ನವಂಬರಕ್ಕಾಗಿ ಸೇವಾ ಕೂಟಗಳು
ನವಂಬರ 1 ರ ವಾರ
ಸಂಗೀತ 5 (104)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆ ಯಿಂದ ಆಯ್ದ ಪ್ರಕಟನೆಗಳು. ರಾಜ್ಯವನ್ನು ಸಾರುವ ಕೆಲಸದಲ್ಲಿ ಅವರು ಹೊಂದಿರುವ ಭಾಗಕ್ಕಾಗಿ ಪ್ರಚಾರಕರನ್ನು ಪ್ರಶಂಸಿಸಿರಿ.
10 ನಿ: “ಸ್ವಪ್ನಗಳು,” ರೀಸನಿಂಗ್ ಪುಸ್ತಕ ಪುಟಗಳು 104-6. ಬೈಬಲ್ ವಿದ್ಯಾರ್ಥಿಯೊಂದಿಗೆ ಚರ್ಚೆಯಂತೆ ನಿರ್ವಹಿಸಲ್ಪಡಬೇಕು. ನಮ್ಮ ಸ್ವಪ್ನಗಳ ಮೂಲಕ ಮಾರ್ಗದರ್ಶಿಸಲ್ಪಡುವುದರ ವಿವೇಕದ ಕುರಿತು ವಿದ್ಯಾರ್ಥಿಯು ಕೇಳುತ್ತಾನೆ. ಇದರ ಅಪಾಯವನ್ನು, ಲೌಕಿಕ ವಿವೇಚನೆಗಳಿಗೆ ಮತ್ತು ದೆವ್ವಗಳಿಗೆ ನಾವು ಹೇಗೆ ಬಲಿಬೀಳುವಂತೆ ಅದು ಮಾಡುವುದು ಎಂಬುದನ್ನು ಚರ್ಚಿಸಿರಿ. ದೇವರ ವಾಕ್ಯದ ತತ್ವಗಳ ಮೂಲಕ ಮಾರ್ಗದರ್ಶಿಸಲ್ಪಡುವುದರ ಮಹತ್ವವನ್ನು ತೋರಿಸಿರಿ.
10 ನಿ: ಸ್ಥಳಿಕ ಅಗತ್ಯಗಳು ಯಾ “ಸಂಸರ್ಗ—ಕೇವಲ ಮಾತುಕತೆಗಿಂತ ಹೆಚ್ಚಿನದ್ದು” ಆಗಸ್ಟ್ 1, 1993ರ ಕಾವಲಿನಬುರುಜು ಪುಟಗಳು 3-8 ರಲ್ಲಿರುವ ಲೇಖನಗಳ ಮೇಲೆ ಆಧಾರಿತ ಭಾಷಣ.
15 ನಿ: “ಇಂದಿನ ಲೋಕದಲ್ಲಿ ಬೈಬಲಿನ ಮಹತ್ವ.” ಮನೆಯಿಂದ ಮನೆಯ ಕಾರ್ಯದಲ್ಲಿ ತನ್ನ ಸಾಮರ್ಥ್ಯವನ್ನು ಉತ್ತಮಗೊಳಿಸಲು ಬಯಸುವ ಪ್ರಚಾರಕ ಮತ್ತು ಸೇವಾ ಮೇಲ್ವಿಚಾರಕನ ನಡುವೆ ಚರ್ಚೆ. ಮೂರನೆಯ ಪ್ಯಾರಗ್ರಾಫನ್ನು ಪರಿಗಣಿಸಿದ ಬಳಿಕ, ಸೇವಾ ಮೇಲ್ವಿಚಾರಕನು ಮನೆಯವನಂತೆ ಕಾರ್ಯಮಾಡುತ್ತಾ, ಸೂಚಿಸಲಾದ ನಿರೂಪಣೆಯನ್ನು ಪ್ರಯೋಗಿಸುವಂತೆ ಸೇವಾ ಮೇಲ್ವಿಚಾರಕನು ಪ್ರಚಾರಕನನ್ನು ಕೇಳುತ್ತಾನೆ. ನಾಲ್ಕನೆಯ ಪ್ಯಾರಗ್ರಾಫನ್ನು ಪರಿಗಣಿಸಿದ ಬಳಿಕ, ಸೇವಾ ಮೇಲ್ವಿಚಾರಕನು ಸೂಚಿಸಲಾದ ನಿರೂಪಣೆಯನ್ನು ಪ್ರಚಾರಕನಿಗೆ ನೀಡುತ್ತಾನೆ. ನ್ಯೂ ವರ್ಲ್ಡ್ ಟ್ರಾನ್ಸ್‌ಲೇಷನ್ ನ ಮಹತ್ವವನ್ನು ಆಸಕ್ತರು ಮತ್ತು ಬೈಬಲ್ ವಿದ್ಯಾರ್ಥಿಗಳು ಗಣ್ಯಮಾಡುವಂತೆ ಸಹಾಯ ಮಾಡಲು ಸಭೆಗೆ ಉತ್ತೇಜನವನ್ನು ನೀಡಿರಿ.
ಸಂಗೀತ 52 (59) ಮತ್ತು ಸಮಾಪ್ತಿಯ ಪ್ರಾರ್ಥನೆ.
ನವಂಬರ 8ರ ವಾರ
ಸಂಗೀತ 7 (93)
10 ನಿ: ಸ್ಥಳಿಕ ತಿಳಿಸುವಿಕೆಗಳು. ಈ ವಾರಾಂತ್ಯ ಕ್ಷೇತ್ರ ಸೇವೆಯಲ್ಲಿ ಉಪಯೋಗಿಸಸಾಧ್ಯವಿರುವ ಲೇಖನವನ್ನು ಪ್ರದರ್ಶಿಸುತ್ತಾ, ಪ್ರಚಲಿತ ಪತ್ರಿಕೆಗಳ ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ. “ಕ್ಷೇತ್ರ ಸೇವೆಗಾಗಿ ವಿಶೇಷವಾದ ಒಂದು ತಿಂಗಳು,” ಎಂಬ ಲೇಖನದ ಕಡೆಗೆ ಗಮನವನ್ನು ಸೆಳೆಯಿರಿ, ಮತ್ತು ದಶಂಬರ ತಿಂಗಳಿನಲ್ಲಿ ಸಹಾಯಕ ಪಯನೀಯರರಂತೆ ಯಾ ಪಯನೀಯರರೊಂದಿಗೆ ಕೆಲಸಮಾಡುವ ಮೂಲಕ ತಮ್ಮ ಕ್ಷೇತ್ರ ಸೇವೆಯನ್ನು ಹೆಚ್ಚಿಸುವ ಸಾಧ್ಯತೆಯ ಕುರಿತು ಗಂಭೀರವಾಗಿ ಪರಿಗಣಿಸಲು ಎಲ್ಲರನ್ನು ಆಮಂತ್ರಿಸಿರಿ.
15 ನಿ: “ನಿಜವಾದ ಮಾರ್ಗದರ್ಶನವನ್ನು ಒದಗಿಸುವ ಗ್ರಂಥ.” ಲೇಖನದ ಪ್ರಶ್ನೋತ್ತರ ಪರಿಗಣನೆ. ಪ್ಯಾರಗ್ರಾಫ್ 3 ರಲ್ಲಿ ನಿರೂಪಿಸಲಾದ ಪುನಃ ಸಂದರ್ಶನವನ್ನು ಪ್ರತ್ಯಕ್ಷಾಭಿನಯಿಸಿರಿ. ಮನೆಯಿಂದ ಮನೆಯ ಕಾರ್ಯದಲ್ಲಿ ಜನರೊಂದಿಗೆ ಮಾತಾಡುವಾಗ ಮತ್ತು ಪುನಃ ಸಂದರ್ಶನಗಳನ್ನು ಮಾಡುವಾಗ, ಬೈಬಲಿನ ವ್ಯಾವಹಾರಿಕ ಮಹತ್ವದ ಕುರಿತು ಉತ್ಸಾಹಿಗಳಾಗಿರಲು ಎಲ್ಲರನ್ನು ಉತ್ತೇಜಿಸಿರಿ.
