ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಪರಿಚಯ ಪಡಿಸಲು ಕಿರುಹೊತ್ತಗೆಗಳನ್ನು ಉಪಯೋಗಿಸಿರಿ
1 ಜೂನ್ ತಿಂಗಳಲ್ಲಿ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕವನ್ನು ನಾವು ನೀಡಲಿದ್ದೇವೆ. ಒಂದು ಸಂಕ್ಷಿಪ್ತವಾದ ಶಾಸ್ತ್ರಾಧರಿತ ನಿರೂಪಣೆಯನ್ನು ನೀಡಿದ ಅನಂತರ ಮತ್ತು ಪುಸ್ತಕದ ಕೊನೆಯ ಅಧ್ಯಾಯದಲ್ಲಿರುವ ಚಿತ್ರವನ್ನು ಮನೆಯವನಿಗೆ ತೋರಿಸಿ, ಕ್ರಿಸ್ತನ ಆಳಿಕೆ ಇಂಥ ಪರಿಸ್ಥಿತಿಗಳನ್ನು ತರುವುದೆಂದು ಸೂಚಿಸುವ ಮೂಲಕ, ನೇರವಾಗಿ ಅದನ್ನು ಪರಿಚಯ ಪಡಿಸಬಹುದು. ಪರ್ಯಾಯವಾಗಿ, ಪುಸ್ತಕದಲ್ಲಿ ಆಸಕ್ತಿಯನ್ನು ಕೆರಳಿಸಲು ಕಿರುಹೊತ್ತಗೆಗಳನ್ನು ಉಪಯೋಗಿಸಬಹುದು.
2 ಈ ಲೋಕವು ಪಾರಾಗುವುದೋ? ಸಂಭಾಷಣೆಗಳನ್ನು ಆರಂಭಿಸುವುದರಲ್ಲಿ ಕಿರುಹೊತ್ತಗೆಗಳು ಬಹು ಸಹಾಯಕಾರಿಯಾಗಿವೆ. ಕಿರುಹೊತ್ತಗೆಗಳು ಅವರನ್ನು ವೈಯಕ್ತಿಕವಾಗಿ ಪ್ರಭಾವಿಸುವ ಅರ್ಥಭರಿತ ವಿಷಯಗಳೊಂದಿಗೆ ವ್ಯವಹರಿಸುವದರಿಂದ ಮನೆಯವರ ಗಮನವನ್ನು ಸೆರೆಹಿಡಿಯಲು ಅವು ಸಹಾಯ ಮಾಡುತ್ತವೆ.
ಉದಾಹರಣೆಗೆ, ನೀವು ಹೀಗೆ ಏನಾದರೂ ಹೇಳಬಹುದು:
▪ “ಜನರೊಂದಿಗೆ ಮಾತಾಡುವಾಗ, ಅನೇಕರು ತಮ್ಮ ಚಿಂತೆಯನ್ನು . . . [ಸಮಾಚಾರದಲ್ಲಿರುವ ಒಂದು ಪ್ರಚಲಿತ ಘಟನೆಯನ್ನು ಆಯ್ದುಕೊಳ್ಳಿ], ಮೇಲೆ ವ್ಯಕ್ತಪಡಿಸಿದ್ದಾರೆಂದು ನಾವು ಗಮನಿಸಿದ್ದೇವೆ. ಲೋಕದ ಸ್ಥಿತಿಗಳು ದುಷ್ಟತನದಿಂದ ಅತಿ ದುಷ್ಟತನಕ್ಕೆ ಹೋಗುತ್ತಿವೆ ಎಂದು ತೋರುತ್ತದೆ. ಈ ಲೋಕವು ಪಾರಾಗುವುದೊ ಎಂದೂ ಕೆಲವರು ಆಶ್ಚರ್ಯ ಪಡುತ್ತಾರೆ. ಅದರ ಬಗ್ಗೆ ನಿಮಗೆ ಹೇಗೆ ಅನಿಸುತ್ತದೆ? [ಮನೆಯವನು ಪ್ರತಿಕ್ರಿಯೆ ವ್ಯಕ್ತಪಡಿಸುವಂತೆ ಬಿಡಿರಿ. ಅನೇಕ ಜನರು ಆಶಾವಾದಿಗಳಾಗಿರುತ್ತಾರೆ.] ನಿಮ್ಮೊಂದಿಗೆ ನಾನು ಹಂಚಿಕೊಳ್ಳಲು ಬಯಸುವ ಉತ್ತೇಜಕ ವಿಷಯವನ್ನು ನಾನು ಓದಿದ್ದೇನೆ. ಅದು ಈ ಕಿರುಹೊತ್ತಗೆಯಲ್ಲಿದೆ. [ಮನೆಯವನಿಗೆ ವಿಲ್ ದಿಸ್ ವರ್ಲ್ಡ್ ಸರ್ವೈವ್? ಎಂಬ ಕಿರುಹೊತ್ತಗೆಯನ್ನು ಕೊಡುವಾಗ, ನಿಮ್ಮ ಕೈಯಲ್ಲಿ ಅದೇ ಒಂದು ಕಿರುಹೊತ್ತಗೆಯನ್ನು ಹಿಡಿದುಕೊಂಡು ಇರ್ರಿ.] ಯೇಸು ಹೇಗೆ ಅದನ್ನು ಪ್ರವಾದಿಸಿದನೆಂದು ಗಮನಿಸಿ . . . ” ನಿಮ್ಮ ಪೀಠಿಕೆಯಲ್ಲಿ ತಿಳಿಸಲಾದ ಪ್ರಚಲಿತ ಘಟನೆಯೊಂದಿಗೆ ಸರಿಹೊಂದುವ ಒಂದು ಪ್ಯಾರಗ್ರಾಫ್ನ್ನು ಪುಟ 4 ಯಾ 5 ರಿಂದ ಓದಿರಿ. ಆಮೇಲೆ ಅತ್ಯಂತ ಮಹಾನ್ ಪುರುಷ ಪುಸ್ತಕವನ್ನು ಪರಿಚಯ ಪಡಿಸಿರಿ. ಸೂಕ್ತವೆಂದು ಕಂಡುಬಂದರೆ, 111 ನೆಯ ಅಧ್ಯಾಯದಲ್ಲಿ ಉಲ್ಲೇಖಿಸಿದ ಯೇಸುವಿನ ಪ್ರವಾದನೆಯ ಮೇಲೆ ಹೆಚ್ಚಿನ ಮಾಹಿತಿಗಾಗಿ ತಿರುಗಿಸಿರಿ. ಅಲ್ಲಿಂದ ಬಿಟ್ಟು ಹೋಗುವ ಮೊದಲು, ಯೇಸುವನ್ನು, ಮತ್ತು ಅವನ ಮೂಲಕ ನಿತ್ಯಜೀವಕ್ಕೆ ನಡೆಸುವ ಯೆಹೋವನನ್ನು ಅರಿತುಕೊಳ್ಳಲು ಹೇಗೆ ಈ ಪುಸ್ತಕವನ್ನು ಉಪಯೋಗಿಸಬಹುದೆಂದು ಸಂಕ್ಷಿಪ್ತವಾಗಿ ವಿವರಿಸಲು ನೀವು ಶಕ್ತರಾಗಬಹುದು. (ಯೋಹಾನ 17:3) ನೀವು ಹಿಂದಿರುಗಿದಾಗ ಚರ್ಚಿಸಲಿಕ್ಕಾಗಿ ಒಂದು ವಿಷಯದ ಮೇಲೆ ಒಂದು ಪ್ರಶ್ನೆಯನ್ನು ಸಹ ಎಬ್ಬಿಸಲು ನಿಶ್ಚಿತರಾಗಿರಿ.
3 ಶಾಂತಿಭರಿತ ಹೊಸ ಲೋಕದಲ್ಲಿ ಜೀವನ: ಶಾಂತಿಭರಿತ ಹೊಸ ಲೋಕದಲ್ಲಿ ಜೀವಿಸುವುದು ನಿಮಗೆ ಯಾವ ಅರ್ಥದಲ್ಲಿದೆ? ಸಾಮಾನ್ಯವಾಗಿ, ಜನರು ಘನಗಾಂಭೀರ್ಯದ ನದಿಗಳು ಮತ್ತು ಪರಸ್ಪರವಾಗಿ ಶಾಂತಿಯಲ್ಲಿ ಜೀವಿಸುವ ಸುಂದರವಾದ ಪ್ರಾಣಿಗಳುಳ್ಳ ಶಾಂತಿಭರಿತ ಕಣಿವೆಗಳ ಬಗ್ಗೆ ಯೋಚಿಸುತ್ತಾರೆ. ಸದ್ಯದ ಲೋಕದ ಪರಿಸ್ಥಿತಿಗಳಿಂದ ಸಂಕಟ ಪಡುತ್ತಿರುವವರು, ಒಂದು ಶಾಂತಿಭರಿತ ಹೊಸ ಲೋಕದ ಪ್ರತೀಕ್ಷೆಯನ್ನು ನವಚೈತನ್ಯವನ್ನುಂಟುಮಾಡುವುದಾಗಿ ಕಾಣಬಹುದು.
4 ನಿಮ್ಮ ನೆರೆಯವರಿಗೆ, ಕೆಲಸದ ಸಂಗಾತಿಗಳಿಗೆ, ಮತ್ತು ಮನೆಯಿಂದ ಮನೆಯ ಕಾರ್ಯದಲ್ಲಿ ಭೇಟಿಯಾಗುವವರಿಗೆ ಏನಾದರೂ ಚೈತನ್ಯವನ್ನುಂಟುಮಾಡುವದನ್ನು ಮತ್ತು ಹಿತವಾದದ್ದನ್ನು ನೀಡಲು ನೀವು ಸಿದ್ದರೊ?
