ಅತ್ಯಂತ ಮಹಾನ್ ಪುರುಷ ಪುಸ್ತಕದಲ್ಲಿ ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದು
1 ಒಂದು ಮನೆ ಬೈಬಲ್ ಅಭ್ಯಾಸವನ್ನು ಹೊಂದಿರುವುದು ನಿಮಗೂ ಮನೆಯವರಿಗೂ ಅತಿ ಸಂತೋಷ ಮತ್ತು ಪ್ರತಿಫಲ ಕೊಡುವುದಾಗಿಯೂ ಇರುವುದು. ಇತರರೊಂದಿಗೆ ಬೈಬಲ್ ಜ್ಞಾನವನ್ನು ಹಂಚಿಕೊಳ್ಳುವುದರ ಸಂತೋಷದೊಂದಿಗೆ ಹೋಲಿಸಲು ಏನೂ ಇಲ್ಲ.—ಜ್ಞಾನೋ. 11:25.
2 ಕೊನೆಯ ದಿನಗಳ ಸೂಚನೆ: ಮೇಲಿನ ಲೇಖನದ ಸಲಹೆಯನ್ನು ಉಪಯೋಗಿಸಿ ನಿಮ್ಮ ಚರ್ಚೆಯನ್ನು ವಿಲ್ ದಿಸ್ ವರ್ಲ್ಡ್ ಸರ್ವೈವ್? ಎಂಬ ಕಿರುಹೊತ್ತಗೆಯೊಂದಿಗೆ ಆರಂಭಿಸಿದ್ದರೆ, ಅತ್ಯಂತ ಮಹಾನ್ ಪುರುಷ ಪುಸ್ತಕದ 111 ನೆಯ ಅಧ್ಯಾಯವನ್ನು ಉಪಯೋಗಿಸುತ್ತಾ ನೀವೊಂದು ಅಭ್ಯಾಸವನ್ನು ಹೇಗೆ ಆರಂಭಿಸಬಹುದು? ಪುಸ್ತಕವನ್ನು 111 ನೆಯ ಅಧ್ಯಾಯಕ್ಕೆ ತೆರೆದು, ಮೊದಲನೆಯ ಮೂರು ಪ್ಯಾರಗ್ರಾಫ್ಗಳನ್ನು ಓದಿರಿ. ಆಮೇಲೆ ನೀವು ಅಧ್ಯಾಯದ ಕೊನೆಯಲ್ಲಿರುವ ಪ್ರಥಮ ಪ್ರಶ್ನೆಯನ್ನು ಕೇಳಬಹುದು: “ಅಪೊಸ್ತಲರ ಪ್ರಶ್ನೆಯನ್ನು ಪ್ರಚೋದಿಸಿದ್ದು ಯಾವುದು, ಆದರೆ ಅವರ ಮನಸ್ಸಿನಲ್ಲಿ ಪ್ರಾಯಶಃ ಬೇರೆ ಯಾವದು ಇದ್ದಿರಬಹುದು?” ಉತ್ತರದ ಕುರಿತು ಮನೆಯವನು ವಿವೇಚಿಸುವಂತೆ ಸಹಾಯ ಮಾಡಿರಿ, ಮತ್ತು ಕಲಿಸಲು ದೃಷ್ಟಾಂತವನ್ನು ಉಪಯೋಗಿಸಿರಿ. ನಾಲ್ಕರಿಂದ ಆರನೆಯ ಪ್ಯಾರಗ್ರಾಫ್ನ್ನು ಓದಿದ ಮೇಲೆ, ಎರಡನೆಯ ಪ್ರಶ್ನೆಯನ್ನು ಕೇಳಿರಿ: “ಸಾ.ಶ. 70 ರಲ್ಲಿ, ಯೇಸುವಿನ ಪ್ರವಾದನೆಯ ಯಾವ ಭಾಗವು ನೆರವೇರಿತು, ಆದರೆ ಆಗ ಏನು ಸಂಭವಿಸಲಿಲ್ಲ?” ಮನೆಯವನು ಆಸಕ್ತಿಯುಳ್ಳವನಾಗಿ ಕಂಡುಬಂದರೆ, ಮತ್ತು ಸಮಯವು ಇದ್ದರೆ, ನಿಮ್ಮ ಚರ್ಚೆಯನ್ನು ಮುಂದುವರಿಸಿರಿ.