20 ನಿ: “ಯುವ ಜನರೇ—ಯೆಹೋವನ ಹೃದಯವನ್ನು ಸಂತೋಷಪಡಿಸಿರಿ.” ಒಂದರಿಂದ 18 ಪ್ಯಾರಗ್ರಾಫ್‌ಗಳನ್ನು ಹಿರಿಯರು ಇಬ್ಬರು ಯಾ ಮೂವರು ದೀಕ್ಷಾಸ್ನಾನ ಪಡೆದ ಯುವ ಪ್ರಚಾರಕರೊಂದಿಗೆ ಚರ್ಚಿಸುತ್ತಾರೆ. ಯುವ ಜನರು ಅವರ ಉತ್ತಮ ಮಾದರಿಯಿಂದ ಪಡೆಯುವ ಪ್ರಯೋಜನಗಳನ್ನು ಮತ್ತು “ಯುವ ಜನರು ಪ್ರಶ್ನಿಸುತ್ತಾರೆ. . . .” ಲೇಖನಗಳ ಮಹತ್ವವನ್ನು ಒತ್ತಿಹೇಳಿರಿ. ಸಮಯವು ಅನುಮತಿಸುವಂತೆ ಶಾಸ್ತ್ರವಚನಗಳನ್ನು ಪರಿಗಣಿಸಿರಿ.
ಸಂಗೀತ 80 (71) ಮತ್ತು ಸಮಾಪ್ತಿಯ ಪ್ರಾರ್ಥನೆ.
ನವಂಬರ 15 ರ ವಾರ
ಸಂಗೀತ 73 (18)
5 ನಿ: ಅಕೌಂಟ್ಸ್ ವರದಿ ಮತ್ತು ಕಾಣಿಕೆಗಳ ಅಂಗೀಕಾರಗಳನ್ನು ಸೇರಿಸಿ, ಸ್ಥಳಿಕ ತಿಳಿಸುವಿಕೆಗಳು. ಸ್ಥಳಿಕ ಸಭೆಗೆ ಅಷ್ಟೇ ಅಲ್ಲದೆ ಸೊಸೈಟಿಯ ರಾಜ್ಯ ಸಭಾಗೃಹದ ನಿಧಿಗೆ ಮತ್ತು ಸೊಸೈಟಿಯ ಲೋಕವ್ಯಾಪಕ ಕಾರ್ಯಕ್ಕೆ ಆರ್ಥಿಕ ಬೆಂಬಲ ಕೊಟ್ಟದ್ದಕ್ಕಾಗಿ ಸಭೆಯನ್ನು ಪ್ರಶಂಸಿಸಿರಿ. ಮುಂಬರುತ್ತಿರುವ ಲೋಕದ ರಜಾ ಕಾಲಕ್ಕಾಗಿ ಕ್ಷೇತ್ರ ಸೇವಾ ಏರ್ಪಾಡುಗಳನ್ನು ನಿರೂಪಿಸಿರಿ.
20 ನಿ: “ದೇವರ ಸಂಸ್ಥೆಯೊಂದಿಗೆ ಸಹವಾಸ ಮಾಡಲು ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು.” ಪ್ರಶ್ನೋತ್ತರಗಳು. ಪ್ಯಾರಗ್ರಾಫ್ 8ನ್ನು ಪ್ರತ್ಯಕ್ಷಾಭಿನಯಿಸಿರಿ, ಪ್ಯಾರಗ್ರಾಫ್ 9 ರಲ್ಲಿ ತೋರಿಸಲಾದಂತೆ, ರಾಜ್ಯ ಸಭಾಗೃಹಕ್ಕೆ ಬರಲು ಆಮಂತ್ರಣದೊಂದಿಗೆ ಕೊನೆಗೊಳಿಸಿರಿ.
20 ನಿ: “ಯುವ ಜನರೇ—ಯೆಹೋವನ ಹೃದಯವನ್ನು ಸಂತೋಷಪಡಿಸಿರಿ.” ಪುರವಣಿಯ 19-33 ಪ್ಯಾರಗ್ರಾಫ್‌ಗಳ ಪ್ರಶ್ನೋತ್ತರ ಪರಿಗಣನೆ. ಒಬ್ಬ ಯಾ ಇಬ್ಬರು ಯುವ ಪ್ರಚಾರಕರನ್ನು ಇಂಟರ್‌ವ್ಯೂ ಮಾಡಿರಿ. ಅವರ ಆತ್ಮಿಕ ವಿಕಾಸದಲ್ಲಿ ಸಭೆಯು ಹೇಗೆ ಸಹಾಯಕಾರಿಯಾಗಿತ್ತು ಎಂಬುದರ ಮೇಲೆ ಹೇಳಿಕೆಗಳನ್ನು ಪಡೆಯಿರಿ.
ಸಂಗೀತ 90 (102) ಮತ್ತು ಸಮಾಪ್ತಿಯ ಪ್ರಾರ್ಥನೆ.
