “ನಮ್ಮ ನೆರೆಯವರೊಂದಿಗೆ ನಾವು ಪ್ರತಿಯೊಬ್ಬರಿಗೆ ಉದ್ಯೋಗ ಮತ್ತು ವಸತಿಯ ಕುರಿತು ಏನು ಮಾಡಸಾಧ್ಯವಿದೆ ಎಂದು ಮಾತಾಡುತ್ತಿದ್ದೆವು. ಮಾನವ ಸರಕಾರಗಳು ಇದನ್ನು ಪೂರೈಸಲಿರುವುವು ಎಂದು ನಿರೀಕ್ಷಿಸುವುದು ಸಮಂಜಸವೆಂದು ನೀವು ನಂಬುತ್ತೀರೋ? [ಮನೆಯವನ ಪ್ರತ್ಯುತ್ತರಕ್ಕೆ ಅನುಮತಿಸಿರಿ.] ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಹುದು ಎಂದು ತಿಳಿದಿರುವವನೊಬ್ಬನು ಇದ್ದಾನೆ, ಮತ್ತೆ ಭರವಸೆ ಕೊಡುವ ಅವನ ವಾಗ್ದಾನವನ್ನು ಇಲ್ಲಿ ಯೆಶಾಯ 65:21-23 ರಲ್ಲಿ ಗಮನಿಸಿರಿ. [ಓದಿರಿ.] ನಮ್ಮ ಉತ್ತೇಜನಕ್ಕಾಗಿ ಈ ವಾಗ್ದಾನವನ್ನು ನಮ್ಮ ನಿರ್ಮಾಣಿಕನು ಬರೆದಿಟ್ಟಿರುತ್ತಾನೆ, ಮತ್ತು ಈ ಸಂಕಟದ ಸಮಯಗಳಲ್ಲಿ ನಮಗೆಲ್ಲರಿಗೆ ಅದು ಆವಶ್ಯಕವಾಗಿದೆ, ಅಲ್ಲವೆ?”—ಆರ್ಎಸ್, ಪು. 11.
3 ಈ ಬಿಂದುವಿನಲ್ಲಿ, ನಿಮ್ಮ ನಿರೂಪಣೆಯನ್ನು ನಮ್ಮ ಸಮಸ್ಯೆಗಳ ಬ್ರೊಷರ್ನ ಸಮಾಚಾರದೊಂದಿಗೆ ನೀವು ಜೋಡಿಸಸಾಧ್ಯವಿದೆ. ಉದಾಹರಣೆಗೆ, ಪುಟ 4 ರ ಪ್ಯಾರಗ್ರಾಫ್ 2 ರಲ್ಲಿ ಸಾಮಾನ್ಯ ಮನುಷ್ಯರಿಂದ ಎದುರಿಸಲ್ಪಡುವ ಅನೇಕ ಸಮಸ್ಯೆಗಳು ಉಲ್ಲೇಖಿಸಲ್ಪಟ್ಟಿವೆ. ಅನೇಕ ಜನರು ಈ ಸಮಸ್ಯೆಗಳಲ್ಲಿ ಒಂದು ಯಾ ಹೆಚ್ಚನ್ನು ಅನುಭವಿಸುತ್ತಿದ್ದಾರೆ. ಮನೆಯವನ ಗಮನವನ್ನು ಮಾಸ್ಟರರು ಆನಂದನಿಗೆ ಹೇಳಿರುವ ಪುಟ 5 ರ ವಿಷಯಕ್ಕೆ ಗಮನ ಸೆಳೆಯಸಾಧ್ಯವಿದೆ: “ನಮ್ಮ ಸಮಸ್ಯೆಗಳನ್ನು ಶೀಘ್ರವೇ ಯಾವನೋ ಒಬ್ಬನು ಬಗೆಹರಿಸುವನೆಂಬ ದೃಢತೆ ಕುಟುಂಬವಾಗಿರುವ ನಮಗಿದೆ.” ಪುಟ 6 ರಲ್ಲಿ ಪ್ಯಾರಗ್ರಾಫ್ 2 ರಲ್ಲಿರುವ ಮಾಸ್ಟರರ ಹೇಳಿಕೆಯನ್ನು ಚುಟುಕಾಗಿ ನಿರ್ದೇಶಿಸಿ, ಪರಿವರ್ತನೆಯೊಂದನ್ನು ತರುವೆನು ಎಂದು ಯೆಹೋವನು ವಾಗ್ದಾನಿಸಿದ್ದಾನೆಂದು ತೋರಿಸಿರಿ. ಬ್ರೊಷರ್ನ್ನು ನೀಡಿಯಾದ ಮೇಲೆ, ನಮ್ಮ ಎಲ್ಲಾ ಸಮಸ್ಯೆಗಳನ್ನು ದೇವರು ಹೇಗೆ ಬಗೆಹರಿಸಲಿರುವೆನೆಂದು ಪರಿಗಣಿಸಲು ನೀವು ಪುನಃ ಹಿಂತಿರುಗಿ ಬೇಗನೆ ಬರಲು ಆಶಿಸುತ್ತೀರಿ ಎಂದು ಹೇಳುವುದರ ಮೂಲಕ ಸಮಾಪ್ತಿಗೊಳಿಸಿರಿ.