“ಶಾಂತಿಭರಿತ ಹೊಸ ಲೋಕದಲ್ಲಿ ಜೀವನ,” ಎಂಬ ಕಿರುಹೊತ್ತಗೆಯನ್ನು ಉಪಯೋಗಿಸುತ್ತಾ ನೀವು ಹೀಗೆ ಏನಾದರೂ ಹೇಳಬಹುದು:
▪ “ಈ ಕಿರುಹೊತ್ತಗೆಯ ಮೇಲ್ಭಾಗದಲ್ಲಿ ತೋರಿಸಿರುವಂತೆ, ಜನರಿಗೆ ಶಾಂತಿಯಲ್ಲಿ ಜೀವಿಸಲು ಎಂದಾದರೂ ಸಾಧ್ಯವೆಂದು ನೀವು ಯೋಚಿಸುತ್ತೀರೊ? [ಮನೆಯವನು ಪ್ರತಿಕ್ರಿಯೆ ಮಾಡುವಂತೆ ಬಿಡಿರಿ.] ಪುಟ 2 ರಲ್ಲಿರುವ ಪ್ರಥಮ ಪ್ಯಾರಗ್ರಾಫಿನ ಕೊನೆಯ ವಾಕ್ಯವನ್ನು ದಯವಿಟ್ಟು ನೋಡಿ. ಅದು ಕೇಳುವುದು: ‘ಆದರೆ ಈ ಪರಿಸ್ಥಿತಿಗಳು ಭೂಮಿಯ ಮೇಲೆ ಎಂದಾದರೂ ಇರುವವು ಎಂದು ನಂಬುವುದು ಕೇವಲ ಒಂದು ಸ್ವಪ್ನ ಯಾ ಭ್ರಮೆಯಾಗಿದೆಯೊ?’ [ಆಮೇಲೆ ಕಿರುಹೊತ್ತಗೆಯಲ್ಲಿರುವ ಮುಂದಿನ ಪ್ಯಾರಗ್ರಾಫ್ನ್ನು ಓದಿರಿ.] ಹೊಸ ಆಕಾಶ ಮತ್ತು ಒಂದು ಹೊಸ ಭೂಮಿಯ ಕುರಿತು ಇರುವ ಆ ವಚನವು ಬೈಬಲಿನ 2 ಪೇತ್ರ 3:13 ರಿಂದ ತೆಗೆಯಲ್ಪಟ್ಟಿದೆ. ನಿಮ್ಮಲ್ಲಿ ಒಂದು ಬೈಬಲ್ ಇರುವದಾದರೆ, ಭೂಮಿಯ ಭವಿಷ್ಯದ ಬಗ್ಗೆ ಹೆಚ್ಚಿನದನ್ನು ಕಲಿಯಲು ನಾವು ಕೀರ್ತನೆ 104:5 ನ್ನು ಓದುವಂತೆ ಅದನ್ನು ದಯವಿಟ್ಟು ನೀವು ತರುವಿರೊ?” ಯಾ ನಿಮ್ಮ ಬೈಬಲ್ನಿಂದ ವಚನವನ್ನು ನೀವು ಓದಬಹುದು. ಆಮೇಲೆ ಅತ್ಯಂತ ಮಹಾನ್ ಪುರುಷ ಪುಸ್ತಕದ 133 ನೆಯ ಅಧ್ಯಾಯಕ್ಕೆ ಚರ್ಚೆಯನ್ನು ನಡೆಸಬಹುದು.
5 ನೆಡಲ್ಪಟ್ಟ ಬೀಜಕ್ಕೆ ‘ನೀರು’ ಹಾಕಲು ಹೆಚ್ಚಿನ ಪುನಃ ಭೇಟಿಗಳನ್ನು ಮಾಡುವ ಅಗತ್ಯವಿದೆ. (1 ಕೊರಿಂಥ 3:6, 7) ಕೆಳಗೆ ಇರುವ ಲೇಖನವು ಅತ್ಯಂತ ಮಹಾನ್ ಪುರುಷ ಪುಸ್ತಕದಲ್ಲಿ ಒಂದು ಅಭ್ಯಾಸವನ್ನು ಪ್ರಥಮ ಭೇಟಿಯಲ್ಲಿ ಯಾ ನಿಮ್ಮ ಪುನಃ ಸಂದರ್ಶನದಲ್ಲಿ ಹೇಗೆ ಆರಂಭಿಸಬಹುದೆಂದು ಸಲಹೆ ನೀಡುತ್ತದೆ.