ತಮ್ಮ ಅಧ್ಯಯನಕ್ಕಾಗಿ ತಯಾರಿಸುವಂತೆ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಿರಿ
1 ಪ್ರತಿ ವಾರ ತಮ್ಮ ಅಧ್ಯಯನಕ್ಕಾಗಿ ತಯಾರಿಸುವ ಬೈಬಲ್ ವಿದ್ಯಾರ್ಥಿಗಳು, ಅಧ್ಯಯನದಲ್ಲಿ ಯಥಾರ್ಥವಾದ ಆಸಕ್ತಿಯನ್ನು ಪ್ರದರ್ಶಿಸುತ್ತಾರೆ ಮತ್ತು ತಯಾರಿಸದವರಿಗಿಂತ ಹೆಚ್ಚು ತೀವ್ರವಾದ ಆತ್ಮಿಕ ಪ್ರಗತಿಯನ್ನು ಸಾಮಾನ್ಯವಾಗಿ ಮಾಡುತ್ತಾರೆ. ಕೆಲವೊಮ್ಮೆ ಹೇಗೆ ತಯಾರಿಸಬೇಕೆಂದು ಗೊತ್ತಿರದ ಕಾರಣ, ವಿದ್ಯಾರ್ಥಿಯೊಬ್ಬನು ತಯಾರಿಸದೆ ಇರಬಹುದು. ಹೇಗೆ ತಯಾರಿಸಬೇಕೆಂದು ಅವನಿಗೆ ಕಲಿಸುವ ಅಗತ್ಯವಿರಬಹುದು. ಇದನ್ನು ಹೇಗೆ ಮಾಡಸಾಧ್ಯವಿದೆ?
2 ಆರಂಭದಿಂದಲೇ, ತಯಾರಿಯು ವೈಯಕ್ತಿಕ ಅಭ್ಯಾಸವನ್ನು ಒಳಗೊಳ್ಳುತ್ತದೆ ಎಂಬ ವಿಷಯವನ್ನು ವಿದ್ಯಾರ್ಥಿಯು ತಿಳಿದುಕೊಳ್ಳುತ್ತಾನೆಂಬುದನ್ನು ಖಚಿತ ಮಾಡಿಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ. ಅನೇಕ ಜನರು, ಓದಶಕ್ತರಾಗಿದ್ದರೂ, ಹೇಗೆ ಅಭ್ಯಾಸಿಸಬೇಕೆಂದು ಕಲಿಸಲ್ಪಟ್ಟಿಲ್ಲ. ಅಗತ್ಯಬೀಳುವಂತೆ ವಿದ್ಯಾರ್ಥಿಗೆ ನೀವು ಸಾಗಿಸ ಶಕ್ತರಾಗಬಹುದಾದ ಅನೇಕ ಸಹಾಯಕಾರಿ ಸಲಹೆಗಳನ್ನು ತೀಯೊಕ್ರ್ಯಾಟಿಕ್ ಮಿನಿಸ್ಟ್ರಿ ಸ್ಕೂಲ್ ಗೈಡ್ಬುಕ್ನ ಪುಟಗಳು 33-43 ಒದಗಿಸುತ್ತವೆ.