4 “ಇಗೋ!” ಬ್ರೊಷರ್ನ್ನು ನೀಡುವಾಗ, ಎಲ್ಲರಿಗಾಗಿ ವಸತಿ ಮತ್ತು ಉದ್ಯೋಗದ ಕಲ್ಪನೆಯು ಬ್ರೊಷರ್ನ ಮುಂದಿನ ಮತ್ತು ಹಿಂಬದಿಯ ಆವರಣಗಳಲ್ಲಿ ಹೇಗೆ ಚಿತ್ರಿಸಲ್ಪಟ್ಟಿರುತ್ತದೆ ಎಂದು ಯಾಕೆ ತೋರಿಸಬಾರದು? ನೀವು ಅದನ್ನು ತೆರೆಯಬಹುದು ಮತ್ತು ಮನೆಯವನು ಇಡೀ ಚಿತ್ರಣವನ್ನು ಒಂದೇ ಬಾರಿ ನೋಡಬಲ್ಲನು. ಈಗಾಗಲೇ ಓದಿರುವ ಶಾಸ್ತ್ರವಚನದೊಂದಿಗೆ ಇದನ್ನು ಜೋಡಿಸುತ್ತಾ, ದೇವರ ವಾಗ್ದಾನವು ನೆರವೇರಿದ ನಂತರ ಪರಿಸ್ಥಿತಿಗಳು ಹೇಗೆ ಇರುವುವು ಎಂದು ಚಿತ್ರಿಸಲ್ಪಟ್ಟಿರುವದನ್ನು ತೋರಿಸಿರಿ.
ನೀವು “ಗವರ್ನ್ಮೆಂಟ್” ಬ್ರೊಷರ್ನ್ನು ಮುಖ್ಯನೋಟವಾಗಿ ಇಡುವುದಾದಲ್ಲಿ, ಹೀಗನ್ನಬಹುದು:
▪ “ದೇವರ ರಾಜ್ಯವು ಬರುವಂತೆ ಮತ್ತು ಆತನ ಚಿತ್ತವು ಪರಲೋಕದಲ್ಲಿ ನೆರವೇರಿದಂತೆ ಭೂಮಿಯಲ್ಲಿಯೂ ನೆರವೇರುವಂತೆ ಪ್ರಾರ್ಥಿಸಲು ಯೇಸುವು ನಮಗೆ ಕಲಿಸಿದನು. ಇಲ್ಲಿ ದೇವರ ಚಿತ್ತವು ಎಂದಾದರೂ ನೆರವೇರುವುದಾದರೆ, ಈ ಭೂಮಿಯು ಒಂದು ಪ್ರಮೋದವನವಾಗಲಿರುವುದು ಎಂದು ನೀವು ಯೋಚಿಸುತ್ತೀರೋ?” ಮನೆಯವನು ಪ್ರತ್ಯುತ್ತರ ಕೊಟ್ಟಾದ ಮೇಲೆ, ಪ್ರಕಟನೆ 21:3-5 ನ್ನು ಪ್ರಸ್ತಾಪಿಸಿ, ಓದಿರಿ.
5 ಅನಂತರ ಪುಟ 3 ರಲ್ಲಿರುವ ಆರಂಭಿಕ ಪ್ಯಾರಗ್ರಾಫ್ನ ಆಯ್ದ ಭಾಗಗಳನ್ನು ಓದಿರಿ. ಈ ಹೇಳಿಕೆಯನ್ನು ಗಮನಿಸಿ: “ರಾಜ್ಯದ ಮೂಲಕ, ದೇವರು ಬಲುಬೇಗನೆ ಯುದ್ಧಗಳಿಗೆ, ಹಸಿವು, ರೋಗಗಳಿಗೆ, ಮತ್ತು ಪಾತಕಕ್ಕೆ ಅಂತ್ಯವನ್ನು ತರಲಿರುವನು.” ಇದರಲ್ಲಿ ಯಾವ ಸಮಸ್ಯೆಯು ಅತೀ ಗಂಭೀರತರಹದ್ದು ಎಂದು ಮನೆಯವನಿಗೆ ವಿಚಾರಿಸಿರಿ.
6 ರಾಜ್ಯದ ಸಂದೇಶವನ್ನು ಎಳೆಯರು ಕೂಡ ವಯಸ್ಸಾದವರಿಗೆ ಪರಿಣಾಮಕಾರಿಯಾಗಿ ನಿರೂಪಿಸಶಕ್ತರು.
ಯೆಶಾಯ 65:21-23 ನ್ನು ಪ್ರಸ್ತಾಪಿಸುವಾಗ, ಎಳೆಯ ಪ್ರಚಾರಕರು ಹೀಗನ್ನಬಹುದು:
▪ “ಒಬ್ಬ ವಯಸ್ಸಾದ ವ್ಯಕ್ತಿ ನೀವಾಗಿರುವದರಿಂದ, ಜೀವಿತದಲ್ಲಿ ನನಗಿಂತ ನಿಮಗೆ ಎಷ್ಟೋ ಹೆಚ್ಚು ಅನುಭವವಿರುತ್ತದೆ ಎಂದು ನನಗೆ ತಿಳಿದದೆ, ಆದರೆ ಈ ಶಾಸ್ತ್ರವಚನವು ನಮಗೆಲ್ಲರಿಗೂ ಸಂತೈಸುವಂಥದ್ದಾಗಿದೆ.”
7 ಯಾವುದೇ ಸಾಹಿತ್ಯ ನೀಡಿರುವುದರ, ನಿರ್ದಿಷ್ಟವಾದ ಬ್ರೊಷರ್ ಯಾ ನೀಡಿದ ಪತ್ರಿಕೆಗಳ ಸಹಿತ, ಒಂದು ಜಾಗ್ರತೆಯ ದಾಖಲೆ ಮಾಡಲು ಖಚಿತಮಾಡಿರಿ. ನೀವು ಪುನಃ ಭೇಟಿಮಾಡಿದಾಗ, ಆಸಕ್ತಿಯನ್ನು ಬೆಳಸಲು ಈ ಸಮಾಚಾರವು ನಿಮಗೆ ಆವಶ್ಯಕವಾಗಿರುತ್ತದೆ.