3 ಇನ್ನೊಂದು ಸಮಯವು ಮನೆಯವನಿಗೆ ಹೆಚ್ಚು ಸೂಕ್ತವೆಂದು ಕಂಡುಬಂದರೆ, ನೀವು ಹೀಗೆ ಕೇಳಬಹುದು: “ವಿಷಯಗಳ ವ್ಯವಸ್ಥೆಯ ಅಂತ್ಯವು ಯಾವಾಗ ಇರುವುದು ಎಂಬುದರ ಕುರಿತು ಹೆಚ್ಚಿನದನ್ನು ತಿಳಿಯಲು ನೀವು ಇಷ್ಟ ಪಡುವಿರೊ?” ಅನಂತರ ಪ್ರಶ್ನೆಯನ್ನು ಉತ್ತರಿಸಲು ಹಿಂದಿರುಗುವಂತಹ ಏರ್ಪಾಡನ್ನು ನೀವು ಮಾಡಬಹುದು.
4 ಒಂದು ಶಾಂತಿಭರಿತ ಲೋಕ ಸಾಧ್ಯವೋ? ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಎಂಬ ಕಿರುಹೊತ್ತಗೆಯನ್ನು ಅತ್ಯಂತ ಮಹಾನ್ ಪುರುಷ ಪುಸ್ತಕಕ್ಕೆ ನಡೆಸಲು ನೀವು ಉಪಯೋಗಿಸಿದ್ದರೆ, ಒಂದು ಬೈಬಲ್ ಅಭ್ಯಾಸವನ್ನು ಪ್ರಾರಂಭಿಸಲು ಅಧ್ಯಾಯ 133 ಹೇಗೆ ಸಹಾಯಕವಾಗಿರಬಹುದು?
ಎರಡನೆಯ ಪೇತ್ರ 3:13 ನ್ನು ಓದಿದ ಅನಂತರ, ಕಿರುಹೊತ್ತಗೆಯ ಪುಟ 3 ರಲ್ಲಿರುವ ಎರಡನೆಯ ಪ್ಯಾರಗ್ರಾಫನ್ನು ಓದಬಹುದು ಯಾ ಸಾರಾಂಶಿಸಬಹುದು ಮತ್ತು ಆಮೇಲೆ ಹೀಗೆ ಹೇಳಬಹುದು:
▪ “ದೇವರ ಮಗನಾದ ಯೇಸು ಕ್ರಿಸ್ತನು, ಯೆಹೋವನ ರಾಜ್ಯದ ಅರಸನಾಗಿರುವನು. ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕವು ಯೇಸುವಿನ ಬಗ್ಗೆ ಹೇಗೆ ವರ್ಣಿಸುತ್ತದೆ ಮತ್ತು ಭವಿಷ್ಯದಲ್ಲಿ ಅವನು ಏನನ್ನು ಸಾಧಿಸುವನೆಂಬುದರ ಕುರಿತು ನಮಗೆ ಹೇಗೆ ತಿಳಿಸುತ್ತದೆಂದು ಗಮನಿಸಿರಿ.” ಆಮೇಲೆ ಇಡೀ ಅಧ್ಯಾಯವನ್ನು ಓದಿರಿ. ಮನೆಯವನಿಗೆ ಅಧ್ಯಾಯದ ಕೊನೆಯಲ್ಲಿರುವ ಪ್ರಥಮ ಪ್ರಶ್ನೆಯನ್ನು ಕೇಳಿರಿ: “‘ಅರ್ಮಗೆದೋನ್ ಪಾರಾಗುವವರಿಗೆ ಮತ್ತು ಅವರ ಮಕ್ಕಳಿಗೆ ಯಾವ ಒಂದು ಸಂತೋಷದ ಸುಯೋಗವು ಇರುವದು?’ [ಪ್ರತಿಕ್ರಿಯೆಗಾಗಿ ಬಿಡಿರಿ. ಬೇರೆ ಪ್ರಶ್ನೆಗಳು ತದ್ರೀತಿಯಲ್ಲಿ ಚರ್ಚಿಸಲ್ಪಡಬಹುದು.] ಯೇಸು ಅರಸನಾಗಿ ಆಳುವ ಹೊಸ ಭೂಮಿಯ ಒಂದು ಭಾಗವಾಗಿರಲು ನೀವು ಇಷ್ಟ ಪಡುವಿರೊ? ಇದು ಹೇಗೆ ನಿಮ್ಮ ಅನುಭವವಾಗಿರುವುದೆಂದು ನೀವು ನೋಡುವಂತೆ ಬೈಬಲ್ನಿಂದ ಸಹಾಯ ಮಾಡಲು ಪ್ರತಿ ವಾರ ಅವಕಾಶವನ್ನು ಹೊಂದಲು ನಾನು ಇಷ್ಟ ಪಡುವೆನು.”
5 ಈ ಭೇಟಿಯಲ್ಲಿ ಕೆಲವು ವ್ಯಕ್ತಿಗಳು ಯೇಸು ಕ್ರಿಸ್ತನ ಕುರಿತು ಹೆಚ್ಚಿನ ಚರ್ಚೆಯಲ್ಲಿ ಆಸಕ್ತರಾಗಿರಲೂ ಬಹುದು.
ನೀವು ಹೇಳಬಹುದು:
▪ “ಈ ಪುಸ್ತಕದಲ್ಲಿ ಯೇಸುವಿನ ಐಹಿಕ ಜೀವನವನ್ನು ನಾಲ್ಕು ಸುವಾರ್ತೆಗಳಲ್ಲಿ ವಿವರಿಸಿದಂತೆ ಸಾದರಪಡಿಸಲು ಪ್ರಯತ್ನ ಮಾಡಲಾಗಿದೆ. ಭೂಮಿಯ ಮೇಲೆ ಯೇಸುವಿನ ಜೀವನದ ಬಗ್ಗೆ ಹೆಚ್ಚನ್ನು ಕಲಿಯಲು ನೀವು ಇಷ್ಟ ಪಡುವಿರೊ?” ಮನೆಯವನಿಗೆ ಅನುಕೂಲವಾಗಿದ್ದರೆ, ಅಧ್ಯಾಯ 15 ರಲ್ಲಿನ, ಯೇಸುವಿನ ಅದ್ಭುತಕಾರ್ಯಗಳಲ್ಲಿ ಮೊದಲನೆಯದನ್ನು ನೀವು ಚರ್ಚಿಸಲು ಇಷ್ಟ ಪಡಬಹುದು.
6 ತಾವು ಎದುರಿಸುವ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುವವರು ಮತ್ತು ನೀತಿಗಾಗಿ ಒಲುಮೆಯನ್ನು ಹೊಂದಿರುವ ಪ್ರಾಮಾಣಿಕ ಹೃದಯವುಳ್ಳ ಜನರು ಇನ್ನೂ ಅನೇಕರಿದ್ದಾರೆ. ನಿಜವಾಗಿಯೂ, ಒಂದು ಬೈಬಲ್ ಅಭ್ಯಾಸದ ಮೂಲಕ ಯೇಸು ಕ್ರಿಸ್ತನ ಬೋಧನೆಗಳನ್ನು ಹಂಚಿಕೊಳ್ಳಲು ನೀಡಿಕೊಳ್ಳುವುದು ಅಧಿಕ ಪ್ರತಿಫಲವನ್ನೀಯುವ ಪ್ರಯತ್ನವಾಗಿದೆ.