ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 10/93 ಪು. 1
  • ನಿಮ್ಮ ಮಕ್ಕಳು ಪ್ರಚಾರಕರೋ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಮಕ್ಕಳು ಪ್ರಚಾರಕರೋ?
  • 1993 ನಮ್ಮ ರಾಜ್ಯದ ಸೇವೆ
1993 ನಮ್ಮ ರಾಜ್ಯದ ಸೇವೆ
km 10/93 ಪು. 1

ನಿಮ್ಮ ಮಕ್ಕಳು ಪ್ರಚಾರಕರೋ?

(Note: Synchronization will not work because this article has not been ade available in the English Watchtower Library)

1 ಯೆಹೋವನ ಸ್ತುತಿಗಾರರಾಗುತ್ತಾ, ನಮ್ಮ ಸಭೆಗಳೊಂದಿಗೆ ಸಹವಸಿಸುವ ಅನೇಕ ಮಕ್ಕಳಲ್ಲಿ ನಮಗೆ ಆಸಕ್ತಿ ಇದೆ. ನಿಮ್ಮ ಮಕ್ಕಳಿಗೆ ಕೂಡ ಆ ಬಯಕೆ ಇದೆಯೋ? ಹಾಗಿರುವಲ್ಲಿ, ಪ್ರಗತಿಪರ ಮತ್ತು ವ್ಯಾವಹಾರಿಕವಾದ ತರಬೇತಿಯನ್ನು ಕೂಡಲೇ ಪ್ರಾರಂಭಿಸುವುದರ ಅಗತ್ಯವಿದೆ. ಒಬ್ಬನು ಎಳೆಯವನಾಗಿರುವ ಸಮಯವೇ ಒಳ್ಳೆಯ ಹವ್ಯಾಸಗಳನ್ನು ಕಲಿಯುವ ಮತ್ತು ಸಂಪಾದಿಸಿಕೊಳ್ಳುವ ಅತ್ಯುತ್ತಮ ಸಮಯವಾಗಿರುತ್ತದೆ.

2 ಮನೆಯಲ್ಲಿ ನಿಮ್ಮ ಮಕ್ಕಳ ನಡವಳಿಕೆ ಮತ್ತು ಹವ್ಯಾಸಗಳು ಯಾವ ರೀತಿಯದ್ದಾಗಿವೆ? ಮಕ್ಕಳು ತಮ್ಮ ಹೆತ್ತವರಿಗೆ ವಿಧೇಯರಾಗಿದ್ದರೆ, ಅವರು ಸಭೆಯ ಇನ್ನಿತರ ಸದಸ್ಯರಿಗೆ ಮತ್ತು ತಮ್ಮ ಶಾಲಾ ಶಿಕ್ಷಕರಿಗೆ ಕೂಡ ಗೌರವವನ್ನು ಪ್ರದರ್ಶಿಸುವರು. ನಿಮ್ಮ ಮಕ್ಕಳು ತಮ್ಮ ಸ್ವತ್ತುಗಳನ್ನು ಮತ್ತು ಕೋಣೆಗಳನ್ನು ನೀಟಾಗಿಟ್ಟು, ವಸ್ತುಗಳ ಜಾಗ್ರತೆವಹಿಸುತ್ತಾರೋ? ಈ ವಿಷಯದಲ್ಲಿ ಮಕ್ಕಳಿಗೆ ಒಳ್ಳೆಯ ಹವ್ಯಾಸಗಳು ಇರುವುದಾದರೆ, ಕ್ಷೇತ್ರ ಸೇವೆಯಲ್ಲಿರುವಾಗ, ಬೇರೆ ಜನರ ಸ್ವತ್ತು ಮತ್ತು ಆಸ್ತಿಗಾಗಿ ಗೌರವವನ್ನು ಅವರು ಪ್ರದರ್ಶಿಸುವರು, ಮತ್ತು ಯೆಹೋವ ದೇವರನ್ನು ಪ್ರತಿನಿಧಿಕರಿಸುವ ಒಬ್ಬ ಶುಶ್ರೂಷಕನಂತೆ ತಮ್ಮನ್ನು ಆದರ್ಶಪ್ರಾಯ ರೀತಿಯಲ್ಲಿ ನಡೆಸಿಕೊಳ್ಳುವರು.