3 ಅಧ್ಯಯನದ ಮೌಲ್ಯವನ್ನು ವಿದ್ಯಾರ್ಥಿಗೆ ತೋರಿಸಿರಿ: ಮುಖ್ಯ ಪದಗಳನ್ನು ಮತ್ತು ಪದಗುಚ್ಛಗಳಿಗೆ ನೀವು ಗುರುತು ಹಾಕಿದ ಯಾ ಅಡಿಗೆರೆ ಹಾಕಿದ ನಿಮ್ಮ ಅಧ್ಯಯನ ಪುಸ್ತಕವನ್ನು ವಿದ್ಯಾರ್ಥಿಗೆ ನೀವು ತೋರಿಸಬಹುದು. ಗುರುತು ಹಾಕಿದ ಭಾಗಗಳ ಮೇಲೆ ದೃಷ್ಟಿ ಹಾಕುವುದು ಹೇಗೆ ಅವನ ಸ್ವಂತ ಮಾತುಗಳಲ್ಲಿ ಅವನು ಅಭಿವ್ಯಕ್ತಿಸಸಾಧ್ಯವಾಗುವ ಯೋಚನೆಗಳ ಕುರಿತು ಅವನನ್ನು ಜ್ಞಾಪಿಸಬಲ್ಲವೆಂದು ಅವನು ನೋಡಲಿ. ಹೀಗೆ ಪ್ರಶ್ನೆಗಳಿಗೆ ಉತ್ತರಿಸುವಾಗ ಪುಸ್ತಕದಿಂದ ಇಡೀ ಭಾಗಗಳನ್ನು ಓದುವಂತೆ ಅವನು ಪ್ರೇರೇಪಿಸಲ್ಪಡುವುದಿಲ್ಲ. ಈ ಹಂತದಲ್ಲಿ ಸರಿಯಾದ ತರಬೇತಿಯು ಮುಂದೆ ಸಭಾ ಕೂಟಗಳಲ್ಲಿ ಅವನು ಅರ್ಥಭರಿತ ಹೇಳಿಕೆಗಳನ್ನು ಮಾಡುವಂತೆ ಸಹಾಯ ಮಾಡುವುದು. ಅವನ ಹೇಳಿಕೆಗಳು ಪರಿಗಣಿಸಲಾಗುತ್ತಿರುವ ವಿಷಯಕ್ಕಾಗಿ ಗಣ್ಯತೆಯನ್ನು ಪ್ರತಿಬಿಂಬಿಸುವುವು ಮತ್ತು ಅವನ ತಿಳಿವಳಿಕೆಯ ಆಳವನ್ನು ಸೂಚಿಸುವುವು.
4 ಬೈಬಲನ್ನು ಉಪಯೋಗಿಸಲು ಅವನಿಗೆ ಕಲಿಸಿರಿ: ಅಧ್ಯಯನ ವಿಷಯದಲ್ಲಿ ಸೂಚಿಸಲಾದ ವಚನಗಳನ್ನು ಕಂಡುಹಿಡಿಯುವುದು ಹೇಗೆ ಎಂಬುದನ್ನು ವಿದ್ಯಾರ್ಥಿಯು ಕಲಿಯುವ ಅಗತ್ಯವಿದೆ. ಇದನ್ನು ಅವನು ಸಮರ್ಥವಾಗಿ ಮಾಡಶಕ್ತನಾದಾಗ, ನಿಜವಾಗಿಯೂ ಅವನೊಬ್ಬ ಬೈಬಲಿನ ವಿದ್ಯಾರ್ಥಿ ಎಂಬುದನ್ನು ಅವನು ಬಹಳವಾಗಿ ಗಣ್ಯಮಾಡುವನು. ಪ್ರಾರಂಭದಲ್ಲಿ ಬೈಬಲಿನ ಮುಂಭಾಗದಲ್ಲಿರುವ ಬೈಬಲ್ ಪುಸ್ತಕಗಳ ಪಟ್ಟಿಯ ಉಪಯೋಗವನ್ನು ಮಾಡುವ ಅಗತ್ಯ ಅವನಿಗೆ ಇರಬಹುದಾದರೂ, 66 ಬೈಬಲ್ ಪುಸ್ತಕಗಳ ಕ್ರಮಾನುಗತಿಯೊಂದಿಗೆ ಪರಿಚಿತನಾಗುವಂತೆ ವಿದ್ಯಾರ್ಥಿಯು ಉತ್ತೇಜಿಸಲ್ಪಡಬೇಕು. ಒಂದು ವಚನವನ್ನು ಅವನು ತೆಗೆದು ನೋಡಿ ಅದನ್ನು ಓದುವಾಗ, ಪ್ರಚಲಿತ ಅಧ್ಯಯನಕ್ಕೆ ನೇರವಾಗಿ ಸಂಬಂಧಪಡದ ಭಾಗಗಳಿಂದ ಅಪಕರ್ಷಿಸಲ್ಪಡದೆ, ಪರಿಗಣನೆಯ ಕೆಳಗೆ ಇರುವ ಪ್ಯಾರಗ್ರಾಫ್ನಲ್ಲಿ ಮಾಡಲಾದ ಅಂಶವನ್ನು ಬೆಂಬಲಿಸುವ ಭಾಗವನ್ನು ಗುರುತಿಸಲು ಅವನಿಗೆ ಸಹಾಯ ಮಾಡಿರಿ.