ನವಂಬರ 22ರ ವಾರ
ಸಂಗೀತ 74 (44)
10 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ದೇವಪ್ರಭುತ್ವ ವಾರ್ತೆಗಳು. ಈ ವಾರಾಂತ್ಯ ಸಾಕ್ಷಿಕಾರ್ಯದಲ್ಲಿ ಪ್ರಚಲಿತ ಪತ್ರಿಕೆಗಳ ಉಪಯೋಗವನ್ನು ಪ್ರೋತ್ಸಾಹಿಸಿರಿ.
15 ನಿ: “ತಮ್ಮ ಅಧ್ಯಯನಕ್ಕಾಗಿ ತಯಾರಿಸುವಂತೆ ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಿರಿ.” ಪ್ರಶ್ನೋತ್ತರಗಳು. ಸಮಯವು ಅನುಮತಿಸುವಂತೆ ಪ್ಯಾರಗ್ರಾಫ್‌ಗಳನ್ನು ಓದಿರಿ.
20 ನಿ: “ಶಾಸ್ತ್ರವಚನಗಳಿಂದ ನೀವು ವಿವೇಚಿಸುತ್ತೀರೊ?” ಮನೆಯಿಂದ ಮನೆಯ ಮತ್ತು ಪುನರ್ಭೇಟಿಯ ಕಾರ್ಯದಲ್ಲಿ ಪ್ರಭಾವಕಾರಿಯಾಗಿರುವ ಒಬ್ಬ ಸಹೋದರನಿಂದ ಪ್ರಶ್ನೋತ್ತರ ಪರಿಗಣನೆ. ಪ್ಯಾರಗ್ರಾಫ್ 4ನ್ನು ಪರಿಗಣಿಸಿದ ಬಳಿಕ, ಮನೆಯವನು ಕಾರ್ಯಮಗ್ನನಾಗಿರುವಾಗ, ಪ್ರಚಾರಕನೊಬ್ಬನು ಜ್ಞಾಪಕದಿಂದ ವಚನವನ್ನು ಹೇಗೆ ಹೇಳಬಹುದು ಯಾ ಅದರ ವಿವರಣೆಯನ್ನು ಹೇಗೆ ಕೊಡಬಹುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಪ್ರತ್ಯಕ್ಷಾಭಿನಯದ ಬಳಿಕ, ಎಷ್ಟೊಂದು ಜನರು ಯಾವಾಗಲೂ ಕಾರ್ಯಮಗ್ನರಾಗಿರುವ ಯಾ ದೈನಿಕ ಕಾರ್ಯಗಳಲ್ಲಿ ಮುಂಚಿತವಾಗಿ ತೊಡಗಿರುವ ಟೆರಿಟೊರಿಗಳಲ್ಲಿ, “ದೇವರ ವಾಕ್ಯವನ್ನು ಸಾರ”ಲು ಪ್ರಯತ್ನಿಸುವಂತೆ, ಈ ಸಲಹೆಯನ್ನು ಅನುಸರಿಸುವುದರ ಮಹತ್ವವನ್ನು ಎತ್ತಿತೋರಿಸಿರಿ. (2 ತಿಮೊ. 4:2) ಪ್ಯಾರಗ್ರಾಫ್ 6ನ್ನು ಪರಿಗಣಿಸಿದ ಅನಂತರ, ಅದನ್ನು ತನ್ನ ಸಾಕ್ಷಿಕಾರ್ಯದಲ್ಲಿ ಅವನು ಹೇಗೆ ಉಪಯೋಗಿಸುತ್ತಾನೆ ಎಂಬುದನ್ನು ಹೇಳಲು, ರೀಸನಿಂಗ್ ಪುಸ್ತಕದೊಂದಿಗೆ ಪ್ರಭಾವಕಾರಿಯಾಗಿರುವ ಒಬ್ಬ ಪ್ರಚಾರಕನನ್ನು ಕರಿಸಿರಿ.
ಸಂಗೀತ 108 (69) ಮತ್ತು ಸಮಾಪ್ತಿಯ ಪ್ರಾರ್ಥನೆ.
ನವಂಬರ 29ರ ವಾರ
ಸಂಗೀತ 83 (2)
10 ನಿ: ಸ್ಥಳಿಕ ತಿಳಿಸುವಿಕೆಗಳು. ದಶಂಬರ ತಿಂಗಳಿನಲ್ಲಿ ಸಹಾಯಕ ಪಯನೀಯರ್ ಸೇವೆಯನ್ನು ಮಾಡಬಲ್ಲವರನ್ನು ಹಾಗೆ ಮಾಡಲು ಉತ್ತೇಜಿಸಿರಿ.