3 ಸೌವಾರ್ತಿಕ ಆತ್ಮವನ್ನು ಹೊಂದಲು ನಿಮ್ಮ ಮಕ್ಕಳು ಆರಂಭಿಸಿದಾಗ, ಹಿಂಜರಿಯದೆ, ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ದಾಖಲಾಗಲು ಅವರನ್ನು ಉತ್ತೇಜಿಸಿರಿ. ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ದಾಖಲಾಗಲು, ಕೆಲವೊಂದು ನಿರ್ಧರಿತ ಪ್ರಾಯವನ್ನು ತಲಪುವ ಅಗತ್ಯವಿರುವುದಿಲ್ಲ, ಆದರೆ ಒಳ್ಳೆಯ ದೈನಿಕ ಹವ್ಯಾಸಗಳ ಮೂಲಕ ಬೆಂಬಲಿಸಲ್ಪಡುವ ಆದರ್ಶಪ್ರಾಯ ನಡತೆ ಮತ್ತು ಒಬ್ಬ ಪ್ರಚಾರಕನಾಗುವ ಬಯಕೆ ಇರುವುದು ಅಗತ್ಯ. ಶಾಲಾ ಮೇಲ್ವಿಚಾರಕನು ಮಗುವಿನ ಬೈಬಲ್‌ ಓದುವಿಕೆಯಲ್ಲಿ ಮತ್ತು ಮಾತಾಡುವಿಕೆಯಲ್ಲಿ ಮಾತ್ರ ಅಭಿರುಚಿಯುಳ್ಳವನಾಗಿರುವುದಿಲ್ಲ, ಆದರೆ ಆರಂಭದಿಂದಲೇ ಅವನು ಹೆತ್ತವರಲ್ಲಿಯೂ ಮಗುವಿನಲ್ಲಿಯೂ ಒಬ್ಬ ಪ್ರಚಾರಕನಾಗುವ ಗುರಿಯ ಕುರಿತು ಮಾತಾಡುವುದಾದರೆ ಅದು ಒಳ್ಳೆಯದಾಗಿರುವುದು.

4 ಸೇವೆಯಲ್ಲಿ ನಿಮ್ಮೊಂದಿಗೆ ನಿಮ್ಮ ಮಕ್ಕಳನ್ನು ನೀವು ಕರೆದುಕೊಂಡು ಹೋಗುವಾಗ, ಒಂದು ಸೇವಾ ಗುರಿಯನ್ನು ಒಟ್ಟಾಗಿ ಮಾಡಿರಿ, ಮತ್ತು ಜೊತೆಯಾಗಿ ತಯಾರಿಸಿ ರೂಢಿಮಾಡುವ ಮೂಲಕ ಶುಶ್ರೂಷೆಯಲ್ಲಿ ಅವರ ಸಾಮರ್ಥ್ಯವನ್ನು ಉತ್ತಮಗೊಳಿಸುವ ಕಡೆಗೆ ಲಕ್ಷ್ಯವನ್ನಿಡಿರಿ. ನಿಮ್ಮ ಮಕ್ಕಳ ಸಾಮರ್ಥ್ಯ ಮತ್ತು ಕ್ಷೇತ್ರದಲ್ಲಿನ ಸನ್ನಿವೇಶಗಳಿಗನುಸಾರ, ಮನೆಯವನು ಹೇಳುವುದರ ಕಡೆಗೆ ಗಮನಕೊಡುವುದು, ವಚನಗಳ ಓದುವಿಕೆಯಲ್ಲಿ ತಮ್ಮ ಹೃದಯವನ್ನು ಹಾಕುವುದು, ಮತ್ತು ಕಿರುಹೊತ್ತಗೆಗಳಿಂದ ಒಂದು ಸರಳವಾದ ಸಾಕ್ಷಿಯನ್ನು ನೀಡುವಂಥ ನಿರ್ದಿಷ್ಟ ಗುರಿಗಳನ್ನು ಮುಟ್ಟಲು ಕಾರ್ಯಮಾಡಿರಿ. ಬಾಗಿಲುಗಳಲ್ಲಿ ಅವರು ಭೇಟಿಯಾಗುವ ಎಲ್ಲಾ ಜನರಲ್ಲಿ ಒಂದು ವೈಯಕ್ತಿಕ ಆಸಕ್ತಿಯನ್ನು ತೆಗೆದುಕೊಳ್ಳುವಂತೆ ಕೂಡ ನೀವು ನಿಮ್ಮ ಮಕ್ಕಳಿಗೆ ಕಲಿಸಸಾಧ್ಯವಿದೆ. ಯಾರಾದರೂ ಅವರನ್ನು ಅನಾದರದಿಂದ ನಿರಾಕರಿಸುವುದಾದರೂ ಕೂಡ, ಆದರ, ಮಮತೆ, ಮತ್ತು ದೀನತೆ ತೋರಿಸುವುದರ ಪ್ರಾಮುಖ್ಯತೆಯ ಕುರಿತು ನೀವು ಅವರೊಂದಿಗೆ ಮಾತಾಡುವುದಾದರೆ, ಅದು ಅವರ ನಿರಾಶೆಯನ್ನು ಕನಿಷ್ಠ ಮಟ್ಟದಲ್ಲಿ ಇಡಲು ಅವರಿಗೆ ಸಹಾಯ ಮಾಡುವುದು. ನಿಮ್ಮ ಮಕ್ಕಳು ವಾರಾಂತ್ಯದ ಸೇವೆಯಲ್ಲಿ ಭಾಗವಹಿಸುವುದಾದರೆ, ಕೇವಲ ತಮ್ಮ ಹೆತ್ತವರ ಜೊತೆಗೆ ಮಾತ್ರವಲ್ಲದೆ, ವೃದ್ಧ ಪ್ರಚಾರಕರು ಮತ್ತು ಹಿರಿಯರೊಂದಿಗೆ ಕೆಲಸಮಾಡುವ ಮೂಲಕ ಅವರು ಉತ್ತಮವಾದ ತರಬೇತಿಯನ್ನು ಕೂಡ ಪಡೆಯಲು ಸಾಧ್ಯ.—1 ಕೊರಿಂ. 4:17.

