ಪತ್ರಿಕೆಗಳನ್ನು ಉಪಯೋಗಿಸುವದರಿಂದ ಇತರರಿಗೆ ಪ್ರಯೋಜನವಾಗುವಂತೆ ಮಾಡಿರಿ
1 ಕಾವಲಿನಬುರುಜು ಮತ್ತು ಎಚ್ಚರ!ದ ಅತಿ ನವೀನ ಸಂಚಿಕೆಗಳನ್ನು ಪಡೆಯಲು ನಾವು ಎಷ್ಟು ಸಂತೋಷಿಸುತ್ತೇವೆ! ಸಾದರ ಪಡಿಸಿದಂಥ ಮಾಹಿತಿಯಿಂದ ನಾವು ಪ್ರಯೋಜನ ಹೊಂದುವಂತೆ ಅವುಗಳನ್ನು ಸಾಧ್ಯವಾದಷ್ಟು ಬೇಗನೆ ಓದಲು ಇರುವ ಅವಕಾಶವನ್ನು ನಾವು ಮಾನ್ಯತೆ ಮಾಡುತ್ತೇವೆ. ವೈಯಕ್ತಿಕವಾಗಿ ನಮಗೆ ಸಹಾಯ ಮಾಡಬಹುದಾದ ವಿಷಯಕ್ಕಾಗಿ ನೋಡುವುದರ ಜೊತೆಗೆ, ಇತರರಿಗೆ ಪತ್ರಿಕೆಗಳನ್ನು ನೀಡುವಾಗ ಉಪಯೋಗಿಸ ಸಾದ್ಯವಿರುವ ಅಂಶಗಳಿಗಾಗಿ ನೋಡುವುದು ಉತ್ತಮ ವಿಚಾರವಾಗಿದೆ. ನಮ್ಮ ಸಭೆಯ ಟೆರಿಟೊರಿಯಲ್ಲಿರುವವರಿಗೆ ವಿಶೇಷವಾಗಿ ಪ್ರಿಯವಾಗುವ ಭಾಗಗಳನ್ನು ನಾವು ಗುರುತಿಸಿ ಇಡಲು ಬಯಸಬಹುದು ಅಥವಾ ಮಾತಾಡುವ ಅಂಶಗಳ ಕುರಿತಾಗಿ ಮತ್ತು ಸ್ಥಳಿಕವಾಗಿ ಲೇಖನವು ಹೇಗೆ ಸಾದರಪಡಿಸಬಹುದೆಂದು ನಮಗೆ ಜ್ಞಾಪಕ ಹುಟ್ಟಿಸಲು, ನಮ್ಮ ಪ್ರತಿಯ ಪಕ್ಕದಲ್ಲಿ ಟಿಪ್ಪಣಿಗಳನ್ನು ಕೂಡ ಮಾಡಬಹುದು.
2 ನಮ್ಮ ಪತ್ರಿಕೆಗಳಿಗೆ ಬಾಳಿಕೆ ಬರುವ ಮೌಲ್ಯವಿದೆ. ಪ್ರಚಲಿತ ಪತ್ರಿಕೆಗಳನ್ನು ಸಾದರಪಡಿಸುವುದಕ್ಕೆ ನಾವು ಪ್ರಥಮವಾಗಿ ಗಮನಕೊಡುವುದಾದರೂ, ಹಳೆಯ ಸಂಚಿಕೆಗಳನ್ನು ತೊರೆಯುವ ಅಗತ್ಯವಿಲ್ಲ, ಯಾಕಂದರೆ ಮಾಹಿತಿಯು ತಾನೇ ಹಳೆಯದಾಗುವುದಿಲ್ಲ. ಸಾಕ್ಷಿಕೊಡುವಾಗ ಅವು ದೊರೆಯುವಂತೆ ಹಳೆಯ ಸಂಚಿಕೆಗಳನ್ನು ನಿಮ್ಮ ಸಾಕ್ಷಿಕಾರ್ಯಕ್ಕೆ ಉಪಯೋಗಿಸುವ ಬ್ಯಾಗ್ನಲ್ಲಿ ಇಡಿರಿ. ಮನೆಯವನ ನಿರ್ದಿಷ್ಟವಾದ ಅಗತ್ಯವು ಗೊತ್ತಾದಾಗ ಇವು ವಿಶೇಷವಾಗಿ ಉಪಯೋಗಕರವಾಗಬಹುದು. ಒಂದು ಹಳೆಯ ಪತ್ರಿಕೆಯನ್ನು ನಾವು ಕೊಡುವಾಗ, ನಮ್ಮ ಪತ್ರಿಕೆಗಳಿಗಾಗಿ ನಾವು ಪಡೆಯುವ ಕಾಣಿಕೆಯನ್ನು ಸಂಕ್ಷಿಪ್ತವಾಗಿ ತಿಳಿಸುವುದು ಸರಿಯಾಗಿದೆ.