15 ನಿ: “ಬೈಬಲ್—ಆಧುನಿಕ ಮನುಷ್ಯನಿಗಾಗಿ ಒಂದು ವ್ಯಾವಹಾರಿಕ ಮಾರ್ಗದರ್ಶಕ.” ಮೇ 1, 1993 ವಾಚ್‌ಟವರ್ ನಲ್ಲಿರುವ ಲೇಖನದ ಮೇಲೆ ಆಧಾರಿತ ಕುಟುಂಬ ತಲೆಯಿಂದ ಭಾಷಣ. ಬೈಬಲ್ ತತ್ವಗಳ ಅನ್ವಯವನ್ನು ಮಾಡುವುದು ಶಾಂತಿಭರಿತ, ಪ್ರೀತಿಪರ ಕೌಟುಂಬಿಕ ಪರಿಸರವನ್ನು ಪ್ರವರ್ತಿಸುತ್ತದೆ ಎಂಬುದನ್ನು ಎತ್ತಿತೋರಿಸಿರಿ. ಒಂದು ಕುಟುಂಬಕ್ಕೆ ಯಾ ಒಬ್ಬ ವ್ಯಕ್ತಿಗೆ ದೇವರ ವಾಕ್ಯದಿಂದ ಬರುವ ಬುದ್ಧಿವಾದವು ಹೇಗೆ ಸಹಾಯ ಮಾಡಿದೆ ಎಂಬುದನ್ನು ತೋರಿಸುವ, ಸಭಿಕರಿಂದ ಒಂದು ಯಾ ಎರಡು ತಯಾರಿಸಲಾದ ಹೇಳಿಕೆಗಳನ್ನು ಪಡೆಯಿರಿ.
20 ನಿ: ದಶಂಬರ ತಿಂಗಳಿನಲ್ಲಿ ಕುರಿಗಳಂಥವರಿಗೆ ಸಹಾಯ ನೀಡಲು ಅತ್ಯಂತ ಮಹಾನ್ ಪುಸ್ತಕವನ್ನು ಉಪಯೋಗಿಸುವುದು. ಸಭಿಕರೊಂದಿಗೆ ಚರ್ಚೆ. ಇಂಥ ಪ್ರಶ್ನೆಗಳನ್ನು ಕೇಳಿ: ಯೇಸುವಿನ ಶುಶ್ರೂಷೆ ಯಾ ಇತರರೊಂದಿಗೆ ಅವನ ವ್ಯವಹಾರದ ಬಗ್ಗೆ ಯಾವ ಒಂದು ದಾಖಲೆಯು ನಿಮ್ಮನ್ನು ಅತಿಯಾಗಿ ಪ್ರಭಾವಿಸಿತು? ಈ ದಾಖಲೆಯು ನಿಮ್ಮನ್ನು ಪ್ರಭಾವಿಸಿದ್ದು ಯಾಕೆ? ಈ ಪ್ರಕಾಶನವು ನಿಮಗೆ ಯಾವ ಮಹತ್ವದ್ದಾಗಿದೆ? ಅದನ್ನು ಅಭ್ಯಾಸಿಸುವ ಮೂಲಕ ಯೆಹೋವನ ಕುರಿತು ನೀವು ಏನನ್ನು ಕಲಿತ್ತಿದ್ದೀರಿ? ಅದನ್ನು ಸಾದರಪಡಿಸುವಾಗ ಯಾವ ಅಂಶಗಳನ್ನು ನೀವು ಪ್ರದರ್ಶಿಸಿದ್ದೀರಿ? ಪುಸ್ತಕದ ನಿರೂಪಣೆಯನ್ನು ಅನುಭವಿ ಪ್ರಚಾರಕನು ಪ್ರತ್ಯಕ್ಷಾಭಿನಯಿಸಲಿ. ಆದಿತ್ಯವಾರ ಕ್ಷೇತ್ರ ಸೇವೆಯಲ್ಲಿ ಎಲ್ಲರು ಭಾಗವಹಿಸುವಂತೆ ಉತ್ತೇಜಿಸಿರಿ.
ಸಂಗೀತ 94 (22) ಮತ್ತು ಸಮಾಪ್ತಿಯ ಪ್ರಾರ್ಥನೆ.