5 ನಿಮ್ಮ ಮಕ್ಕಳು ತಮ್ಮ ಸ್ವಂತ ಯೋಚನೆಗಳನ್ನು ಅವರ ಸ್ವಂತ ಮಾತುಗಳಲ್ಲಿ ಹೇಳುವುದಾದರೆ, ಅದು ಅತಿ ಪ್ರಭಾವಕಾರಿಯಾಗಿರುವುದು, ಮತ್ತು ಮನೆಯವನ ಹೃದಯವನ್ನು ಪ್ರೇರೇಪಿಸುವುದು. ಅವರು ಅನುಭವ ಪಡೆದಂತೆ, ಪ್ರೌಢ ಕ್ರೈಸ್ತರಾಗಲು ಮತ್ತು ಸಕ್ರಿಯ ಹಾಗೂ ಆನಂದಭರಿತ ಪ್ರಚಾರಕರಾಗಲು ಅವರನ್ನು ಉತ್ತೇಜಿಸಿರಿ. (1 ಕೊರಿಂ. 14:20) ಕ್ರಮವಾದ ಒಬ್ಬ ಪ್ರಚಾರಕನಾಗಿರುವ ಬದಲು, ಅವರು ಪುನಃ ಸಂದರ್ಶನಗಳನ್ನು ಮಾಡಬಲ್ಲರು ಮತ್ತು ಒಂದು ಮನೆ ಬೈಬಲ್‌ ಅಧ್ಯಯನವನ್ನು ನಡೆಸುವ ಗುರಿಯನ್ನು ಇಡಬಲ್ಲರು. ಜೊತೆಯಲ್ಲಿ, ಯೆಹೋವನ ಸಂಸ್ಥೆಯೊಂದಿಗೆ ಕೆಲಸಮಾಡುವ ಆನಂದವನ್ನು ಸವಿದು ನೋಡಲು ಅವರಿಗೆ ಸಹಾಯಮಾಡಿರಿ. ಸೂಚನಾ ಫಲಕ ಮತ್ತು ಸೇವಾ ಕೂಟದ ಪ್ರಕಟನೆಗಳಿಗೆ ಗಮನವನ್ನು ಕೊಡುವುದರ ಮೂಲಕ ಸಭೆಯೊಂದಿಗೆ ಹೇಗೆ ಸಹಕರಿಸಬಹುದೆಂದು ಅವರಿಗೆ ಕಲಿಸಿರಿ. ಸಹೋದರರಿಂದ ಅವರು ಪಡೆಯಬಹುದಾದ ಯಾವುದೇ ಕಾರ್ಯದ ನೇಮಕವನ್ನು ಮನಃಪೂರ್ವಕವಾಗಿ ಮಾಡುವಂತೆ ಉತ್ತೇಜಿಸುವುದು ಕೂಡ ಒಳ್ಳೆಯದಾಗಿರುತ್ತದೆ.

6 ಒಮ್ಮೆ ನಿಮ್ಮ ಮಕ್ಕಳು ಯೆಹೋವನ ಸ್ತುತಿಗಾರರಾದ ಬಳಿಕ, ಅವರು ಇಲ್ಲಿಯ ವರೆಗೆ ಬೆಳೆಸಿದಂತಹ ಒಳ್ಳೆಯ ದಾಖಲೆಯು ಕಳಂಕಿತಗೊಳ್ಳದಂತೆ, ಏಳಬಹುದಾದ ಯಾವುದೇ ನೈತಿಕ ಸಮಸ್ಯೆಗಳ ಕಡೆಗೆ ಉತ್ತಮವಾದ ಗಮನವನ್ನು ಕೊಡಿರಿ, ಮತ್ತು ದೇವರ ಕಡೆಗೆ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮುಂದುವರಿಯುವಂತೆ ಅವರಿಗೆ ಉತ್ತೇಜನ ನೀಡಿರಿ.—2 ತಿಮೊ. 2:22.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