5 ವಿದ್ಯಾರ್ಥಿಯು ಪ್ರಗತಿಮಾಡಿದಂತೆ, ಬೈಬಲನ್ನು ಆರಂಭದಿಂದ ಅಂತ್ಯದ ವರೆಗೆ ಓದುವಂತೆ ಅವನನ್ನು ಉತ್ತೇಜಿಸಿರಿ. ಸಂಪೂರ್ಣ ಬೈಬಲ್ ದೇವರ ಪ್ರೇರಿತ ವಾಕ್ಯವೆಂದು ಮತ್ತು ನಿಜ ಕ್ರೈಸ್ತರು ಅದರ ಮೂಲಕ ಆತ್ಮಿಕವಾಗಿ ಪೋಷಿಸಲ್ಪಡಬೇಕೆಂಬುದನ್ನು ಒತ್ತಿಹೇಳಿರಿ.—ಮತ್ತಾ. 4:4; 2 ತಿಮೊ. 3:16, 17.
6 ಇತರ ದೇವಪ್ರಭುತ್ವ ಆಧಾರ ಗ್ರಂಥಗಳ ಪರಿಚಯ ಮಾಡಿಸಿರಿ: ವಿದ್ಯಾರ್ಥಿಯು ಸಾಕಷ್ಟು ಅಭಿವೃದ್ಧಿಯನ್ನು ಮಾಡಿಯಾದ ಮೇಲೆ, ಇತರ ದೇವಪ್ರಭುತ್ವ ಆಧಾರಗಳನ್ನು ಉಪಯೋಗಿಸಲು ಅವನು ಪ್ರಾರಂಭಿಸಬಲ್ಲನು. ವಿವೇಚನೆಯೊಂದಿಗೆ, ಸಭಾ ಕೂಟಗಳನ್ನು ಅವನು ಹಾಜರಾದಂತೆ, ಅವನಿಗೆ ಪರಿಚಯವಾಗುವ ಸಂಸ್ಥೆಯ ಪ್ರಕಾಶನಗಳಲ್ಲಿರುವ ಹೆಚ್ಚಿನ ಮಾಹಿತಿಯನ್ನು ಹುಡುಕಿ ನೋಡುವಂತೆ ಅವನನ್ನು ಉತ್ತೇಜಿಸಿರಿ. ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ನ “ಬೈಬಲ್ ಪದಗಳ ಅನುಕ್ರಮಣಿಕೆ” ಯಂಥ ವಿಶೇಷ ವೈಶಿಷ್ಟ್ಯಗಳನ್ನು ಹೇಗೆ ಉಪಯೋಗಿಸಬೇಕೆಂದು ಅವನಿಗೆ ಕಲಿಸಿರಿ. ಅವನ ಸ್ವಂತ ದೇವಪ್ರಭುತ್ವ ಪುಸ್ತಕಾಲಯವನ್ನು ಬೆಳೆಸಲು ಅವನು ಆರಂಭಿಸಿದಂತೆ, ಕಾಂಪ್ರಹೆಂಸಿವ್ ಕನ್ಕಾರ್ಡನ್ಸ್, ರೀಸನಿಂಗ್ ಫ್ರಾಮ್ ದ ಸ್ಕ್ರಿಪ್ಚರ್ಸ್, ಇಂಡೆಕ್ಸ್, ಮತ್ತು ಇನ್ಸೈಟ್ ಸಂಪುಟಗಳನ್ನು ಹೇಗೆ ಉಪಯೋಗಿಸಬೇಕೆಂದು ಅವನಿಗೆ ತೋರಿಸಿರಿ.
7 ಬೈಬಲ್ ಅಧ್ಯಯನಕ್ಕಾಗಿ ಹೇಗೆ ತಯಾರಿಸಬೇಕೆಂದು ಬೈಬಲ್ ವಿದ್ಯಾರ್ಥಿಗಳಿಗೆ ನಾವು ಕಲಿಸುವುದಾದರೆ, ಅವರ ವೈಯಕ್ತಿಕ ಮನೆ ಬೈಬಲ್ ಅಧ್ಯಯನವು ಪೂರ್ತಿಗೊಂಡ ನಂತರವೂ ಕೂಡ, ಸಮರ್ಥ ಬೈಬಲ್ ವಿದ್ಯಾರ್ಥಿಗಳಂತೆ ಸತ್ಯದಲ್ಲಿ ಪ್ರಗತಿ ಮಾಡುತ್ತಾ ಇರಲು ಮುಂದುವರಿಯುವಂತೆ ನಾವು ಅವರನ್ನು ಸಜ್ಜುಗೊಳಿಸುವೆವು.